ಪ್ರಚಲಿತ

ಕೊನೆಗೂ ಮೌನ ಮುರಿದ ಮಾಜಿ ಮುಖ್ಯಮಂತ್ರಿ.! ಸಿದ್ದರಾಮಯ್ಯನವರಿಂದ ಸಿಎಂ ಕುಮಾರಸ್ವಾಮಿಗೆ ಪತ್ರ.!

ಕಾಂಗ್ರೆಸ್ ಮತ್ತು ಜೆಡಿಎಸ್‌ ಪಕ್ಷವನ್ನು ರಾಜ್ಯದ ಜನರು ಮೂಲೆಗುಂಪು ಮಾಡಿ ಚುನಾವಣೆಯಲ್ಲಿ ತಮ್ಮ ಆದೇಶ ನೀಡಿದರು ಕೂಡ ಅಧಿಕಾರದ ಆಸೆಗೆ ಬಿದ್ದ ಈ ಎರಡೂ ಪಕ್ಷಗಳು ಮೈತ್ರಿ ಮಾಡಿಕೊಂಡು ಸರಕಾರ ರಚನೆ ಮಾಡುವಲ್ಲಿ ಯಶಸ್ವಿಯಾಗಿದೆ. ಆದರೆ ತಮ್ಮ ತಮ್ಮಲ್ಲೇ ಇರುವ ವೈಮನಸ್ಸನ್ನು ಸರಿ ಮಾಡಿಕೊಳ್ಳಲಾಗದ ಸಮ್ಮಿಶ್ರ ಸರಕಾರದಲ್ಲಿ ದಿನಕ್ಕೊಂದು ಆಘಾತಗಳು ಎದುರಾಗುತ್ತಿದ್ದು ಮೈತ್ರಿ ಸರಕಾರದ ವಿರುದ್ಧ ಸ್ವತಃ ಶಾಸಕರೇ ತಿರುಗಿಬಿದ್ದು ಆಕ್ರೋಶ ಹೊರ ಹಾಕುತ್ತಿದ್ದಾರೆ.

ರಾಷ್ಟ್ರೀಯ ಪಕ್ಷವಾದ ಕಾಂಗ್ರೆಸ್ ಪ್ರಾದೇಶಿಕ ಪಕ್ಷ ಜೆಡಿಎಸ್‌ ಜೊತೆ ಸೇರಿಕೊಂಡಿರುವದನ್ನು ಮೊದಲಿನಿಂದಲೇ ವಿರೋಧಿಸುತ್ತಾ ಬಂದಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು, ಪಕ್ಷದ ಮುಖಂಡರ ಒತ್ತಡಕ್ಕೆ ಮಣಿದು ಸುಮ್ಮನಾಗಿದ್ದರು. ಆದರೆ ತೆರೆಮರೆಯಲ್ಲಿ ಮೈತ್ರಿ ಸರಕಾರದ ವಿರುದ್ಧ ಸಮರ ಸಾರುತ್ತಲೇ ಇದ್ದ ಸಿದ್ದರಾಮಯ್ಯ ಇದೀಗ ಬಹಿರಂಗವಾಗಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಪತ್ರ ಬರೆಯುವ ಮೂಲಕ ತಮ್ಮ ಆಕ್ರೋಶ ಪ್ರದರ್ಶಿಸಿದ್ದಾರೆ.!

ಸಿದ್ದರಾಮಯ್ಯನವರು ತಮ್ಮ ಬೆಂಬಲಿತ ಶಾಸಕರನ್ನು ಒಟ್ಟುಗೂಡಿಸಿ ಮೈತ್ರಿ ಸರಕಾರಕ್ಕೆ ಬಿಗ್ ಶಾಕ್ ನೀಡುತ್ತಾರೆ ಎಂದು ಈ ಹಿಂದಿನಿಂದಲೂ ಹೇಳಲಾಗುತ್ತಿತ್ತು. ಆದರೆ ಸಿದ್ದರಾಮಯ್ಯನವರು ಅಂತಹ ಯಾವುದೇ ಬಹಿರಂಗ ಹೇಳಿಕೆ ಆಗಲಿ, ಕಸರತ್ತು ಆಗಲಿ ನಡೆಸಿರಲಿಲ್ಲ. ಆದರೆ ಇದೇ ಮೊದಲ ಬಾರಿಗೆ ತಮ್ಮ ವಿರೋಧವನ್ನು ತೋರ್ಪಡಿಸಿದ್ದು ಕಾಂಗ್ರೆಸ್ ಮತ್ತು ಜೆಡಿಎಸ್‌ ಎರಡೂ ಪಕ್ಷಗಳ ಮುಖಂಡರಿಗೆ ಶಾಕ್ ನೀಡಿದ್ದಾರೆ. ಯಾಕೆಂದರೆ ಒಂದೆಡೆ ಡಿಸಿಎಂ ಜಿ ಪರಮೇಶ್ವರ್ ಮತ್ತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ನಡುವಿನ ವೈಮನಸ್ಸು ಕೂಡ ಹೆಚ್ಚುತ್ತಿದ್ದು ಹಾವು – ಮುಂಗುಸಿ ಎಂಬಂತಾಗಿದೆ ಇಬ್ಬರ ನಡುವಿನ ಸಂಬಂಧ.!

ಬಜೆಟ್ ಬಗ್ಗೆ ಅಸಮಧಾನ ಹೊರಹಾಕಿದ ಸಿದ್ದರಾಮಯ್ಯ..!

ಮುಖ್ಯಮಂತ್ರಿಯಾಗಿ ಕುಮಾರಸ್ವಾಮಿ ಅವರು ತಮ್ಮ ಸರಕಾರದ ಮೊದಲ ಬಜೆಟ್ ಮಂಡಿಸಲು ತಯಾರಿ ನಡೆಸುತ್ತಿದ್ದ ವೇಳೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬಹಿರಂಗವಾಗಿ ವಿರೋಧಿಸಿದ್ದರು. ಈ ಹಿಂದಿನ ನಮ್ಮ ಸರಕಾರದ ಯೋಜನೆಗಳನ್ನೇ ಮುಂದುವರಿಸಿಕೊಂಡು ಹೋಗುವಂತೆ ಸಿಎಂ ಕುಮಾರಸ್ವಾಮಿ ಅವರಿಗೆ ಸಲಹೆ ಕೂಡ ನೀಡಿದ್ದರು. ಆದರೆ ಕುಮಾರಸ್ವಾಮಿ ಅವರು ಮಾತ್ರ ತಮ್ಮ ನಿರ್ಧಾರದಂತೆ ಬಜೆಟ್ ಮಂಡನೆ ಮಾಡಿದ್ದು ಸಿದ್ದರಾಮಯ್ಯನವರ ಆಕ್ರೋಶಕ್ಕೆ ಕಾರಣವಾಗಿತ್ತು. ಆದ್ದರಿಂದ ತೆರೆಮರೆಯಲ್ಲಿ ಸರಕಾರದ ವಿರುದ್ಧ ಆಟವಾಡುತ್ತಿದ್ದ ಸಿದ್ದರಾಮಯ್ಯನವರು ಇದೀಗ ಕಾಂಗ್ರೆಸ್ ಶಾಸಕಾಂಗ ಸಭೆ ಮುಗಿಯುತ್ತಿದ್ದಂತೆ ಮುಖ್ಯಮಂತ್ರಿ ಕುಮಾರಸ್ವಾಮಿಗೆ ಪತ್ರ ಬರೆದಿದ್ದಾರೆ.

ರಾಜ್ಯ ಸರಕಾರ ನಮ್ಮ ಈ ಹಿಂದಿನ ಯೋಜನೆಗಳಿಗೆ ಯಾವುದೇ ರೀತಿಯ ಬೆಲೆ ನೀಡದೆ ಹೊಸ ಬಜೆಟ್ ಮಂಡನೆ ಮಾಡಿದೆ, ಇದರಲ್ಲಿ ನಮ್ಮ ಸರಕಾರದ ಬಹುಮುಖ್ಯ ಯೋಜನೆಯಾಗಿದ್ದ ಅನ್ನಭಾಗ್ಯ ಯೋಜನೆಯ ಅಕ್ಕಿಯನ್ನು ಏಳು ಕೆಜಿಯಿಂದ ಐದು ಕೆಜಿಗೆ ಇಳಿಸಿ ಭಾರೀ ಅವಮಾನ ಮಾಡಿದೆ ಎಂದು ಅಸಮಧಾನ ಪ್ರದರ್ಶಿಸಿದ್ದಾರೆ. ರಾಜ್ಯದ ಜನರಿಗೆ ಅನ್ನಭಾಗ್ಯ ಯೋಜನೆಯಲ್ಲಿ ಸರಕಾರದ ವತಿಯಿಂದ ಭಾರೀ ಉಪಕಾರವಾಗುತ್ತಿತ್ತು, ಆದರೆ ಕುಮಾರಸ್ವಾಮಿ ಅವರು ಅದೇ ಯೋಜನೆಗೆ ಕತ್ತರಿ ಹಾಕಿ ಬಜೆಟ್ ಮಂಡನೆ ಮಾಡಿದ್ದಾರೆ ಎಂದು ಪತ್ರದಲ್ಲಿ ಹೇಳಿಕೊಂಡಿದ್ದಾರೆ.!

ಸಿದ್ದರಾಮಯ್ಯನವರನ್ನು ಮೈತ್ರಿ ಸರಕಾರದ ಸಮನ್ವಯ ಸಮಿತಿಯ ಅಧ್ಯಕ್ಷರನ್ನಾಗಿ ಈಗಾಗಲೇ ನೇಮಕ ಮಾಡಿದ್ದು, ಈ ವಿಚಾರದಲ್ಲಿ ಅನೇಕ ಜೆಡಿಎಸ್‌ ಶಾಸಕರಿಗೂ ವಿರೋಧವಿತ್ತು. ಆದರೆ ಯಾವುದೇ ಬೇರೆ ಉಪಾಯವಿಲ್ಲದ ಮುಖಂಡರು ಸಿದ್ದರಾಮಯ್ಯನವರಿಗೆ ಅಧ್ಯಕ್ಷ ಸ್ಥಾನ ನೀಡಿದ್ದರು. ಆದ್ದರಿಂದ ಮೈತ್ರಿ ಸರಕಾರದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಕಡೆಗಣಿಸಲಾಗುತ್ತಿದೆ ಎಂಬ ಆರೋಪಕ್ಕೆ ಕೆಂಡಾಮಂಡಲವಾದ ಸಿದ್ದರಾಮಯ್ಯ ಇದೀಗ ನೇರವಾಗಿ ಎಚ್‌ಡಿ‌ಕೆ ಗೆ ಪತ್ರ ಬರೆಯುವ ಮೂಲಕ ಅಸಮಧಾನ ಹೊರ ಹಾಕಿದ್ದಾರೆ. ಇತ್ತ ಮೈತ್ರಿ ಸರಕಾರದ ಮುಖಂಡರಿಗೂ ಸಿದ್ದರಾಮಯ್ಯನವರ ಪತ್ರ ಕಂಡು ಬೆವರಿಳಿದಿದ್ದು, ಸರಕಾರಕ್ಕೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ..!

–ಅರ್ಜುನ್

Tags

Related Articles

FOR DAILY ALERTS
 
FOR DAILY ALERTS
 
Close