ಪ್ರಚಲಿತ

ಶಾಸಕರ ಎದುರೇ ಕಣ್ಣೀರಿಡುತ್ತಾ ಸೋಲೊಪ್ಪಿಕೊಂಡ ಮಾಜಿ ಸಿಎಂ..! ಪಕ್ಷದ ಸೋಲಿಗೆ ಸಿದ್ದರಾಮಯ್ಯನೇ ಕಾರಣ..!

ಈಗಾಗಲೇ ರಾಜ್ಯ ವಿಧಾನಸಭಾ ಚುನಾವಣೆ ಮುಗಿದಿದ್ದು, ಫಲಿತಾಂಶವೂ ಹೊರಬಿದ್ದಿದೆ. ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ ಬಿಜೆಪಿ ಸರಕಾರ ರಚನೆ ಮಾಡಲು ಪರದಾಡುತ್ತಿದ್ದರೆ, ಇತ್ತ ಜೆಡಿಎಸ್ ಮತ್ತು ಕಾಂಗ್ರೆಸ್ ಮೈತ್ರಿ ಮಾಡಿಕೊಂಡು ಸರಕಾರ ರಚನೆ ಮಾಡುತ್ತೇವೆ ಎಂದು ತೊಡೆತಟ್ಟಿ ನಿಂತಿದ್ದಾರೆ. ಆದರೆ ಪ್ರಬಲ ಪೈಪೋಟಿಗೆ ಇಳಿದಿರುವ ಬಿಜೆಪಿ ಕೂಡಾ ಸರಕಾರ ರಚಿಸಿಯೇ ಸಿದ್ದ ಎಂದು ಪಣತೊಟ್ಟಿದ್ದು, ರಾಜ್ಯಪಾಲರ ಬಳಿ ಕಾಲಾವಕಾಶ ಕೇಳಿಕೊಂಡಿದೆ. ಆದ್ದರಿಂದ ಮುಂದಿನ ದಿನಗಳಲ್ಲಿ ಏನಾಗುತ್ತದೆ ಎಂದು ಕಾದು ನೋಡಬೇಕಾಗಿದೆ.!

ಇತ್ತ ಹುಲಿಯಂತೆ ವಿರೋಧ ಪಕ್ಷಗಳ ಮೇಲೆ ಮುಗಿಬೀಳುತ್ತಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಚುನಾವಣಾ ಫಲಿತಾಂಶ ಹೊರಬೀಳುತ್ತಿದ್ದಂತೆ ಯಾರೂ ಊಹಿಸದ ರೀತಿಯಲ್ಲಿ ಸಿದ್ದರಾಮಯ್ಯನವರು ಮಂಕಾಗಿದ್ದಾರೆ. ವಿರೋಧಿಗಳ ವಿರುದ್ಧ ತೊಡೆತಟ್ಟಿ ನಿಂತಿದ್ದ ಸಿದ್ದರಾಮಯ್ಯನವರು ಇದೀಗ ರಾಜ್ಯದ ಜನರ ಮುಂದೆ ಕೈಕಟ್ಟಿ ನಿಂತಿದ್ದಾರೆ.!

Image result for siddaramaiah crying

ಪಕ್ಷದ ಸೋಲಿಗೆ ನಾನೇ ಕಾರಣ..!

ಸಿದ್ದರಾಮಯ್ಯನವರು ಪ್ರಚಾರದ ವೇಳೆ ಹೋದಲ್ಲೆಲ್ಲಾ ನಾನೇ ಮುಂದಿನ ಮುಖ್ಯಮಂತ್ರಿ ಎಂದು ಹೇಳುತ್ತಿದ್ದರು, ಆದರೆ ಫಲಿತಾಂಶ ಉಲ್ಟಾ ಪಲ್ಟಾ ಆಗಿದ್ದು, ಕಾಂಗ್ರೆಸ್ ರಾಜ್ಯದಲ್ಲಿ ಧೂಳಿಪಟವಾಗಿಬಿಟ್ಟಿದೆ. ಇತ್ತ ಮುಖ್ಯಮಂತ್ರಿ ಕುರ್ಚಿಯಿಂದ ಸಿದ್ದರಾಮಯ್ಯನವರು ಕೆಳಗಿಳಿದಿದ್ದಾರೆ. ಕಾಂಗ್ರೆಸ್ ಲೆಕ್ಕಾಚಾರದ ಪ್ರಕಾರ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರಬೇಕಿತ್ತು, ಆದರೆ ಬಿಜೆಪಿಯ ಅಬ್ಬರದ ಮುಂದೆ ಕಾಂಗ್ರೆಸ್‌ ತನ್ನ ಅಸ್ತಿತ್ವವನ್ನೇ ಕಳೆದುಕೊಂಡಿದೆ.
ಇಂದು ನಡೆದ ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ಸಿದ್ದರಾಮಯ್ಯನವರು ಸೋಲೊಪ್ಪಿಕೊಂಡಿದ್ದು, ರಾಜ್ಯದಲ್ಲಿ ಕಾಂಗ್ರೆಸ್ ಸೋಲಲು ನಾನೇ ನೇರ ಕಾರಣ ಎಂದು ಹೇಳಿಕೊಂಡಿದ್ದಾರೆ.!

ಕಾಂಗ್ರೆಸ್ ಶಾಸಕರನ್ನು ಸೇರಿಸಿಕೊಂಡು ಇಂದು ನಡೆದ ಶಾಸಕಾಂಗ ಸಭೆಯಲ್ಲಿ ಭಾಗವಹಿಸಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಭಾವುಕರಾಗಿದ್ದು, ಎಲ್ಲರ ಎದುರೇ ಕಣ್ಣೀರಿಟ್ಟರು. ರಾಜ್ಯದ ರೈತರು ತಮ್ಮ ಸಮಸ್ಯೆ ಹೇಳಿಕೊಂಡು ಬಂದಾಗ ಧಿಕ್ಕರಿಸಿ ಅಹಂಕಾರ ಮೆರೆದಿದ್ದ ಸಿದ್ದರಾಮಯ್ಯನವರು ಇದೀಗ ಯಾವ ಸ್ಥಿತಿಗೆ ಬಂದು ತಲುಪಿದ್ದಾರೆ ಎಂಬುದು ಅರಿವಾಗುತ್ತದೆ..!

Image result for siddaramaiah crying

ನಮ್ಮನ್ನು ಸೋಲಿಸಿದ್ದು ಸಿದ್ದರಾಮಯ್ಯನವರೇ..!

ಸಿದ್ದರಾಮಯ್ಯನವರ ಸರ್ವಾಧಿಕಾರದ ಆಡಳಿತವೇ ಅವರಿಗೆ ಮುಳುವಾಯಿತು ಎಂದರೆ ತಪ್ಪಾಗದು. ಯಾಕೆಂದರೆ ಸಿದ್ದರಾಮಯ್ಯನವರನ್ನು ಕಂಡರೆ ಸ್ವತಃ ಕಾಂಗ್ರೆಸಿಗರೇ ಉರಿದು ಬೀಳುತ್ತಿದ್ದರು. ಆದರೆ ಅಧಿಕಾರದ ಅಹಂಕಾರದಿಂದ ಸಿದ್ದರಾಮಯ್ಯನವರು ಇದ್ಯಾವುದನ್ನೂ ಲೆಕ್ಕಿಸದೆ ದರ್ಪ ಮೆರೆಯುತ್ತಿದ್ದರು. ಇದು ಚುನಾವಣೆಯ ನಂತರವೂ ಮುಂದುವರಿದಿದೆ, ಯಾಕೆಂದರೆ ನಮ್ಮನ್ನು ಸೋಲಿಸಿದ್ದು ಸಿದ್ದರಾಮಯ್ಯನವರೇ ಎಂದು ಕಾಂಗ್ರೆಸ್ ನಲ್ಲಿ ಸೋತ ಅಭ್ಯರ್ಥಿಗಳು ದೂರಿದ್ದಾರೆ.
ಸಿದ್ದರಾಮಯ್ಯನವರ ಸ್ಪರ್ಧಿಸಿದ ಎರಡು ಕ್ಷೇತ್ರಗಳಲ್ಲಿ ಒಂದನ್ನು ಮಾತ್ರ ಅಲ್ಪ ಮತದಿಂದ ಗೆದ್ದಿದ್ದು, ಚಾಮುಂಡೇಶ್ವರಿಯಲ್ಲಿ ಭಾರೀ ಮುಖಭಂಗ ಅನುಭವಿಸಿದ್ದಾರೆ. ಆದ್ದರಿಂದ ಪಕ್ಷದ ಅಭ್ಯರ್ಥಿಗಳ ಸೋಲಿಗೆ ಸಿದ್ದರಾಮಯ್ಯನವರೇ ನೇರ ಕಾರಣ ಎಂದು ಕಾಂಗ್ರೆಸಿಗರೇ ದೂರಿದ್ದಾರೆ..!

ಮುಖ್ಯಮಂತ್ರಿ ಎಂಬ ಕಾರಣಕ್ಕೆ ಏನೂ ಮಾಡಬಹುದು ಎಂಬಂತಿದ್ದ ಸಿದ್ದರಾಮಯ್ಯನವರು ಇದೀಗ ಏನೂ ಇಲ್ಲದೆ ಬೇಡಿಕೊಳ್ಳುತ್ತಿದ್ದಾರೆ. ಅದೆಷ್ಟೋ ಸಾವುಗಳಾದಗಲೂ ಕ್ಯಾರೇ ಅನ್ನದ ಸಿದ್ದರಾಮಯ್ಯನವರು ಇದೀಗ ಅಧಿಕಾರವ ಕೈತಪ್ಪುತ್ತಿದ್ದಂತೆ ಕಣ್ಣೀರಿಟ್ಟು ಬೇಡಿಕೊಳ್ಳುತ್ತಿದ್ದಾರೆ..!

–ಅರ್ಜುನ್

Tags

Related Articles

FOR DAILY ALERTS
 
FOR DAILY ALERTS
 
Close