ಪ್ರಚಲಿತ

ಯುಗಾದಿಗೆ ಬಿಗ್ ಶಾಕ್ ನೀಡಿದ ಸಿದ್ದರಾಮಯ್ಯ..! ದೂರದ ಊರಿಂದ ಊರಿಗೆ ಬರುವವರಿಗೆ ಬರೆ ಎಳೆದ ಸರಕಾರ.!

ವಿನಾಶ ಕಾಲೇ ವಿಪರೀತ ಬುದ್ದಿ ಎಂಬ ಮಾತು ಈ ಕಾಂಗ್ರೆಸ್ ನವರಿಗೆ ಹೇಳಿ ಮಾಡಿಸಿದಂತಿದೆ. ಯಾಕೆಂದರೆ ಜನರ ಅಭಿವೃದ್ಧಿಗೆ ಸರಕಾರ ಕ್ರಮಕೈಗೊಳ್ಳುವುದನ್ನು ನೋಡಿದ್ದೇವೆ, ಕೇಳಿದ್ದೇವೆ. ಆದರೆ ಕಾಂಗ್ರೆಸ್ ತನ್ನ ಅಭಿವೃದ್ಧಿಯನ್ನು ಜನರ ದುಡ್ಡಿನಲ್ಲಿ ಮಾಡಿಕೊಳ್ಳುತ್ತಿದೆ. ಕರ್ನಾಟಕ ಹಿಂದೆಂದೂ ಕಂಡಿರದ ಆಡಳಿತವನ್ನು ಸದ್ಯ ಸಿದ್ದರಾಮಯ್ಯನವರ ಆಳ್ವಿಕೆಯಲ್ಲಿ ನೋಡುತ್ತಿದೆ. ಈಗಾಗಲೇ ಕರ್ನಾಟಕವನ್ನು ವಿನಾಶದ ಅಂಚಿಗೆ ತಂದಿಟ್ಟಿರುವ ಸಿದ್ದರಾಮಯ್ಯನವರು, ಇದೀಗ ಚುನಾವಣೆ ಸಮೀಪಿಸುತ್ತಿದ್ದಂತೆ ಮತ್ತೆ ರಾಜ್ಯದ ಜನರ ಮೇಲೆ ಮತ್ತೊಂದು ಬರೆ ಎರೆದಿದೆ.!

ಯುಗಾದಿ ಹಬ್ಬಕ್ಕೆ ಸಿದ್ದರಾಮಯ್ಯ ಸರಕಾರದಿಂದ ಬಿಗ್ ಶಾಕ್..!

ಅಧಿಕಾರಕ್ಕೆ ಏರುತ್ತಿದ್ದಂತೆ ಸಿದ್ದರಾಮಯ್ಯನವರು ಹಿಂದೂ ವಿರೋಧಿ ಎಂಬೂದನ್ನು ಸಾಬೀತುಪಡಿಸುತ್ತಲೇ ಬಂದವರು. ಅಲ್ಪಸಂಖ್ಯಾತರು ಎಂಬ ಒಂದೇ ಕಾರಣಕ್ಕೆ ಮುಸ್ಲೀಮರನ್ನು ಓಲೈಸಿಕೊಂಡು ಬಂದಿರುವ ಸಿದ್ದರಾಮಯ್ಯ , ಹಿಂದೂಗಳ ಎಲ್ಲಾ ಆಚಾರ ವಿಚಾರಗಳಿಗೂ ಧಕ್ಕೆ ಉಂಟು ಮಾಡುತ್ತಲೇ ಬಂದಿದ್ದಾರೆ. ಇದೀಗ ಹಿಂದೂಗಳು ಹೊಸ ವರುಷ ಎಂದು ಆಚರಿಸುವ ಯುಗಾದಿ ಹಬ್ಬಕ್ಕೆ ಸರಕಾರ ಬಿಗ್ ಶಾಕ್ ನೀಡಿದೆ. ಅದೇನೆಂದರೆ ಯುಗಾದಿ ಹಬ್ಬದ ಸಂದರ್ಭದಲ್ಲಿ ಎಲ್ಲರೂ ತಮ್ಮ ತಮ್ಮ ಊರುಗಳಿಗೆ ಹೋಗಿ ಹಬ್ಬ ಆಚರಿಸುತ್ತಾರೆ. ಇದನ್ನೇ ಬಂಡವಾಳವನ್ನಾಗಿ ಇಟ್ಟುಕೊಂಡ ಸಿದ್ದರಾಮಯ್ಯ ಸರಕಾರ ಒಂದೇ ಬಾರಿಗೆ ಬಸ್ಸುಗಳ ದರ ಏರಿಸಿದೆ.

ಯುಗಾದಿ ಹಿಂದೂಗಳ ಪವಿತ್ರ ಹಬ್ಬವಾಗಿರುವುದರಿಂದ ಸಿದ್ದರಾಮಯ್ಯನವರು ಯುಗಾದಿಯ ಮೇಲೆಯೇ ಕಣ್ಣು ಹಾಕಿರುವುದು ಹಿಂದೂಗಳನ್ನು ಸಂಪೂರ್ಣವಾಗಿ ಕಡೆಗಣಿಸುತ್ತಿರುವುದು ಕಂಡುಬರುತ್ತಿದೆ.

ಎಲ್ಲಾ ರೀತಿಯ ಬಸ್ ದರವೂ ದಿಢೀರ್ ಹೆಚ್ಚಳ..!

ಸದಾ ಒಂದಿಲ್ಲೊಂದು ನಿರ್ಧಾರಗಳಿಂದ ಹಿಂದೂಗಳನ್ನು ಕಡೆಗಣಿಸುತ್ತಿರುವ ಸಿದ್ದರಾಮಯ್ಯ ಸರಕಾರ ಈ ಹಿಂದೆ ಮುಸಲ್ಮಾನರ ಹಬ್ಬಗಳಿಗೆ ವಿಶೇಷ ಸವಲತ್ತುಗಳನ್ನು ನೀಡಿ ಸತ್ಕರಿಸಿತ್ತು. ಇದೀಗ ಹೊಸ ವರ್ಷ ಯುಗಾದಿ ಆಚರಿಸುವ ಹಿಂದೂಗಳಿಗೆ ಶಾಕ್ ನೀಡಿರುವ ಕಾಂಗ್ರೆಸ್, ವೋಲ್ವೋ , ಮಲ್ಟಿ ಆಕ್ಸಲ್ ಮತ್ತು ಸ್ಕ್ಯಾನಿಂಗ್ ಬಸ್ ಗಳಿಗೆ ಪ್ರತೀ ಟಿಕೆಟ್ ನಲ್ಲಿ ಸುಮಾರು ೨೦೦ ರೂಪಾಯಿ ಹೆಚ್ಚಳ ಮಾಡಲಾಗಿದೆ. ಬೆಂಗಳೂರಿನಿಂದ ತಮ್ಮ ಊರುಗಳಿಗೆ ತೆರಳುವ ಪ್ರತಿ ಬಸ್ ಗಳ ಬೆಲೆ ಏರಿಕೆ ಮಾಡಿರುವುದರಿಂದ ಈ ಬಾರಿಯ ಯುಗಾದಿಯಂದು ತಮ್ಮ ಊರುಗಳಿಗೆ ತೆರಳುವ ಹಿಂದೂಗಳಿಗೆ ಭಾರೀ ಅಸಮಧಾನವಾಗಿದೆ.

ಈಗಾಗಲೇ ಅನೇಕ ಬಾರಿ ಹಿಂದೂ ವಿರೋಧಿ ನೀತಿಯಿಂದಾಗಿಯೇ ಹಿಂದೂಗಳನ್ನು ಕಡೆಗಣಿಸುತ್ತಾ ಬಂದಿರುವ ಸಿದ್ದರಾಮಯ್ಯ ಸರಕಾರ , ಇದೀಗ ಮತ್ತೊಂದು ನಿರ್ಧಾರ ಕೈಗೊಳ್ಳುವ ಮೂಲಕ ಚುನಾವಣೆಗೆ ಹಣಬರಿಸುವ ತಂತ್ರವೂ ಆಗಿರಬಹುದು ಎಂಬ ಮಾತು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.!

–ಅರ್ಜುನ್ ಭಾರದ್ವಾಜ್

 

Tags

Related Articles

FOR DAILY ALERTS
 
FOR DAILY ALERTS
 
Close