ಅಂಕಣ

ಮುಂಬೈ ದಾಳಿ ವೇಳೆ ಭಾರತದ ಭೂಭಾಗವನ್ನೇ ಪಾಕಿಸ್ತಾನಕ್ಕೆ ನೀಡಲು ಮುಂದಾಗಿದ್ದ ಕಾಂಗ್ರೆಸ್!! ಮಾಜಿ ಸೇನಾಧಿಕಾರಿಯಿಂದ ಸ್ಫೋಟಕ ಮಾಹಿತಿ ಬಹಿರಂಗ!!

ಯುಪಿಎ ಸರಕಾರದ ಅವಧಿಯಲ್ಲಿ ಈಡೀ ಜಗತ್ತನ್ನೇ ಬೆಚ್ಚಿಬೀಳಿಸುವ 26/11 2008ರ ಮುಂಬೈ ಮೇಲಿನ ಉಗ್ರರ ದಾಳಿ ನಡೆದು 9 ವರ್ಷ ಕಳೆದರೂ, ದಾಳಿಯಲ್ಲಿ ಅಮಾಯಕ ಜನರು, ಹುತಾತ್ಮ ಯೋಧರನ್ನು ಕಳೆದುಕೊಂಡ ಆ ಕರಾಳ ದಿನವನ್ನು ದೇಶದ ಜನತೆ ನೆನೆಯುತ್ತಲೇ ಇದೆ!! ಅಂದು ನಡೆದಿದ್ದ ಆ ದುರಂತಕ್ಕೆ ಒಂದು ಕಡೆ ದೇಶದ ಜನರ ಆಕ್ರಂದನ ಮುಗಿಲು ಮುಟ್ಟಿದ್ದರೆ, ಇತ್ತ ಕಾಂಗ್ರೆಸ್ ಅದೇನು ಮಾಡಿತ್ತು ಗೊತ್ತೇ? ಗೊತ್ತಾದರೆ ದಂಗಾಗಿ ಹೋಗುವುದಂತೂ ಗ್ಯಾರೆಂಟಿ!!

ಭಾರತದಲ್ಲಿ ಯುಪಿಎ ಸರಕಾರ ದೇಶವನ್ನಾಳುತ್ತಿದ್ದ ಸಮಯದಲ್ಲಿ ಶ್ರೀಮಂತ್ಭರಿತವಾಗಿದ್ದ ಭಾರತವನ್ನು ಗುಡಿಸಿ ಗುಂಡಾಂತರ ಮಾಡಿ “ಬಡರಾಷ್ಟ್ರ” ಎನ್ನುವ ಹಣೆಪಟ್ಟಿ ಬರಲು ಕಾರಣಕರ್ತರಾದರು ಎಂದರೆ ತಪ್ಪಾಗೋದಿಲ್ಲ!! ಅದರಲ್ಲೂ ದಿನ ಬೆಳಗಾದರೆ ಬಾಂಬ್ ಸ್ಪೋಟ, ಭಯೋತ್ಪಾದಕ ದಾಳಿ ಎಂಬ ಸುದ್ದಿಗಳನ್ನೇ ಕೇಳುತ್ತಿದ್ದ ಸಮಯವದು. ಅದೇ ಸಂದರ್ಭದಲ್ಲಿ ಇನ್ನು 2004 ರಿಂದ 2014 ರವರೆಗೆ ದೇಶದ ಚುಕ್ಕಾಣಿಯನ್ನು ಹಿಡಿದಿದ್ದ ಯುಪಿಎ ಸರಕಾರದ ಅವಧಿಯಲ್ಲಿ ಮುಂಬೈ ದಾಳಿಯು ಈಡೀ ಜಗತ್ತನ್ನೇ ಬೆಚ್ಚಿ ಬೀಳಿಸಿತ್ತು!!! ಆದರೆ ಅಂತಹ ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸುವ ಬದಲು ಪಾಕಿಸ್ತಾನಕ್ಕೆ ಭಾರತದ ಭೂಭಾಗವೊಂದನ್ನು ಬಿಟ್ಟು ಕೊಡಲು ಕಾಂಗ್ರೆಸ್ ಸರಕಾರ ಮುಂದಾಗಿತ್ತು ಎಂಬ ಸ್ಪೋಟಕ ಮಾಹಿತಿಯೊಂದನ್ನು ಇದೀಗ ಮಾಜಿ ಸೇನಾಧಿಕಾರಿಯೊಬ್ಬರು ಬಹಿರಂಗ ಪಡಿಸಿದ್ದಾರೆ!!

Image result for 26/11 mumbai attack

ಹೌದು, ಮಾಜಿ ಜನರಲ್ ಸಿಂಗ್ ರವರು ಭಾರತದ ಅವಿಭಾಜ್ಯ ಅಂಗವಾಗಿರುವ ಸಿಯಾಚಿನ್ ಕುರಿತಾಗಿ ಸ್ಪೋಟಕ ಹೇಳಿಕೆಯೊಂದನ್ನು ನೀಡಿದ್ದು, ಯುಪಿಎ ಸರಕಾರದ ಮೇಲೆ ಸಿಯಾಚಿನ್ ಗ್ಲೇಷಿಯರ್ ನ್ನು ಪಾಕಿಸ್ತಾನಕ್ಕೆ ಹಸ್ತಾಂತರಿಸಿ ಬಿಡೋವುದಕ್ಕೆ ಮುಂದಾಗಿತ್ತು ಎಂಬುವುದನ್ನು ಹೇಳಿದ್ದಾರೆ!! ಅಷ್ಟೇ ಅಲ್ಲದೇ, ಭಾರತೀಯ ಸೇನೆಯ ಜೊತೆ ಮಾತುಕತೆ ನಡೆಸದೆಯೇ ಸಿಯಾಚಿನ್ ಪ್ರದೇಶವನ್ನು ಪಾಕಿಸ್ತಾನಕ್ಕೆ ಹಸ್ತಾಂತರಿಸುತ್ತೇವೆ ಎಂದಿತ್ತು. ಜನರಲ್ ಜೆ ಜೆ ಸಿಂಗ್ ರವರು ಹೇಳುವ ಪ್ರಕಾರ, 2006 ರಲ್ಲಿ ಆಗಿನ ಕೇಂದ್ರದ ಯುಪಿಎ ಸರಕಾರ ಈ ವಿಷಯದ ಕುರಿತಾಗಿ ಭಾರತೀಯ ಸೇನೆ ಹಾಗು ಗುಪ್ತಚರ ಏಜೆನ್ಸಿಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಪಾಕಿಸ್ತಾನದ ಜೊತೆ ಮಾತುಕತೆ ನಡೆಸಿತ್ತು ಎಂದು ಹೇಳಿದ್ದಾರೆ.

ಅಲ್ಲದೇ, ಹಿಂದಿನ ಯುಪಿಎ ಸರಕಾರ ಈ ಪ್ರಸ್ತಾವನೆಯ ಕುರಿತು ಭಾರತೀಯ ಸೇನೆಯ ಜೊತೆ ಮಾತುಕತೆ ನಡೆಸುವ ಸೌಜನ್ಯವನ್ನೂ ತೋರಿಸಲಿಲ್ಲ ಅಂಥಹದರಲ್ಲಿ ಕಾಂಗ್ರೆಸ್ ಸರಕಾರದ ನಿಯತ್ತಿನ ಮೇಲೆ ಇದೀಗ ಪ್ರಶ್ನೆಗಳು ಏಳುತ್ತಿವೆ. ಕಾಂಗ್ರೆಸ್ ಸರಕಾರವು ಗಡಿಯಲ್ಲಿ, ಸಿಯಾಚಿನ್ ನಲ್ಲಿ ಪ್ರಾಣ ಕಳೆದುಕೊಂಡ ಆ ಸೈನಿಕರ ಬಲಿದಾನಕ್ಕೆ ಘೋರ ಅಪಮಾನ ಮಾಡುವ ಕೆಲಸ ಮಾಡುತ್ತಿದೆ ಎಂದಿದ್ದಾರೆ.

ದೇಶದ ಒಂದೊಂದು ಇಂಚಿನ ಗಡಿಯನ್ನೂ ಕಾಪಾಡಲು ಸೈನಿಕರು ತಮ್ಮ ಪ್ರಾಣವನ್ನೇ ಆಹುತಿ ನೀಡುತ್ತಾರೆ. ಆದರೆ ದುಃಖಕರ ಸಂಗತಿ ಏನೆಂದರೆ, ಕಾಂಗ್ರೆಸ್ ಸರಕಾರ ಮಾತ್ರ ಇದನ್ನು ಮರೆತು ಸಿಯಾಚಿನ್ ರೂಪದಲ್ಲಿ ಭಾರತದ ದೊಡ್ಡ ಭೂಪ್ರದೇಶವನ್ನೇ ಪಾಕಿಸ್ತಾನಕ್ಕೆ ಉಡುಗೊರೆ ರೂಪದಲ್ಲಿ ನೀಡಲು ತಯಾರಾಗಿತ್ತು ಎಂದರೆ ಇದಕ್ಕಿಂತಲೂ ದೊಡ್ಡ ವಿಪರ್ಯಾಸ ಬೇರೊಂದಿರಲು ಸಾಧ್ಯವೇ?!!

ಇನ್ನು, 26 ನವೆಂಬರ್ 2008, ಮುಂಬೈ ಮೇಲೆ ದಾಳಿಯ ಪರಿಣಾಮ ಹಲವು ಯೋಧರು ಮಡಿದಿದ್ದರು, ಅತ್ತ ಒಂದು ಕಡೆ ದೇಶದ ಜನರ ಆಕ್ರಂದನ ಮುಗಿಲು ಮುಟ್ಟಿದ್ದರೆ, ಇನ್ನೊಂದು ಕಡೆ ಕಾಂಗ್ರೆಸ್ಸಿಗರ ಭಾವಿ ಪ್ರಧಾನಿ ರಾಹುಲ್ ಗಾಂಧಿ ಅದೇನು ಮಾಡುತಿದ್ದರು ಗೊತ್ತೇ?

Image result for 26/11 mumbai attack upa

ಮೇಜರ್ ಸಂದೀಪ್ ಉನ್ನಿಕೃಷ್ಣನ್ ಅವರ ತಾಯಿ ಕಣ್ಣೀರು ಒಣಗುವ ಮುಂಚೆಯೇ ಕಾಂಗ್ರೆಸ್ ನ ಮಾಜಿ ಪ್ರಧಾನ ಕಾರ್ಯದರ್ಶಿ ಮತ್ತು ಉತ್ತರಾಧಿಕಾರಿಯಾದ ರಾಹುಲ್ ಗಾಂಧಿ ದೆಹಲಿಯ ಹೊರವಲಯದಲ್ಲಿರುವ ತೋಟವೊಂದರಲ್ಲಿ ತಮ್ಮ ಸ್ನೇಹಿತರೊಂದಿಗೆ ಪಾರ್ಟಿ ಮಾಡುತ್ತಿದ್ದರು!! ಹೌದು, ತನ್ನ ಬಾಲ್ಯದ ಸ್ನೇಹಿತನಾದ ಸಮೀರ್ ಶರ್ಮಾ ಅವರ ವಿವಾಹಕ್ಕಾಗಿ ಭಾನುವಾರ 5 ಗಂಟೆಯವರೆಗೆ ಸಂಗೀತ ಕಾರ್ಯಕ್ರಮದಲ್ಲಿ ರಾಹುಲ್ ಪಾಲ್ಗೊಂಡಿದ್ದರು. ಅಷ್ಟೇ ಅಲ್ಲದೇ, ಚತಾರ್ಪುರದ ಆಕರ್ಷಕ ರಾಧೇ ಮೋಹನ್ ಚೌಕ್ ನಲ್ಲಿನ ವಿಶಾಲವಾದ ತೋಟದಮನೆಯಲ್ಲಿ ಪಾರ್ಟಿಯನ್ನು ಏರ್ಪಡಿಸಲಾಗಿತ್ತು. ಹಾಗಾಗಿ ದೇಶದ ಪ್ರಧಾನಿಯಾಗಲು ತುದಿಗಾಲಿನಲ್ಲಿ ನಿಂತಿರುವ ರಾಹುಲ್ ಗಾಂಧಿ ಅಂದು ಪಾರ್ಟಿ ಗುಂಗಿನಲ್ಲಿದ್ದರು!!

ಎಂತಹ ವಿಪರ್ಯಾಸ ನೋಡಿ, ಲಷ್ಕರ್ ಉಗ್ರರು ನಡೆಸಿದ ಈ ಮಾರಣಹೋಮದಿಂದ ದೇಶವೇ ತಲ್ಲಣಗೊಂಡಿತ್ತು. ಆ ಸಂದರ್ಭದಲ್ಲಿಯೇ ದೇಶದ ರಕ್ಷಣಾ ವ್ಯವಸ್ಥೆ, ಆಡಳಿತಾರೂಢ ಯುಪಿಎ ಸರಕಾರದ ಧೋರಣೆ ಬಗ್ಗೆ ವ್ಯಾಪಕ ಟೀಕೆ ವ್ಯಕ್ತವಾಗಿತ್ತು. ಅದರಲ್ಲೂ ಭಾರತದ ಅವಿಭಾಜ್ಯ ಅಂಗವಾಗಿರುವ ಸಿಯಾಚಿನ್ ಗ್ಲೇಷಿಯರ್ ನ್ನು ಪಾಕಿಸ್ತಾನಕ್ಕೆ ಹಸ್ತಾಂತರಿಸಿ ಬಿಡೋವುದಕ್ಕೆ ಯುಪಿಎ ಸರಕಾರ ಮುಂದಾಗಿತ್ತು ಎಂದರೆ ಇದಕ್ಕಿಂತಲೂ ದೊಡ್ಡ ವಿಪರ್ಯಾಸ ಬೇರೊಂದಿರಲು ಸಾಧ್ಯವೇ? ದೇಶವನ್ನು ಗುಡಿಸಿ ಗುಂಡಾಂತರ ಮಾಡಿದ್ದು ಸಾಲದು ಎಂದು ಭಾರತದ ಭಾಗವನ್ನೇ ಪಾಪಿ ಪಾಕ್ ಗೆ ಬಿಟ್ಟುಕೊಡಲು ಯುಪಿಎ ಸಿದ್ಧವಾಗಿತ್ತು ಎಂದರೆ ಕಾಂಗ್ರೆಸ್ಸಿನ ಕ್ರೂರ ಆಡಳಿತಕ್ಕೆ ಇದಕ್ಕಿಂತಲೂ ಉತ್ತಮ ಉದಾಹರಣೆ ಬೇಕೆ?!!

ಮೂಲ:http://www.sudarshannews.in/samachar/national/know-the-shocking-news-of-politics/

– Postcard team

Tags

Related Articles

FOR DAILY ALERTS
 
FOR DAILY ALERTS
 
Close