ಪ್ರಚಲಿತರಾಜ್ಯ

ರಾಜಿ ಸಂಧಾನಕ್ಕೆ ತೆರಳಿದ ಶಾಸಕ ಹ್ಯಾರಿಸ್ ಗೆ ಶಾಕ್..! ವಿದ್ವತ್ ಗೆ ಸರ್ಕಾರವೇ ಕೊಟ್ಟ ಗಿಫ್ಟ್ ಏನು ಗೊತ್ತಾ..?

ಅಧಿಕಾರ ಒಂದು ತಮ್ಮ ಕೈಯಲ್ಲಿ ಇದ್ದರೆ ಏನೂ ಬೇಕಾದರು ಸಾಧಿಸಬಹುದು ಎಂಬ ಮನೋಭಾವ ಹೊಂದಿರುವ ಈ ಕಾಂಗ್ರೆಸ್ ಗೆ ಸದ್ಯ ಕರ್ನಾಟಕದಲ್ಲಿ ತಮ್ಮ ಯಾವುದೇ ಪ್ರಯತ್ನವೂ ಫಲಿಸುತ್ತಿಲ್ಲ ಎಂಬೂದು ಅರಿವಾಗತೊಡಗಿದೆ. ಅಧಿಕಾರದ ದರ್ಪದಿಂದ ಮೆರೆಯುತ್ತಿದ್ದ ಕಾಂಗ್ರೆಸ್ ನಾಯಕರ ಅಸಲಿ ಮುಖ ಚುನಾವಣೆ ಸಮೀಪಿಸುತ್ತಿದ್ದಂತೆ ಬಯಲಾಗತೊಡಗಿದೆ.

ಅಮಾಯಕ ಜನರ ಮೇಲೆ ದಬ್ಬಾಳಿಕೆ, ಹಲ್ಲೆ ನಡೆಸಿ ಅಧಿಕಾರದ ದರ್ಪದಿಂದ ರಾಜಾರೋಷವಾಗಿ ತಿರುಗಾಡುತ್ತಿರುವ ಕಾಂಗ್ರೆಸ್ ನಾಯಕರಿಗೆ ಇದೀಗ ಕೊನೆಗಾಲ ಬಂದಿದೆ. ಯಾಕೆಂದರೆ ಉಪ್ಪು ತಿಂದ ಮೇಲೆ ನೀರು ಕುಡಿಯಲೇ ಬೇಕು. ಅದೇ ರೀತಿಯಲ್ಲಿ ತಪ್ಪು ಮಾಡಿದವರು ಶಿಕ್ಷೆ ಅನುಭವಿಸಲೇ ಬೇಕು.

ಬೆಂಗಳೂರಿನ ಯುಬಿ ಸಿಟಿಯಲ್ಲಿ ಇರುವ ಫರ್ಜಿ ರೆಸ್ಟೋರೆಂಟ್ ಒಂದರಲ್ಲಿ ವಿದ್ವತ್ ಎಂಬ ಯುವಕನ ಮೇಲೆ ಕಾರಣಾಂತರಗಳಿಂದ ಹಲ್ಲೆ ನಡೆಸಿದ ಬೆಂಗಳೂರು ಶಾಂತಿನಗರ ಕ್ಷೇತ್ರದ ಕಾಂಗ್ರೆಸ್ ಶಾಸಕ ಹ್ಯಾರಿಸ್ ನಲಪಾಡ್ ರವರ ಮಗ ಗೂಂಡಾ ಮಹಮ್ಮದ್ ನಲಪಾಡ್ ಸದ್ಯ ಜೈಲಿನಲ್ಲಿ ಕಂಬಿ ಎಣಿಸುವಂತಾಗಿದೆ. ಕ್ಷುಲ್ಲಕ ಕಾರಣಕ್ಕಾಗಿ ಅಮಾಯಕ ಯುವಕನ ಮೇಲೆ ಹಲ್ಲೆ ನಡೆಸಿದ್ದ ನಲಪಾಡ್ ಗೆ ತಾನು ಮಾಡಿರುವ ತಪ್ಪಿನ ಬಗ್ಗೆ ಯಾವುದೇ ಪಶ್ಚಾತ್ತಾಪ ಕೂಡ ಇಲ್ಲವಾಗಿದೆ.

ಗಂಭೀರವಾಗಿ ಗಾಯಗೊಂಡ ವಿದ್ವತ್ ಸದ್ಯ ಬೆಂಗಳೂರಿನ ಮಲ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು , ಪ್ರಭಾವಿ ವ್ಯಕ್ತಿಗಳು ವಿದ್ವತ್ ನನ್ನು ನೋಡಲು ಆಸ್ಪತ್ರೆಗೆ ಬರುತ್ತಿದ್ದಾರೆ. ಇದೀಗ ಪುತ್ರ ನಲಪಾಡ್ ನಿಂದ ಹಲ್ಲೆ ಗೆ ಒಳಗಾದ ವಿದ್ವಾಂಸರು ನನ್ನು ನೋಡಲು ಸ್ವತಃ ಶಾಂತಿನಗರ ಶಾಸಕ ಹ್ಯಾರಿಸ್ ನಲಪಾಡ್ ದಂಪತಿ ಮಲ್ಯ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ..!

ರಾಜಿ ಸಂಧಾನಕ್ಕೆ ಬಂದ ನಲಪಾಡ್ ದಂಪತಿ..!

ಮಗನ ಗೂಂಡಾಗಿರಿ ಯ ಬಗ್ಗೆ ಅರಿವಿದ್ದರೂ ಈ ಹಿಂದೆ ತನ್ನ ಅಧಿಕಾರದ ಬಲದಿಂದ ಯಾವುದೇ ವಿಷಯಗಳು ಬಯಲಾಗಿರಲಿಲ್ಲ. ಆದರೆ ಇದೀಗ ರೆಸ್ಟೋರೆಂಟ್ ನಲ್ಲಿ ವಿದ್ವತ್ ನ ಮೇಲೆ ನಡೆದ ಹಲ್ಲೆ ರಾಜ್ಯ ಮಾತ್ರವಲ್ಲದೆ ರಾಷ್ಟ್ರಾದ್ಯಂತ ಚರ್ಚೆಗೆ ಗ್ರಾಸವಾಗಿದೆ. ಯಾಕೆಂದರೆ ಕರ್ನಾಟಕದಲ್ಲಿ ಆಡಳಿತವಿರುವ ಕಾಂಗ್ರೆಸ್ ನಾಯಕರೇ ಗೂಂಡಾಗಿರಿ ನಡೆಸಿ ರಾಜ್ಯದ ಅಮಾಯಕ ಜನರ ಮೇಲೆ ದಬ್ಬಾಳಿಕೆ ನಡೆಸುತ್ತಿದ್ದಾರೆ. ಕಾಂಗ್ರೆಸ್ ನ ಪ್ರಭಾವಿ ಶಾಸಕರಾಗಿರುವಂತಹ ಹ್ಯಾರಿಸ್ ನಲಪಾಡ್ ಗೆ ತನ್ನ ಗೂಂಡಾ ಮಗ ಮಾಡಿರುವಂತಹ ದಾಂಧಲೆಯಿಂದಾಗಿ ರಾಜಕೀಯ ವರ್ಚಸ್ಸಿಗೆ ಧಕ್ಕೆಯಾಗಿದೆ. ಅದೇ ಕಾರಣದಿಂದ ಹಲ್ಲೆಗೊಳಗಾದ ವಿದ್ವತ್ ನ ಭೇಟಿ ಮಾಡಿ ರಾಜಿ ಸಂಧಾನ ಮಾಡಲು ಹ್ಯಾರಿಸ್ ಮತ್ತು ಆತನ ಪತ್ನಿ ಆಸ್ಪತ್ರೆಗೆ ಧಾವಿಸಿದ್ದಾರೆ.

ಸತ್ತು ಬದುಕಿದ್ದೇನೆ – ಹ್ಯಾರಿಸ್..!

ಆಸ್ಪತ್ರೆಗೆ ಭೇಟಿ ನೀಡಿದ ವೇಳೆ ವಿದ್ವತ್ ನ ತಂದೆಯ ಬಳಿ ಮಾತನಾಡಿದ ಶಾಸಕ ಹ್ಯಾರಿಸ್, ಮಗ ಮಾಡಿರುವ ತಪ್ಪು ನನಗೂ ಅರಿವಾಗಿದೆ. ಅವನಿಂದಾಗಿ ನಾನು ದಿನಾ ಸತ್ತು ಬದುಕುತ್ತಿದ್ದೇನೆ, ದಯವಿಟ್ಟು ಕ್ಷಮಿಸಿಬಿಡಿ ಎಂದು ಗೋಗರೆದಿದ್ದಾರೆ. ಮಗನ ರಂಪಾಟಕ್ಕೆ ನಾನೂ ಶಿಕ್ಷೆ ಅನುಭವಿಸುವಂತಾಗಿದೆ, ಎಂದು ಹ್ಯಾರಿಸ್ ದಂಪತಿ ವಿದ್ವತ್ ತಂದೆ ಲೋಕನಾಥ್ ಬಳಿ ಹೇಳಿಕೊಂಡಿದ್ದಾರೆ.

ಕ್ಯಾರೇ ಅನ್ನದ ವಿದ್ವತ್ ತಂದೆ ಲೋಕನಾಥ್..!

ಕಾರಣದ ಹಲ್ಲೆಗೊಳಗಾದ ವಿದ್ವತ್ ನನ್ನು ನೋಡಲು ಬಂದ ಹ್ಯಾರಿಸ್ ದಂಪತಿ ವಿದ್ವತ್ ನ ತಂದೆ ಲೋಕನಾಥ್ ರ ಬಳಿ ತಮ್ಮ ಮಗ ಮಾಡಿರುವ ತಪ್ಪಿನ ಬಗ್ಗೆ ಕ್ಷಮೆ ಯಾಚಿಸಿದ್ದರು‌. ಏನೋ ಮಕ್ಕಳು ಹೊಡೆದಾಡಿಕೊಂಡಿದ್ದಾರೆ, ಬುದ್ದಿ ಹೇಳಿ ಸರಿಪಡಿಸೋಣ ಎಂದು ಮಾಡಿದ ತಪ್ಪನ್ನು ಮರೆಮಾಚಲು ಪ್ರಯತ್ನಿಸಿದ್ದರು. ಕೋರ್ಟ್ ನಲ್ಲಿ ಆಕ್ಷೇಪಣೆ ಹಾಕಬೇಡಿ, ನನ್ನ ಮಗನಿಗೆ ಜಾಮೀನು ಸಿಗುವುದಿಲ್ಲ ಎಂದು ಶಾಸಕ ಹ್ಯಾರಿಸ್ ಬೇಡಿ ಕೊಂಡಿದ್ದರು.
ಆದರೆ ಹ್ಯಾರಿಸ್ ಅವರ ಸಂಧಾನಕ್ಕೆ ಮಣಿಯದ ಲೋಕನಾಥ್, ಶಾಸಕರ ಸಂಪೂರ್ಣ ಮಾತು ಕೇಳಿ ಡಾಕ್ಟರ್ ಕರೆಯುತ್ತಿದ್ದಾರೆ ಎಂದು ಹೇಳಿ ಹೊರ ನಡೆದಿದ್ದಾರೆ. ಕೊನೆಗೂ ರಾಜಿ ಸಂಧಾನ ಯಶಸ್ವಿಯಾಗದೆ ಸಪ್ಪೆ ಮೊರೆ ಹಾಕಿಕೊಂಡು ಹ್ಯಾರಿಸ್ ಆಸ್ಪತ್ರೆಯಿಂದ ಹೊರ ಬಂದಿದ್ದಾರೆ.!

ವಿದ್ವತ್ ಪರ ವಕೀಲರಿಗೆ ವಿಶೇಷ ಗೌರವ..!

ಕಾಂಗ್ರೆಸ್ ತನ್ನ ಅಧಿಕಾರವನ್ನು ಬಳಸಿಕೊಂಡು ಗೂಂಡಾಗಿರಿ ನಡೆಸುತ್ತಿದ್ದರೆ, ಹಲ್ಲೆಗೊಳಗಾದ ವಿದ್ವತ್ ಪರ ಕೋರ್ಟ್ ನಲ್ಲಿ ವಾದ ನಡೆಸಿದ್ದ ಶ್ಯಾಮ್ ಸುಂದರ್ ರವರಿಗೆ ಇದೀಗ ವಿಶೇಷ ಗೌರವ ದೊರಕಿದೆ. ವಿದ್ವತ್ ತಂದೆ ಲೋಕನಾಥ್ ಸರಕಾರಕ್ಕೆ ಅರ್ಜಿ ಸಲ್ಲಿಸಿದ್ದರು. ತಮ್ಮ ಮಗನ ಪರ ವಾದ ನಡೆಸಿದ್ದ ಶ್ಯಾಮ್ ಸುಂದರ್ ರನ್ನು ಈ ಪ್ರಕರಣದ ಅಭಿಯೋಜಕರನ್ನಾಗಿ ಆಯ್ಕೆ ಮಾಡುವಂತೆ ಕೋರಿದ್ದರು. ರಾಜ್ಯ ಸರಕಾರದ ಕಾರ್ಯದರ್ಶಿಗಳೇ ಇದೀಗ ಶ್ಯಾಮ್ ಸುಂದರ್ ರವರನ್ನು ಪ್ರಕರಣದ ವಿಶೇಷ ಅಭಿಯೋಜಕರನ್ನಾಗಿ ಆಯ್ಕೆ ಮಾಡಿದ್ದು , ಪರೋಕ್ಷವಾಗಿ ಶಾಸಕ ಹ್ಯಾರಿಸ್ ಗೆ ಮುಂದಿನ ಚುನಾವಣೆ ಯಲ್ಲಿ ಪಕ್ಷದಿಂದ ಯಾವುದೇ ಟಿಕೆಟ್ ಅಥವಾ ಜವಾಬ್ದಾರಿ ಯನ್ನು ನೀಡುವುದಿಲ್ಲ ಎಂದು ಪ್ರದರ್ಶಿಸಿದ್ದಾರೆ. ಈಗಾಗಲೇ ನಲಪಾಡ್ ನಡೆಸಿರುವ ದಾಂಧಲೆಗೆ ಕಾಂಗ್ರೆಸ್ ಕಂಗಾಲಾಗಿದ್ದು ಪಕ್ಷದ ಇಮೇಜ್ ಕಡಿಮೆಯಾಗಬಾರದೆಂಬ ದೃಷ್ಟಿಯಿಂದ ಈ ರೀತಿ ನಿರ್ಧಾರ ಕೈಗೊಂಡಿದೆ ಎಂದು ಹೇಳಲಾಗುತ್ತಿದೆ.

ಈಗಾಗಲೇ ನಲಪಾಡ್ ನ ರಂಪಾಟಕ್ಕೆ ಹ್ಯಾರಿಸ್ ರವರ ರಾಜಕೀಯ ಜೀವನಕ್ಕೆ ಬಹಳ ದೊಡ್ಡ ಪೆಟ್ಟು ಬಿದ್ದಿದ್ದು, ಕಾಂಗ್ರೆಸ್ ಹೈಕಮಾಂಡ್ ನಿಂದಲೂ ಹ್ಯಾರಿಸ್ ಮಗನ ಘಟನೆಗೆ ಛೀಮಾರಿ ಬಿದ್ದಿದೆ. ಗೂಂಡಾ ಮಗ ಮಾಡಿರುವ ರಂಪಾಟಕ್ಕೆ ಈಗಾಗಲೇ ಹ್ಯಾರಿಸ್ ಕೋಟಿ ಕೋಟಿ ಖರ್ಚು ಮಾಡಿದ್ದು, ಯಾವುದೇ ತಂತ್ರವೂ ಫಲಿಸಲಿಲ್ಲ. ಅಧಿಕಾರದ ಬಲದಿಂದ ಮಾಡಿರುವ ತಪ್ಪುಗಳನ್ನು ಮರೆಮಾಚಲು ಪ್ರಯತ್ನಿಸುತ್ತಿದ್ದಾರೆ ಹ್ಯಾರಿಸ್. ಮಹಮ್ಮದ್ ನಲಪಾಡ್ ತಾನು ಮಾಡಿರುವ ತಪ್ಪಿಗೆ ಯಾವುದೇ ಪಶ್ಚಾತ್ತಾಪ ಪಡುತ್ತಿಲ್ಲ. ಅಧಿಕಾರವನ್ನು ಬಳಸಿ ಮಾಡಿದ ತಪ್ಪಿಂದ ನುಣುಚಿಕೊಳ್ಳಲು ಪ್ರಯತ್ನಿಸಿದ ನಲಪಾಡ್ ಫ್ಯಾಮಿಲಿಗೆ ತೀವ್ರ ಮುಖಭಂಗವಾಗಿದೆ..!

–ಅರ್ಜುನ್

 

Tags

Related Articles

Close