ಅಂಕಣಇತಿಹಾಸದೇಶಪ್ರಚಲಿತ

ತನ್ನ ರಾಜಕೀಯ ಮಹತ್ವಾಕಾಂಕ್ಷೆಗೆ 700 ಯೋಧರನ್ನೇ ಬಲಿ ಕೊಟ್ಟಿದ್ದ ಇಂದಿರಾಗಾಂಧಿ!!!!

ಇಂದಿರಾಗಾಂಧಿಯ ಮುಠ್ಠಾಳತನಕ್ಕೆ,ರಾಜಕೀಯ ದಾಹಕ್ಕೆ,ವೋಟಿನ ಆಸೆಗಾಗಿ ಸುಮಾರು 700 ಯೋಧರ ಬಲಿದಾನವಾದ ,ಸಹಸ್ರಾರು ಸಂಖ್ಯೆಯ ನಾಗರಿಕರು ಹತ್ಯೆಯಾದ ಧಾರುಣ ಕಥೆಯೇ ಈ ಆಪರೇಷನ್ ಬ್ಲ್ಯೂ ಸ್ಟಾರ್ .

ರಾಜಕೀಯ ದೂರದೃಷ್ಟಿಯ ಕೊರತೆಯ ಫಲವಾಗಿ ಭಿಂದ್ರನ್ ವಾಲೆಯಂತ ಬಂಡುಕೋರರು ಹುಟ್ಟಿಕೊಳ್ಳುತ್ತಾರೆ. ಆತ ತನ್ನದೇ ಆದ ಸರ್ಕಾರ ನಡೆಸುವವರೆಗೂ ಬೆಳೆಸಿದ್ದು ಯಾರು ಮತ್ತು ಯಾಕೆ ಎಂಬ ಇತ್ಯಾದಿ ಪ್ರಶ್ನೆಗಳಿಗೆ ಉತ್ತರ.

ಸಿಖ್ ಧರ್ಮದ 5 ಪವಿತ್ರ ಕ್ಷೇತ್ರಗಳಲ್ಲಿ ಸ್ವರ್ಣ ಮಂದಿರ (ಗೋಲ್ಡನ್ ಟೆಂಪಲ್)ಕೂಡಾ ಒಂದು. 1984ರಲ್ಲಿ ಸಿಖ್ಖರಿಗಾಗಿ ಪ್ರತ್ಯೇಕ ಖಲಿಸ್ತಾನ ರಾಷ್ಟ್ರ ಬೇಕೆಂಬ ವಿಧ್ವಂಸಕ ಮಾರ್ಗ ಹಿಡಿದಿದ್ದ ಬಂಡುಕೋರ ನಾಯಕ ಭಿಂದ್ರನ್ ವಾಲೆ , ಅಮೃತಸರದ ಸ್ವರ್ಣ ಮಂದಿರವನ್ನು ತನ್ನ ತಾಣವಾಗಿಸಿಕೊಂಡಿದ್ದ. ಶಸ್ತ್ರಾಸ್ತ್ರಗಳೊಂದಿಗೆ ಅಡಗಿಕೊಂಡಿದ್ದ ಈ ಬಂಡುಕೋರನನ್ನು ಹೊರದಬ್ಬಲು ನಡೆಸಿದ ಕಾರ್ಯಾಚರಣೆಯೇ ಆಪರೇಷನ್ ಬ್ಲ್ಯೂ ಸ್ಟಾರ್.

ಸಿಖ್ ಸಮೂಹ ಅಕಾಲಿ ದಳದ ಹೆಸರಿನಲ್ಲಿ ಒಗ್ಗೂಡಿ 1977ರ ಚುನಾವಣೆಗಳಲ್ಲಿ ಇಂದಿರಾಗಾಂಧಿಯ ಅಷ್ಟೂ ಅಭ್ಯರ್ಥಿಗಳನ್ನು ಸೋಲಿಸಿತ್ತು. ಇದರಿಂದ ಕುಪಿತಗೊಂಡ ಸಂಜಯ್ ಗಾಂಧಿ ಸಿಖ್ ಸಮೂಹವಾದ ಅಕಾಲಿಕ ದಳವನ್ನು ಇಬ್ಭಾಗ ಮಾಡಲು ಯೋಜನೆ ರೂಪಿಸಿದನು. ತನ್ನ ರಾಜಕೀಯ ಲಾಭಕ್ಕೆ ಸಿಖ್ ಸಮೂಹವನ್ನೇ ಇಬ್ಭಾಗ ಮಾಡಲು ಮುಂದಾದ. ಇದಕ್ಕಾಗಿ ಒಬ್ಬ ಸಿಖ್ ಸಂತನ ಗೆಳೆತನವನ್ನು ಬೆಳೆಸಿದರು . ಆ ಸಿಖ್ ಸಂತನ ಹೆಸರು ಭಿಂದ್ರನ್ ವಾಲೆ.ಇವನೇ ಮುಂದೆ ಸಿಖ್ಖರಿಗಾಗಿ ಪ್ರತ್ಯೇಕ ರಾಷ್ಟ್ರದ ಬೇಡಿಕೆ ಇಟ್ಟವನು. ಸಂಜಯ ಗಾಂಧಿ ಭಿಂದ್ರನ್ ವಾಲೆಯನ್ನು ಇಂದಿರಾ ಗಾಂಧಿಗೆ ಪರಿಚಯ ಮಾಡಿಸಿದ. ಅದಕ್ಕೆ ಇಂದಿರಾ ಗಾಂಧಿ ಅಸ್ತು ಎಂದಳು.

ಸಂಜಯಗಾಂಧಿಯ ಗೆಳೆತನದಿಂದ ಈ ಭಿಂದ್ರನ್ ವಾಲೆ ರಾತ್ರೋ ರಾತ್ರಿ ಬೆಳೆದು ನಿಂತ. 1980ರ ಚುನಾವಣೆಯಲ್ಲಿ ಭಿಂದ್ರನ್ ವಾಲೆ ಕಾಂಗ್ರೆಸ್ ಪರವಾಗಿ ಇಂದಿರಾ ಗಾಂಧಿ ಮತ್ತು ಸಂಜಯ ಗಾಂಧಿಯೊಂದಿಗೆ ಬಿರುಸಿನ ಪ್ರಚಾರ ಮಾಡಿದ. ಈತನ ಪ್ರಭಾವದಿಂದ ಚುನಾವಣೆಯಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಿತು. ರಾಜಕೀಯ ದಾಹಕ್ಕೆ ಬೆಳೆಸಿದ ಆ ಭಿಂದ್ರನ್ ವಾಲೆ ಇಂದಿರಾ ಗಾಂಧಿ ಬಳಿ ಪ್ರತ್ಯೇಕ ರಾಷ್ಟ್ರ ಖಲಿಸ್ತಾನಕ್ಕಾಗಿ ಬೇಡಿಕೆಯಿಟ್ಟ. ತಾನೇ ಬೆಳೆಸಿದ ರಾಕ್ಷಸ ತನ್ನ ಅಂಕೆ ಮೀರಿ ಬೆಳದು ಬೇಡಿಕೆ ಇಟ್ಟಿದ್ದ. ಇದರಿಂದ ಕುಪಿತಗೊಂಡ ಇಂದಿರಾ ಅವನು ಭೇಟಿಯಾಗಲು ಬಂದಾಗ ಅವನನ್ನು ಭೇಟಿಯಾಗಲು ನಿರಾಕರಿಸಿದಳು.

ಈ ಬಂಡುಕೋರ ಭಿಂದ್ರನ್ ವಾಲೆಯ ಪ್ರತ್ಯೇಕ ರಾಷ್ಟ್ರವನ್ನು ವಿರೋಧಿಸಿ ಒಬ್ಬ ಪತ್ರಕರ್ತ ಬರೆದರೆ ,ಆ ಪತ್ರಕರ್ತನನ್ನು ಭಿಂದ್ರನ್ ವಾಲೆಯ ಶಿಷ್ಯರು ಕೊಂದರು.ತಕ್ಷಣ ಭಿಂದ್ರನ್ ವಾಲೆಯನ್ನು ಬಂಧಿಸಿತು. ಅದು ಗೊತ್ತಾಗುತ್ತಿದ್ದಂತೆಯೇ ಪಂಜಾಬಿನಾದ್ಯಂತ ಪ್ರತಿಭಟನೆಗಳಾದವು . ಇದರಿಂದ ಸರ್ಕಾರ ಅವನನ್ನು ಬಿಡುಗಡೆ ಮಾಡಿತು.ಬಿಡುಗಡೆಯ ನಂತರ ಇವನು ಪಂಜಾಬಿನಲ್ಲಿ ಹಿಂದುಗಳ ಮಾರಣ ಹೋಮ ಮಾಡಿದ, ಪ್ರತ್ಯೇಕ ಖಲಿಸ್ತಾನದ ವಾದವನ್ನು ವಿರೋಧಿಸುವವರನ್ನು ಹೆಕ್ಕಿ ಹೆಕ್ಕಿ ಕೊಂದ. ಇಂದಿರಾಗಾಂಧಿ ತಾನೇ ಬೆಳೆಸಿದ ರಾಕ್ಷಸನ ಬಗ್ಗೆ ಚಿಂತೆ ಮಾಡುವಂತಾಯ್ತು.ಆಗ ಇಂದಿರಾ ಗಾಂಧಿ ಅವನ ಮೇಲೆ ಬಲವಾದ ಪ್ರಹಾರ ಮಾಡಿ ಅವನನ್ನು ತಣ್ಣಗಾಗಿಸಬಹುದಿತ್ತು. ಆದರೆ ಇಂದಿರಾ ಗಾಂಧಿಯ ಕ್ಷುದ್ರ ರಾಜಕೀಯ ಆ ಕೆಲಸ ಮಾಡಲಿಲ್ಲ. ಪಂಜಾಬ್ ಹೊತ್ತಿ ಉರಿಯುತ್ತಿದ್ದರೆ ಇಂದಿರಾಗಾಂಧಿ ದೆಹಲಿಯಲ್ಲಿ ಕೂತು ಚಳಿ ಕಾಯಿಸಿಕೊಳ್ಳುತ್ತಿದ್ದಳು. ಅವಳ ಲೆಕ್ಕಾಚಾರವಿಷ್ಟೆ ಭಿಂದ್ರನ್ ವಾಲೆಯ ಕ್ರೌರ್ಯ ಹೆಚ್ಚಾದಷ್ಟು ಹಿಂದುಗಳ ವೋಟ್ ಗಳು ತನಗೆ ಬರುತ್ತವೆ ಎಂಬುದು. ಹೀಗಾಗಿ ಅವಳು ಆ ಕ್ರೌರ್ಯ ಬೆಳೆಯಲು ಬಿಟ್ಟಳು.

ಭಿಂದ್ರನ್ ವಾಲೆ ಭಾರಿ ಶಸ್ತ್ರಾಸ್ತ್ರಗಳೊಂದಿಗೆ ಸ್ವರ್ಣಮಂದಿರವನ್ನು ತನ್ನ ತಾಣವಾಗಿಸಿಕೊಂಡ. ಸ್ವರ್ಣಮಂದಿರ ಸೇರಿದ್ದೆ ತಡ ತುಂಬಾ ಬಲಿಷ್ಠವಾದ. ಈ ಕ್ರೌರ್ಯವನ್ನು ನೋಡಿಕೊಂಡು ಇಂದಿರಾ ಗಾಂಧಿ ಮತ್ತಷ್ಟು ಉಲ್ಬಣಗೊಳ್ಳಲಿ ಈ ಸಮಸ್ಯೆ ಎಂದು ಕಾಯುತ್ತಿದ್ದಳು.

ಅಂದು ಎಪ್ರಿಲ್ 23 ಅಮೃತಸರದ ಪೋಲಿಸ್ ಅಧಿಕಾರಿ ಎ.ಎಸ್.ಅತ್ವಾಲ್ ಎಂಬ ಸಿಖ್ ಅಧಿಕಾರಿ ಸ್ವರ್ಣಮಂದಿರಕ್ಕೆ ಪ್ರಾರ್ಥನೆಗೆಂದು ಬಂದಿದ್ದಾಗ ಹಿಂದೆಮುಂದೆ ನೋಡದೆ ಆ ಪೋಲಿಸ್ ಅಧಿಕಾರಿಯನ್ನು ಭಿಂದ್ರನ್ ವಾಲೆ ಗುಂಡಿಟ್ಟು ಕೊಂದನು. ಆಗಿನ ಪಂಜಾಬಿನ ಮುಖ್ಯಮಂತ್ರಿ ದರ್ಬಾರ್ ಸಿಂಗ್ ಭಿಂದ್ರನ್ ವಾಲೆಯನ್ನು ಹೆಡೆಮುರಿ ಕಟ್ಟುತ್ತೇನೆಂದು ಇಂದಿರಾಗಾಂಧಿಯ ಬಳಿ ಬಂದು ಬೇಡಿಕೊಂಡ. ಆದರೆ ಅವಳು ಸಮಯ ಇನ್ನೂ ಪಕ್ವವಾಗಿಲ್ಲ ಬೇಡ ಎಂದು ಬಿಟ್ಟಳು. ಸಮಯ ಪಕ್ವವಾಗಿಲ್ಲ ಅಂದ್ರೆ ಅರ್ಥವಿಷ್ಟೆ ಆ ಕ್ರೌರ್ಯ ಇನ್ನಷ್ಟು ಉಲ್ಬಣಗೊಳ್ಳಲಿ ಎಂಬ ಉದ್ದೇಶ. ಕ್ರೌರ್ಯ ಎಷ್ಟು ಉಲ್ಬಣಗೊಳ್ಳುತ್ತೊ ಅಷ್ಟು ಹಿಂದುಗಳ ವೋಟ್ ಬರುತ್ತವೆ ಎಂಬ ಲೆಕ್ಕಾಚಾರ. ಇವಳ ಈ ಲೆಕ್ಕಾಚಾರಕ್ಕೆ ಹಿಂದುಗಳ ಬರ್ಬರ ಹತ್ಯೆಯಾಯ್ತು ,ಪ್ರತ್ಯೇಕತೆಯನ್ನು ವಿರೋಧಿಸುವವರ ಹತ್ಯೆಯಾಯ್ತು,ಪೋಲಿಸ್ ಅಧಿಕಾರಿಯ ಕೊಲೆಯಾಯ್ತು. ಆವತ್ತೆ ಪಂಜಾಬ್ ಸರ್ಕಾರಕ್ಕೆ ಅನುಮತಿ ಕೊಟ್ಟಿದ್ದರೆ ಪಂಜಾಬ್ ಉಳಿಯುತ್ತಿತ್ತು. ಆದರೆ ಇವಳ ರಾಜಕೀಯ ಲೆಕ್ಕಕ್ಕೆ ಬಲಿಗಳು ಬೇಕಾಗಿತ್ತು.

ಭಿಂದ್ರನ್ ವಾಲೆಯ ಹಿಂಸಾಚಾರ ಮತ್ತೆ ತೀವ್ರವಾದಾಗ ದರ್ಬಾರ್ ಸಿಂಗ್ ನ ಸರ್ಕಾರವನ್ನು ಪದಚ್ಯುತಿಗೊಳಿಸಿ ರಾಷ್ಟ್ರಪತಿ ಆಡಳಿತ ಘೋಷಿಸಿದಳು.ಅಂತು ಇಂತು ಅಂತಿಮ ಪ್ರಹಾರಕ್ಕೆ ಅಣಿಯಾಗಿಬಿಟ್ಟಳು. ಕೆಟ್ಟ ಮೇಲೆ ಬುದ್ಧಿ ಬಂತು ಎನ್ನುವ ಹಾಗೆ ಆ ಬಂಡುಕೋರ ಭಿಂದ್ರನ್ ವಾಲೆಯ ಅಂಕೆ ಮೀತಿ ಮೀರಿ ಸಾಮೂಹಿಕ ಹತ್ಯೆಗಳಾಗುವವರೆಗು ಸುಮ್ಮನಿದ್ದು ಕೊನೆಗೆ ಪ್ರಹಾರಕ್ಕೆ ತಯಾರಾದಳು.

ಸಿಖ್ ಸಮುದಾಯದ ಸೆಂಟಿಮೆಂಟ್ ಅರ್ಥ ಮಾಡಿಕೊಳ್ಳಲಿಲ್ಲ, ಭಿಂದ್ರನ ವಾಲೆಯ ತಾಕತ್ತಿನ ಬಗ್ಗೆ ಅರ್ಥ ಮಾಡಿಕೊಳ್ಳದೆ ಸೇನೆಯ ತುಕಡಿಗೆ ಆದೇಶ ಕೊಟ್ಟುಬಿಟ್ಟಳು.ಮೇ 30ರಂದು ಭಾರತೀಯ ಸೇನೆ ಅಮೃತಸರವನ್ನು ಸುತ್ತುವರೆಯಲಾರಂಭಿಸಿತು. ನಗರದ ಮೇಲೆ ಕರ್ಫ್ಯೂ ಹಾಕಿ ಪತ್ರಕರ್ತರನ್ನು ಹೊರದಬ್ಬಲಾಯಿತು.

ಜೂನ್ 6ರಂದು ಭಾರತೀಯ ಸೇನೆ ಆಪರೇಷನ್ ಬ್ಲ್ಯೂ ಸ್ಟಾರ್ ಆರಂಭಿಸಿಯೇ ಬಿಟ್ಟರು. ಆರ್ಟಿಲರಿ ಬಂದೂಕು ಹೊತ್ತ ಟ್ಯಾಂಕರ್ ಗಳನ್ನು ಸ್ವರ್ಣಮಂದಿರಕ್ಕೆ ನುಗ್ಗಿಸಿ ಸುಮಾರು ಗಂಟೆಗಟ್ಟಲೇ ಗುಂಡು ಹಾರಿಸಲಾಯಿತು. 200 ವರ್ಷಗಳಿಂದ ಗುರುಗ್ರಂಥ ಸಾಹಿಬ್ ಎನ್ನುವ ಪರಮ ಪವಿತ್ರ ಪುಸ್ತಕವನ್ನಿರಿಸಿದ ಹರಮಂದಿರ ಸಾಹೇಬ್ ಆವರಣ ಘಾಸಿಗೀಡಾಯ್ತು, ಸಿಖ್ಖರ 5ನೇ ಗುರು ಕಟ್ಟಿಸಿದ ಅಕಾಲ್ ತಖ್ತ ಕಟ್ಟಡ ನೆಲ ಸಮವಾಯ್ತು . ಸಿಖ್ ಸಮುದಾಯದ ಭಾವನೆಗಳು ಕೆರಳುವಂತೆ ಮಾಡಿತು. ಎಲ್ಲ ಸಿಖ್ ಬಂಡುಕೋರರು ಸತ್ತರು ,ಇದರ ಜೊತೆಗೆ ಸಾವಿರಾರು ನಾಗರಿಕರು ಸತ್ತರು.ಇಂದಿರಾಗಾಂಧಿಯ ಕ್ಷುದ್ರ ರಾಜಕೀಯಕ್ಕೆ ,ವೋಟಿನ ಆಸೆಗಾಗಿ ಅಂದು ಸುಮಾರು 500ರಿಂದ 700 ಭಾರತೀಯ ಸೈನಿಕರು ಬಲಿಯಾಗಬೇಕಾಯಿತು. ಲೆಕ್ಕವಿಲ್ಲದಷ್ಟು ಅಮಾಯಕ ನಾಗರಿಕರು ಸತ್ತರು. ಒಟ್ಟಿನಲ್ಲಿ ಇಂದಿರಾಗಾಂಧಿಯ ಮುಠ್ಠಾಳತನದಿಂದ ಅಪಾರ ಹತ್ಯೆಗಳಾದವು,ಧಾರ್ಮಿಕ ಕಟ್ಟಡ ದ್ವಂಸವಾಯಿತು.

ಸಮಸ್ಯೆ ಚಿಕ್ಕದಿದ್ದಾಗಲೇ ಬಗೆಹರಿಸಲು ತುಂಬಾ ಜನ ಕೇಳಿಕೊಂಡದ್ದರು,  ಸ್ವತಃ ಪಂಜಾಬಿನ ಮುಖ್ಯಮಂತ್ರಿ ದರ್ಬಾರಸಿಂಗ್ ಬೇಡಿಕೊಂಡಿದ್ದರು ಆದರೆ ಕ್ಷುದ್ರ ರಾಜಕಾರಣ ಸಮಸ್ಯೆ ಉಲ್ಬಣಗೊಳ್ಳಲು ಬಿಟ್ಟು ಸಾಮೂಹಿಕ ಹತ್ಯೆಗೆ ಕಾರಣವಾಯಿತು.

Source : ಇಂದಿರೆಯ ಮಗ ಸಂಜಯ್ by ರವಿ ಬೆಳಗೆರೆ

 

Postcard team

Tags

Related Articles

FOR DAILY ALERTS
 
FOR DAILY ALERTS
 
Close