ಪ್ರಚಲಿತರಾಜ್ಯ

ಪತ್ರಕರ್ತರ ಮೇಲೆ ಹಲ್ಲೆ ಮಾಡಿದ ಸಿದ್ದರಾಮಯ್ಯ..!! ಕಾಂಗ್ರೆಸ್ ವಿರುದ್ಧ ಸಿಡಿದೆದ್ದ ಪತ್ರಕರ್ತರು!!

ತಪ್ಪು ಮಾಡಿದವರು ಎಷ್ಟೇ ದೊಡ್ಡವರಾದರೂ ನ್ಯಾಯದ ಮುಂದೆ ತಲೆಬಾಗಲೇ ಬೇಕು. ಯಾಕೆಂದರೆ ಅಧಿಕಾರದ ಅಮಲಿನಲ್ಲಿ ಮಾಡಿದ ತಪ್ಪನ್ನು ಒಪ್ಪಿಕೊಳ್ಳಲು ತಯಾರಿರದ ಕಾಂಗ್ರೆಸ್ ಮೇಲಿಂದ ಮೇಲೆ ತಪ್ಪು ಮಾಡುತ್ತಲೇ ಇದೆ. ಸದ್ಯ ಕರ್ನಾಟಕದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ತನ್ನ ಕೈಯಲ್ಲಿ ಎಷ್ಟು ಸಾಧ್ಯವೋ ಅಷ್ಟು ತಪ್ಪುಗಳನ್ನು ಮಾಡಿ ಇದೀಗ ಚುನಾವಣೆ ಸಮೀಪಿಸುತ್ತಿದ್ದಂತೆ ಮಾಡಿದ ತಪ್ಪಿಗೆ ಚಿಂತೆ ಪಡುತ್ತಿದೆ. ಯಾಕೆಂದರೆ ಅಧಿಕಾರ ಇದೆ ಎಂಬ ಕಾರಣಕ್ಕೆ ಸಾಮಾನ್ಯ ಜನರ ಮೇಲೆ ದಬ್ಬಾಳಿಕೆ ನಡೆಸುತ್ತಿದ್ದ ಕಾಂಗ್ರೆಸ್ ನಾಯಕರ ಒಂದೊಂದೇ ಮುಖ ಕಳಚುತ್ತಿದೆ.

ಕಳೆದ ಒಂದು ತಿಂಗಳುಗಳಲ್ಲಿ ಕಾಂಗ್ರೆಸ್ ಈವರೆಗೆ ಮಾಡಿದ ಎಲ್ಲಾ ಹಗರಣಗಳು, ದಬ್ಬಾಳಿಕೆ, ಹಲ್ಲೆ ಇಂತಹ ಹಲವಾರು ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಚುನಾವಣೆ ಹತ್ತಿರವಾಗುತ್ತಿದ್ದಂತೆ ತಡಪಡಿಸುತ್ತಿರುವ ಕಾಂಗ್ರೆಸ್ ಗೆ ಏನೂ ಮಾಡಲಾಗದ ಸ್ಥಿತಿ ಎದುರಾಗಿದೆ. ಯಾಕೆಂದರೆ ರಾಜ್ಯದಲ್ಲಿ ಆಡಳಿತ ವಿರೋಧಿ ಅಲೆ ಎದ್ದಿರುವುದರಿಂದ ಸಿದ್ದರಾಮಯ್ಯ ನೇತ್ರತ್ವದ ಕಾಂಗ್ರೆಸ್ ಗೆ ಚುನಾವಣೆ ಎದುರಿಸಲು ಹರಸಾಹಸಪಡುತ್ತಿದೆ.

ಸಾಮಾನ್ಯ ಜನರಾಯಿತು, ಇದೀಗ ಮಾಧ್ಯಮದ ಸರದಿ..!

ಈವರೆಗೆ ರಾಜ್ಯ ಕಾಂಗ್ರೆಸ್ ನಾಯಕರು ತಮ್ಮ ಅಧಿಕಾರವನ್ನು ಬಳಸಿಕೊಂಡು ಕರ್ನಾಟಕದ ಸಾಮಾನ್ಯ ಜನರ ಮೇಲೆ ದಬ್ಬಾಳಿಕೆ ನಡೆಸುತ್ತಿದ್ದರು. ತಮ್ಮ ಸಮಸ್ಯೆ ಹೇಳಿಕೊಳ್ಳಲು ಹೋಗಿದ್ದ ಅದೆಷ್ಟೋ ರೈತರ ಮತ್ತು ಸಾಮಾನ್ಯ ಜನರ ಮೇಲೆ ಕಾಂಗ್ರೆಸ್ ನಾಯಕರು ಮೈಮೇಲೆ ಕೈ ಹಾಕಿ ಹೊರ ದೂಡಿದ ಉದಾಹರಣೆಯೂ ಕಣ್ಣ ಮುಂದಿದೆ. ಇದೀಗ ಕಾಂಗ್ರೆಸ್ ನ ಹಗರಣಗಳ ಬಗ್ಗೆ ಮತ್ತು ಕಾಂಗ್ರೆಸ್ ನಾಯಕರು ನಡೆಸುತ್ತಿರುವ ರೌಡಿಸಂ ಬಗ್ಗೆ ಪ್ರಶ್ನಿಸಲು ಹೋಗಿದ್ದ ಮಾಧ್ಯಮದವರ ಮೇಲೆಯೇ ಸಿದ್ದರಾಮಯ್ಯನವರು ಹಲ್ಲೆ ಮಾಡಿದ್ದಾರೆ.!

ಬೆಂಗಳೂರಿನ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದ ಸಿದ್ದರಾಮಯ್ಯನವರು ಕಾರ್ಯಕ್ರಮ ಮುಗಿಸಿ ವಾಪಾಸಾಗುವ ವೇಳೆಯಲ್ಲಿ ಮಾಧ್ಯಮ ಪ್ರತಿನಿಧಿಗಳು ಕೇಳಿದ ಪ್ರಶ್ನೆಗೆ ಉತ್ತರಿಸಲಾಗದ ಸಿದ್ದರಾಮಯ್ಯನವರು ತನ್ನ ಗನ್ ಮ್ಯಾನ್ ಗಳನ್ನು ಬಿಟ್ಟು ಹಲ್ಲೆಗೆ ಪ್ರಯತ್ನಿಸಿದ್ದಾರೆ.

ಸಿಎಂ ಮಗ , ಶಾಸಕರ ದಬ್ಬಾಳಿಕೆಯನ್ನೂ ಪ್ರಶ್ನಿಸುವಂತಿಲ್ಲ..!

ಸಿದ್ದರಾಮಯ್ಯನವರ ಅಧಿಕಾರದ ಬಲದಿಂದ ಏನು ಬೇಕಾದರೂ ಮಾಡಬಹುದು ಎಂಬ ಆಲೋಚನೆಯಲ್ಲಿರುವ ಕಾಂಗ್ರೆಸ್ ನಾಯಕರು ಸಾಮಾನ್ಯ ಜನರ ಮೇಲೆ ತಮ್ಮ ಅಧಿಕಾರದ ದರ್ಪ ತೋರಿಸುತ್ತಿದ್ದಾರೆ. ಇತ್ತೀಚೆಗೆ ಸಿದ್ದರಾಮಯ್ಯನವರ ಮಗನ ಹೆಸರಿನಲ್ಲಿ ಕೆಲ ಪುಡಾರಿಗಳು ನ್ಯಾಯಾಲಯದ ವಿಚಾರಣೆಯಲ್ಲಿದ್ದ ಭೂಮಿಯನ್ನು ಕಬಳಿಸಲು ಪ್ರಯತ್ನಿಸಿದ್ದರು. ಪ್ರಶ್ನಿಸಲು ಬಂದ ಸ್ಥಳೀಯರಿಗೆ, ನಾವು ಸಿಎಂ ಸಿದ್ದರಾಮಯ್ಯನವರ ಮಗನ ಕಡೆಯವರು ಎಂದು ಹೇಳಿಕೊಂಡಿದ್ದರು. ಇದಾಗಿಯೂ ಸುಮ್ಮನಿರದ ಸಿದ್ದರಾಮಯ್ಯನವರ ಮಗನ ಕಡೆಯವರು ಅಲ್ಲಿದ್ದ ನ್ಯಾಯಾಲಯದ ಫಲಕಗಳನ್ನೆಲ್ಲಾ ಕಿತ್ತು ಹಾಕಿ ರಂಪಾಟ ನಡೆಸಿದ್ದರು.

ಮುಖ್ಯಮಂತ್ರಿಗಳಿಗೆ ಯಾವ ರೀತಿಯ ಪ್ರಶ್ನೆ ಕೇಳಬೇಕು..?

ಸಿದ್ದರಾಮಯ್ಯನವರ ಸರಕಾರದ ಯಾವುದೇ ಭ್ರಷ್ಟಾಚಾರ ಅಥವಾ ಹಗರಣಗಳ ಬಗ್ಗೆ ಪ್ರಶ್ನಿಸಿದರೂ ಸರಿಯಾಗಿ ಉತ್ತರ ನೀಡದೆ ಅಲ್ಲಿಂದ ಜಾರಿಕೊಳ್ಳುವ ಸಿದ್ದರಾಮಯ್ಯನವರಿಗೆ ಯಾವ ರೀತಿಯ ಪ್ರಶ್ನೆ ಕೇಳಬೇಕು ? ಎಂದು ಇದೀಗ ಮಾಧ್ಯಮ ಗಳು ಪ್ರಶ್ನಿಸಿವೆ. ಯಾಕೆಂದರೆ ಸರಕಾರದ ವಿರುದ್ಧವಾಗಿ ಕೇಳುವ ಯಾವುದೇ ಪ್ರಶ್ನೆಗಳಿಗೂ ಸಿದ್ದರಾಮಯ್ಯನವರು ಉತ್ತರಿಸುವುದಿಲ್ಲ. ಹಾಗಾದರೆ ಮಾಧ್ಯಮಗಳು ಸರಕಾರದ ಪರವಾಗಿ ಪ್ರಶ್ನಿಸಿದರೆ ಮಾತ್ರ ಸಿದ್ದರಾಮಯ್ಯನವರಿಗೆ ಸಮಾಧಾನವೇ ಎಂಬ ಪ್ರಶ್ನೆ ಮಾಧ್ಯಮಗಳಿಗೆ ಮೂಡಿದೆ.

ಇದೇನು ಹೊಸದಲ್ಲ..!

ಕಾಂಗ್ರೆಸ್ ನಾಯಕರು ಮಾಧ್ಯಮಗಳ ಮೇಲೆ ಹಲ್ಲೆ ನಡೆಸುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ ಡಿ ಕೆ ಶಿವಕುಮಾರ್ ಸೇರಿದಂತೆ ಕೆ ಜೆ ಜಾರ್ಜ್ ಕೂಡಾ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಲಾಗದೆ ತಬ್ಬಿಬ್ಬಾಗಿ ಕೊನೆಗೆ ಮಾಧ್ಯಮ ಪ್ರತಿನಿಧಿಗಳ ಮೇಲೇಯೇ ಸಿಟ್ಟಾಗಿ ಹಲ್ಲೆಗೆ ಪ್ರಯತ್ನಿಸಿದ್ದಾರೆ. ಮಾಧ್ಯಮಗಳು ತಮ್ಮ ಸರಕಾರದ ಪರವಾಗಿ ಮಾತನಾಡಿದರೆ ಅಲ್ಲೇ ಫೋಸ್ ಕೊಟ್ಟು ನಿಲ್ಲುವ ಕಾಂಗ್ರೆಸ್ ನಾಯಕರು, ತಮ್ಮ ಸರಕಾರದ ಕಪಟತನವನ್ನು ಬಯಲಿಗೆಳೆದು ಕೇಳುವ ಪ್ರಶ್ನೆಗಳಿಗೆ ಉತ್ತರಿಸದೆ ಅಲ್ಲಿಂದ ತಪ್ಪಿಸಿಕೊಳ್ಳುತ್ತಾರೆ.

ಇನ್ನೇನು ಕೆಲವೇ ದಿನಗಳಲ್ಲಿ ಚುನಾವಣೆ ನಡೆಯಲಿದ್ದು , ತಮ್ಮ ಮೋಸ , ಹಗರಣ. ಭ್ರಷ್ಟಾಚಾರ ಎಲ್ಲಾ ಬಯಲಿಗೆ ಬರುವ ಭಯದಿಂದ ಕಾಂಗ್ರೆಸ್ ನಾಯಕರು ಕಂಗಾಲಾಗಿದ್ದಾರೆ‌. ಏನೂ ಮಾಡಲಾಗದ ಸ್ಥಿತಿಗೆ ತಲುಪಿರುವ ಕಾಂಗ್ರೆಸ್ ಸಿಕ್ಕ ಸಿಕ್ಕಲ್ಲಿ ಅಮಾಯಕರ ಮೇಲೆ ತಮ್ಮ ಅಧಿಕಾರದ ದರ್ಪ ತೋರಿಸುತ್ತಿದ್ದಾರೆ..!

–ಅರ್ಜುನ್

 

Tags

Related Articles

FOR DAILY ALERTS
 
FOR DAILY ALERTS
 
Close