ಪ್ರಚಲಿತ

ಮೈತ್ರಿಗೆ ಶಾಕ್! ಸಿಎಂ ತವರಿನಲ್ಲೇ 25 ಕಾಂಗ್ರೆಸ್ ನಾಯಕರು ಬಿಜೆಪಿ ಸೇರ್ಪಡೆ.! ಶಾಸಕರ ಮಗನೇ ಬಿಜೆಪಿ ಪಾಲು.!

ಮೈತ್ರಿ ಸರ್ಕಾರದಲ್ಲಿ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಮೈತ್ರಿ ಪಕ್ಷದಲ್ಲೇ ಎದುರಿಸಿದರೆ ಖಂಡಿತವಾಗಿಯೂ ಗೆಲ್ಲಬಹುದು ಎಂದುಕೊಂಡಿದ್ದ ಮೈತ್ರಿ ಸರ್ಕಾರಕ್ಕೆ ಇದೀಗ ಶಾಕ್ ಎದುರಾಗಿದೆ. ಸ್ವತಃ ಮುಖ್ಯಮಂತ್ರಿ ಕುಮಾರಸ್ವಾಮಿಯ ತವರಿನಲ್ಲೇ ಕುಮಾರಸ್ವಾಮಿಗೆ ಶಾಕ್ ಎದುರಾಗಿದ್ದು ತನ್ನದೇ ಕ್ಷೇತ್ರವನ್ನು ಕಳೆದುಕೊಳ್ಳುವ ಸಾಧ್ಯತೆ ಎದುರಾಗಿದೆ.

ಕಾಂಗ್ರೆಸ್ ಪಕ್ಷದ 25ಕ್ಕಿಂತಲೂ ಅಧಿಕ ಮಂದಿ ಭಾರತೀಯ ಜನತಾ ಪಕ್ಷವನ್ನು ಸೇರಿಕೊಂಡಿದ್ದಾರೆ. ಕಾಂಗ್ರೆಸ್ ಹಾಗೂ ಜನತಾದಳ ಪಕ್ಷ ಜೊತೆ ಸೇರಿಕೊಂಡು ಚುನಾವಣೆಯನ್ನು ಗೆಲ್ಲುವ ತಂತ್ರಗಾರಿಕೆಯನ್ನು ಹೆಣೆದಿತ್ತು. ಆದರೆ ಇದೀಗ ರಾಮನಗರದ ಕಾಂಗ್ರೆಸ್ ವಿಧಾನ ಪರಿಷತ್ ಸದಸ್ಯ ಸಿಎಂ ಲಿಂಗಪ್ಪ ಅವರ ಮಗ ಕಾಂಗ್ರೆಸ್ ನಾಯಕ ಚಂದ್ರಶೇಕರ್ ಭಾರತೀಯ ಜನತಾ ಪಕ್ಷವನ್ನು ಸೇರಿಕೊಂಡಿದ್ದಾರೆ.

ಮಾತ್ರವಲ್ಲದೆ ರಾಮನಗರ ಕಾಂಗ್ರೆಸ್ ಅಧ್ಯಕ್ಷ ಸೇರಿದಂತೆ 25ಕ್ಕೂ ಅಧಿಕ ಮಂದಿ ಕಾಂಗ್ರೆಸ್ ನಾಯಕರು ಭಾರತೀಯ ಜನತಾ ಪಕ್ಷವನ್ನು ಸೇರಿಕೊಂಡಿದ್ದಾರೆ. ಈ ಹಿಂದೆ ಮುಖ್ಯಮಂತ್ರಿ ಕುಮಾರಸ್ವಾಮಿ 2 ಕ್ಷೇತ್ರದಲ್ಲಿ ಚುನಾವಣೆಗೆ ಸ್ಪರ್ಧಿಸಿದ್ದರು. ನಂತರ ರಾಮನಗರ ವಿಧಾನ ಸಭಾ ಕ್ಷೇತ್ರಕ್ಕೆ ರಾಜೀನಾಮೆ ನೀಡಿದ್ದರು. ಹೀಗಾಗಿ ರಾಮನಗರ ವಿಧಾನ ಸಭಾ ಕ್ಷೇತ್ರ ತೆರವಾಗಿತ್ತು. ಇದೀಗ ಈ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದ್ದು ರಾಜಕೀಯ ಚಟುವಟಿಕೆ ಗರಿಗೆದರಿದೆ.

Related image

ರಾಮನಗರದಲ್ಲಿ ಜನತಾದಳದ ಕುಟುಂಬ ರಾಜಕಾರಣ ಹಾಗೂ ಕುಮಾರಸ್ವಾಮಿಯನ್ನು ಕಾಂಗ್ರೆಸ್ ಅಪ್ಪಿಕೊಂಡಿದ್ದನ್ನು ಬೇಸರಿಸಿಕೊಂಡಿರುವ ಕಾಂಗ್ರೆಸ್ ನಾಯಕರು ಭಾರತೀಯ ಜನತಾ ಪಕ್ಷವನ್ನು ಸೇರಿಕೊಂಡಿದ್ದಾರೆ. ಈ ವೇಳೆ ಮಾತನಾಡಿದ ಚಂದ್ರಶೇಕರ್ “ನಾನು ನನ್ನ ಅಪ್ಪ ಅಥವಾ ಪಕ್ಷದ ಒತ್ತಡದಲ್ಲಿಲ್ಲ. ನಿಮ್ಮ ಸ್ವತಂತ್ರ್ಯ ನಿಮಗಿದೆ ಎಂದು ಅಪ್ಪ ಹೇಳಿದ್ದರು. ಕಾಂಗ್ರೆಸ್ ಈಗ ಜನತಾದಳವನ್ನು ನಂಬಿಕೊಂಡು ಅದರ ತಾಳಕ್ಕೆ ಕುಣಿಯುತ್ತಿದೆ. ಗುಲಾಮರಾಗಿ ಬದುಕೋದು ನಮಗೆ ಇಷ್ಟವಿಲ್ಲ. ಹೀಗಾಗಿ ನಾವು ಭಾರತೀಯ ಜನತಾ ಪಕ್ಷವನ್ನು ಸೇರಿಕೊಂಡಿದ್ದೇವೆ. ಮುಂದಿನ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯನ್ನೇ ಗೆಲ್ಲಿಸುತ್ತೇವೆ. ಈ ಮೂಲಕ ಕುಟುಂಬ ರಾಜಕಾರಣವನ್ನು ನಿಲ್ಲಿಸುತ್ತೇವೆ” ಎಂದು ಹೇಳಿದ್ದಾರೆ.

ಇನ್ನು ಈ ಬಗ್ಗೆ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪನವರು “ರಾಮನಗರದಲ್ಲಿ ಗೆಲ್ಲುವ ವಿಶ್ವಾಸವಿದೆ. ಸಿಪಿ ಯೋಗೀಶ್ವರ್ ಅಥವಾ ರುದ್ರೇಶ್ ಯಾರು ಬೇಕಾದರೂ ಅಭ್ಯರ್ಥಿಯಾಗಬಹುದು. ನಾವಂತೂ ಈ ಬಾರಿ ಬಿಜೆಪಿಯನ್ನು ಗೆಲ್ಲಿಸಲು ಸಮರ್ಥರಾಗಿದ್ದೇವೆ. ಮೈತ್ರಿ ಪಕ್ಷಗಳನ್ನು ಧೂಳೀಪಟ ಮಾಡುತ್ತೇವೆ. ಕಾಂಗ್ರೆಸ್ ಶಾಸಕ ಲಿಂಗಪ್ಪರ ಮಗ ನಮ್ಮ ಪಕ್ಷ ಸೇರಿಕೊಂಡಿದ್ದು ರಾಮನಗರದಲ್ಲಿ ನಮಗೆ ಆನೆ ಬಲ ಬಂದಂತಾಗಿದೆ” ಎಂದು ಹೇಳಿದ್ದಾರೆ.

Related image

ಒಟ್ಟಾರೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ತವರು ಕ್ಷೇತ್ರದಲ್ಲಿ ಈವರೆಗೂ ಕಾಯ್ದುಕೊಂಡು ಬಂದಿದ್ದ ಕ್ಷೇತ್ರವನ್ನು ಕಳೆದುಕೊಳ್ಳುವ ಭೀತಿಯನ್ನು ಮುಖ್ಯಮಂತ್ರಿ ಕುಮಾರಸ್ವಾಮಿಯವರು ಹೊಂದಿದ್ದಾರೆ. ಈ ಬಾರಿ ಮೈತ್ರಿ ಪಕ್ಷಗಳ ಮೂಲಕವೇ ಚುನಾವಣೆಗೆ ಹೋಗುತ್ತಿದ್ದರೂ ಕೂಡಾ ಜನತಾದಳ ಪ್ರಾಬಲ್ಯವನ್ನು ಹೊಂದಿರುವ ರಾಮನಗರ ಕ್ಷೇತ್ರವನ್ನು ಕಳೆದುಕೊಳ್ಳುವ ಎಲ್ಲಾ ಲಕ್ಷಣಗಳೂ ಗೋಚರಿಸುತ್ತದೆ.

-ಏಕಲವ್ಯ

Tags

Related Articles

FOR DAILY ALERTS
 
FOR DAILY ALERTS
 
Close