ಪ್ರಚಲಿತ

ಪಟ್ಟಾಭಿಷೇಕವಾದ ಕೋಟೆಯಲ್ಲೇ ಶಿವಾಜಿ ಪಟ್ಟಾಭಿಷೇಕದ ದಿನಾಚರಣೆ.!5 ರಾಷ್ಟ್ರಗಳ ರಾಯಭಾರಿಗಳು ಹಾಜರ್.!

“ಕಾಶಿ ಕಳಾಹೀನವಾಗುತ್ತಿತ್ತು, ಮಥುರಾ ಮಸೀದಿ ಆಗುತ್ತಿತ್ತು, ಅಕಸ್ಮಾತ್ ಶಿವಾಜೀ ಮಹರಾಜರು ಹುಟ್ಟದೇ ಇರುತ್ತಿದ್ದರೆ ಹಿಂದೂ ಧರ್ಮ ಸುನ್ನತ್ ಆಗುತ್ತಿತ್ತು, ಹಿಂದೂ ಧರ್ಮದ ಉನ್ನತಿಗಾಗಿ, ಧರ್ಮ ವಿರೋಧಿಗಳ ಹುಟ್ಟಡಗಿಸಲು ಎದ್ದುಬಂದ ಶಿವಾಂಶ ಆತ”… ಇದು ಛತ್ರಪತಿ ಶಿವಾಜಿ ಮಹಾರಾಜರ ಬಗ್ಗೆ ಜಗತ್ತು ಕಂಡ ಸಿಟಿಲ ಸಂತ ಸ್ವಾಮಿ ವಿವೇಕಾನಂದರು ಆಡಿದ ಮಾತುಗಳಿವು. ಮೊಘಲರ ದಬ್ಬಾಳಿಕೆಯಿಂದ ಕುಗ್ಗಿ ಹೋಗಿದ್ದ ಹಿಂದೂ ಧರ್ಮವನ್ನು ಮರುಸ್ಥಾಪನೆ ಮಾಡಲು ಛತ್ರಪತಿಯಾಗಿ ಮೈಕೊಡವಿ ಎದ್ದುಬಂದ ಶಿವಾಜಿ ಮಹಾರಾಜರು ಇಂದು ಭಾರತಕ್ಕೆ ಮಾತ್ರವಲ್ಲದೆ ಇಡೀ ವಿಶ್ವಕ್ಕೇ ಆದರ್ಶ ಹಾಗೂ ವೀರಪುರುಷ.

ಜೂನ್ 6ರಂದು ಶಿವಾಜಿ ಮಹಾರಾಜರ ಪಟ್ಟಾಭಿಷೇಕದ ದಿನೋತ್ಸವ. ಶಿವಾಜಿ ಮಹಾರಾಜರಿಗೆ ಪಟ್ಟಾಭಿಷೇಕ ಮಾಡಿದ ಮಹಾರಾಷ್ಟ್ರದ ರಾಯಗಢ್ ಎಂಬ ಕೋಟೆಯಲ್ಲಿ ಹಿಂದೂ ವೀರ ಯೋಧ ಛತ್ರಪತಿ ಶಿವಾಜಿ ಮಹಾರಾಜರಿಗೆ ಇದೇ ದಿನದಂದು ಪಟ್ಟಾಭಿಷೇಕ ನಡೆದಿತ್ತು. 1674ರ ಜೂನ್ 6ರಂದು ಈ ಹಿಂದವಿ ಸ್ವರಾಜ್ಯದ ಕನಸುಗಾರನಿಗೆ ಪಟ್ಟಾಭಿಶೇಕ ನಡೆದಿತ್ತು. ಹೀಗಾಗಿ ಜೂನ್ 6 2019ರಂದು ಶಿವಾಜಿ ಮಹಾರಾಜರ ಪಟ್ಟಾಭಿಶೇಕದ ದಿನವನ್ನಾಗಿ ಅದೇ ರಾಯಗಢ್ ಕೋಟೆಯಲ್ಲಿ ಆಚರಿಸಲಾಯಿತು. ಶಿವಾಜಿ ಪಟ್ಟಾಭಿಷೇಕದ ವಾರ್ಷಿಕೋತ್ಸವದ ಪ್ರಯುಕ್ತ ನಡೆದ “ರಾಯಗಢ್ ಶಿವರಾಜ್ಯಾಭಿಷೇಕ್-2019” ಎಂಬ ಕಾರ್ಯಕ್ರಮ ನಡೆಯಿತು. ಇದು ಮುಂಬೈಯಿಂದ 170 ಕಿ.ಮೀ.ದೂರದ ರಾಯಗಢ್ ಎಂಬ ಜಿಲ್ಲೆಯ ರಾಯಗಢ್ ಕೋಟೆಯಲ್ಲಿ ನಡೆದಿದೆ. ಜೂನ್ 5 ಹಾಗೂ 6ರಂದು ಸರಣಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಶಿವಾಜಿಯ ಪಟ್ಟಾಭಿಷೇಕವನ್ನು ನೆನಪಿಸಲಾಗಿತ್ತು.

ಶಿವಾಜಿ ಮಹಾರಾಜರ ಪಟ್ಟಾಭಿಷೇಕ ದಿನದ ಹಬ್ಬ ಕೇವಲ ಭಾರತೀಯರಿಗೆ ಮಾತ್ರವಲ್ಲದೆ ವಿಶ್ವಕ್ಕೇ ಒಂದು ರೀತಿಯ ಹಬ್ಬವಾಗಿತ್ತು. ಛತ್ರಪತಿಯ ಗತ್ತು ಭಾರತಕ್ಕಲ್ಲದೆ ವಿಶ್ವಕ್ಕೇ ಗೊತ್ತು. ಹೀಗಾಗಿ ಶಿವಾಜಿ ಮಹಾರಾಜರ ಪಟ್ಟಾಭಿಷೇಕ ದಿನೋತ್ಸವಕ್ಕೆ ಚೀನಾ, ಪೋಲ್ಯಾಂಡ್, ಗ್ರೀಸ್, ಬಲ್ಗೇರಿಯಾ ಹಾಗೂ ಟ್ಯುನೀಷಿಯಾದ ರಾಯಭಾರಿಗಳು ಈ ಕಾರ್ಯಕ್ರಮದಲ್ಲಿ ಉಪಸ್ಥಿತಿಯನ್ನು ಹೊಂದಿದ್ದರು. ಈ ಮೂಲಕ ಶಿವಾಜಿ ಮಹಾರಾಜರು ಕೇವಲ ಭಾರತಕ್ಕೆ ಮಾತ್ರವೇ ಸೀಮಿತವಾಗದೆ ಅವರ ಶಕ್ತಿ, ತಾಕತ್ತು, ಪರಾಕ್ರಮ ಇಡೀ ಜಗತ್ತಿಗೆ ಪರಿಚಯವಿದೆ ಎಂಬುವುದನ್ನು ಸಾರಿ ಸಾರಿ ಹೇಳಿತ್ತು.

ಶಿವಾಜಿ ಮಹಾರಾಜರ ಪಲ್ಲಕ್ಕಿಯನ್ನು ಕೋಟೆಗೆ ತರಲಾಗಿತ್ತು. ನಂತರ ಧ್ವಜಾರೋಹನ ನಡೆದಿದ್ದು ನಂತರ ವಿವಿಧ ಕಾರ್ಯಕ್ರಮಗಳು ನಡೆದಿದೆ. ಕೋಟೆಯ ಸುತ್ತಮುತ್ತಲಿನ 21 ಗ್ರಾಮಗಳ ಜನರ ಉಪಸ್ಥಿತಿಯಲ್ಲಿ ಪೂಜೆ ನಡೆಸಿ ನಂತರ ಕಾರ್ಯಕ್ರಮ ಆರಂಭಿಸಲಾಗಿತ್ತು. ಶಿವಾಜಿ ಯುಗದ ಸಮರ ಕಲೆಗಳ ಪ್ರದರ್ಶನ ಮತ್ತು ಕೋಟೆಯ ಐತಿಹಾಸಿಕ ವಸ್ತುಗಳ ಪ್ರದರ್ಶನ ನಡೆದಿದ್ದು ನಂತರ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆದಿವೆ. ಕಾರ್ಯಕ್ರಮದಲ್ಲಿ ಶಿವಾಜಿ ಮಹಾರಾಜರ ಕಾಲದ ಗತವೈಭವವನ್ನು ಸಾರುವ ಸನ್ನಿವೇಶಗಳನ್ನು ಬಣ್ಣಿಸಲಾಗಿತ್ತು.

ಒಟ್ಟಾರೆ ಈ ಎಲ್ಲಾ ಕಾರ್ಯಕ್ರಮಗಳ ಜವಬ್ಧಾರಿಯನ್ನು ಶಿವಾಜಿ ಮಹಾರಾಜರ 13ನೇ ನೇರ ವಂಶಸ್ಥರಾದ ಸಾಂಭಾಜಿರಾಜೇ ಛತ್ರಪತಿಯವರು ವಹಿಸಿದ್ದರು. ಕಾರ್ಯಕ್ರಮದಲ್ಲೂ ಶಿವಾಜಿ ಮಹಾರಾಜರ ವಂಶಸ್ಥರು ಸಕ್ರಿಯವಾಗಿ ಭಾಗವಹಿಸಿದ್ದರು.

-ಸುನಿಲ್ ಪಣಪಿಲ

Tags

Related Articles

FOR DAILY ALERTS
 
FOR DAILY ALERTS
 
Close