ಪ್ರಚಲಿತ

ಬಿಜೆಪಿಗೆ ‘ರಾಜ’ಯೋಗ.! ಬಿಜೆಪಿ ಸೇರಿದ್ದಾರೆ ಪಕ್ಷೇತರ ಸಂಸದ.!

ರಾಜ್ಯ ವಿಧಾನಸಭಾ ಚುನಾವಣೆಗೆ ಕ್ಷಣಗಣನೆ ಆರಂಭವಾಗುತ್ತಿದ್ದಂತೆ ರಾಜಕೀಯ ಪಕ್ಷಗಳ ತಯಾರಿಯೂ ಭರ್ಜರಿಯಾಗಿ ನಡೆಯುತ್ತಿದೆ.‌ ಪ್ರತೀ ದಿನವೂ ಒಂದಲ್ಲ ಒಂದು ರಾಜಕೀಯ ಬೆಳವಣಿಗೆಗಳು ಕಂಡುಬರುತ್ತಲೇ ಇದೆ. ಸಿದ್ದರಾಮಯ್ಯನವರ ಆಡಳಿತದಲ್ಲಿ ರಾಜ್ಯ ಈಗಾಗಲೇ ನರಕದ ವಾತಾವರಣವಾಗಿ ಮಾರ್ಪಟಿದ್ದು, ರಾಜ್ಯದ ಜನತೆ ಹೊಸ ಸರಕಾರಕ್ಕಾಗಿ ಕಾಯುತ್ತಿದ್ದಾರೆ. ರಾಜ್ಯದಲ್ಲಿ ಈಗಾಗಲೇ ಆಡಳಿತ ವಿರೋಧಿ ಅಲೆ ಎದ್ದು ಕಾಣುತ್ತಿರುವುದರಿಂದ ಸಿದ್ದರಾಮಯ್ಯನವರಿಗೆ ತೀವ್ರ ಹಿನ್ನಡೆಯಾಗುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿದೆ.

ಸಿದ್ದರಾಮಯ್ಯನವರ ಜನವಿರೋಧಿ ನೀತಿಗೆ ಸ್ವತಃ ಕಾಂಗ್ರೆಸ್ ನಾಯಕರೇ ತಿರುಗಿ ಬಿದ್ದಿದ್ದು , ಇದೀಗ ರಾಜ್ಯದ ಮತ್ತೋರ್ವ ನಾಯಕ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.!

ರಾಜ್ಯ ಕಂಡ ಧೀಮಂತ ರಾಜಕಾರಣಿ ಬಿಜೆಪಿಗೆ..!

ಪಕ್ಷೇತರನಾಗಿ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದು ರಾಜ್ಯ ಸಭೆಗೆ ಆಯ್ಕೆಯಾದ ರಾಜೀವ್ ಚಂದ್ರಶೇಖರ್ ಇಡೀ ರಾಜ್ಯದ ಜನತೆಗೆ ಚಿರಪರಿಚಿತರು. ಯಾಕೆಂದರೆ ಪಕ್ಷೇತರನಾಗಿ ಇದ್ದೂ ಕೂಡ ರಾಜ್ಯ ಸಭೆಯಲ್ಲಿ ಎಲ್ಲರ ಹುಬ್ಬೇರಿಸುವಂತೆ ಮಾಡುತ್ತಿದ್ದರು ರಾಜೀವ್ ಚಂದ್ರಶೇಖರ್.

ಇದೀಗ ಇವರು ಅಧಿಕೃತವಾಗಿ ಬಿಜೆಪಿಗೆ ಸೇರ್ಪಡೆಯಾಗಿದ್ದು ರಾಜ್ಯ ಬಿಜೆಪಿಯಲ್ಲಿ ಹೊಸ ಹುರುಪು ಬಂದಂತಾಗಿದೆ. ಯಾಕೆಂದರೆ ಪಕ್ಷೇತರನಾಗಿ ಇದ್ದರೂ ಅಪಾರ ಅಭಿಮಾನಿಗಳನ್ನು ಹೊಂದಿರುವ ರಾಜೀವ್ ಚಂದ್ರಶೇಖರ್ ಸದ್ಯ ಚುನಾವಣೆ ಹೊಸ್ತಿಲಲ್ಲೇ ಬಿಜೆಪಿ ಸೇರಿದ್ದು , ಕಾಂಗ್ರೆಸ್ ಗೆ ಸೋಲಿನ ಭೀತಿ ಹೆಚ್ಚಾಗಿದೆ. ಈಗಾಗಲೇ ಕಾಂಗ್ರೆಸ್ ಗೆ ರಾಜ್ಯ ಚುನಾವಣೆ ಮಹತ್ತರವಾದ ಘಟ್ಟವಾಗಿದ್ದು , ದೇಶಾದ್ಯಂತ ಸೋಲಿನ ಮೇಲೆ ಸೋಲು ಅನುಭವಿಸಿಕೊಂಡು ಬಂದಿರುವ ಕಾಂಗ್ರೆಸ್ ಗೆ ಕರ್ನಾಟಕ ಚುನಾವಣೆ ಮುಖ್ಯವಾದ ಅಕಾಡವಾಗಿದೆ.

ರಾಜ್ಯ ಸರಕಾರದ ವಿರುದ್ಧ ಗುಡುಗಿದ ರಾಜೀವ್ ಚಂದ್ರಶೇಖರ್..!

ರಾಜ್ಯಾದ್ಯಂತ ಸಿದ್ದರಾಮಯ್ಯ ಸರಕಾರದ ವಿರುದ್ಧ ಈಗಾಗಲೇ ಅನೇಕ ಹೋರಾಟ , ಪ್ರತಿಭಟನೆಗಳು ನಡೆದಿವೆ. ಜನ ವಿರೋಧಿ ಮತ್ತು ಹಿಂದೂ ವಿರೋಧಿ ನೀತಿಯಿಂದಾಗಿ ಬೇಸತ್ತ ರಾಜ್ಯದ ಜನತೆ ಅನೇಕ‌ ಬಾರಿ ತಿರುಗಿಬಿದ್ದಿದ್ದರು. ಅದೇ ರೀತಿ ಪಕ್ಷೇತರನಾಗಿ ಇದ್ದ ರಾಜೀವ್ ಚಂದ್ರಶೇಖರ್ ರಾಜ್ಯಸಭೆಯಲ್ಲೇ ಸಿದ್ದರಾಮಯ್ಯ ಸರಕಾರದ ವಿರುದ್ಧ ಗುಡುಗಿದ್ದರು. ಸಿದ್ದರಾಮಯ್ಯನವರ ವಿರುದ್ಧ ಕೋರ್ಟ್ ಮೆಟ್ಟಿಲು ಕೂಡ ಹತ್ತಿದ್ದ ರಾಜೀವ್ ಚಂದ್ರಶೇಖರ್, ರಾಜ್ಯ ಸರ್ಕಾರದ ಚಳಿ ಬಿಡಿಸಿದ್ದರು. ಇದರಿಂದಾಗಿ ಕಾಂಗ್ರೆಸ್ ಗೆ ಭಾರೀ ತಲೆನೋವಾಗಿದ್ದ ರಾಜೀವ್ ಚಂದ್ರಶೇಖರ್ ಇದೀಗ ಬಿಜೆಪಿಗೆ ಸೇರ್ಪಡೆಯಾಗಿದ್ದು ಕಾಂಗ್ರೆಸ್ ಗೆ ಭಾರೀ ಹಿನ್ನಡೆಯಾಗುವ ಸಂಭವವಿದೆ.

ರಾಜ್ಯಸಭಾ ಅಭ್ಯರ್ಥಿಯಾಗಿ ರಾಜೀವ್..!

ಪಕ್ಷೇತರನಾಗಿ ಇದ್ದ ರಾಜೀವ್ ಚಂದ್ರಶೇಖರ್ ಇಂದು ಅಧಿಕ್ರತವಾಗಿ ಬಿಜೆಪಿ ಸೇರ್ಪಡೆಯಾಗಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ ಎಸ್ ಯಡಿಯೂರಪ್ಪ ನವರ ಸಮ್ಮುಖದಲ್ಲಿ ಬಿಜೆಪಿ ಕಛೇರಿಯಲ್ಲಿ ಇಂದು ಸೇರ್ಪಡೆಗೊಂಡ ರಾಜೀವ್ ಚಂದ್ರಶೇಖರ್ ಇದೇ ಮಾರ್ಚ್ ೨೩ ರಂದು ನಡೆಯುವ ರಾಜ್ಯಸಭಾ ಚುನಾವಣೆಯಲ್ಲಿ ಕಣಕ್ಕಿಳಿಯಲಿದ್ದಾರೆ.!

ಏನೇ ಆದರೂ, ರಾಜ್ಯ ಸಿದ್ದರಾಮಯ್ಯ ಸರಕಾರದ ವಿರುದ್ಧ ರಾಜ್ಯದ ಜನತೆ ಮಾತ್ರವಲ್ಲದೆ , ಧೀಮಂತ ನಾಯಕರೇ ಇಂದು ತಿರುಗಿಬಿದ್ದಿದ್ದು, ಮುಂದಿನ ಚುನಾವಣೆಯಲ್ಲಿ ಇವೆಲ್ಲದರ ಫಲಿತಾಂಶ ಹೊರಬೀಳಲಿದೆ..!

–ಅರ್ಜುನ್

 

Tags

Related Articles

FOR DAILY ALERTS
 
FOR DAILY ALERTS
 
Close