ಅಂಕಣ

ಆ ಒಂದು ಪತ್ರದಿಂದ ಭಯಾನಕ ಯುದ್ಧವನ್ನೇ ಗೆದ್ದಿದ್ದರು ಶಿವಾಜಿ ಮಹಾರಾಜರು!! ಮಗನ ಪರಾಕ್ರಮ ಕಂಡು ಸ್ವತಃ ಶಹಾಜಿ ಮಹಾರಾಜರೇ ತಲೆಬಾಗಿದ್ದರು…

ಪುರಾಣ ಪುರುಷರ ಆದರ್ಶವನ್ನು ಮೈಗೂಡಿಸಿಕೊಂಡಿದ್ದ ಶಿವಾಜಿಗೆ ದೊರೆತ ಧಾರ್ಮಿಕ ಮಾರ್ಗದರ್ಶನ ಅವರ ಜೀವನದ ಹೊಸ ಅಧ್ಯಾಯ ತೆರೆಯಿತು. ಅಸಂಘಟಿತ, ಚದುರಿಹೋಗಿದ್ದ ಮರಾಠರನ್ನು ಒಂದುಗೂಡಿಸುವುದು, ಮರಾಠ ಸಾಮ್ರಾಜ್ಯವನ್ನು ಸ್ಥಾಪಿಸುವುದು, ಸರ್ವಧರ್ಮ ಸಹಿಷ್ಣುತೆಯ ಧಾರ್ಮಿಕ ತಳಹದಿಯಲ್ಲಿ ರಾಜ್ಯಭಾರ ಮಾಡುವುದು, ಗೋ ಹಿತರಕ್ಷಣೆ, ಹಾಗೂ ದುಷ್ಟನಿಗ್ರಹ-ಶಿಷ್ಟ ಪರಿಪಾಲನೆಯ ಮಹಾನ್ ಆದರ್ಶಗಳನ್ನು ಕಾರ್ಯಗತಗೊಳಿಸುವುದು ಶಿವಾಜಿಯ ಶಪಥವಾಗಿತ್ತು….

ಅತೀ ಸಣ್ಣ ವಯಸ್ಸಿನಲ್ಲಿಯೇ ಹೋರಾಟಕ್ಕೆ ಧುಮುಕಿದ್ದ ಶಿವಾಜಿ ಮಹಾರಾಜರು 1646ರಲ್ಲಿ ಬಿಜಾಪುರ ಸುಲ್ತಾನನ ಅಧೀನವಿದ್ದ ತೋರ್ಣಾ ಕೋಟೆಯನ್ನು ವಶಪಡಿಸಿಕೊಂಡರು.. ಹೋರಾಟದ ಕಿಚ್ಚು ಅಲ್ಲಿಂದ ಪ್ರಾರಂಭವಾಗಿತ್ತು ಶಿವಾಜಿ ದಾಳಿಗಳು, ಯುದ್ಧಗಳು ಮತ್ತು ರಕ್ಷಣಾ ಹೋರಾಟಗಳು. ಸಮರ್ಥ ರಾಮದಾಸರು ಅವನಿಗೆ ಬೋಧಿಸಿದ `ಗುರುಮಂತ್ರ’ ವೇ `ಹಿಂದು ಸಾಮ್ರಾಜ್ಯ ಸ್ಥಾಪನೆ’. ಅದಕ್ಕಾಗಿ ಮಾವಳಿಗಳಿಗೆ ಸೈನಿಕ ತರಬೇತಿ ನೀಡಿ ಪ್ರಬಲವಾದ ಸೈನ್ಯ ಕಟ್ಟುವ, ಕೋಟೆಗಳನ್ನು ನಿರ್ಮಿಸುವ ಧ್ಯೇಯ ಶಿವಾಜಿ ಮಹಾರಾಜರದ್ದಾಗಿತ್ತು!!

ಅಂದು ಬಿಜಾಪುರದ ಸುಲ್ತಾನ, ಶಿವಾಜಿಯನ್ನು ಮುಗಿಸಲು ಪತ್ತೇಖಾನನ ಜೊತೆಗೆ ಬಲಿಷ್ಟ ಸೈನ್ಯವನ್ನು ಕಳುಹಿಸಿದ್ದ ಪರ್ರಾದ್ಖಾನ್ ಎಂಬ ಇನ್ನೊಬ್ಬ ಸರದಾರನ ಜೊತೆಗೂ ಒಂದು ಬಲಿಷ್ಟ ಸೈನ್ಯವನ್ನು ಬೆಂಗಳೂರಿಗೆ ಕಳುಹಿಸಿರುತ್ತಾನೆ. ಶಿವಾಜಿಯ ಅಣ್ಣ ಸಂಭಾಜಿಯನ್ನು ಮುಗಿಸುವ ಉದ್ದೇಶಕ್ಕಾಗಿ!. ಒಂದೇ ಏಟಿಗೆ ಶಿವಾಜಿಯ ಇಡಿ ಕುಟಂಬವನ್ನೇ ಮುಗಿಸಿ ಬಿಡುವ ದುರಾಲೋಚನೆ.!ಅಂತಹ ಯೋಚನೆ ಯಾತಕ್ಕಾಗಿ ಬಂತು ಗೊತ್ತೇ?

Image result for shivaji maharaj with his father shahaji

ಅದೇ ಸಮಯದಲ್ಲಿ ಶಿವಾಜಿಯ ತಂದೆ ಶಹಾಜಿಯವರು ವಿಜಯನಗರದ ಕೊನೆಯ ದೊರೆ ಶ್ರೀರಂಗರಾಯರ ಜೊತೆಗೆ ಸೇರಿ ಗುಪ್ತವಾಗಿ ಹಿಂದೂ ರಾಜರನ್ನು ಒಗ್ಗೂಡಿಸಿ ಮತ್ತೊಮ್ಮೆ ಹಿಂದೂ ಸಾಮ್ರಾಜ್ಯ ವನ್ನು ಕಟ್ಟಲು ಮಾತುಕತೆ ನಡೆಸಿರುತ್ತಾರೆ. ಈ ವಿಷಯ ಬಿಜಾಪುರದ ಸುಲ್ತಾನನ ಕಿವಿಗೆ ಬೀಳುತ್ತದೆ. ಹೀಗಾಗಿ ಸುಲ್ತಾನ ಯೋಚಿಸುತ್ತಾನೆ. ಆರಂಭದಲ್ಲಿಯೇ ಶಹಾಜಿಯ ಕುಟುಂಬವನ್ನು ಪೂರ್ತಿಯಾಗಿ ನಿರ್ಣಾಮ ಮಾಡಿದರೆ ಹಿಂದೂ ಸಾಮ್ರಾಜ್ಯದ ಕನಸು ಸಮಾಧಿಯಾಗಿಬಿಡುತ್ತದೆ. ಆ ಒಂದು ಹಿಂದೂ ಕುಟುಂಬ ನಿರ್ಣಾಮವಾದರೆ ಮುಂದೆ ದಕ್ಷಿಣಾದಾದ್ಯಂತ ಇಸ್ಲಾಂ ಧರ್ಮವನ್ನು ಅನ್ನು ಹರಡುವುದು ಸುಲಭವಾಗುತ್ತದೆ ಎಂದು ದುರಾಲೋಚನೆಯನ್ನು ಮಾಡುತ್ತಾನೆ!! ಅದಕ್ಕೆ ತಯಾರಾದ ಬಿಜಾಪುರದ ಸುಲ್ತಾನ್ ಪರ್ರಾದ್ಖಾನ್ ಜೊತೆ ಸೇರಿ ಶಿವಾಜಿಯ ಅಣ್ಣ ಸಂಭಾಜಿಯನ್ನೂ ಮುಗಿಸಲು ಒಂದು ಬಲಿಷ್ಟ ಸೈನ್ಯವನ್ನು ಕಳುಹಿಸಿರುತ್ತಾನೆ!! ಆತನಿಗೆ ತಿಳಿದಿಲ್ಲವೇನೋ ಹಿಂದೂಗಳನ್ನು ಪರಾಕ್ರಮಿಗಳೆಷ್ಟೋ ಅಷ್ಟೇ ಬುದ್ಧಿವಂತರೆಂದು… ಹಿಂದೂಗಳನ್ನು ನಿರ್ಣಾಮ ಮಾಡಬೇಕಂದರೆ ಸುಲಭವಲ್ಲ ಎಂಬುವುದು ಆತನಿಗೆ ಆವಾಗಲೇ ತಿಳಿದಿದ್ದು!! ಸುಲ್ತಾನನ ಯೋಜನೆ ಪೂರ್ತಿಯಾಗಿ ತಲೆಕೆಳಗಾಗುತ್ತದೆ. ಅಲ್ಲಿ ಪತ್ತೇಖಾನನಿಗಾದ ಗತಿಯೇ ಇಲ್ಲಿ ಪರ್ರಾದ್ಖಾನನಿಗು ಆಗುತ್ತದೆ!!

ಶಿವಾಜಿಯ ಅಣ್ಣನ ನಿರ್ಣಾಮಕ್ಕೆ ಬಂದ ಬಿಜಾಪುರದ ಸುಲ್ತಾನ ಕಳುಹಿಸಿದ ಸೈನ್ಯವನ್ನು ಧೂಳಿಪಟ ಮಾಡಲಾಯ್ತು!! ಮತ್ತೊಂದು ಕಡೆಯಲ್ಲಿ ಶಿವಾಜಿ ಮಹಾರಾಜರು ಸುಲ್ತಾನನ ಸೆರೆಯಲ್ಲಿರುವ ತನ್ನ ತಂದೆ ಶಹಾಜಿಯನ್ನೂ ಬಿಡಿಸಲು ಯೋಚಿಸುತ್ತಿರುತ್ತಾರೆ!! ಸ್ವಲ್ಪ ತಡವಾದರೂ ಸುಲ್ತಾನ ಶಿವಾಜಿ ಮಹಾರಾಜರ ತಂದೆಯನ್ನು ಒತ್ತೆಯಾಗಿಟ್ಟುಕೊಂಡು ಇಂತಿಂತ ಪ್ರದೇಶಗಳನ್ನು ಬಿಟ್ಟುಕೊಡಬೇಕೆಂದು ಬೇಡಿಕೆ ಇಡುತ್ತಾನೆ. ತಾನು ಒಪ್ಪದಿದ್ದರೇ ಯುದ್ಧದಲ್ಲಾದ ಸೋಲಿನ ಸೇಡನ್ನು ತನ್ನ ತಂದೆಯವರ ಮೇಲೆ ಕ್ರೂರವಾಗಿ ತೀರಿಸಿಕೊಳ್ಳುತ್ತಾನೆ. ಅಕಸ್ಮಾತ್ ಆತನ ಬೇಡಿಕೆಗೆ ಒಪ್ಪಿದರೆ ಯುಧ್ಧವನ್ನು ಗೆದ್ದು ಸೋತ ಹಾಗಾಗುತ್ತದೆ. ಸುಲ್ತಾನನ ಕಡೆಯಿಂದ ಅಂತಹ ಬೇಡಿಕೆ ಬರುವ ಮೊದಲೇ ತಂದೆಯವರನ್ನು ಆತನ ಸೆರೆಯಿಂದ ಬಿಡಿಸಬೇಕು ಎಂದು ಶಿವಾಜಿ ಮಹಾರಾಜರು ನಿರ್ಧಾರ ಮಾಡುತ್ತಾರೆ!!

Related image

ಬಾಲಕನಾದ ಶಿವಾಜಿ ಬಿಜಾಪುರದ ತನಕ ಹೋಗಿ ದಾಳಿಮಾಡಿ ತಂದೆಯವರನ್ನು ಬಿಡಿಸಿಕೊಂಡು ಬರುವುದು ಸದ್ಯದ ಮಟ್ಟಿಗೆ ಅಸಾಧ್ಯದ ಮಾತು ಎಂದು ಅಂದುಕೊಳ್ಳಲಿಲ್ಲ!! ಶಿವಾಜಿ ಬಳಿ ಸಣ್ಣ ಸೈನ್ಯವಿದ್ದರೂ ಕೂಡಾ ಮನಸ್ಸಿನಲ್ಲಿ ಗಟ್ಟಿಯಾಗಿ ಧೈರ್ಯ ಮಾಡುತ್ತಾರೆ!! ಸುಲ್ತಾನನ ಬಳಿ ಇರುವುದು ಹಲವಾರು ವರ್ಷಗಳಿಂದ ವ್ಯವಸ್ಥಿತವಾಗಿ ರೂಪುಗೊಂಡಿರುವ ಎರಡು ಲಕ್ಷ ಸೈನಿಕರು. ಶಿವಾಜಿ ಯೋಚಿಸುತ್ತಾನೆ. ಈಗ ಯುಕ್ತಿಯಿಂದಲೇ ಸುಲ್ತಾನನನ್ನು ಮಣಿಸಬೇಕು ಎಂದು ಯೋಚಿಸಿ ಹೇಗಾದರೂ ತನ್ನ ತಂದೆಯನ್ನು ಬಿಡಿಸಿಕೊಂಡು ಬರಬೇಕೆಂದು ಪಣತೊಡುತ್ತಾರೆ!! ಕೇವಲ ಯುದ್ಧ ತಂತ್ರಗಾರಿಯಲ್ಲಿ ಮಾತ್ರ ಧೈರ್ಯಶಾಲಿಯಾಗಿರದೆ ಬುದ್ಧಿವಂತಿಕೆಯಲ್ಲೂ ಅಷ್ಟೆ ಅಪ್ರತಿಮನಾಗಿದ್ದರು ಶಿವಾಜಿ ಮಹಾರಾಜರು!! ಹಾಗಾಗಿಯೇ ಶಿವಾಜಿ ಮಹಾರಾಜರು ಇಂದೂ ಸಮಸ್ತ ಭಾರತೀಯ ಹಿಂದೂಗಳಲ್ಲಿ ಮನದಲ್ಲಿರುವುದು..ಇನ್ನೂ ಅವರನ್ನು ಪೂಜಿಸುತ್ತಿರುವುದು!!

ಈಗಾಗಲೇ ಎಲ್ಲರೂ ಯೋಚಿಸುತ್ತಿರಬಹುದು ಯುದ್ಧ ಮಾತ್ರವಲ್ಲ ಬುದ್ಧಿವಂತಿಕೆಯಲ್ಲೂ ಚಾಣಕ್ಯ ಎಂದು… ಏನಿದರ ಅರ್ಥ ಎಂದು ನೀವು ಈಗಾಗಲೇ ಯೋಚಿಸುತ್ತಿರಬಹುದು..ನಿಮ್ಮ ಊಹೆಗೆ ಈಗ ಉತ್ತರ ಸಿಗುತ್ತದೆ!! ಹೀಗೆ ಯೋಚಿಸುತ್ತಿದ್ದ ಬಾಲಕ ಶಿವಾಜಿ ತನ್ನನ್ನೆ ಪ್ರಶ್ನಿಸಿಕೊಳ್ಳುತ್ತಾನೆ. ಬಿಜಾಪುರದ ಸುಲ್ತಾನ ಸೈನ್ಯಕ್ಕಿಂತ ಬಲಿಷ್ಟವಾದ ಸೈನ್ಯ ಯಾವುದು? ದಿಲ್ಲಿಯ ಬಾದಶಹನ ಸೈನ್ಯ. ಹೌದು ಈಗ ದಿಲ್ಲಿಯ ಬಾದಶಹಾನನ್ನೇ ಬಳಸಿಕೊಳ್ಳಬೇಕು ಎಂದು ನಿರ್ಧರಿಸಿ ಕೂಡಲೇ ದಿಲ್ಲಿಯ ಬಾದಶಹ ಶಹಜಹಾನನ ಕಡೆಗೆ ಒಂದು ದಾಳವನ್ನು ಉರುಳಿಸುತ್ತಾನೆ. ಅದು ಕೃತಕ ನಿಷ್ಠೆಯಿಂದ ಕೂಡಿರುವ ಪತ್ರದ ಮೂಲಕ….

Image result for shivaji maharaj with his father shahaji

ಶಿವಾಜಿ ಮಹಾರಾಜರ ಪತ್ರ ಹೀಗಿತ್ತು…..

ಬಾಲಕ ಶಿವಾಜಿ ಪತ್ರ ಬರೆಯಲು ಆರಂಭಿಸುತ್ತಾನೆ!! ನಾನು ಮತ್ತು ನನ್ನ ತಂದೆ ಇಬ್ಬರು ಸೇರಿ ನಿಮ್ಮ ಸಿಂಹಾಸನದ ಸೇವೆ ಸಲ್ಲಿಸಲು ಕಾತರರಾಗಿದ್ದೆವು. ಆದರೆ ನಿಮ್ಮ ಮೇಲೆ ನಮಗಿರುವ ನಿಷ್ಟೆಯನ್ನು ನೋಡಿದ ಬಿಜಾಪುರದ ಸುಲ್ತಾನ, ನಮ್ಮ ತಂದೆಯನ್ನು ಮೋಸದಿಂದ ಸೆರೆ ಹಿಡಿದಿದ್ದಾನೆ. ನಾನು ಈಗ ನನ್ನ ತಂದೆಯವರ ಬಿಡುಗಡೆಗಾಗಿ ಎದುರು ನೋಡುತ್ತಿದ್ದೇನೆ. ನಮ್ಮ ತಂದೆಯವರು ಬಿಡುಗಡೆ ಆಗಿ ಬರುತ್ತಿದ್ದಂತೆ ಅವರ ಜೊತೆಗೆ ನಿಮ್ಮ ಸೇವೆಗೆ ಹಾಜರಾಗುತ್ತೇನೆ ಇಂತಿ ನಿಮ್ಮವ ಶಿವಾಜಿ ಎಂದು ಪತ್ರವನ್ನು ಮುಗಿಸುತ್ತಾರೆ!!

ಶಿವಾಜಿ ಬರೆದ ಈ ಪತ್ರವನ್ನು ದಿಲ್ಲಿಯ ಬಾದಶಹನಿಗೆ ತಲುಪುತ್ತದೆ!! ಜೊತೆಗೆ, ತಾನು ಬಾದಶಹ ಶಹಾಜಹಾನ್ ಗೆ ಪತ್ರ ಬರೆದಿರುವ ವಿಷಯ ಮತ್ತು ಪತ್ರದಲ್ಲಡಗಿರುವ ವಿಷಯ ಎರಡನ್ನು ಬಿಜಾಪುರದ ಸುಲ್ತಾನನ ಕಿವಿಗೆ ಬೀಳುವ ಹಾಗೆ ನೋಡಿಕೋಳ್ಳುತ್ತಾನೆ. ಇದೇ ಶಿವಾಜಿಯ ನಿಪುಣ ರಾಜನೀತಿ ಅನ್ನೋದು… ಅಲ್ಲಿ ಪತ್ರ ನೋಡಿದ ಶಹಾಜಹಾನನಿಗೆ ಖುಷಿಯೋ ಖುಷಿ… ವಿಷಯ ಕೇಳಿದ ಸುಲ್ತಾನನಿಗೆ ಮಾತ್ರ ಒಳಗೊಳಗೆ ಉರಿಯಾಗಲು ಶುರುವಾಗುತ್ತೆ… ಬಯಸದೇ ಬಂದ ಗೌರವವನ್ನು ನೆನೆದು ದೆಲ್ಲಿಯ ಬಾದಶಹನಿಗೆ ಬಹಳ ಸಂತೋಷವಾಗುತ್ತದೆ. ಶಿಹಾಜಿಯಂತಹ ಪರಾಕ್ರಮಿಗಳು ತನ್ನ ನಾಯಕತ್ವಕ್ಕೆ ಬೆಲೆ ಕೊಟ್ಟು ಬಂದರೆ ಯಾವ ಸಾಮ್ರಾಟ ಬೇಡ ಎನ್ನುತ್ತಾನೆ ಹೇಳಿ…..

ದೆಲ್ಲಿಯ ಬಾದಶಹನಿಗೆ ಸಂತೋಷವಾದರೆ ಇತ್ತ ಬಿಜಾಪುರದ ಸುಲ್ತಾನನಿಗೆ ಇದರಿಂದ ದುಗುಡ ಶುರುವಾಗುತ್ತದೆ. ತನ್ನ ಸರದಾರನನ್ನು ಬಂಧಿಸಿರುವ ಕಾರಣಕ್ಕೆ ದಿಲ್ಲಿಯ ಬಾದಶಹ ಕೋಪಗೊಂಡು, ಶಿವಾಜಿ ಜೊತೆಗೆ ಸೇರಿ ತನ್ನ ಮೇಲೆ ದಂಡೆತ್ತಿ ಬಂದರೇ? ಹೀಗೆ ನೆನೆಸಿಕೊಂಡಾಗಲೆಲ್ಲ ಸುಲ್ತಾನನ ಎದೆ ಬಡಿತ ಜೋರಾಗುತ್ತದೆ. ನೆಮ್ಮದಿಯನ್ನೇ ಕಳೆದುಕೊಳ್ಳುವಂತಾಗುತ್ತದೆ!! ಯಾವುದಾದರೂ ಒಂದು ರೀತಿಯಲ್ಲಿ ಈ ಶಿವಾಜಿ ತನಗೆ ಗೋಳು ಹೊಯ್ದುಕೊಳ್ಳುತ್ತಾನಲ್ಲ ಎಂದು ಕೋಪಗೊಂಡು ಮೈ ಎಲ್ಲಾ ಪರಚಿಕೊಳ್ಳುತ್ತಾನೆ!!.

ದಿಲ್ಲಿಯ ಬಾದಶಹನಿಂದ ತನಗೆ ಬೆದರಿಕೆಯ ಪತ್ರ ಬರುವ ಮೊದಲೇ ತಾನು ಶಹಾಜಿಯವರನ್ನು ಬಿಡುಗಡೆ ಮಾಡಿ ಶಹಜಹಾನನ ಕೋಪದಿಂದ ಬಚಾವಾಗಿ ಬಿಡುವುದು ಸೂಕ್ತ ಎಂದು ನಿರ್ಧರಿಸುತ್ತಾನೆ. ಕೂಡಲೇ ತನ್ನ ದರಬಾರಿಗೆ ಶಹಾಜಿಯವರನ್ನು ಕರೆಸಿಕೊಂಡ ಸುಲ್ತಾನ, ನಿಮ್ಮ ಮೇಲಿನ ಯಾವುದೋ ತಪ್ಪು ಕಲ್ಪನೆಯಿಂದ ಹೀಗಾಯಿತು. ಈಗ ನಮ್ಮ ತಪ್ಪಿನ ಅರಿವಾಗಿ ಪಶ್ಚಾತಾಪವಾಗಿದೆ. ಈಗ ನೀವೂ ಸೆರೆಯಿಂದ ಮುಕ್ತರಾಗಿದ್ದಿರಿ ಎಂದು ಹೇಳಿ ಉಡುಗೆ-ತೊಡುಗೆಯನ್ನು ಕೊಟ್ಟು ಗೌರವಿಸಿ ಕಳುಹಿಸುತ್ತಾನೆ!!

Image result for shah jahan

ಇಲ್ಲೇ ನೋಡಿ ಶಿವಾಜಿಯ ಬುದ್ಧಿವಂತಿಕೆಯನ್ನು ಮೆಚ್ಚುವಂತಹದ್ದು!! ಯಾರೂ ಊಹಿಸಲು ಸಾಧ್ಯವಿಲ್ಲ.. ಯುದ್ಧ ಮಾಡಿ ಗೆಲ್ಲಬಹುದಾಗಿದ್ದ ಯುದ್ಧವನ್ನು ಕೇವಲ ಒಂದು ಪತ್ರದ ಮೂಲಕ ಯುದ್ಧ ಗೆದ್ದರು ಎಂದರೆ….ಹಾಗಾದರೆ ಶಿವಾಜಿ ಮಹಾರಾಜರು ಕೇವಲ ಪರಾಕ್ರಮಿ ಮಾತ್ರವಲ್ಲ ಬುದ್ಧಿವಂತಕೆಯಲ್ಲೂ ಅಷ್ಟೇ ಚುರುಕಾಗಿದ್ದರು!! ಒಂದು ವೇಳೆ ಆ ಸಮಯದಲ್ಲಿ ಯುದ್ಧ ನಡೆದಿದ್ದರೆ ಲಕ್ಷಗಟ್ಟಲೇ ಸೈನಿಕರು, ಸಾವಿರಾರು ಅಶ್ವದಳ, ಸಾವಿರಾರು ಆನೆ, ಬಿಲ್ಲುಬಾಣ ಆಕ್ರಂದನ ಮತ್ತು ಸಹಾಸ್ರಾರು ಮಂದಿಯ ರಕ್ತಪಾತದಿಂದ ಗೆಲ್ಲಬಹುದಾಗಿದ್ದ ಯುದ್ಧವನ್ನು ಕೇವಲ ಒಂದು ಪತ್ರದಿಂದ ಶಿವಾಜಿ ಗೆಲ್ಲುತ್ತಾನೆ. ಇದು ಶಿವಾಜಿಯ ಎರಡನೇಯ ಬಹುದೊಡ್ಡ ಗೆಲುವು…..

ಅತ್ತ ಕಡೆಯಲ್ಲಿ ಸೆರೆಯಲ್ಲಿಯೇ ತನ್ನ ಜೀವನ ಕೊನೆಗೊಳ್ಳುತ್ತದೆ ಎಂದುಕೊಂಡಿದ್ದ ಶಹಾಜಿಯವರಿಗೆ ತಮ್ಮ ಮಗನ ಚಾಣಾಕ್ಷ ರಾಜನೀತಿಯಿಂದ ಸುಲ್ತಾನ ತನ್ನನ್ನು ಬಿಡುಗಡೆ ಮಾಡಿದ್ದು ಎಂದು ತಿಳಿದಾಗ ಅವರ ಆನಂದಕ್ಕೆ ಪಾರವೇ ಇರಲಿಲ್ಲ!! ಈ ಕಡೆಯಿಂದ ಸುಲ್ತಾನ, ಸದ್ಯ ಶಿವಾಜಿಯ ಕಾಟ ತಪ್ಪಿತು ಎಂದು ನೆಮ್ಮದಿಯ ನಿಟ್ಟುಸಿರು ಬಿಟ್ಟನಲ್ಲದೆ ಈಗ ಶಿವಾಜಿಗೆ ಹದಿನೈದು ವರ್ಷವಂತೆ ಈಗಲೇ ಇಷ್ಟೊಂದು ಪರಾಕ್ರಮಿ ಹಾಗೂ ಬುದ್ಧಿವಂತ ಕೂಡಾ…. ಮುಂದೇನೋ ಗತಿ ಎಂದು ಯೋಚಿಸುತ್ತಿರುತ್ತಾನೆ!! ಹೀಗೆ ಶಿವಾಜಿ ಮಹಾರಾಜರು ಬಾಲಕನಾಗಿದ್ದಾಗಲೇ ಶತ್ರುಗಳ ನಿದ್ದೆಗೆಡಿಸಿದ್ದರು…….. ಜೈ ಶಿವಾಜಿ ಮಹಾರಾಜ್ ಕೀ….

source: nationalistview

  • Postcard team
Tags

Related Articles

FOR DAILY ALERTS
 
FOR DAILY ALERTS
 
Close