ಪ್ರಚಲಿತ

ಅತಿ ಶೀಘ್ರದಲ್ಲೆ ಪಾಕಿಸ್ತಾನವೆಂಬ ಉಗ್ರ ಸ್ವರ್ಗ ದಿವಾಳಿ ಎದ್ದು ಹೋಗಲಿದೆ!! ತಾನು ನೆಟ್ಟ ಇಸ್ಲಾಮಿಕ್ ಭಯೋತ್ಪಾದನೆಯೆಂಬ ಪಾಪದ ಫಲ ಉಣ್ಣುತ್ತಿರುವ ಪಾಕಿಸ್ತಾನದ ಪಾಪದ ಕೊಡ ತುಂಬಿದೆ….

 

ಭಾರತ ಮಾತೆಯ ಹೊಟ್ಟೆ ಬಗಿದು ಪಾಕಿಸ್ತಾನವೆಂಬ ರಾಷ್ಟ್ರವನ್ನು ಹುಟ್ಟು ಹಾಕಲಾಯಿತು. 1948 ರಲ್ಲಿ ಉದಯವಾದ ಇಸ್ರೇಲ್, ಪಾಕಿಸ್ತಾನದಿಂದ ಒಂದು ವರ್ಷ ಕಿರಿಯ. ಇವತ್ತು ಇಸ್ರೇಲ್ ಸಾಧನೆಗೆ ವಿಶ್ವವೆ ದಂಗಾಗಿದೆ ಆದರೆ ಪಾಕಿಸ್ತಾನ ಎಲ್ಲಿ ಬಂದು ನಿಂತಿದೆ ಎನ್ನುವುದನ್ನು ನೋಡಿ. ಅದು ಹಾಗಿರಲಿ ಪಾಕಿಸ್ತಾನದ ನಂತರ ಸ್ವತಂತ್ರವಾದ ಅಥವಾ ಉದಯವಾದ ದೇಶಗಳು ಎಂತಹ ಸಾಧನೆ ಮಾಡಿವೆ. ಆದರೆ ಪಾಪಿಸ್ತಾನವೆಂಬ ಉಗ್ರವಾದದ ಸ್ವರ್ಗ ಇಂದು ಭಿಕಾರಿಯಾಗಿ ಭಿಕ್ಷೆ ಎತ್ತುತ್ತಾ ದಿವಾಳಿಯಾಗುವ ಪರಿಸ್ಥಿತಿಗೆ ಬಂದು ನಿಂತಿದೆ. ಪಾಕಿಸ್ತಾನ ತಾನೆ ನೆಟ್ಟ ಪಾಪದ ಫಲ ಉಣ್ಣುತ್ತಿದೆ.

ಭಾರತವನ್ನು ಸುಖ ಶಾಂತಿ ನೆಮ್ಮದಿಯಿಂದ ಇರಲು ಬಿಡಬಾರದು ಎಂದು ದುರುದ್ದೇಶದಿಂದ ಬ್ರಿಟಿಷರು ಹುಟ್ಟು ಹಾಕಿದ ಪಾಕಿಸ್ತಾನವನ್ನು ಇಸ್ಲಾಮಿಕ್ ಮತ್ತು ಕ್ರಿಶ್ಚಿಯನ್ ದೇಶಗಳು ಕೈ ತುಂಬಾ ಹಣ ಕೊಟ್ಟು ಸಾಕಿದ್ದವು. ಭಾರತವನ್ನು ಗಜವಾ-ಎ-ಹಿಂದ್ ಅಡಿ ಸಂಪೂರ್ಣವಾಗಿ ಮತಾಂತರ ಮಾಡುವ ದುರುದ್ದೇಶದಿಂದ ಇಸ್ಲಾಮಿನ ಆಧಾರದ ಮೇಲೆ ಹುಟ್ಟು ಹಾಕಲಾದ ಉಗ್ರ ಸಂಘಟನೆಗಳು ಕಳೆದ ಅರುವತ್ತೈದು ವರ್ಷಗಳಿಂದಲೂ ಕೊಬ್ಬಿದ ಕುರಿಯಂತಾಗಿ ಭಾರತದ ವಿರುದ್ದ ಕತ್ತಿ ಮಸೆಯುತ್ತಿದ್ದವು. ಪಾಕಿಸ್ತಾನ ಪ್ರೇರಿತ ಉಗ್ರವಾದದಿಂದ ಅತಿ ಹೆಚ್ಚು ಸಂಕಷ್ಟ ಅನುಭವಿಸಿದ್ದು ಭಾರತ.

ಪಾಕಿಸ್ತಾನದ ಇಂದಿನ ದುರ್ಗತಿಗೆ ಕಾರಣಗಳು

ಪಾಕಿಸ್ತಾನವೆಂಬ ದೇಶ ಹುಟ್ಟಿದ ಮರುಘಳಿಗೆಯಿಂದಲೆ ನೆಚ್ಚಿಕೊಡಂದದ್ದು ಇಸ್ಲಾಮಿಕ್ ಭಯೋತ್ಪಾದನೆಯನ್ನು. ತನ್ನ ಬಳಿ ಇದ್ದ ಸಂಪನ್ಮೂಲಗಳನ್ನು ದೇಶದ ಆಭಿವೃದ್ದಿಗಾಗಿ ಉಪಯೋಗಿಸಿಕೊಳ್ಳದೆ ಕೇವಲ ಭಾರತವನ್ನು ನಿರ್ಮಾಮ ಮಾಡುವ ಉದ್ದೇಶದಿಂದ ಭಯೋತ್ಪಾದನೆಯನ್ನು ಪೋಷಿಸುತ್ತಾ ಬಂದಿತು.

ದೇಶದಲ್ಲಿ ಮೂಲ ಭೂತ ಸೌಕರ್ಯ, ವಿದ್ಯೆ, ಉದ್ಯೋಗ, ಕಾರ್ಖಾನೆ, ಆರೋಗ್ಯ ಸೇವೆ ಇಂತಹ ಯಾವುದೆ ವಿಷಯದ ಬಗ್ಗೆಯೂ ಗಮನ ಕೊಡಲಿಲ್ಲ.

ಅತಿಯಾದ ಮತಾಂಧತೆ ಒಂದು ಇಡೀ ದೇಶವನ್ನೆ ನಿರ್ಮಾಮ ಮಾಡುತ್ತದೆ ಎನ್ನುವುದಕ್ಕೆ ಪಾಕಿಸ್ತಾನವೆ ಸಾಕ್ಷಿ. ಇದು ಕೇವಲ ಪಾಕಿಸ್ತಾನಕ್ಕೆ ಮಾತ್ರವಲ್ಲ, ಉಳಿದ ಇಸ್ಲಾಮಿಕ್ ರಾಷ್ಟ್ರಗಳಿಗೂ ಅನ್ವಯಿಸುತ್ತದೆ. ಇರಾನ್ ಮತ್ತು ಸೌದಿಯಂತಹ ದೇಶಗಳೂ ತಮ್ಮ ಅತೀವವಾದ ಮತೀಯವಾದದಿಂದಾಗಿ ದಿವಾಳಿ ಏಳುವ ಸ್ಥಿತಿಯಲ್ಲಿವೆ. ಅಫಘಾನಿಸ್ತಾನವಂತೂ ದಿವಾಳಿ ಎದ್ದು ಯಾವುದೋ ಕಾಲವಾಗಿದೆ.

2014 ರವರೆಗೆ ಎಲ್ಲವೂ ಸರಿಯಾಗಿಯೆ ನಡೆಯುತ್ತಿತ್ತು. ಭಾರತವನ್ನು ನಿರ್ನಾಮ ಮಾಡಲು ತೆರೆಮರೆಯಿಂದ ಹಲವಾರು ದೇಶಗಳು ಪಾಕಿಸ್ತಾನದ ಜೊತೆ ಕೈ ಜೋಡಿಸಿದ್ದವು. ಆದರೆ ಭಾರತದ ಗದ್ದುಗೆಯಲ್ಲಿ ಯಾವಾಗ ನರೇಂದ್ರ ಮೋದಿಯೆಂಬ ದೇಶಭಕ್ತನ ಪಟ್ಟಾಭಿಷೇಕವಾಯಿತೋ ಅಲ್ಲಿಂದ ಪಾಕಿಸ್ತಾನದ ಅಧೋಗತಿ ಶುರುವಾಯಿತು.

ಮೋದಿ ಭಾರತವನ್ನು ಆರ್ಥಿಕವಾಗಿ, ಮಾನಸಿಕವಾಗಿ, ದೈಹಿಕವಾಗಿ ಸದೃಢಗೊಳಿಸುತ್ತಾ ಹೋದಂತೆಯೆ ಪಾಕಿಸ್ತಾನವನ್ನು ದುರ್ಬಲಗೊಳಿಸುತ್ತಾ ಹೋದರು. ವಿದೇಶದ ಭೂಮಿಯಿಂದಲೆ ಪಾಕಿಸ್ತಾನಕ್ಕೆ ತಪರಾಕಿ ಹಾಕುತ್ತಾ ತೆರೆಮರೆಯಲ್ಲಿ ಸಹಾಯ ಮಾಡುತ್ತಿದ್ದ ಎಲ್ಲಾ ದೇಶಗಳನ್ನು ಬಹಿರಂಗವಾಗಿ ಝಾಡಿಸಿದರು.

ನರೇಂದ್ರ ಮೋದಿಯೆಂಬ ಸಿಂಹದ ಘರ್ಜನೆ ಕೇಳಿ ಜಗತ್ತಿನ ಎಲ್ಲಾ ದೇಶಗಳೂ ಪಾಕಿಸ್ತಾನದ ಕೈ ಬಿಡಲು ಶುರುವಿಟ್ಟುಕೊಂಡವು. ಎಲ್ಲಿವರೆಗೆಂದರೆ ಸ್ವತಃ ಇಸ್ಲಾಮಿಕ್ ದೇಶಗಳಾದ ಅಫಘಾನಿಸ್ತಾನ, ಬಾಂಗ್ಲಾದೇಶ, ಇರಾನ್ ಮತ್ತು ಸೌದಿ ಕೂಡಾ ಭಾರತದ ಕಡೆ ವಾಲಿಕೊಂಡಿತು.

ಇತ್ತ ನೋಟ್ ಬ್ಯಾನ್ ಮಾಡುವ ಮೂಲಕ ಪಾಕಿಸ್ತಾನದ ಅತಿ ದೊಡ್ದ ಕಳ್ಳ ನೋಟಿನ ದಂಧೆಗೆ ಇತಿಶ್ರೀ ಹಾಡಿದರು. ಮೊದಲೆ ಸಾಲದ ಸುಳಿಯಲ್ಲಿ ಸಿಲುಕಿದ ಪಾಕಿಸ್ತಾನ ಇಂದು ತಿರುಪೆ ಎತ್ತುವ ಕಾಲ ಬಂದಿದೆ.

ಪಾಕಿಸ್ತಾದ ಸಾಲದ ಸುಳಿಯಲ್ಲಿ ಸಿಲುಕಿ ಒದ್ದಾಡುತ್ತಿದೆ. ಪ್ರವಾಸೋದ್ಯಮಕ್ಕೆ ಭಾರಿ ಹೊಡೆತ ಬಿದ್ದಿದೆ. ವಿದೇಶೀ ಭಂಡಾರದಲ್ಲಿ ಹಣವೆ ಇಲ್ಲ. ದೇಶದ ಬೊಕ್ಕಸ ಬರಿದಾಗಿದೆ. ಡಾಲರ್ ಎದುರು ಪಾಕಿಸ್ತಾನ ರುಪಾಯಿ ಸಾರ್ವಕಾಲಿಕ ಕುಸಿತ ಕಂಡಿದೆ. ಪ್ರಜಾಪ್ರಭುತ್ವ ವ್ಯವಸ್ತೆಗೆ ಎಳ್ಳು ನೀರು ಬಿಟ್ಟು ಹಿಂದೂಗಳನ್ನು ನಿರ್ನಾಮ ಮಾಡಿ ಮಿಲಿಟರಿ ಪ್ರೇರಿತ ಇಸ್ಲಾಮಿಕ್ ಮೂಲಭೂತವಾದಿ ಆಡಳಿತವನ್ನು ನೆಚ್ಚಿಕೊಂಡ ಪಾಕಿಸ್ತಾನವೀಗ ದಿವಾಳಿ ಏಳಲು ಹೆಚ್ಚು ಸಮಯವಿಲ್ಲ.

ಇಲ್ಲಿ ಕೆಲವರು ಪಾಕಿಸ್ತಾನ ಶಾಂತಿಯ ದೇಶ, ನಾವೆಲ್ಲಾ ಶಾಂತಿ ದೂತರು, ಪಾಕಿಸ್ತಾನವೆಂದರೆ ಸ್ವರ್ಗ, ಭಾರತದಲ್ಲಿ ಸಿಗದ ಪ್ರೀತಿ ಪಾಕಿಸ್ತಾನದಲ್ಲಿ ಸಿಕ್ಕಿದೆ ಎಂದು ರಾಗ ಹಾಡುತ್ತಿರುತ್ತಾರೆ. ಅವರ ನೆಚ್ಚಿನ ದೇಶ ಭಿಕಾರಿಯಾಗಿದೆ, ಅವರುಗಳು ಕೂಡಾ ತಟ್ಟೆ ಹಿಡಿದುಕೊಂಡು ಭಿಕ್ಷೆ ಎತ್ತಲು ಹೋಗಬಹುದು. ಪಾಕಿಸ್ತಾನವೆಂಬ ಪಾಪಿ ದೇಶವನ್ನುತೊಟ್ಟು ರಕ್ತವೂ ಹರಿಸದೆ ನಿರ್ನಾಮ ಮಾಡಿದ ಮೋದಿ ನೇತೃತ್ವಕ್ಕೆ ಜೈ ಎನ್ನಲೆ ಬೇಕು.

–ಶಾರ್ವರಿ

Tags

Related Articles

FOR DAILY ALERTS
 
FOR DAILY ALERTS
 
Close