ಪ್ರಚಲಿತರಾಜ್ಯ

ಬ್ರೇಕಿಂಗ್: ಅಮಿತ್ ಶಾ ನೋಡಲು ಹೋದವರನ್ನು ಮಾರಣಾಂತಿಕವಾಗಿ ಹಲ್ಲೆ ನಡೆಸಿದ ದುಷ್ಕರ್ಮಿಗಳು!! ದಾಳಿ ಮಾಡಿದ್ದ ತಂಡದಲ್ಲಿದ್ದ ಜನರೆಷ್ಟು ಗೊತ್ತಾ?!

ಕರಾವಳಿಯಲ್ಲಿ ಮತಾಂಧರ ಹಾವಳಿ ಕಡಿಮೆಯಾಗುವ ಲಕ್ಷಣಗಳು ಗೋಚರಿಸುತ್ತಿಲ್ಲ. ಎಲ್ಲೆಂದೆರಲ್ಲಿ ಹುಟ್ಟಿಕೊಂಡಿರುವ ಗೂಂಡಾಗಳಿಂದ ಕರಾವಳಿಯೇ ಬೆಚ್ಚಿ ಬೀಳುತ್ತಿದೆ. ಒಂದಲ್ಲಾ ಎರಡಲ್ಲಾ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ 10ಕ್ಕೂ ಅಧಿಕ ಹಿಂದೂ ಹಾಗೂ ಭಾರತೀಯ ಜನತಾ ಪಕ್ಷದ ಕಾರ್ಯಕರ್ತರ ಕೊಲೆಗಳು ಕರಾವಳಿಯಲ್ಲಿ ನಡೆಯುತ್ತಲೇ ಇದೆ. ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆಯ ಪ್ರಶಾಂತ್ ಪೂಜಾರಿಯ ಕೊಲೆಯಿಂದ ಆರಂಭವಾದ ಕೊಲೆಗಳು ಸುರತ್ಕಲ್ ನ ದೀಪಕ್ ರಾವ್ ಕೊಲೆಯವರೆಗೂ ಕರಾವಳಿಯಲ್ಲಿ ಅಶಾಂತಿ ತಾರಕಕ್ಕೇರಿತ್ತು.

ಕರಾವಳಿಗೆ ಎಂಟ್ರಿ ಕೊಟ್ಟಿದ್ದರು ಅಮಿತ್ ಶಾ…

ಮೊನ್ನೆ ತಾನೇ ಕರಾವಳಿಗೆ ಎಂಟ್ರಿ ಕೊಟ್ಟಿದ್ದ ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ನಿನ್ನೆ ಇಡೀ ದಿನವೂ ಕರಾವಳಿಯಲ್ಲಿ ಪಕ್ಷ ಸಂಘಟನೆಯಲ್ಲಿ ತೊಡಗಿದ್ದರು. ಜ್ವರದ ಮಧ್ಯೆಯೂ ಬೆಳ್ಳಂಬೆಳಗ್ಗೆ ಶ್ರೀ ಕ್ಷೇತ್ರ ಸುಬ್ರಹ್ಮಣ್ಯಕ್ಕೆ ತೆರಳಿ ಆಶ್ಲೇಷ ಪೋಜೆ ಇತ್ಯಾದಿ ವಿಶೇಷ ಪೂಜೆಗಳನ್ನು ನೆರವೇರಿಸಿದ್ದ ಅಮಿತ್ ಶಾ ಅಲ್ಲಿಂದ ಪುತ್ತೂರಿನ ವಿವೇಕಾನಂದ ಕಾಲೇಜಿನ ವಿದ್ಯಾರ್ಥಿಗಳೊಂದಿಗೆ ಸಂವಾದ ಹಾಗೂ ಅಲ್ಲಿಂದ ನೇರವಾಗಿ ಬಂಟ್ವಾಳ. ಅಲ್ಲಿ ಭಾರತೀಯ ಜನತಾ ಪಕ್ಷದ ಕಾರ್ಯಕರ್ತರ ಬೃಹತ್ ಸಮಾವೇಶ. ಅಲ್ಲಿಂದ ಸುರತ್ಕಲ್‍ಗೆ ತೆರಳಿ ಅಲ್ಲಿ ಸುದ್ಧಿಗೋಷ್ಟಿ ನಡೆಸಿದ್ದಾರೆ.

 

ದೀಪಕ್ ರಾವ್ ಮನೆಗೆ ಭೇಟಿ…

ಜನವರಿಯಲ್ಲಿ ಭಾರತೀಯ ಜನತಾ ಪಕ್ಷದ ಸಾಮಾಜಿಕ ಜಾಲತಾಣದ ಪ್ರಮುಖ ದೀಪಕ್ ರಾವ್ ಎಂಬಾತನನ್ನು ಮತಾಂಧ ಮುಸಲ್ಮಾನರು ಹಾಡ ಹಗಲೇ ಕೊಚ್ಚಿ ಕೊಲೆ ಮಾಡಿದ್ದರು. ಕೇಸರೀ ಬಂಟಿಂಗ್ಸ್ ಹಾಕುವ ವಿಚಾರವಾಗಿ ನಡೆದ ಈ ಕೊಲೆ ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿತ್ತು. ಹಿಂದೂ ಕಾರ್ಯಕರ್ತನಾಗಿದ್ದ ದೀಪಕ್ ರಾವ್‍ಗೆ ಕೋಟ್ಯಾಂತರ ಜನ ಹಿಂದೂ ಕಾರ್ಯಕರ್ತರು ಕಂಬಿನಿ ಮಿಡಿದಿದ್ದರು.

“ನಾನು ಅಮಿತ್ ಶಾ ತುಂಬಾನೆ ಕ್ಲೋಸ್. ನಾನು ಅವರ ಮನೆಗೆ ಊಟಕ್ಕೆ ಹೋಗ್ತಾ ಇರ್ತೇನೆ” ಎಂದು ಹೇಳಿಕೊಂಡಿದ್ದ ದೀಪಕ್ ರಾವ್ ಮನೆಗೆ ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಭೇಟಿ ನೀಡಿದ್ದಾರೆ. ದೀಪಕ್ ರಾವ್ ಮನೆಗೆ ಭೇಟಿ ನೀಡಿದ್ದ ಅಮಿತ್ ಶಾ ಕೆಲ ಹೊತ್ತು ಆತನ ಮೆನೆಯವರಲ್ಲಿ ಮಾತನಾಡಿ ಕುಟುಂಬಕ್ಕೆ ನಾವಿದ್ದೇವೆ ಎಂಬ ಧೈರ್ಯವನ್ನು ನೀಡಿ ಬಂದಿದ್ದಾರೆ.

ಮಲ್ಪೆಯಲ್ಲಿ ನಡೆದಿತ್ತು ಮೀನುಗಾರರ ಸಮಾವೇಶ…

ಸುರತ್ಕಲ್‍ನಲ್ಲಿ ಸುದ್ಧಿಗೋಷ್ಟಿ ನಡೆಸಿ ಅಲ್ಲಿಂದ ದೀಪಕ್ ರಾವ್ ಮನೆಗೆ ಭೇಟಿ ನೀಡಿದ್ದ ಭಾರತೀಯ ಜನತಾ ಪಕ್ಷ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅಲ್ಲಿಂದ ನೇರವಾಗಿ ಉಡುಪಿಯ ಮಲ್ಪೆಗೆ ಭೇಟಿ ನೀಡಿದ್ದರು. ಮಲ್ಪೆ ಬೀಚ್‍ನಲ್ಲಿ ನಡೆದಿದ್ದ ಕಮಲ ಪಡೆದ ಬೃಹತ್ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ್ದರು. ಸಾವಿರ ಸಾವಿರ ಸಂಖ್ಯೆಯಲ್ಲಿ ಸೇರಿದ್ದ ಕಾರ್ಯಕರ್ತರ ಸಮಾವೇಶವನ್ನು ಉದ್ಧೇಶಿಸಿ ಮಾತನಾಡಿದ್ದರು. ಈ ಕಾರ್ಯಕ್ರಮಕ್ಕೆ ಕೇವಲ ಉಡುಪಿಯ ಮೀನುಗಾರರು ಮಾತ್ರವಲ್ಲದೆ ಮಂಗಳೂರಿನ ಮೀನುಗಾರರೂ ಭಾಗವಹಿಸಿದ್ದರು.

ಬಸ್ ಅಡ್ಡಗಟ್ಟಿ ಮಾರಣಾಂತಿಕ ಹಲ್ಲೆ ನಡೆಸಿದ ದುಷ್ಕರ್ಮಿಗಳು…

ಮಂಗಳೂರಿನ ಮೀನುಗಾರರು ಉಡುಪಿಯ ಮಲ್ಪೆಯಲ್ಲಿ ನಡೆದಿದ್ದ ಭಾರತೀಯ ಜನತಾ ಪಕ್ಷದ ಮೀನುಗಾರರ ಸಮಾವೇಶಕ್ಕೆ ತೆರಳಿದ್ದರು. ಅಮಿತ್ ಶಾ ಭಾಗವಹಿಸಿದ್ದ ಈ ಕಾರ್ಯಕ್ರಮಕ್ಕೆ ತೆರಳಿದ್ದ ಮಂಗಳೂರಿನ ಮೀನುಗಾರರು ಹಿಂತಿರುಗುವಾಗ ಭಾರೀ ಆಘಾತವೇ ಕಾದಿತ್ತು. ಮಂಗಳೂರಿನಿಂದ ತೆರಳಿದ್ದ ಬಿಜೆಪಿ ಕಾರ್ಯಕರ್ತರು ಹಿಂತಿರುಗಿದ್ದಾಗ ಮಂಗಳೂರಿನ ಬೆಂಗ್ರೆಯಲ್ಲಿ ಬಸ್ ಅಡ್ಡಗಟ್ಟಿ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಸುಮಾರು 40ಕ್ಕೂ ಅಧಿಕ ಜನರಿದ್ದ ದುಷ್ಕರ್ಮಿಗಳ ತಂಡವೊಂದು ಬಸ್‍ಗೆ ನುಗ್ಗಿ ಮನಬಂದಂತೆ ದಾಳಿ ನಡೆಸಿವೆ. ಮಾತ್ರವಲ್ಲದೆ ಮಾರಕಾಸ್ತ್ರಗಳಿಂದ ದಾಳಿ ಮಾಡಿ ಹಲವಾರು ಜನರನ್ನು ಗಾಯಗೊಳಿಸಿದೆ. ಬ್ಲೇಡ್, ಕತ್ತಿ, ಮಚ್ಚು ಸಹಿತ ಶಸ್ತ್ರದಾರಿತ ಗೂಂಡಾಗಳಿಂದ ಭಾರೀ ದಾಳಿ ನಡೆದಿದ್ದು, 4 ಜನರಿಗೆ ಗಂಭೀರ ಗಾಯಗಳಾಗಿವೆ.

ಬಸ್ ಚಲಿಸುತ್ತಿದ್ದಂತೆಯೇ ಅದನ್ನು ಅಡ್ಡಗಟ್ಟಿದ್ದ ಗೂಂಡಾಗಳು ಬಸ್ ಒಳಗೆ ಪ್ರವೇಶಿಸಿ ಸಿಕ್ಕ ಸಿಕ್ಕ ಹಾಗೆ ಹಲ್ಲೆ ನಡೆಸಿದ್ದಾರೆ. ಇದನ್ನು ತಡೆಯಲು ಯತ್ನಿಸಿದ್ದ 4 ಜನ ಭಾರತೀಯ ಜನತಾ ಪಕ್ಷದ ಕಾರ್ಯಕರ್ತರ ಮೇಲೆ ಬ್ಲೇಡ್‍ನಿಂದ ಭಾರೀ ಹಲ್ಲೆ ಮಾಡಿದದಾರೆ. ಮುಖ ಹಾಗೂ ತಲೆಯ ಭಾಗಕ್ಕೆ ಭಾರೀ ಪೆಟ್ಟಾಗಿದ್ದು ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ದೀಪಕ್ ಮನೆಗೆ ಶಾ ಭೇಟಿಯೇ ಗಲಾಟೆಗೆ ಕಾರಣನಾ?

ಮೃತ ಭಾರತೀಯ ಜನತಾ ಪಕ್ಷದ ಕಾರ್ಯಕರ್ತ ದೀಪಕ್ ರಾವ್ ನ ಮನೆಗೆ ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಭೇಟಿ ನೀಡಿ ಅಲ್ಲಿಂದ ಮಲ್ಪೆ ಬೀಚ್‍ಗೆ ತೆರಳಿದ್ದರು. ಇದರಿಂದ ಕೋಪಗೊಂಡ ಗೂಂಡಾಗಳು ಅಮಿತ್ ಶಾ ಕಾರ್ಯಕ್ರಮಕ್ಕೆ ತೆರಳಿದ್ದ ಕಾರ್ಯಕರ್ತರ ಮೇಲೆ ದಾಳಿ ಮಾಡಿದ್ದಾರೆ. ಅಮಿತ್ ಶಾ ಅವರ ದೀಪಕ್ ರಾವ್ ಮನೆಗೆ ಭೇಟಿಯನ್ನು ಸಹಿಸಲಾಗದ ಕೆಲವು ಮತಾಂಧರು ಈ ಗಲಾಟೆಯನ್ನು ನಡೆಸಿದ್ದಾರೆ ಎನ್ನಲಾಗುತ್ತಿದೆ.

ಒಟ್ಟಾರೆ ಕರಾವಳಿಯಲ್ಲಿ ಶಾಂತಿ ಸ್ಥಾಪಿಸುವಲ್ಲಿ ಇಲ್ಲಿನ ಪೊಲೀಸ್ ಇಲಾಖೆ ಹಾಗೂ ಜನಪ್ರತಿನಿದಿಗಳು ಸಂಪೂರ್ಣ ವಿಫಲರಾಗಿದ್ದು, ಇದು ಅವರ ಕಾರ್ಯವೈಖರಿಯನ್ನು ಬಿಂಬಿಸುತ್ತದೆ.

40ಕ್ಕೂ ಹೆಚ್ಚು ಗೂಂಡಾಗಳು ಬಸ್ ಹತ್ತಿ ಬಿಜೆಪಿ ಕಾರ್ಯಕರ್ತರ ಮೇಲೆ ಮಾರಣಾಂತಿಕ ದಾಳಿ ಮಾಡಿದರೂ ಪೊಲೀಸರು ಯಾಕೆ ಕ್ರಮ ಕೈಗೊಂಡಿಲ್ಲ? ಕ್ಷೇತ್ರದ ಶಾಸಕರುಗಳು, ಸಚಿವರುಗಳು ಯಾಕೆ ಮೌನ ವಹಿಸಿದ್ದಾರೆ? ಹಾಗಾದರೆ ಭಾರತೀಯ ಜನತಾ ಪಕ್ಷದ ಯಾವುದೇ ಕಾರ್ಯಕ್ರಮಕ್ಕೂ ಕರಾವಳಿಯಲ್ಲಿ ಅವಕಾಶವೇ ಇಲ್ವಾ..? ಇದು ಕಾಂಗ್ರೆಸ್ ಪಕ್ಷ ಈವರೆಗೆ ಅನುಸರಿಸಿದ ವಿಡಂಬಣಾ ನೀತಿ ಹಾಗೂ ಆ ಪಕ್ಷ ಸೃಷ್ಟಿಸಿದ ಅರಾಜಕತೆ ಅಲ್ಲದೆ ಮತ್ತೇನೂ ಅಲ್ಲ…

source:http://www.nikharanews.com/big-breaking-%E0%B2%AE%E0%B2%82%E0%B2%97%E0%B2%B3%E0%B3%82%E0%B2%B0%E0%B2%BF%E0%B2%A8%E0%B2%B2%E0%B3%8D%E0%B2%B2%E0%B2%BF-%E0%B2%AC%E0%B2%BF%E0%B2%9C%E0%B3%86%E0%B2%AA%E0%B2%BF-%E0%B2%95%E0%B2%BE/

-ಸುನಿಲ್ ಪಣಪಿಲ

Tags

Related Articles

FOR DAILY ALERTS
 
FOR DAILY ALERTS
 
Close