ಅಂಕಣಇತಿಹಾಸಪ್ರಚಲಿತರಾಜ್ಯ

ರಾಷ್ಟ್ರಪತಿ ಭವನದ ಕದ ತಟ್ಟಿದ ಶಿವಾಜಿ ಮಹಾರಾಜ್..!! ಭಾರತವಾಗುತ್ತಿದೆಯಾ ಹಿಂದೂ ರಾಷ್ಟ್ರ..!!

ಶಿವಾಜಿ… ಈ ಹೆಸರು ಕೇಳುತ್ತಿದ್ದಂತೆ ಬಿಸಿರಕ್ತದ ಯುವಕರು ಕಿವಿ ನೆಟ್ಟಗೆ ಮಾಡಿ ನಿಲ್ಲುತ್ತಾರೆ. ಯಾಕೆಂದರೆ ಶಿವಾಜಿ ಯ ಚರಿತ್ರೆಯೇ ಆ ರೀತಿ ಇದೆ. ಯಾವುದೇ ಒಳ್ಳೆಯ ಕೆಲಸ ಮಾಡಲು ವಯಸ್ಸು ಅಡ್ಡ ಬರುವುದಿಲ್ಲ ಎಂಬೂದನ್ನು ಸಾಬೀತುಪಡಿಸಿದವರೇ ಛತ್ರಪತಿ ಶಿವಾಜಿ..!

ಹಿಂದೂ ಧರ್ಮದ ರಕ್ಷಣೆಗಾಗಿ ೧೩ನೇ ವಯಸ್ಸಿನಲ್ಲೇ ಖಡ್ಗ ಹಿಡಿದು ಹೊರಟಂತಹ ಶಿವಾಜಿ ಮಹಾನ್ ಧರ್ಮ ಪ್ರೇಮಿ ಮತ್ತು ದೇಶಭಕ್ತ ಎಂಬೂದಕ್ಕೆ ಅವರು ಮಾಡಿದ ಸಾಧನೆಗಳೇ ಸಾಕ್ಷಿ. ಯಾಕೆಂದರೆ ಇಂದು ದಕ್ಷಿಣ ಭಾರತದಲ್ಲಿ ಹಿಂದೂ ದೇವಾಲಯಗಳು ಉಳಿದಿವೆ ಎಂದರೆ ಅದಕ್ಕೆ ಕಾರಣ ವೀರ ಶಿವಾಜಿ. ಹಿಂದೂ ಧರ್ಮವನ್ನು ನಾಶ ಮಾಡಿ ಭಾರತವನ್ನು ತಮ್ಮ ಸುಪರ್ದಿಗೆ ಪಡೆದುಕೊಳ್ಳಬೇಕೆಂದು ದಂಡೆತ್ತಿ ಬಂದಿದ್ದ ಅದೆಷ್ಟೋ ಸುಲ್ತಾನರನ್ನು , ಮೊಗಲರನ್ನು , ಧರ್ಮಾಂಧರನ್ನು ನೆಲ ಸಮ ಮಾಡಿ ಸೋಲಿಸಿದ್ದರು ಶಿವಾಜಿ.

ಅಂತಹ ವೀರನನ್ನು ಭಾರತದಲ್ಲಿ ಮಾತ್ರವಲ್ಲದೆ ವಿದೇಶದಲ್ಲೂ ಪೂಜಿಸುತ್ತಾರೆ ಎಂದರೆ , ಶಿವಾಜಿಯ ಸಾಮಾರ್ಥ್ಯ ಹೇಗಿತ್ತು ಎಂಬೂದು ತಿಳಿಯುತ್ತದೆ. ಶಿವಾಜಿ ಮೂಲತಃ ಮಹಾರಾಷ್ಟ್ರದವರೇ ಆದರೂ ಇಂದು ಇಡೀ ಜಗತ್ತೇ ಅವರನ್ನು ಪೂಜಿಸಿ , ಅವರ ಆದರ್ಶಗಳನ್ನು ಪಾಲಿಸುತ್ತಿದ್ದಾರೆ. ಭಾರತ ಬ್ರಿಟೀಷರ ಆಳ್ವಿಕೆಯಿಂದ ಮುಕ್ತಿ ಪಡೆಯುತ್ತಲೇ ಕಾಂಗ್ರೆಸ್ ನ ದಬ್ಬಾಳಿಕೆಗೆ ಒಳಪಟ್ಟಿತ್ತು. ಹಿಂದೂ ಧರ್ಮದ ಪ್ರತಿಯೊಂದು ಆಚಾರ ವಿಚಾರಗಳನ್ನು ಕಡೆಗಣಿಸುತ್ತಲೇ ಬಂದಿದ್ದ ಕಾಂಗ್ರೆಸ್ ಶಿವಾಜಿಯಂತಹ ಶೂರನ ಇತಿಹಾಸವನ್ನೂ ಮರೆಮಾಚಲು ಪ್ರಯತ್ನಿಸಿತ್ತು. ಆದರೆ ಶಿವಾಜಿಯ ಚರಿತ್ರೆ ಮಣ್ಣಲ್ಲಿ ಮಣ್ಣಾಗುವಂತದ್ದಲ್ಲ. ಅದೇ ಕಾರಣಕ್ಕಾಗಿ ಶಿವಾಜಿಯ ಪ್ರತಿಯೊಂದು ಆದರ್ಶಗಳು ಇಂದಿಗೂ ರಾರಾಜಿಸುತ್ತಿವೆ.
ಆದರೆ ಕಾಂಗ್ರೆಸ್ ನ ಎಲ್ಲಾ ನೀತಿಗಳನ್ನು ತಲೆಕೆಳಗಾಗಿ ಮಾಡುತ್ತಲೇ ಬಂದಿರುವ ಪ್ರಧಾನಿ ನರೇಂದ್ರ ಮೋದಿ, ಶಿವಾಜಿಯಂತಹ ಮಹಾನ್ ವ್ಯಕ್ತಿಗಳನ್ನು ಮತ್ತೆ ಭಾರತದ ಪ್ರತಿಯೊಬ್ಬ ಪ್ರಜೆಯೂ ನೆನಪಿನಲ್ಲಿಡಬೇಕೆಂಬ ದೃಷ್ಟಿಯಿಂದ ಇಂತಹ ವ್ಯಕ್ತಿಗಳಿಗೆ ವಿಶೇಷ ಗೌರವ ಸಲ್ಲಿಸುತ್ತಲೇ ಬಂದಿದ್ದಾರೆ..!

ಶಿವಾಜಿಗೆ ನಮೋ ಎಂದ ಮೋದಿ..!

ಶಿವಾಜಿಯಂತಹ ಧರ್ಮ ರಕ್ಷಕನನ್ನು ೬೦ ವರ್ಷಗಳ ಕಾಲ ಆಡಳಿತ ನಡೆಸಿದ ಕಾಂಗ್ರೆಸ್ ಯಾವತ್ತೂ ನೆನೆಯಲಿಲ್ಲ. ಪ್ರತಿಯೊಂದನ್ನೂ ರಾಜಕೀಯ ದೃಷ್ಟಿಯಿಂದಲೇ ಅಳೆಯುತ್ತಿದ್ದ ಕಾಂಗ್ರೆಸ್ ಗೆ ಶಿವಾಜಿ , ಸಾವರ್ಕರ್ ರಂತಹ ದೇಶಪ್ರೇಮಿಗಳನ್ನು ಸ್ಮರಿಸುವುದೂ ಬೇಡವಾಗಿತ್ತು. ಆದರೆ ನರೇಂದ್ರ ಮೋದಿಯವರು ಹೀಗಾಡಲಿಲ್ಲ. ಪ್ರಧಾನಿ ಪಟ್ಟ ಅಲಂಕರಿಸುತ್ತಲೇ ಭಾರತದ ಬಗ್ಗೆ ವಿಶೇಷ ಕನಸು ಕಟ್ಟಿಕೊಂಡಿದ್ದ ಮೋದಿ , ತಮ್ಮ ಕನಸನ್ನು ನನಸಾಗಿಸುವ ದೃಷ್ಟಿಯಿಂದ ಒಂದೊಂದೇ ನಿರ್ಧಾರಗಳನ್ನು ಕೈಗೊಳ್ಳುತ್ತಾ ಬಂದರು. ಶಿವಾಜಿಯಂತಹ ವೀರನ ಜನ್ಮ ದಿನವನ್ನೂ ಈ ಕಾಂಗ್ರೆಸ್ ಮರೆತು ಹೋಗಿತ್ತು. ಆದರೆ ನರೇಂದ್ರ ಮೋದಿಯವರು ಶಿವಾಜಿ ಜಯಂತಿಯನ್ನು ವಿಶೇಷವಾಗಿ ಆಚರಿಸುವ ಮೂಲಕ ಮತ್ತೆ ಶಿವಾಜಿಯ ಆದರ್ಶಗಳನ್ನು ದೇಶದ ಜನರ ಮುಂದೆ ಬಿತ್ತತೊಡಗಿದರು. ಶಿವಾಜಿ ಜಯಂತಿಯ ವೇಳೆ ಸ್ವತಃ ಮೋದಿ ಶಿವಾಜಿ ಮೂರ್ತಿಗೆ ನಮನ ಸಲ್ಲಿಸಿ , ಅವರ ಚರಿತ್ರೆಯನ್ನು ಹಾಡಿಹೊಗಳಿದ್ದರು. ಈ ಮೂಲಕ ಮತ್ತೆ ವೀರ ಶಿವಾಜಿಯ ಚರಿತ್ರೆಗೆ ಜೀವಕಳೆ ತಂದಿದ್ದರು.

ರಾಷ್ಟ್ರಪತಿ ಭವನದಲ್ಲೂ ಛತ್ರಪತಿ ಶಿವಾಜಿ..!

ಹಿಂದೂ ಹೃದಯ ಸಾಮ್ರಾಟ ಛತ್ರಪತಿ ಶಿವಾಜಿ ಮಹಾರಾಜರ ಭಾವಚಿತ್ರ ರಾಷ್ಟ್ರಪತಿ ಭವನದಲ್ಲಿ ಅಳವಡಿಸಲು ರಾಷ್ಟ್ರಪತಿ ರಾಮನಾಥ ಕೋವಿಂದ ನಿರ್ಧರಿಸಿದ್ದಾರೆ. ಭಾರತದ ಇತಿಹಾಸದಲ್ಲೇ ಪ್ರಥಮ ಬಾರಿಗೆ ಛತ್ರಪತಿ ಶಿವಾಜಿ ಮಹಾರಾಜರ ಭಾವಚಿತ್ರ ರಾಷ್ಟ್ರಪತಿ ಭವನದಲ್ಲಿ ಅಳವಡಿಸಲು ನಿರ್ಧರಿಸಲಾಗಿದೆ. ಈ ಮೂಲಕ ದೇಶದಲ್ಲಿ ಮತ್ತೆ ಶಿವಾಜಿಯ ಇತಿಹಾಸಕ್ಕೆ ಬೆರಗು ಮೂಡಿದೆ. ಯಾಕೆಂದರೆ ಶಿವಾಜಿಯಂತಹ ಶೂರರ ಆದರ್ಶಗಳನ್ನು ಇಡೀ ಜಗತ್ತೇ ಮೆಚ್ಚಿಕೊಂಡು ಪೂಜಿಸುತ್ತಿದೆ. ಆದರೆ ಈ ಕಾಂಗ್ರೆಸ್ ಮಾತ್ರ ಶಿವಾಜಿಯ ಯಾವುದೇ ಇತಿಹಾಸವನ್ನು ನೆನಪಿಸಿಕೊಳ್ಳಲಿಲ್ಲ. ಆದರೆ ನರೇಂದ್ರ ಮೋದಿಯವರ ಸರಕಾರ ರಚನೆಯಾಗುತ್ತಿದ್ದಂತೆ ದೇಶಕ್ಕಾಗಿ ವೀರ ಮರಣವನ್ನಪ್ಪಿದ ಶೂರರನ್ನು ಸ್ಮರಿಸಿಕೊಂಡು ಅವರಿಗೆ ಗೌರವ ಸಲ್ಲಿಸುತ್ತಲೇ ಇದ್ದಾರೆ.

ಫೆಬ್ರವರಿ ೧೯ ರಂದು ಶಿವಾಜಿ ಮಹಾರಾಜರ ಜನ್ಮ ದಿನಾಚರಣೆ. ಇಡೀ ದೇಶವೇ ಶಿವಾಜಿಯನ್ನು ನೆನೆಯುತ್ತಾರೆ. ದೆಹಲಿಯಲ್ಲಿ ನಡೆದ ಛತ್ರಪತಿ ಶಿವಾಜಿ ಜಯಂತಿ ಆಚರಣೆಯ ಸಂದರ್ಭದಲ್ಲಿ ಕಾರ್ಯಕ್ರಮ ದಲ್ಲಿ ಭಾಗಿಯಾಗಿದ್ದ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರಿಗೆ ಮಹಾರಾಷ್ಟ್ರದ ಸಂಸದರೊಬ್ಬರು ಶಿವಾಜಿ ಮಹಾರಾಜರ ಪೈಂಟಿಂಗ್ ಮಾಡಿರುವ ಘನತೆ , ಗಾಂಭೀರ್ಯದಿಂದ ಕೂಡಿದ ಭಾವಚಿತ್ರವನ್ನು ಕೊಡುಗೆ ನೀಡಿದ್ದಾರೆ. ಭಾವಚಿತ್ರವನ್ನು ಸ್ವೀಕರಿಸಿರುವ ರಾಷ್ಟ್ರಪತಿ ರಾಮನಾಥ್ ಕೋವಿಂದ ಅವರು ರಾಷ್ಟ್ರಪತಿ ಭವನದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಭಾವಚಿತ್ರ ಅಳವಡಿಸುವ ಐತಿಹಾಸಿಕ ನಿರ್ಧಾರ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ. ಹಿಂದೂ, ಹಿಂದೂತ್ವದ ರಕ್ಷಣೆಗಾಗಿ ಹೋರಾಡಿದ ಮಹಾನ್ ಚೇತನ, ಹಿಂದೂ ಹೃದಯ ಸಾಮ್ರಾಟ ಛತ್ರಪತಿ ಶಿವಾಜಿ ಮಹಾರಾಜರ ಭಾವಚಿತ್ರ ರಾಷ್ಟ್ರಪತಿ ಭವನದಲ್ಲಿ ಅಳವಡಿಸಲು ಮುಂದಾಗಿರುವುದು ಭಾರತದ ಇತಿಹಾಸದಲ್ಲಿ ಹೊಸ ಭಾಷ್ಯ ಬರೆದಿದೆ.

ಗಣರಾಜ್ಯೋತ್ಸವದಲ್ಲೂ ಮೆರೆದ ಶಿವಾಜಿ ಮಹಾರಾಜ್..!

ಈ ಬಾರಿಯ ಗಣರಾಜ್ಯೋತ್ಸವ ಸಂದರ್ಭದಲ್ಲಿ ದೆಹಲಿಯಲ್ಲಿ ನಡೆಯುವ ಸೇನಾಪರೇಡ್ ಸಂದರ್ಭದಲ್ಲೂ ಪ್ರತೀ ರಾಜ್ಯಗಳ ಸ್ಥಬ್ದ ಚಿತ್ರ ಪ್ರದರ್ಶನಗೊಳಿಸಬೇಕಾಗಿತ್ತು. ಆದರೆ ಮಹಾರಾಷ್ಟ್ರ ಸರಕಾರ ಈ ಬಾರಿ ಛತ್ರಪತಿ ಶಿವಾಜಿ ಮಹಾರಾಜರ ಸ್ಥಬ್ದಚಿತ್ರವನ್ನು ಪ್ರದರ್ಶಿಸಿತ್ತು. ಮಹಾರಾಷ್ಟ್ರ ದ ಈ ನಡೆಗೆ ದೇಶದಾದ್ಯಂತ ಮೆಚ್ಚುಗೆ ವ್ಯಕ್ತವಾಗಿತ್ತು. ತಮ್ಮ ತಮ್ಮ ರಾಜ್ಯದ ವಿಶೇಷತೆಗಳನ್ನು ದೇಶದ ಜನರ ಮುಂದೆ ಪ್ರದರ್ಶಿಸುವ ಈ ಸಂದರ್ಭದಲ್ಲಿ ಶಿವಾಜಿ ಮಹಾರಾಜರ ಈ ಚಿತ್ರ ಬಹಳ ಮೆಚ್ಚುಗೆಗೆ ಪಾತ್ರವಾಗಿತ್ತು.

ಇತಿಹಾಸದಲ್ಲೇ ಮೊದಲ ಬಾರಿಗೆ..!

ಭಾರತದ ಇತಿಹಾಸದಲ್ಲಿಯೇ ಶಿವಾಜಿಯ ಭಾವ ಚಿತ್ರವನ್ನು ರಾಷ್ಟ್ರಪತಿ ಭವನದಲ್ಲಿ ಅಳವಡಿಸಿದ ಉದಾಹರಣೆಯೇ ಇಲ್ಲ. ಯಾಕೆಂದರೆ ಆಡಳಿತದಲ್ಲಿ ಇದ್ದ ಕಾಂಗ್ರೆಸ್ ಗೆ ಕೇವಲ ರಾಜಕೀಯ ದುರುದ್ದೇಶ ಮಾತ್ರವೇ ಇತ್ತು. ಆದರೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ರಾಷ್ಟ್ರೀಯ ಸ್ವಯಂ ಸೇವಕ ಸಂಘ ದ ಗರಡಿಯಲ್ಲಿ ಬೆಳೆದವರಾಗಿರುವುದರಿಂದ ದೇಶಭಕ್ತರ ಮತ್ತು ಧರ್ಮ ರಕ್ಷಣೆಗೆ ಹೋರಾಡಿದ ಮಹಾನ್ ವೀರರನ್ನು ಗೌರವಿಸುವುದು ತಿಳಿದಿದೆ.

ಆದ್ದರಿಂದಲೇ ಈ ಬಾರಿಯ ಶಿವಾಜಿ ಜಯಂತಿ ಮತ್ತಷ್ಟು ವಿಶೇಷವಾಗಿದ್ದು , ಹಿಂದೂ ಸಾಮ್ರಾಟರೊಬ್ಬರ ಚರಿತ್ರೆ ರಾಷ್ಟ್ರಪತಿ ಭವನದಲ್ಲೂ ರಾರಾಜಿಸುವಂತಾಗಿದೆ..!

–ಅರ್ಜುನ್

Tags

Related Articles

FOR DAILY ALERTS
 
FOR DAILY ALERTS
 
Close