ಅಂಕಣ

1971 ರಲ್ಲಿ ಪಾಕಿಸ್ಥಾನದಿಂದ ತಪ್ಪಿಸಿಕೊಂಡು ಬಂದ ಈ ಐಎಎಫ್ ಪೈಲಟ್ ಗಳ ರೋಚಕ ಕಥೆ ಈಗ ಭಾರತೀಯರ ಹಾಟ್ ಫೇವರಿಟ್!

” ನಾವು ಆಳವಾಗಿ ಶತ್ರು ಪ್ರದೇಶದ ಒಳಗೆ ಹೋರಾಡುತ್ತೇವೆ ಆದರೆ ಒಂದು ಗುಂಡು ಒಂದು ವಿಮಾನವನ್ನೇ ದುರ್ಬಲಗೊಳಿಸಬಹುದು. ಒಂದು ವೇಳೆ ಯುದ್ದದ ಖೈದಿಯಾದರೆ ನಾನು ತಪ್ಪಿಸಿಕೊಳ್ಳುತ್ತೇನೆ”

1968ರ ಒಂದು ಪ್ರಶಾಂತವಾದ ಸಂಜೆಯ ವೇಳೆಯಲ್ಲಿ ಫ್ಲೈಟ್ ಲೆಫ್ಟಿನೆಂಟ್ ದಿಲೀಪ್ ಪಾರುಲ್‍ಕರ್ ಅವರು, ಈ ಮಾತನ್ನು ಕಮಾಂಡಿಂಗ್ ಅಧಿಕಾರಿಯಾಗಿದ್ದ ಎಂ.ಎಸ್.ಬಾವ ಅವರಿಗೆ ಹೇಳಿದ್ದರು!! ಇದಾದ ಮೂರು ವರ್ಷಗಳ ನಂತರ ಒಂದು ಕದನವು ಸಂಭವಿಸಿತು. ಅದೇ ಇಂಡೋ-ಪಾಕ್ ಯುದ್ದ!! 1971ರ ಇಂಡೋ-ಪಾಕ್ ಕದನದ ಸಮಯದಲ್ಲಿ ಪಾಕಿಸ್ತಾನ ಪ್ರದೇಶದೊಳಗಡೆ ಗುಂಡುಗಳನ್ನು ಹಾರಿಸಲಾಯಿತು. ತದನಂತರದಲ್ಲಿ 11 ಐಎಎಫ್ ಪೈಲೆಟ್‍ಗಳೊಂದಿಗೆ ಫ್ಲೈಟ್ ಲೆಫ್ಟಿನೆಂಟ್ ದಿಲೀಪ್ ಪಾರುಲ್‍ಕರ್ ಅವರನ್ನು ಖೈದಿಯಾಗಿ ಬಂಧಿಸಿ ಕರೆದೊಯ್ಯಲಾಯಿತು!! ಆ ಸಂದರ್ಭದಲ್ಲಿ ಪಾಕಿಸ್ತಾನಿ ಭದ್ರಕೋಟೆಯನ್ನು ಕೊರೆದು ಲೆಫ್ಟಿನೆಂಟ್ ಪರುಲ್‍ಕರ್ ಅವರೊಂದಿಗೆ ಮೆಲ್ವಿಂದರ್ ಸಿಂಗ್ ಮತ್ತು ಹರೀಶ್ ಸಿಂಝಿ ತಪ್ಪಿಸಿಕೊಂಡ ಧೈರ್ಯಶಾಲಿಗಳು!!

ಆದರೆ ರಾಮಲ್ಪಿಂಡಿಯ ಪ್ರಿಸನರ್ ಆಫ್ ವಾರ್ (ಪಿಒಡಬ್ಲೂ) ಯುದ್ದ ಶಿಬಿರದಿಂದ ಧೈರ್ಯಶಾಲಿಗಳಾಗಿ ನಂಬಲಾಸಾಧ್ಯವಾದಂತಹ ಸ್ಥಿತಿಯಲ್ಲಿ ಪಾರದಂತಹ ಇವರ ಕಥೆಯನ್ನು ಹೈದರಬಾದ್‍ನ ಚಿತ್ರ ನಿರ್ಮಾಪಕ ತರಂಜಿತ್ ಸಿಂಗ್ ನಮ್ದಾರಿಯವರು ‘ದ ಗ್ರೇಟ್ ಇಂಡಿಯನ್ ಎಸ್ಕೇಪ್’ ಎನ್ನುವ ಹೆಸರಿನ ಚಿತ್ರವನ್ನಾಗಿ ನಿರ್ಮಿಸಲು ಪಣತೊಟ್ಟಿರುವುದು ಅಚ್ಚರಿಯ ಸಂಗತಿ. ಹಾಗಾಗಿ ಈ ಭಾರಿಯ ವಾಯುಪಡೆ ದಿನವಾದ ಅಕ್ಟೋಬರ್ 8ರಂದು ‘ದ ಗ್ರೇಟ್ ಇಂಡಿಯನ್ ಎಸ್ಕೇಪ್’ ಎನ್ನುವ ಚಿತ್ರವನ್ನು ಬಿಡುಗಡೆ ಮಾಡಲಿದ್ದಾರೆ!!

ಯುದ್ದ ಶಿಬಿರದಿಂದ ಪಾರಾದ ರೋಚಕ ಕಥೆ ಇಲ್ಲಿದೆ!!

1971ರ ಇಂಡೋ-ಪಾಕ್ ಗಡಿಯು ಸಂಪೂರ್ಣವಾಗಿ ಯುದ್ದಭೂಮಿಯಾಗಿ ಮಾರ್ಪಟ್ಟಿದ್ದ ಸಂದರ್ಭ!! ಅಷ್ಟೇ ಅಲ್ಲದೇ, ಝಾಫರವಾಲ್‍ನ (ಪಾಕಿಸ್ತಾನದ ಲಾಹೋರ್ನ ಪೂರ್ವಭಾಗ)ಸಮೀಪವಿದ್ದ ಕಾವಲು ಸೈನ್ಯವು ಐಎಎಫ್‍ಗೆ ಬಹಳನೇ ತೊಂದರೆದಾಯಕವಾಗಿತ್ತು. ಹಾಗಾಗಿ, ಅದಂಪರ್‍ನ ಐಎಎಫ್‍ನ ಸುಖೋಯ್-7 ಹೋರಾಟಗಾರರಿಗೆ ಮತ್ತು 26 ನೌಕಾತಂಡಕ್ಕೆ ರೇಡರ್ ನಿಲ್ದಾಣವನ್ನು ತಟಸ್ಥಗೊಳಿಸುವ ಕಾರ್ಯವನ್ನು ನೀಡಲಾಗಿತ್ತು.

1971 ಡಿಸೆಂಬರ್ 10ರಂದು ಸುಖೋಯ್-7 ಆ್ಯಂಟಿ-ಏರ್‍ಕ್ರಾಫ್ಟ್ ಗನ್‍ಗಳನ್ನು ಹೊಡೆದುರುಳಿಸಿದಾಗ ಫ್ಲೈಟ್ ಲೆಫ್ಟಿನೆಂಟ್ ಪಾರುಲ್‍ಕರ್ ಅವರ ವಿರೋಧಿಗಳು ವಾಚ್ ಟವರ್ ಸ್ಫೋಟಿಸುವ ಕಾರ್ಯಚರಣೆಯಲ್ಲಿದ್ದರು. ಆ ಸಂದರ್ಭದಲ್ಲಿ ಸೆರೆ ಸಿಕ್ಕವರೇ ಭಾರತದ ಈ 11 ಮಂದಿ ಐಎಎಫ್ ಪೈಲೆಟ್ ಹಾಗೂ ಪಾರುಲ್‍ಕರ್!! ಮರುಕ್ಷಣವೇ ಸುರಕ್ಷಿತವಾಗಿ ದುಮುಕಿ ಪಾರಾಗುವ ನಿರೀಕ್ಷೆಯಲ್ಲಿದ್ದ ಪಾರುಲ್‍ಕರ್ ಅವರ ಬಗ್ಗೆ ಪಾಕಿಸ್ತಾನದ ಅಧಿಕಾರಿಗಳಿಗೆ ಪಾಕಿಸ್ತಾನಿ ಸಿಬ್ಬಂದಿಗಳು ಮಾಹಿತಿ ನೀಡಿದ್ದರು.

ಯಾವಾಗ ಅಧಿಕಾರಿಗಳು ಆಗಮಿಸಿದರೋ ಹಿರಿಯ ಅಧಿಕಾರಿಯ ಮುಂದೆ ಫ್ಲೈಟ್ ಲೆಫ್ಟಿನೆಂಟ್ ದಿಲೀಪ್ ಪಾರುಲ್‍ಕರ್ ಅವರನ್ನು ಚೆನ್ನಾಗಿ ಥಳಿಸಲು ಪ್ರಾರಂಭಿಸಿದರು ಮಾತ್ರವಲ್ಲದೇ, ಅವರ ಸಿಬ್ಬಂದಿಗಳಲ್ಲಿ ಹೇಳಿ ಈ ಪೈಲೆಟ್‍ನನ್ನು ಬಂಧಿಸಲು ಆದೇಶ ನೀಡಿದರು. ತಲೆಗೆ ಹೊಡೆದ ಬಲವಾದ ಏಟಿನಿಂದ ಪ್ರಜ್ಞೆತಪ್ಪಿದ್ದ ಪಾರುಲ್‍ಕರ್‍ನನ್ನು, ಪಿಒಡಬ್ಲ್ಯೂ ಶಿಬಿರಕ್ಕೆ ಕರೆತಂದರು. ಆದರೆ ಪಿಒಡಬ್ಲ್ಯೂ ತಲುವವರೆಗೂ ಪಾರುಲ್‍ಕರ್ ಪ್ರಜ್ಞೆಯನ್ನು ಕಳೆದುಕೊಂಡಿದ್ದರು!!

ಎಚ್ಚರಗೊಂಡಾಗ ಐಎಎಫ್ ಖೈದಿಗಳ ಜೊತೆ ಯುದ್ದ ಶಿಬಿರದಲ್ಲಿ ಏಕಾಂಗಿಯೇ ರಾವಲ್‍ಪಿಂಡಿಯ ಪಿಎಎಫ್ ಪ್ರೊವೆಸ್ಟ್ ಆ್ಯಂಡ್  ಕ್ಯುರಿಟಿ(ಪಿಎಸ್‍ಎಫ್)ನಲ್ಲಿ ಬಂಧನಕ್ಕೊಳಗಾಗಿದ್ದರು!! ಸುದೀರ್ಘವಾದ ವಿಚಾರಣೆ ನಡೆಸಿದ ಬಳಿಕ, ಪಾರುಲ್‍ಕರ್ ಅವರನ್ನು ಫ್ಲೈಟ್ ಲೆಫ್ಟಿನೆಂಟ್‍ಗಳಾದ ಎಂ.ಎಸ್ ಗ್ರೆವಾಲ್, ಹರೀಶ್ ಸಿಂಝ ಮತ್ತು ಒಂಭತ್ತು ಇತರ ಐಎಎಫ್ ಪೈಲಟ್‍ಗಳೊಂದಿಗೆ ಸೇರಲು ಅವಕಾಶ ನೀಡಲಾಯಿತು!! ಆದರೆ ಇವರೆಲ್ಲರೂ ಮಲಗುವ ಸಂದರ್ಭದಲ್ಲಿ ಬೇರೆ ಬೇರೆ ಸ್ಥಳದಲ್ಲಿ ನಿದ್ರಿಸಬೇಕಾಗಿತ್ತು ಆದರೆ ಉಪಹಾರ ಹಾಗೂ ಊಟದ ಸಮಯದಲ್ಲಿ ಒಟ್ಟಿಗೆ ಸಮಯವನ್ನು ಕಳೆಯಲು ಅವಕಾಶ ನೀಡಲಾಗಿತ್ತು!!

ಆದರೆ ಕೆಲವೊಂದು ಪಾಕಿಸ್ತಾನಿ ಅಧಿಕಾರಿಗಳು, ಅದರಲ್ಲೂ ಪಾಕಿಸ್ತಾನಿ ನೌಕಾತಂಡ ನಾಯಕ ಓಸ್ಮಾನ್ ಅಮೀನ್(ಪಿಒಡಬ್ಲ್ಯೂನ ಕಮಾಂಡಿಂಗ್ ಅಧಿಕಾರಿ) ಭಾರತೀಯ ಪೈಲೆಟ್‍ಗಳೊಂದಿಗೆ ಉತ್ತಮ ಸ್ನೇಹಪರರಾಗಿದ್ದರು. ಅಷ್ಟೇ ಅಲ್ಲದೇ, ಇವರಿಗೆ ಓದಲು ಪುಸ್ತಕಗಳನ್ನು, ನಿಯತಕಾಲಿಕೆಗಳನ್ನು ಮತ್ತು ಬೋರ್ಡ್ ಆಟಗಳಿಗೆ ಅನುಮತಿ ನೀಡುತ್ತಿದ್ದರು!! 2017ರ ಆಗಸ್ಟ್‍ನಲ್ಲಿ ಅಮೀನ್ ಅವರ ಸೌಹಾರ್ದಯುತವಾದ ಸಂವಹನವನ್ನು ಮಾಧ್ಯಮ ವ್ಯಕ್ತಿಗಳೊಂದಿಗೆ ಮೆಲುಕು ಹಾಕಿದ್ದರು ಫ್ಲೈಟ್ ಲೆಫ್ಟಿನೆಂಟ್ ದಿಲೀಪ್ ಪಾರುಲ್‍ಕರ್!!!

ಹೌದು…. ಡಿಸೆಂಬರ್ 25ರಂದು ಅಮೀನ್ ಅವರು ಕ್ರಿಸ್‍ಮಸ್ ಆಚರಣೆಗೆ ಸೇರಿಕೊಳ್ಳಲು 11 ಪಿಒಡಬ್ಲ್ಯೂಗಳನ್ನು ಆಹ್ವಾನಿಸಿದ್ದರು!! ಆ ಸಂದರ್ಭದಲ್ಲಿ ಪೈಲೆಟ್‍ಗಳು ಅನೌಪಚಾರಿಕ ವಾತಾವರಣದ ಪ್ರಯೋಜನವನ್ನು ಪಡೆದುಕೊಂಡರು. ಅಷ್ಟೇ ಅಲ್ಲದೆ, ಪಾಕಿಸ್ತಾನಿ ಸೈನ್ಯ ಡಕ್ಕ (ಈಗಿನ ಡಕಾ) ದಲ್ಲಿ ಶರಣಾಗಿದೆ ಎನ್ನುವ ಸಂತಸ ವಿಷಯವನ್ನು ಕೇಳಿ, ತಮ್ಮ ತಾಯಿನಾಡಿಗೆ ಸಂದ ವಿಜಯವನ್ನು ಸದ್ದಿಲ್ಲದೆ ಸಂತೋಷಪಟ್ಟರು ನಮ್ಮ ಭಾರತೀಯ ಪೈಲೆಟ್‍ಗಳು!!

ಈ ಒಂದು ಪಿಒಡಬ್ಲ್ಯೂ ಶಿಬಿರದಿಂದ ತಪ್ಪಿಸಿಕೊಳ್ಳಲು ಮೊದಲ ಯೋಜನೆಯನ್ನು ಹಾಕಿದವರೇ ಪಾರುಲ್‍ಕರ್!! ಆದರೆ ಇದನ್ನು ಇತರ ಪೈಲೆಟ್‍ಗಳು ತಮ್ಮ ಅವಿವೇಕತನದಿಂದ ಅದನ್ನು ತಳ್ಳಿಹಾಕಿದರು. ಹಾಗಾಗಿ, ಈ ನಿಷ್ಠಾವಂತ ಪೈಲಟ್ ಹೇಗಾದರೂ ಮಾಡಿ ಕ್ರುವಾಲ್ ಮತ್ತು ಸಿಂಝ ಅವರ ಮನವೊಲಿಸಲು ಸತತ ಪ್ರಯತ್ನವನ್ನು ಮಾಡಿ ಅದರಲ್ಲಿ ಯಶಸ್ಸನ್ನು ಕಂಡರು!

ಪಾಕಿಸ್ತಾನಿಗಳು ಹಿಡಿದರೆ ಸಾವು ಖಂಡಿತ ಎಂದು ತಿಳಿದಿದ್ದರು ಕೂಡ ಮೂವರು ಎಚ್ಚರಿಕೆಯಿಂದ ಯೋಜನೆಗಳನ್ನು ರೂಪಿಸಿದ್ದರು. ಅದಕ್ಕಾಗಿ ಅಮೀನ್ ನೀಡಿದ್ದ ಆಕ್ಸ್ಪರ್ಡ್ ಶಾಲೆಯ ಅಟ್ಲಾಸ್‍ನ್ನು ಬಳಸಿದರು. ಮ್ಯಾಪ್ ಮತ್ತು ಶಿಬಿರದ ವಿನ್ಯಾಸವನ್ನು ಅಧ್ಯಯನ ಮಾಡಿದ ನಂತರ ಅವರು ಕಡಿಮೆ ಕಾವಲಿರುವ ಆವರಣಕ್ಕೆ ಸಮೀಪದಲ್ಲಿರುವ ಸೆಲ್‍ಗೆ ಸ್ಥಳಾಂತರಿಸಬೇಕೆಂದು ಮೊದಲು ತೀರ್ಮಾನಿಸಿದರು. ತದನಂತರದಲ್ಲಿ ರಕ್ಷಣೆ ಮಾಡುವ ಸೈನಿಕರಿಂದ ತಪ್ಪಿಸಿಕೊಳ್ಳಲು ಕಂಪೌಂಡನ್ನು ದಾಟುವ ಸುಸಜ್ಜಿತವಾದ ರಸ್ತೆಯ ಮೇಲೆ ಹೋದಾಗ ಪ್ರಸಿದ್ದ ಗ್ರಾಂಡ್ ಟ್ರಂಕ್ ರಸ್ತೆಯನ್ನು ತಲುಪುವ ದಾರಿಯನ್ನು ತನ್ನ ಯೋಜನೆಯಲ್ಲಿ ರೂಪಿಸಿಕೊಂಡರು!!

ಅಷ್ಟೇಅಲ್ಲದೇ, ಉತ್ತರದಕಡೆಗೆ ಹೆಜ್ಜೆಯನ್ನು ಹಾಕುತ್ತಾ ಮುಂದೆ ಸಾಗಿದಾಗ ಲಾಹೋರ್ ಯುದ್ದದ ಮುಂಭಾಗದಿಂದ ಬಂದರೆ, ಅಲ್ಲಿ ಬೆಟ್ಟವನ್ನು ಹೊಡೆದು ಗಣಿಕಾರಿಕೆ ಮಾಡಿದ ಭೂಮಿಯಾಗಿದ್ದು ಮಾತ್ರವಲ್ಲದೇ ಅಲ್ಲಿದ್ದ ಎರಡು ಸೇನೆಗಳು ಗುಂಡು ಹಾರಿಸುವುದರ ಮೂಲಕ ಇವರಿಗೆ ಸುಲಭವಾದ ದಾರಿ ಸಿಗುತ್ತದೆ ಎಂದು ಮಾತಾನಾಡಿಕೊಂಡರು. ಬೆಟ್ಟಗಳಿಂದ ಈ ಮೂವರು ಅಫ್ಘಾನಿಸ್ತಾನ- ಪಾಕಿಸ್ತಾನದ ಗಡಿಭಾಗದಲ್ಲಿರುವ 55 ಕಿ.ಮೀ ದೂರದಲ್ಲಿರುವ ಟೂರ್ಖಮ್‍ನ್ನು ಏರಲು ಯೋಜನೆ ಹಾಕಿಕೊಂಡರು. ಒಂದುವೇಳೆ ಈ ಅಪಾಯಕಾರಿ ಗಡಿಯನ್ನು ದಾಟಿದರೆ ಅವರು ಬಂಧನದ ಭಯವಿಲ್ಲದೇ ಭಾರತವನ್ನು ತಲುಪುವ ದಾರಿಯನ್ನು ಕಂಡುಕೊಂಡಿದ್ದರು!!

ಹಾಗಾಗಿ ಇವರ ಮೊದಲ ಹಂತವೆಂದರೆ ಸಿಬ್ಬಂದಿಗಳೊಂದಿಗೆ ಇರುವುದು, ವಿಶೇಷವಾಗಿ ಗಾರ್ಡ್‍ಗಳೊಂದಿಗೆ!! ಯಾಕೆಂದರೆ 4ನೇ ಸೆಲ್‍ಗೆ ಬದಲಾಯಿಸಲು ಸಹಾಯ ಮಾಡುತ್ತಾರೆ ಎಂದು ಬಲವಾಗಿ ನಂಬಿದ್ದರು. ಅಷ್ಟೇ ಅಲ್ಲದೇ, ಇಡೀ ಸಮೂಹದ ಸಂಗ್ರಹಣಾ ಉಳಿತಾಯವನ್ನು ಬಳಸಲು ನಿರ್ಧರಿಸಿ, ಘನೀಕರಿಸಿದ ಹಾಲು, ಒಣ ಹಣ್ಣುಗಳನ್ನು ಸಂಗ್ರಹಿಸಿದರು!!ಅಲ್ಲದೇ, ಹಾನಿಗೊಳಗಾದ ಪ್ಯಾರಾಚೂಟ್, ಪರದೆ, ಬೆಲ್ಟ್‍ಗಳನ್ನು ಉಪಯೋಗಿಸಿಕೊಂಡು ಸಣ್ಣ ಬ್ಯಾಗ್‍ಗಳನ್ನು , ಹಾಗೂ ಜಿ-ಸೂಟ್‍ನಿಂದ ನೀರಿನ ಚೀಲಗಳನ್ನು ತಯಾರಿಸಿಕೊಂಡರು. ಉಪಯೋಗಿಸಿದ ಸೂಜಿಗಳಿಂದ, ಟ್ರಾನ್ಸಿಸ್ಟರ್ ಬ್ಯಾಟರಿಗಳಿಂದ ಆಯಸ್ಕಾಂತವನ್ನು ತೆಗೆದು ಯಾರಿಗೂ ಸಂಶಯ ಬರದಂತೆ ದಿಕ್ಸೂಚಿಯನ್ನು ತಯಾರಿಸಿದರು!!

ಪಠಾಣ್ ಶೈಲಿಯ ಬಟ್ಟೆಗಳಿಂದ ಮಾರುವೇಷವನ್ನು ಪಡೆಯಲು ಸುಲಭ ಮಾರ್ಗವಾಗಿತ್ತು. ಹೇಗೆಂದರೆ ರೆಡ್ ಕ್ರಾಸ್ ಏಜೆಂಟ್‍ಗಳು ಪಿಒಡಬ್ಲ್ಯೂಗಳಿಗೆ ಸಂಬಂಧಿಕರು ಕಳುಹಿಸಿದ ಪತ್ರಗಳನ್ನು ಮತ್ತು ಪಾರ್ಸೆಲ್‍ಗಳನ್ನು ತರಲು ಪ್ರಾರಂಭಿಸಿದ್ದರು. ಈ ಸಂದರ್ಭದಲ್ಲಿ, ಪಾರುಲ್‍ಕರ್‍ನ ಪೋಷಕರು ಪಠಾನ್ ಶೈಲಿಯ ಮೂರು ಜತೆ ಉಡುಗೆಗಳನ್ನು ಕಳುಹಿಸಿದ್ದರು. ಇದು ಇವರಿಗೆ ಬಹಳ ಉಪಯೋಗವಾಗುವ ವಸ್ತು ಎಂದು ತಿಳಿದುಕೊಂಡಿದ್ದರು!!

ಕೊನೆಯ ಮತ್ತು ಪ್ರಮುಖ ಹಂತ ಎಂದರೆ 18 ಇಂಚಿನ ದಪ್ಪ ಗೋಡೆಯಲ್ಲಿ ರಹಸ್ಯವಾಗಿ ರಂಧ್ರವನ್ನು ಅಗೆಯುವುದು. ಹೌದು…. ಪ್ರತಿ ರಾತ್ರಿ ಮೂವರು ಫೋಕ್ರ್ಸ್ ಮತ್ತು ಕತ್ತರಿಗಳನ್ನು(ಉದ್ದೇಶಪೂರ್ವಕವಾಗಿ ಬೆಳೆಸಿದ ಗಡ್ಡವನ್ನು ಟ್ರಿಮ್ ಮಾಡಲು ಬಳಸಲಾಗುತ್ತಿದ್ದ)ಇಟ್ಟಿಗೆಗಳ ನಡುವಿನ ಗಾರೆಯನ್ನು ಕೊರೆಯಲು ಬಳಸುತ್ತಿದ್ದರು. ಹಾಗಾಗಿ ಪರಾರಿಯಾಗಲು ರಂಧ್ರವನ್ನು ಕೊರೆಯಲು ಆರಂಭಿಸಿದ್ದರು ಈ ಮೂವರು!!

1972 ಆಗಸ್ಟ್ 13ರ ಮಧ್ಯರಾತ್ರಿಯಲ್ಲಿ ಪಾರುಲ್‍ಕರ್, ಗ್ರೆವಾಲ್ ಮತ್ತು ಸಿಝಿ ಶಿಬಿರದಿಂದ ತಪ್ಪಿಸಿಕೊಂಡರು. ಆ ಸಂದರ್ಭದಲ್ಲಿ, ಶಿಬಿರವು ಶಾಂತ ಸ್ಥಿತಿಯಲ್ಲಿತ್ತು ಯಾಕೆಂದರೆ ಮುಂದಿನ ದಿನ ರಜೆಯಿದ್ದುದರಿಂದ(ಆಗಸ್ಟ್ 14 ಪಾಕಿಸ್ತಾನದ ಸ್ವಾತಂತ್ರ್ಯ ದಿನ). ಹಾಗಾಗಿ ಇದು ಕೂಡ ಇವರಿಗೆ ಅನುಕೂಲವೇ ಆಗಿತ್ತು!!

ಮೋಡಗಳು ತೆರೆದಂತೆ ಮೂವರು ಹೆದ್ದಾರಿಯ ಕಡೆಗೆ ಚಲಿಸಲು ಮುಂದಾಗಿದ್ದರು ಅವರ ಹೃದಯದಲ್ಲಿ ಭರವಸೆ ಮತ್ತು ತುಟಿಗಳಲ್ಲಿ ದೇವರ ಪ್ರಾರ್ಥನೆಗಳು ಕಂಡು ಬಂದವು. ನಕಲಿ ಹೆಸರುಗಳನ್ನು ಹೊತ್ತು ಮಾರುವೇಷದಲ್ಲಿದ್ದ ಇವರು ಪ್ರವಾಸಿಗರಾಗಿ ಕಂಡು ಬಂದರು. ಅಲ್ಲದೇ ಇವರು, ಖೈಬರ್ ಟ್ರಕ್‍ನ ಪ್ರವಾಸಿಗರ ಪಾತ್ರದಲ್ಲಿ ಪೆಶಾವರ್‍ಗೆ ಬಸ್‍ನಲ್ಲಿ ಪ್ರಯಾಣಿಸಲು ಮುಂದಾದರು. ಬಸ್ ನಗರ ಮಿತಿಗೆ ಪ್ರವೇಶಿಸುವುದಕ್ಕಿಂತ ಮುಂಚೆಯೇ ತಮ್ಮ ಟ್ರೆಕ್ಕಿಂಗ್‍ನ್ನು ಆರಂಭಿಸಿ, ಮೂವರು ಟಾಂಗ(ಕುದುರೆ ಕಾರ್ಟ್)ಏರಿ ಮುಂದುವರೆದರು.

ದುರದೃಷ್ಟವಶಾತ್ ಜಮುರ್ದವನ್ನು ತಲುಪಲು 8 ಕಿ.ಮೀ ಹೊಂದಿದ್ದಾಗ, ಇವರ ಸಂಶೋಧನೆಯ ಪ್ರಕಾರ ಈ ಜಿಲ್ಲೆಯ ಕೊನೆಯ ನಿಲುಗಡೆ ಲ್ಯಾಂಡಿ ಖಾನ ರೈಲ್‍ಹೆಡ್ ಆಗಿತ್ತು. ಆದರೆ ಇದು ಡಿಸೆಂಬರ್ 1932ರಂದು ರೈಲು ನಿಲ್ದಾಣವನ್ನು ಮುಚ್ಚಲಾಗಿದೆ ಎಂದು ಇವರಿಗ್ಯಾರಿಗೂ ಗೊತ್ತಿರಲಿಲ್ಲ!! ಆದರೆ ಅಸ್ತಿತ್ವದಲ್ಲಿರದ ಸ್ಥಳವನ್ನು ಹುಡುಕುವ ಮೂಲಕ ಸ್ಥಳೀಯರಿಗೆ ಸಂಶಯಪಡುವ ಹಾಗೆ ಕಾಣಿಸಿಕೊಂಡರು. ಅಲ್ಲದೇ, ಇವರು ಅಫ್ಘಾನಿಸ್ತಾನವನ್ನು ತಲುಪುವಲ್ಲಿ ಯಶಸ್ವಿಯಾದರು!!

ಆದರೆ ಶಸ್ತ್ರಸಜ್ಜಿತ ಬೆಂಗಾವಲಿನಲ್ಲಿ ಸ್ಥಳಿಯ ತಹಶೀಲ್ದಾರರು ಇವರನ್ನು ಜೈಲಿನಲ್ಲಿ ಬಂಧಿಸಿದರು. ಇವರನ್ನು ಮಾಸ್ಟರ್‍ಸ್ಟ್ರೋಕ್ ಮಾತ್ರ ಫೈರಿಂಗ್ ಸ್ಕಾಟ್‍ನಿಂದ ರಕ್ಷಿಸಬಹುದಾಗಿತ್ತು ಎಂದು ಪಾರುಲ್‍ಕರ್ ಒಂದು ಯೋಜನೆಯನ್ನು ಹಾಕಿದರು, ಹಾಗಾಗಿ ಇವರು ಅಮೀನ್‍ಗೆ ಫೋನ್ ಮಾಡುವಂತೆ ತಹಶೀಲ್ದರಾರಲ್ಲಿ ಮನವರಿಕೆ ಮಾಡಿದರು. ಅಮೀನ್ ಇವರ ಧ್ವನಿಯನ್ನು ಗುರುತು ಹಿಡಿದು, ಅವರಿಗೆ ದೈಹಿಕವಾಗಿ ಹಾನಿ ಮಾಡಬಾರದೆಂದು ತಹಶೀಲ್ದಾರರಿಗೆ ಹೇಳಿದನು. ಆದರೆ ಅಮೀನ್‍ನ ಈ ಮಾತು ಕೇಳಿ ಈ ಮೂವರಿಗೆ ಅಚ್ಚರಿಯನ್ನು ತಂದಿತ್ತು!!

ತದನಂತರದಲ್ಲಿ ಪಾರುಲಕರ್, ಗ್ರೆವಾಲ್ ಮತ್ತು ಸಿಂಝಿ ಅವರನ್ನು ರಾವಲ್ಪಿಂಡಿ ಶಿಬಿರಕ್ಕೆ ಕಳುಹಿಸಿಕೊಡಲಾಯಿತು. ತೀವ್ರ ಕೋಪಗೊಂಡ ಕಮಾಂಡೆಂಟ್
ವಹೀದ್-ಉದ್-ದಿನ್(ಆ ಸಂದರ್ಭದಲ್ಲಿ ಅಮೀನ್ ಬೇರೆ ಕಡೆ ವರ್ಗಾವಣೆಗೊಂಡಿದ್ದ) 30 ದಿನಗಳ ಕಾಲ ಏಕಾಂಗಿ ಬಂಧನ ಶಿಕ್ಷೆಯನ್ನು ವಿಧಿಸಿದ. ಕೆಲವು ದಿನಗಳ ನಂತರ ಫೈಸಲಬಾದ್ ಜೈಲಿಗೆ ಐಎಎಫ್ ಪೈಲಟ್‍ನೊಂದಿಗೆ ವರ್ಗಾವಣೆ ಮಾಡಲು ಜುಲ್ಪಿಕಾರ್ ಅಲಿ ಭುಟ್ಟೊ ಘೋಷಿಸಿದರು.

ಡಿಸೆಂಬರ್ 1, 1972ರಂದು ವಾಘಾ ಗಡಿಯಲ್ಲಿ ಐಎಎಫ್ ಪೈಲಟ್‍ಗಳನ್ನು ಸ್ವಾಗತಿಸಲಾಯಿತು. ಅಮೃತಸರದಲ್ಲಿನ ಏರ್‍ಫೋರ್ಸ್ ಯೂನಿಟ್‍ನಲ್ಲಿ ಭಾರೀ ಸ್ವಾಗತ ಪಡೆಯುವುದಕ್ಕಿಂತ ಮುಂಚಿತವಾಗಿ ಇವರ ಎಂಟೆದೆಯ ಧೈರ್ಯದ ಕಥೆ ಅವರ ಮನೆ ಸೇರಿತ್ತು!! ಅಮೃತಸರದಿಂದ ಅವರನ್ನು ದೆಹಲಿಗೆ ಕರೆತರಲಾಯಿತು. ಕರಾಳ ದಿನವನ್ನು ಎದುರಿಸಿದ ಈ ಪೈಲೆಟ್‍ಗಳು ಅವರ ಕುಟುಂಬದೊಂದಿಗೆ, ಸ್ನೇಹಿತರೊಂದಿಗೆ ಮತ್ತೆ ಸೇರಿಕೊಂಡರು!

ಈ ಒಂದು ವಿಷಯವನ್ನು ನಮ್ದಾರಿಯವರು, ಏರ್‍ಚೀಫ್ ಮಾರ್ಷಲ್ ಪಿಸಿ ಲಾಲ್ ಅವರ ‘ಮೈ ಇಯರ್ಸ್ ವಿದ್ ದಿ ಐಎಎಫ್’, ಎನ್ನುವ ಪುಸ್ತಕವನ್ನು ಓದಿದಾಗ ಇದೊಂದು ಹೇಳಲೇಬೇಕಾದ ಕಥೆಯೆಂದು ತಿಳಿದುಕೊಂಡರು!! ಹಾಗಾಗಿ ನಿವೃತ್ತಿ ಹೊಂದಿದ ಬಳಿಕ ಪುಣೆಯಲ್ಲಿ ನೆಲೆಸಿದ್ದ ಪಾರುಲ್‍ಕರ್ ಅವರನ್ನು ಬೇಟಿ ಮಾಡಿ ಕೊನೆಯ ಆರನೇ ದಿನದಲ್ಲಿ ‘ದಿ ಗ್ರೇಟ್ ಇಂಡಿಯನ್ ಎಸ್ಕೇಪ್”ಗಾಗಿ ಅಡಿಪಾಯವನ್ನು ಹಾಕಿದರು!! ಭಾರತೀಯ ಪೈಲೆಟ್ ಆಗಿದ್ದ ಲೆಫ್ಟಿನೆಂಟ್ ದಿಲೀಪ್ ಪಾರುಲ್‍ಕರ್ ಅವರ ಪಿಒಡಬ್ಲ್ಯೂದ ರೋಚಕ ಕಥೆ ‘ದ ಗ್ರೇಟ್ ಇಂಡಿಯನ್ ಎಸ್ಕೇಪ್’ ಎನ್ನುವ ಚಿತ್ರದ ಮೂಲಕ ಸದ್ಯದಲ್ಲಿ ತೆರೆಕಾಣಲಿರುವುದೇ ಒಂದು ಖುಪಿಯ ಸಮಾಚಾರವಾಗಿದೆ!!!

ಮೂಲ:Original Link

– Postcard team

Tags

Related Articles

FOR DAILY ALERTS
 
FOR DAILY ALERTS
 
Close