ಇತಿಹಾಸ

ದೇಶ ಕಂಡ ಅದ್ಭುತ ಪ್ರಧಾನಿ ಪಿ.ವಿ.ನರಸಿಂಹ ರಾವ್ ರನ್ನು ಸಾವಿನಲ್ಲಿಯೂ ಕಾಂಗ್ರೆಸ್ ನ ಸೋನಿಯಾ ಗಾಂಧಿ ಹೇಗೆ ಅವಮಾನಿಸಿದ್ದಳೆಂದು ಅರಿತರೆ ನಿಮ್ಮ ರಕ್ತ ಕುದಿಯುತ್ತದೆ!

ಇದಕ್ಕಿಂತ ಹೆಚ್ಚಿನದಾದ ದಾರುಣ ಅಥವಾ ಅವಮಾನಕರ ಅಂತ್ಯ ಯಾವುದಾದರೂ ರಾಜಕೀಯ ದಂತನಾಯಕನಿಗೆ ಬರಬಹುದೇ?!

ಪಿ.ವಿ.ನರಸಿಂಹರಾವ್!!!

ಭಾರತದ ಇತಿಹಾಸದಲ್ಲಿ ಹುದುಗಿ ಹೋದ ಅದ್ಭುತ ವ್ಯಕ್ತಿತ್ವ ಎಂದರೆ ಅದು ರಾವ್ ಮಾತ್ರ!! ರಾಜಕೀಯ ಮುತ್ಸದ್ದಿ, ಪ್ರತಿಭೆ ಹಾಗೂ ಅತ್ಯದ್ಭುತ ಯೋಚನಾ ಲಹರಿಗಳನ್ನೊಳಗೊಂಡ ರಾವ್ ಬಹುಷಃ ಎಲ್ಲರಿಗೂ ಅಷ್ಟಾಗಿ ಗೊತ್ತಿರಲಿಕ್ಕಿಲ್ಲವೇನೋ! ಭಾರತದ ಪೀಳಿಗೆಯನ್ನೇ ತನ್ನ ದೂರದೃಷ್ಟಿಯಿಂದ
ಬದಲಾಯಿಸಿದ್ದ ನರಸಿಂಹ ರಾವ್ ಸ್ವಾತಂತ್ರ್ಯಾ ನಂತರದ ಭಾರತದ ಕಾನೂನು ಅವ್ಯವಸ್ಥೆಯನ್ನು, ವ್ಯವಸ್ಥಿತವನ್ನಾಗಿಸಲು ಅದೆಷ್ಟು ಪ್ರಯತ್ನ ಪಟ್ಟಿದ್ದಾರೋ?! ಇವತ್ತಿಗೂ 20 ನೇ ಶತಮಾನದಲ್ಲಿ ಭಾರತ ಕಂಡಂತಹ ಅದ್ಭುತ ಪ್ರಧಾನ ಮಂತ್ರಿ ಎಂದು ರಾಜಕೀಯ ವಲಯವೇ ಗೌರವಿಸುತ್ತಿದ್ದರೂ ಕೂಡ, ಗಾಂಧಿ ಪರಿವಾರ ಮಾತ್ರ ರಾವ್ ರನ್ನು ಹೀನಾಯವಾಗಿ ಅವಮಾನಗೊಳಿಸಿಬಿಟ್ಟಿತ್ತು!! ತನ್ನ ಕುಟುಂಬ ರಾಜಕಾರಣದ ಮುಂದೆ ರಾವ್ ಯಾವ ಲೆಕ್ಕದಲ್ಲಿಯೂ ತಲೆ ಎತ್ತಿ ನಡೆಯಬಾರದೆಂಬ ಆಕೆಯ ಹುಕುಂ ರಾವ್ ರನ್ನು ಸಾವಿನಲ್ಲಿಯೂ ಕೂಡ ಕೊರಗುವಂತೆ ಮಾಡಿತು!

ರಾಷ್ಟ್ರವನ್ನು ಗೌರವಿಸುವ ಪ್ರತಿಯೊಬ್ಬ ಭಾರತೀಯನಿಗೂ ಕೂಡ ರಕ್ತ ಕುದಿಯುತ್ತದೆ!

ಪಿ.ವಿ.ನರಸಿಂಹ ರಾವ್ 23 ಡಿಸೆಂಬರ್ 2004 ರಂದು ಹೃದಯಾಘಾತವಾಗಿ ಕೊನೆಯುಸಿರೆಳೆದರಷ್ಟೇ! ಬಿಳಿ ಧೋತಿ, ಬಂಗಾರದ ಹೊಳಪಿನ ರೇಷ್ಮೆಯ ಕುರ್ತಾ, ಹೆಗಲ ಮೇಲೊಂದು ಅಂಗವಸ್ತ್ರ! ನರಸಿಂಹ ರಾವ್ ರ ದೇಹ ತಣ್ಣಗಾಗಿತ್ತು! ಮೊಗದ ಮೇಲೊಂದು ಶಾಂತಿ, ಅದೇ ವಿನಯತೆ! ಅದೇ ಮುತ್ಸದ್ದಿ ಜೀವವೊದು ಜೀವಂತವಾಗಿ ನಿದ್ರೆ ಹೋಗಿದೆ ಎಂದು ಭ್ರಮೆ ಹಿಡಿಸುವಷ್ಟು!!! ಸುತ್ತ ಎಂಟೂ ಜನ ಮಕ್ಕಳು ನಿಂತಿದ್ದರು! ಕೊನೆಯ ಬಾರಿ ಅಪ್ಪನನ್ನು ಕಣ್ತುಂಬಿಕೊಳ್ಳುವಂತೆ!

ಅಂತಿಮ ನಮನ ಸಲ್ಲಿಸಲು ನೆರೆದಿದ್ದ ಜನರು ನಿಶ್ಯಬ್ಧವಾಗಿ ನಮನ ಸಲ್ಲಿಸತೊಡಗಿದ್ದರು! ರಾವ್ ರವರ ಹಿರಿಯ ಮಗ, ತಂದೆಯ ಕರ್ಮಭೂಮಿಯಲ್ಲಿಯೇ ಅಂತಿಮ ನಮನ ಸಲ್ಲಿಸುವುದಕ್ಕೆ ವ್ಯವಸ್ಥೆ ಮಾಡಿದ್ದರು! ಎಲ್ಲಿ ಬರೋಬ್ಬರಿ ಮೂರು ದಶಕಗಳ ಕಾಲ ವಿವಿಧ ಕ್ಷೇತ್ರಗಳ ಮಂತ್ರಿಯಾಗಿ ಸೇವೆ ಸಲ್ಲಿಸಿದ್ದರೋ, ಎಲ್ಲಿ ಪ್ರಧಾನ ಮಂತ್ರಿಯಾಗಿ ಭಾರತವನ್ನು ಒಂದು ಹದಕ್ಕೆ ತಂದಿದ್ದರೋ, ಅದೇ ಅವರ ಕರ್ಮಭೂಮಿ ಎಂದಿದ್ದ ಹಿರಿಯ ಮಗ ಪ್ರಭಾಕರನ ನಿಲುವಿಗೆ ವಿಧಿ ಬೇರೆಯದೇ ಹೊಡೆತ ನೀಡಲು ಕಾದಿತ್ತು!!

ಅಂತಿಮ ನಮನ ಸಲ್ಲಿಸಲು ಬಂದ ಅಂದಿನ ಗೃಹಮಂತ್ರಿ ಶಿವರಾಜ್ ಪಾಟೀಲ್, “ಶವದಹನ ಕ್ರಿಯೆಯನ್ನು ದೆಹಲಿಯಲ್ಲಿ ನಡೆಸಲು ಸಾಧ್ಯವಿಲ್ಲ, ಬದಲಾಗಿ
ಹೈದರಾಬಾದ್ ಗೆ ತೆಗೆದುಕೊಂಡು ಹೋಗಿ’ ಎಂದು ಪ್ರಭಾಕರ್ ಗೆ ಹೇಳಿದ್ದರಷ್ಟೇ! ಅಷ್ಟರಲ್ಲಿಯೇ, ಗುಲಾಮ್ ನಬೀ ಆಜಾದ್ ಕೂಡ ಶವವನ್ನು ಹೈದರಾಬಾದ್ ಗೆ ತೆಗೆದುಕೊಂಡು ಹೋಗಿ ಎಂದು ಸಲಹೆ ನೀಡಿದ್ದರು! ಸಂಜೆ, ಸುಮಾರು 6.30 ಕ್ಕೆ ಅಂದಿನ ಪ್ರಧಾನಿಯಾಗಿದ್ದಂತಹ ಮನಮೋಹನ್ ಸಿಂಗ್ ಜೊತೆ ಆಗಮಿಸಿದ್ದಳು ಇಟಲಿಯ ಬೆಡಗಿ! ಸೋನಿಯಾ ಗಾಂಧಿ!!

ಅಂತ್ಯಕ್ರಿಯೆ ಎಲ್ಲಿ ಎಂದು ವಿಚಾರಿಸಿದ ಮನಮೋಹನ್ ಸಿಂಗ್ ಗೆ ಪ್ರಭಾಕರ್ ಪರಿಸ್ಥಿತಿಯ ಅವಲೋಕನವನ್ನೂ ಮಾಡಿಕೊಟ್ಟರು! ಕ್ಯಾಬಿನೆಟ್ ಮಂತ್ರಿಗಳಿಗೆ ಸಹಕರಿಸಲು ಹೇಳಿ ಎಂದು ಮನಮೋಹನ್ ಸಿಂಗ್ ಗೆ ವಿನಂತಿ ಮಾಡಿಕೊಂಡರು ಪ್ರಭಾಕರ್! ದೆಹಲಿಯಲ್ಲಿಯೇ ತಂದೆಯ ಅಂತ್ಯಸಂಸ್ಕಾರವಾಗಲಿ ಎಂಬ ಆಶಯವನ್ನು ಮುಂದಿಟ್ಟಾಗ, ಮಾಮೂಲಿನಂತೆ ತಲೆಯಾಡಿಸಿದ್ದ ಸಿಂಗ್! ಪಕ್ಕದಲ್ಲಿಯೇ ಸೋನಿಯಾ ನಿಂತಿದ್ದರೂ ಒಂದೂ ಮಾತನಾಡದೇ ಸುಮ್ಮನಾಗಿದ್ದಳು! ಯಾವಾಗ, ಸೋನಿಯಾ ಹಾಗೂ ಮನಮೋಹನ್ ಸಿಂಗ್ ಜಾಗ ಖಾಲಿ ಮಾಡಿದರೋ, ಉಳಿದ ಮಂತ್ರಿಗಳು ರಾವ್ ರ ಕುಟುಂಬಕ್ಕೆ
ಹೈದರಾಬಾದ್ ನಲ್ಲಿಯೇ ಅಂತ್ಯಕ್ರಿಯೆ ನಡೆಸುವಂತೆ ಒತ್ತಡ ಹೇರಿದಾಗ, ಪ್ರಭಾಕರ್ ವಿಧಿಯಿಲ್ಲದೇ ಒಪ್ಪಿಕೊಂಡರು!

Related image

ಮರುದಿನ, ಹೈದರಾಬಾದ್ ಗೆ ಕೊಂಡೊಯ್ಯಲು ವಿಮಾನ ನಿಲ್ದಾಣಕ್ಕೆ ತೆರಳುವಾಗ, “ಅಕ್ಬರ್ ರಸ್ತೆ 24 ರ ಮೂಲಕವೇ ದೇಹವನ್ನು ಕೊಂಡೊಯ್ಯಲೆಂಬ ಇಂಗಿತ ವ್ಯಕ್ತಪಡಿಸಿದರು ಪ್ರಭಾಕರ್! ‘ಕಾಂಗ‌್ರೆಸ್ ಹೆಡ್ ಕ್ವಾರ್ಟ್ರರ್ಸ್ ಮೂಲಕ ಹೋದರೆ, ಕಾಂಗ್ರೆಸ್ ಪಕ್ಷದ ಉಳಿದವರು ನಮನ ಸಲ್ಲಿಸಲೊಂದು ಅವಕಾಶ ಒದಗಿಸಿಕೊಟ್ಟಂತಾಗುತ್ತದೆಂಬ ಕಾರಣಕ್ಕೆ, ಜೀವನ ಪೂರ್ತಿ ಕಾಂಗ್ರೆಸ್ ಪಕ್ಷಕ್ಕೆ ನಿಷ್ಠೆಯಿಂದಿದ್ದ ರಾವ್ ರವರ ದೇಹವನ್ನು ಕೊಂಡೊಯ್ಯಲು, ಕ್ವಾರ್ಟರ್ಸ್ ಗೇಟ್ ತೆಗೆಯಲು ವಿನಂತಿ ಮಾಡಿದರೂ, ತೆರಯಲೇ ಇಲ್ಲ! ಪ್ರತಿಯೊಬ್ಬ ಪಕ್ಷದ ಕಾರ್ಯಕರ್ತನೂ ಸಹ, ಅಂತಿಮ ನಮನ ಸಲ್ಲಿಸಲು ಅವಕಾಶ ಮಾಡಿಕೊಟ್ಟಂತಾಗುತ್ತಿತ್ತು. ಆದರೆ. . .

ಅವಮಾನ ಹಾಗೂ ಹತಾಶೆಗಳು ಇಲ್ಲಿಯೂ ನಿಲ್ಲಲಿಲ್ಲ! ಇನ್ನೂ ಅಮಾನವೀಯ ಎನ್ನಿಸುವಂತಹ ಅವಮಾನ ಪ್ರಾರಂಭವಾಗಿದ್ದು ಇಲ್ಲಿಯೇ! ಎಲ್ಲಿ, ನರಸಿಂಹ ರಾವ್ ರವರ ಶವಕ್ಕೆ ಅಗ್ನಿಸ್ಪರ್ಶ ಮಾಡಲಾಯಿತೋ, ಆಗ ಯಾವ ಕಾಂಗ್ರೆಸ್ ಪಕ್ಷದವನೂ, ಆಂಧ್ರದ ಯಾವ ಕಾಂಗ್ರೆಸ್ ನಾಯಕನೂ ಅಂತ್ಯ ಕ್ರಿಯೆ ಮುಗಿಯುವ ತನಕ ನಿಲ್ಲಲೂ ಇಲ್ಲ. ದೇಹ ಸಂಪೂರ್ಣವಾಗಿ ಬೂದಿಯಾಗಿದೆಯೇ ಎಂ್ು ಪರೀಕ್ಷಿಸಲೂ ಯಾರೂ ಇರಲೇ ಇಲ್ಲ. ಅರ್ಧಕ್ಕೇ ಆರಿದ ಅಗ್ನಿ ದೇಹವನ್ನು ಸಂಪೂರ್ಣವಾಗಿ ಸುಟ್ಟಿರಲೂ ಇಲ್ಲ. ಯಾರೋ ನೋಡಿದವರು, ಹೈದರಾಬಾದ್ ನ ಅಧಿಕಾರಿಗಳಿಗೆ ಮಾಹಿತಿ ನೀಡಿದ ಮೇಲೆ, ಎಷ್ಟೋ ಹೊತ್ತಿನ ನಂತರ ಮತ್ತೆ ಬಂದು ದಹನಕ್ರಿಯೆಯನ್ನು ಪೂರ್ಣಗೊಳಿಸಿದರು!

ಇದೆಲ್ಲ ನಡೆಯುವಾಗ ಮನಮೋಹನ್ ಸಿಂಗ್ ಪ್ರಧಾನ ಮಂತ್ರಿಯಾಗಿದ‌್ದರು! ಸಿಂಗ್ ಗೆ, ನರಸಿಂಹ ರಾವ್ ಕೇವಲ ‘ರಾಜಕೀಯ ಗುರು’ ಮಾತ್ರವೇ ಆಗಿರಲಿಲ್ಲ. ಬದಲಿಗೆ, ಸಿಂಗ್ ರನ್ನು ಪ್ರಸಿದ್ಧಿಗೆ ತಂದವರೂ ರಾವ್! ಯಾವಾಗ, ರಾಜಕೀಯ ನಿಂದನೆಗಳನ್ನು, ಆಪಾದನೆಗಳನ್ನು ಸಿಂಗ್ ಎದುರಿಸಲಾರರು ಎಂದು ತಿಳಿಯಿತೋ, ಸಂಪೂರ್ಣ ಜವಾಬ್ದಾರಿಯನ್ನು ರಾವ್ ನಿರ್ವಹಿಸಿದರು! ಆಪದನೆಗಳನ್ನು ಸ್ವತಃ ತಮ್ಮ ತಪ್ಪೆಂದು ಹೇಳುವಷ್ಟು ಸಿಂಗ್ ರನ್ನು ಬೆಂಬಲಿಸಿದ್ದರು ರಾವ್! 1991 ರಲ್ಲಿ, ಆರ್ಥಿಕ ವಿಫಲತೆಯಿಂದ ಯಾವಾಗ ಮನಮೋಹನ್ ಸಿಂಗ್ ರಾಜೀನಾಮೆ ಕೊಡಬೇಕೆನ್ನುವಷ್ಟು ಒತ್ತಡಕ್ಕೊಳಗಾದಾಗ, ಮತ್ತೆ ರಾವ್ ಬೆಂಬಲಕ್ಕೆ ನಿಂತಿದ್ದರು! ಮನಮೋಹನ್ ಸಿಂಗ್.ಪ್ರಧಾನಿ ಎಂಬ ಒಕ್ಕಣೆಯೊಂದಿಗೇ ಬೆಂಬಲ ನೀಡಿದ್ದರು ರಾವ್! 1991 ರಿಂದ 1996 ರ ವರೆಗೆ ಯಾವ ಯಾವ ಸುಧಾರಣೆಗಳನ್ನು ಮಾಡಬೇಕು ಎಂಬ ಪ್ರತೀ ಅಂಶವನ್ನೂ ಸಹ ಸಿಂಗ್ ಗೆ ಮನವರಿಕೆ ಮಾಡಿಕೊಟ್ಟಿದ್ದ ರಾವ್, ಆ ಕಾಲಾವಧಿಯಲ್ಲಿ ಸಿಂಗ್ ಗೆ ಬಲಿಷ್ಟ ವೇದಿಕೆಯನ್ನು ಸಿದ್ಧ ಮಾಡಿಕೊಟ್ಟಿದ್ದರು!

ಅದೆಷ್ಟೇ ಅವಮಾನಗಳು, ಒತ್ತಡಗಳು, ಜನರ ಪ್ರಶ್ನೆಗಳ ಮಧ್ಯೆಯೂ ಕೂಡ, ಎಲ್ಲ ರಾಜಕೀಯ ನೀತಿಗಳನ್ನೂ ಬದಿಗಿಟ್ಟು, ಸಿಂಗ್ ಗೆ ಬೆಂಬಲ ನೀಡಿದ್ದರಾದರೂ, ಇದೇ ಶಿಷ್ಯನೆನ್ನಿಸಿಕೊಂಡ ಸಿಂಗ್, ಸೋನಿಯಾ ಗಾಂಧಿಯ ಕೈಯ್ಯಲ್ಲಿ ಹಲ್ಲು ಕಿತ್ತ ಹಾವಾಗಿದ್ದಲ್ಲದೇ, ಸಂಪೂರ್ಣ ವ್ಯಕ್ತಿತ್ವವನ್ನೇ ಕಳೆದುಕೊಂಡಿದ್ದರೆಂಬುದು ಸತ್ಯ! ಗುರುವಿನ ಮಕ್ಕಳ ‘ದೆಹಲಿಯಲ್ಲಿಯೇ ಅಂತ್ಯಸಂಸ್ಕಾರವಾಗಲಿ’ ಎಂಬ ಆಶಯವನ್ನೂ ಸಹ ಪೂರ್ಣಗೊಳಿಸಲಿಲ್ಲ ಶಿಷ್ಯ!

ಇವಿಷ್ಟನ್ನೂ ಆಗಿದ್ದು ಆಗಿ ಹೋಯಿತು ಎಂಬುದು ಬಿಡಿ! ರಾವ್ ರವರ ಮಕ್ಕಳು ದೆಹಲಿಯಲ್ಲಿ ಅಪ್ಪನ ಸ್ಮಾರಕವನ್ನು ನಿರ್ಮಿಸಿ ಎಂದು ಇದೇ ನಾಚಿಕೆಗೆಟ್ಟ ಕಾಂಗ್ರೆಸ್ ಪಕ್ಷ ಹಾಗೂ ಸಿಂಗ್ ರ ಮುಂದೆ ಬೇಡಿಕೆ ಇಟ್ಟಾಗ, ಸಾರಾಸಗಟಾಗಿ ತಿರಸ್ಕರಿಸಿಬಿಟ್ಟಿತು! ಮನಮೋಹನ್ ಸಿಂಗ್ ಮಹಾಮೌನಿಯಾಗಿಬಿಟ್ಟರು! ತನ್ನದೇ ಪಕ್ಷದ ನಾಯಕನಿಗೆ ಕೊಡಬಹುದಾದ ಗೌರವವೇ ಇದು?! ಅದೇ ಕೆಲಸಕ್ಕೆ ಬಾರದ, ದೇಶವನ್ನೇ ಮಾರಿಬಿಟ್ಟಂತಹ ಗಾಂಧಿ ಕುಟುಂಬದವರ ಸ್ಮಾರಕಗಳು ಎಲ್ಲೆಲ್ಲಿಯೂ ರಾರಾಜಿಸಿಬಿಟ್ಟಿತು!

Related image

ಇದಕ್ಕಿಂತ ಹೆಚ್ಚಿನದಾದ ದಾರುಣ ಅಥವಾ ಅವಮಾನಕರ ಅಂತ್ಯ ಯಾವುದಾದರೂ ರಾಜಕೀಯ ದಂತನಾಯಕನಿಗೆ ಬರಬಹುದೇ?! ಸಾವಿನಲ್ಲಿಯೂ ಕೂಡ ಗಾಂಧಿ ಕುಟುಂಬ ರಾವ್ ರವರಿಗೆ ಅವಮಾನ ಮಾಡಿದ್ದು ಯಾತಕ್ಕೆ ಗೊತ್ತಾ?! ‘ರಾವ್ ಯಾವತ್ತೂ ಗಾಂಧಿ ಕುಟುಂಬದವರ ಕೊಳಕು ರಾಜಕೀಯಕ್ಕೆ ಸೊಪ್ಪು ಹಾಕಲಿಲ್ಲ! ಯಾವತ್ತೂ, ಗಾಂಧಿ ಕುಟುಂಬದವರು ಹೇಳಿದ ಹಾಗೆ ಕುಣಿಯಲಿಲ್ಲ! ತೆಗೆದುಕೊಳ್ಳುತ್ತಿದ್ದ ಪ್ರತಿ ನಿರ್ಧಾರಗಳು ಸ್ವಂತದ್ದು ಹಾಗೂ ಸರ್ವಾಧಿಕಾರದ ಭಾಗವಾಗಿರಲಿಲ್ಲ!” ಇಷ್ಟೇ ಕಾರಣವಿದ್ದದ್ದು! ಅದರಲ್ಲಿಯೂ, ಸೋನಿಯಾ ಎಂಬ, ಭಾರತದ ಸಂಸ್ಕೃತಿ ಸಂಸ್ಕಾರಗಳ ಅರಿವೂ ಇಲ್ಲದ ‘ಶನಿ’ ಗೆ ತೀರಾ ಎನ್ನುವಷ್ಟು ಮುಖಭಂಗವಾಗಲು ಇದೇ ಸಾಕಿತ್ತು! ಇಷ್ಟು ಮಟ್ಟದ ಯಾವುದೇ ದೊಡ್ಡದಾದ ಅವಮಾನ ದೇಶದ ಯಾವುದೇ ಪ್ರಧಾನ ಮಂತ್ರಿಗೂ ಆಗಲೇ ಇಲ್ಲವೇನೋ! ಕಾಂಗ್ರೆಸ್ ಪಕ್ಷದ ನಾಯಕರು, ಸೋನಿಯಾಳ ನೇತೃತ್ವದಲ್ಲಿ ದೇಶಕಂಡ ಅದ್ಭುತ ರಾಜಕೀಯ ಮುತ್ಸದ್ದಿಯನ್ನು ಅವಮಾನಗೊಳಿಸಿಬಿಟ್ಟಿದ್ದರು! ಪ್ರಧಾನ ಮಂತ್ರಿ ಮೋದಿಯವರು ಕೊನೆಗೂ ಹಠ ಬಿಡದೇ, 11 ವರ್ಷಗಳ ನಂತರವೂ ಪ್ರಯತ್ನ ಬಿಡದೇ ಸ್ಮಾರಕವನ್ನು
ನಿರ್ಮಿಸಿದರಷ್ಟೇ!

ವಾಸ್ತವಗಳನ್ನು ಹೇಳುವುದಷ್ಟೇ ನಮ್ಮ ಕೆಲಸ! ಆದರೆ, ಯೋಚಿಸುವುದು ನಿಮಗೆ ಬಿಟ್ಟದ್ದಷ್ಟೇ!

-Team PostCard

Tags

Related Articles

FOR DAILY ALERTS
 
FOR DAILY ALERTS
 
Close