ಇತಿಹಾಸ

ಧರ್ಮರಕ್ಷಣೆಗಾಗಿ ಮತಾಂಧರನ್ನು ಚೆಂಡಾಡಿದ್ದ ಶಿವಾಜಿಯ ಪುತ್ರನ ಅಂಗಾಂಗಗಳನ್ನು ಕೊಡಲಿಯಿಂದ ಕತ್ತರಿಸಿ…..

ಛತ್ರಪತಿ ಶಿವಾಜಿ ಮಹಾರಾಜರ ಜೀವನದ ಮಹಾಸಾಧನೆಯನ್ನು ಸಾರವತ್ತಾಗಿ ಕಣ್ಣಿಗೆ ಕಟ್ಟಿಸಬಲ್ಲ ಒಂದು ಶಬ್ದ ಎಂದರೆ, “ಸ್ವರಾಜ್ಯ ಸಂಸ್ಥಾಪನೆ! ಸ್ವರಾಜ್ಯ ಸಂಸ್ಥಾಪಕ”… ಇದೇ ಛತ್ರಪತಿ ಶಿವಾಜಿಗೆ ಒಪ್ಪುವ ಎಲ್ಲಕ್ಕಿಂತಲೂ ಯಥಾರ್ಥವಾದ ಬಿರುದಾದರೆ, ತನ್ನದೇ ರಕ್ತ ಹಂಚಿ ಹುಟ್ಟಿದ ಮಗ, “ಧರ್ಮವನ್ನು ಬಿಟ್ಟು ಬೇರೊಂದು ಧರ್ಮಕ್ಕೆ ಶರಣಾಗಲಾರೇ” ಎಂದ ವೀರ ಸಾಂಭಾಜಿ, ಹಿ0ದೂ ಧರ್ಮದ ಕೀರ್ತಿ ಪತಾಕೆಯನ್ನು ಹಾರಿಸಿದ ಧರ್ಮರಕ್ಷಕ!!!!

ಹೌದು.. ಧರ್ಮನಿಷ್ಟೆ, ಗುರುಭಕ್ತಿಯ ಆದರ್ಶವಾಗಿರುವ ಸಾಂಭಾಜಿ ಮಹಾರಾಜ 128 ಯುದ್ಧಗಳಲ್ಲಿ ಕನಿಷ್ಠ ಒ0ದು ಯುದ್ಧವನ್ನು ಸೋಲದೇ ಅಜೇಯನಾಗಿ ತ0ದೆಯ ಮತ್ತು ಹಿ0ದು ಧರ್ಮದ ಕೀರ್ತಿಯನ್ನು ಉತ್ತುಂಗಕ್ಕೆ ಹಾರಿಸಿದ ರೂವಾರಿ!! ಕಾಡಿನಲ್ಲಿ ಎದುರಾದ ವ್ಯಾಘ್ರ(ಹುಲಿ)ನ ಬಾಯಿಯನ್ನು ಸೀಳಿದ ಪರಾಕ್ರಮಿಯಾಗಿರುವ ಸಾ0ಭಾಜಿ, ಸೋಲನ್ನರಿಯದ ಸರದಾರ… ಶಿವಾಜಿ ಮಹಾರಾಜರ ನ0ತರ ಹಿ0ದು ಧರ್ಮದ ಕೀರ್ತಿ ಪತಾಕೆಯನ್ನು ನಿಜಾಮ ಆಡಳಿತದ ದೆಹಲಿಯಲ್ಲಿ ಹಾರಿಸಿ ತನ್ನ ಪ್ರಾಣಕೊಟ್ಟ ಧರ್ಮರಕ್ಷಕನಾದ ಈತ ಶಿವಾಜಿ ಮಹಾರಾಜ ಮತ್ತು ಸಾಯಿಭಾಯಿ ದ0ಪತಿಯ ಮಗನಾಗಿ 14ನೇ ಮೇ 1657ರಲ್ಲಿ ಪುಣೆಯ ಪುರ0ಧರಘಡನಲ್ಲಿ ಜನ್ಮತಾಳಿದ!!

ಧರ್ಮ ಸಂಸ್ಥಾಪನೆಯಲ್ಲಿ “ಸ್ವರಾಜ್ಯ” ಶಬ್ದವನ್ನು ಕೇವಲ 16ನೇಯ ವರ್ಷದ ಎಳೆವಯಸ್ಸಿನಲ್ಲಿ, ಮೊಟ್ಟಮೊದಲಿಗೆ ಪ್ರಯೋಗ ಮಾಡಿದವರೇ ಶಿವಾಜಿ ಮಹಾರಾಜರು!! ಸಣ್ಣ ವಯಸ್ಸಿನಲ್ಲಿಯೇ ಅಪ್ರತಿಮ ಕಲ್ಪನಾ ಸಾಮಥ್ರ್ಯ, ಧ್ಯೇಯದ ನಿರ್ಧಾರ, ಅದರ ಸಿದ್ಧಿಯಲ್ಲಿ ಸಂದೇಹಾತೀತವಾದ ನಂಬಿಕೆಗಳನ್ನೂ ತಾಳಿದ್ದ ಶಿವಾಜಿ “ಸ್ವರಾಜ್ಯ ಮಂತ್ರದ ದ್ರಷ್ಟಾರ” ಎಂದರೆ ತಪ್ಪಾಗಲಾರದು. ಇನ್ನು “ನನ್ನಲ್ಲಿ ಹರಿಯುತ್ತಿರೊದು ಶಿವಾಜಿಯ ರಕ್ತ ಅದು ಎ0ದಿಗೂ ತನ್ನ ಧರ್ಮ ಬಿಟ್ಟು ಇನ್ನೂ0ದಕ್ಕೆ ಶರಣಾಗಲ್ಲ” ಎಂದ “ವೀರ ಸಾ0ಭಾಜಿ”ಯ ಧರ್ಮ ಪ್ರೇಮವನ್ನು ಕಂಡರೆ ಎಂತವರಿಗೂ ಒಂದು ಕ್ಷಣ ಮೈರೋಮಾಂಚನಗೊಳ್ಳುವುದು ನಿಜ!!

ಇಡೀ ಮಹಾರಾಷ್ಟ್ರದಲ್ಲಿ ಬರುವ ಎರಡು ಪ್ರಮುಖ ಘೋಷಣೆ ಎಂದರೆ, “ಧರ್ಮ(ಮರು) ಸ್ಥಾಪಕ “ಶಿವಾಜಿ”, ಧರ್ಮ ರಕ್ಷಕ “ಸಾ0ಭಾಜಿ”!!!ಅಷ್ಟೇ ಅಲ್ಲದೇ “ಸೋಲನ್ನು ಅರಿಯದ ವ್ಯಕ್ತಿಯೇ ಸಾಂಭಾಜೀ” ಎಂದು!! ಹೌದು.. ಶಿವಾಜಿ ಮಹಾರಾಜರ ನ0ತರ ಹಿ0ದು ಧರ್ಮದ ಕೀರ್ತಿ ಪತಾಕೆಯನ್ನು ಹಾರಿಸಿದ ಧರ್ಮರಕ್ಷಕನಾಗಿ ಕಂಡು ಬರುತ್ತಾನೆ!!!

ಸಂಭಾಜೀ ವಯಸ್ಕರಾದಾಗಲೂ ಆತನ ದೇಹದಾರ್ಢ್ಯ ಎಂತವರನ್ನು ಕೂಡ ಒಂದು ಕ್ಷಣ ಅಚ್ಚರಿಯನ್ನು ಮಾಡುತ್ತೆ!! ಈತನ ಎತ್ತರ 7.5, ತೂಕ 170 ಕೆಜಿ, ಎದೆಯ ಸುತ್ತಳತೆ 75 ಆಗಿತ್ತು!! ಇನ್ನು ಅವರು ಯದ್ದದಲ್ಲಿ ಉಪಯೋಗಿಸಿದ ಖಡ್ಗದ ಎತ್ತರ ಕೇಳಿದರೆ ಒಂದು ಕ್ಷಣ ದಂಗಾಗುವಿರಿ!! ಹೌದು.. ಸಂಭಾಜಿ ಬಳಸುತ್ತಿದ್ದ ಖಡ್ಗ 4 ಫೀಟ್ ಇದ್ದು, ಆ ಖಡ್ಗದ ತೂಕ ಬರೊಬ್ಬರಿ 65ಕೆಜಿ. ಇದಷ್ಟೇ ಅಲ್ಲದೇ, ಅವರ ಮಾಡುತ್ತಿದ್ದ ಊಟದ ಪದ್ಧತಿಯೂ ಅಷ್ಟೇ ಕ್ರಮವಾಗಿತ್ತು. ಹಾಗಾಗಿ ಅವರು ಸೇವಿಸುತ್ತಿದ್ದದ್ದು 12 ರೊಟ್ಟಿ ಮತ್ತು 2 ಲೀಟರ್ ಹಾಲು!!

ಬಾಲ್ಯದಲ್ಲಿಯೂ ಭಯಕ್ಕೆ ಅಂಜದ ಧೀರ ಸಾ0ಭಾಜಿ!!!

ಒಮ್ಮೆ ಶಿವಾಜಿ ಮಹಾರಾಜರು ಮತ್ತು ಚಿಕ್ಕ ಬಾಲಕ ಸಾ0ಭಾಜಿ ಮಹಾರಾಜರು, ಔರ0ಗ್ ಜೇಬ್­ನ ಆಸ್ಥಾನದಲ್ಲಿ ನಿ0ತಿರೋ ಸಮಯದಲ್ಲಿ ಔರ0ಗ್ ಜೇಬ್ ನ ಆಗಮನವಾಯಿತು. ಎಲ್ಲರೂ ತಲೆ ತಗ್ಗಿಸಿ ವ0ದಿಸೋದು ಅಲ್ಲಿಯ ಸ0ಪ್ರದಾಯವಾಗಿತ್ತು!! ಆದರೆ ಔರ0ಗ್ ಜೇಬ್­ನ ಆಸ್ಥಾನದಲ್ಲಿ ಎಲ್ಲರೂ ತಲೆ ತಗ್ಗಿಸಿ ವ0ದಿಸೋದನ್ನು ತಿರಸ್ಕರಿಸಿದ ಶಿವಾಜಿ ಮಹಾರಾಜರು ಮತ್ತು ಪುತ್ರ ಸಾ0ಭಾಜಿ ಎದೆಯತ್ತಿ ನಿ0ತರು. ಇದನ್ನು ವಿರೋಧಿಸಿದ ಆಸ್ಥಾನದ ಮ0ತ್ರಿ “ರಾಜನಿಗೆ ವ0ದಿಸೋದು ನಿಮಗೆ ಗೊತ್ತಿಲ್ಲವೇ” ಎ0ದು ಪ್ರಶ್ನಿಸಿದ. ಅದಕ್ಕೆ ಶಿವಾಜಿ ಮಹಾರಾಜರ ಉತ್ತರವೇ ಅದ್ಭುತ!! ಅದಕ್ಕಾಗಿಯೇ ಇರಬೇಕು ನಮಗೆ ಶಿವಾಜಿ ಮಹಾರಾಜರು ಇಷ್ಟ ಆಗೋದು!! ಹೌದು… ಶಿವಾಜಿ ಮಹಾರಾಜ ನೀಡುವ ಉತ್ತರದಿಂದ ಮಂತ್ರಿಯ ಬಾಯಿ ಮುಚ್ಚಿತ್ತು, ಯಾಕೆಂದರೆ ಶಿವಾಜಿ ಮಹಾರಾಜರ ಉತ್ತರ ಹೀಗಿತ್ತು: “ರಾಜನಿದ್ದರೆ ಅದು ನಿಮಗೆ, ನನಗಲ್ಲ ನಾನು ಕೂಡ ನಿಮ್ಮ ರಾಜನ ತರ ಸ್ವತಂತ್ರ ರಾಜನೇ” ಎ0ದರು.

ಈ ವಾಗ್ವಾದಕ್ಕೆ ಇಳಿದ ಶಿವಾಜಿ ಮತ್ತು ಬಾಲಕ ಸಾ0ಭಾಜಿಯ ಗ್ರಹಬ0ಧನವಾಯಿತು!! ಇದನ್ನು ನೋಡಿದ ಅಲ್ಲಿನ ಸೇವಕರು, ಸ0ಭಾಜಿಗೆ “ಮಗು ಭಯವಾಗುತ್ತಿದೆಯಾ” ಎ0ದು ಕೇಳಿದ್ದಕ್ಕೆ “ಶಿವಾಜಿ ಮಹಾರಾಜನ ಮಗ ನಾನು. ನನಗೆ ಭಯವೇ” ಅನ್ನೋ ಉತ್ತರ ಕೊಟ್ಟ ಧೀರ ಸಾ0ಭಾಜಿ!! ಅಹಾ… ಏನು ಉತ್ತರ.. ಸಣ್ಣ ವಯಸ್ಸಿನಲ್ಲಿಯೇ ತಂದೆಗೆ ತಕ್ಕ ಮಗನಾಗಿ ಭಯವನ್ನೇ ಅರಿಯದೇ ಹಿಂದೂ ಧರ್ಮದ ಏಳಿಗೆಗಾಗಿ ಶ್ರಮಿಸಿದ ವೀರ. ಸಾ0ಭಾಜಿ ಮಹಾರಾಜರ ಸೈನ್ಯದಲ್ಲಿದ್ದ 500 ಜನ ಸೈನಿಕರು ತನ್ನ ಎದುರಾಳಿ ಸೈನ್ಯದ 1000 ಜನರನ್ನು ಕೊಲ್ಲುವ ಶಕ್ತಿ ಹೊ0ದಿದ್ದರು. ಇವರು ಹೋರಾಡಿದ 128 ಯುದ್ಧಗಳಲ್ಲಿ ಒ0ದು ಯುದ್ಧವನ್ನು ಸೋಲದೇ ಅಜೇಯನಾಗಿ ತ0ದೆಯ ಮತ್ತು ಹಿ0ದು ಧರ್ಮದ ಕೀರ್ತಿಯನ್ನು ಉತ್ತುಂಗಕ್ಕೆ ಹಾರಿಸಿದ ರೂವಾರಿ!!

ಧರ್ಮಕ್ಕಾಗಿ ಮೃತ್ಯುವನ್ನೇ ಆಲಂಗಿಸಿದ ಧರ್ಮರಕ್ಷಕ ಸಾ0ಭಾಜಿ ಮಹಾರಾಜ!!

ಸಾ0ಭಾಜಿ ಮಹಾರಾಜರು ಕಾಡಿನಲ್ಲಿ ಎದುರಾದ ವ್ಯಾಘ್ರ(ಹುಲಿ)ನ ಬಾಯಿಯನ್ನು ಸೀಳಿದ ಪರಾಕ್ರಮಿ ಸೋಲನ್ನರಿಯದ ಸರದಾರನಾಗಿದ್ದ ಈತ, ನಿಜಾಮನ ಆಡಳಿತವಿದ್ದಾಗ ದೆಹಲಿ ಮೇಲೆ ಮೊದಲು “ಭಗವಾ ಧ್ವಜ” ಹಾರಿಸಿದ ವೀರ ಕೇಸರಿ. ಇವರ ಧರ್ಮನಿಷ್ಟೆಗೆ ಇವರ ತ0ದೆಯೆ ಭದ್ರ ಬುನಾದಿ!! ಧರ್ಮಕ್ಕಾಗಿ ಮೃತ್ಯುವನ್ನೇ ಆಲಂಗಿಸಿದ ಧರ್ಮವೀರ ಛತ್ರಪತಿ ಸಂಭಾಜಿಯು ಛತ್ರಪತಿ ಶಿವಾಜಿ ಮಹಾರಾಜರ ಮೃತ್ಯುವಿನ ನಂತರ ಮಹಾರಾಷ್ಟ್ರವನ್ನು ಗೆಲ್ಲಲು ಬಂದಿದ್ದ ಔರಂಗಜೇಬನೊಂದಿಗೆ ಸಂಭಾಜಿ ಮಹಾರಾಜರು ಒಂಬತ್ತು ವರ್ಷಗಳ ಕಾಲ ಹೋರಾಡಿ ಹಿಂದವೀ ಸ್ವರಾಜ್ಯವನ್ನು ಕೇವಲ ಸುರಕ್ಷಿತವಾಗಿಟ್ಟರಲ್ಲದೇ ಅದನ್ನು ದ್ವಿಗುಣವಾಗಿ ವಿಸ್ತರಿಸಿದರು!!

ಔರಂಗಜೇಬ ಬಾದಶಾಹನ ತನ್ನದೇ ಆದ ಒಂದು ಡೇರೆಯು ತುಳಾಪುರದಲ್ಲಿದ್ದು, ಅಲ್ಲಿ ವಿಶಾಲವಾದ ಛಾವಣಿ ಒಂದಿತ್ತು!! ಅಲ್ಲಿಂದ ಸಮೀಪದಲ್ಲಿಯೇ ಇರುವ ಸಿಕಂದರಖಾನನ ಡೇರೆಗೆ ಹೊಂದಿಕೊಂಡಿರುವ ಕಾರಾಗೃಹದಲ್ಲಿ ಸಂಭಾಜಿ ಮಹಾರಾಜ ಮತ್ತು ಕವಿ ಕಲಶ ಇವರನ್ನು ಬಂಧಿಸಲಾಗಿತ್ತು!! 22 ದಿನಗಳವರೆಗೆ ಕಾರಾಗೃಹದಲ್ಲಿಸಿದ ಸಂಭಾಜಿ ಮತ್ತು ಕವಿ ಕಲಶ ಅವರನ್ನು ವಿವಿಧ ರೀತಿಯಲ್ಲಿ ಹಿಂಸಿಸಲಾಗಿದ್ದು, ಕೊನೆಗೆ ಅರೆಜೀವವಿರುವ ಸ್ಥಿತಿಯಲ್ಲಿ ಅವರ ದೇಹವನ್ನು ವಡೂ
ಎಂಬ ಹಳ್ಳಿಯ ಕಾಡಿಗೆ ತರಲಾಯಿತು. ಆದರೆ ಅಲ್ಲಿ ಜೌರಂಗಜೇಬನ ಕ್ರೂರತನ ಪ್ರದರ್ಶನವಾಗಿತ್ತು!! ಹೌದು… ಅಲ್ಲಿ ಕವಿ ಕಲಶನ ಶಿರಚ್ಛೇದ ಮಾಡಿದರೆ, ಸಂಭಾಜಿ ಮಹಾರಾಜರನ್ನು ಭೂಮಿಯ ಮೇಲೆ ಕವುಚಿ ಮಲಗಿಸಿ ಕೊಡಲಿಯಿಂದ ಆತನ ಕಾಲಿನಿಂದ ಹಿಡಿದು ಎಲ್ಲಾ ಅಂಗಗಳನ್ನು ತುಂಡರಿಸಲಾಯಿತು.

ಗೃಹ ವಂಚಕರಿಂದಾಗಿ ಬಂಧಿಸಲ್ಪಟ್ಟ ನಂತರ ಔರಂಗಜೇಬನು ನೀಡಿದ ಕ್ರೂರ ಯಾತನೆಯನ್ನು ಸಹಿಸಿಕೊಂಡು ಮಹಾರಾಜರು ಮರಣ ಹೊಂದಿದರು; ಆದರೆ ಮತಾಂತರವಾಗಲಿಲ್ಲ. ” ಸಾವಿರ ಬಾರಿ ಹುಟ್ಟುತ್ತೇನೆ ಸಾವಿರ ಬಾರಿ ಸಾಯುತ್ತೇನೆ ಆದರೆ ಹಿಂದು ಧರ್ಮವನ್ನು ಎಂದಿಗೂ ಬಿಡುವುದಿಲ್ಲ” ಎಂದ ಈ ವೀರ “ನನ್ನಲ್ಲಿ ಹರಿಯುತ್ತಿರೊದು ಶಿವಾಜಿಯ ರಕ್ತ ಅದು ಎ0ದಿಗೂ ತನ್ನ ಧರ್ಮ ಬಿಟ್ಟು ಇನ್ನೂ0ದಕ್ಕೆ ಶರಣಾಗುವುದಿಲ್ಲ ನಿನ್ನ ರಾಜ್ಯ ಬಿಟ್ಟು ಕೊಟ್ಟರು ನಾನು ನಿನ್ನ ಧರ್ಮಕ್ಕೆ ಬರುವುದಿಲ್ಲ” ಎಂದಿದ್ದಾರೆ ಈ ವೀರ ಪರಾಕ್ರಮಿ!!

Image result for sambhaji

ಮಹಾರಾಷ್ಟ್ರದ ಜನತೆ ನಡೆಸುತ್ತಾರೆ ಒಂದು ತಿಂಗಳ ವೃತ!!! ಏನಿದು??

ಸಂಭಾಜಿ ಮಹಾರಾಜ ಜೀವ ಸವೆಸಿದರೇ ಹೊರತು ಧರ್ಮ ಬಿಡಲಿಲ್ಲ. ಆದರೆ ಔರಂಗಜೇಬನ ಕ್ರೂರ ಕೃತ್ಯಕ್ಕೆ 11ನೇ ಮಾರ್ಚ್ 1689 ರಲ್ಲಿ ತಮ್ಮ ಕೊನೆ ಉಸಿರೆಳೆದರು!! ಆಗಿನ್ನು ಸಾ0ಭಾಜಿ ಮಹಾರಾಜರ ವಯಸ್ಸು ಕೇವಲ 31 ವರ್ಷ. ಅವರ ಕಠಿಣ ದಿನಗಳನ್ನು ಮಹಾರಾಷ್ಟ್ರದ ಜನತೆ ಇನ್ನೂ ಮರೆಯದೆ ಆ ಒ0ದು ತಿ0ಗಳ ಮಟ್ಟಿಗೆ ಆಹಾರ ಮುಟ್ಟದೆ, ಕಾಲಿಗೆ ಚಪ್ಪಲಿ ಧರಿಸದೇ ಕಠಿಣ ವ್ರತಗೈಯುತ್ತಾರೆ.

ಧರ್ಮಕ್ಕಾಗಿ ಮೃತ್ಯುವನ್ನೇ ಆಲಂಗಿಸಿದ ಧರ್ಮರಕ್ಷಕನಾಗಿರುವ ಈತ “ಸೋಲನ್ನು ಅರಿಯದ ವ್ಯಕ್ತಿ”!! ತೇಜಪುರುಷ…. ಮೃತ್ಯುಂಜಯ… ಧರ್ಮವೀರ ಸಂಭಾಜಿ ಇತಿಹಾಸ ಪುಟದಲ್ಲಿ ಅಚ್ಚಳಿಯಾಗಿರುವ ಹೆಸರು. ತನ್ನ ಧರ್ಮಕ್ಕಾಗಿ ಪ್ರಾಣವನ್ನು ಕೊಟ್ಟು ಇನ್ನೊಂದು ಧರ್ಮವನ್ನು ಆಲಿಂಗಸದೇ ತನ್ನ ಧರ್ಮದಲ್ಲಿಯೇ ಸ್ವರ್ಗವನ್ನು ಕಂಡಂತಹ ಮಹಾನ್ ಪುರುಷ ಎಲ್ಲರಿಗೂ ಸ್ಪೂರ್ತಿ!!

– ಅಲೋಖಾ

Tags

Related Articles

FOR DAILY ALERTS
 
FOR DAILY ALERTS
 
Close