ದೇಶಪ್ರಚಲಿತ

ಬ್ರೇಕಿಂಗ್: ಶ್ರೀ ದೇವಿ ಸಾವಿಗೆ ಸ್ಪೋಟಕ ಟ್ವಿಸ್ಟ್!! ಹೃದಯಾಘಾತ ನಡೆದೇ ಇಲ್ಲವೆಂದಾದರೆ ಸಾವನ್ನಪ್ಪಿದ್ದು ಹೇಗೆ?! ಇಲ್ಲಿದೆ ಸಂಪೂರ್ಣ ಮಾಹಿತಿ…

ಬಾಲಿವುಡ್ ಚಾಂದನಿ ಎಂದೇ ಪ್ರಖ್ಯಾತಿಯಾಗಿದ್ದ 54 ವರ್ಷದ ಚಲನಚಿತ್ರ ನಟಿ ಶ್ರೀದೇವಿ ಸಾವನ್ನಪ್ಪಿದ್ದಾರೆ ಎನ್ನುವ ವಿಚಾರ ದೇಶದೆಲ್ಲೆಡೆ ತಲ್ಲಣವನ್ನು ಸೃಷ್ಟಿಸಿತ್ತು. ಭಾರತ ಚಿತ್ರರಂಗದಲ್ಲಿ ವಿಶೇಷ ಛಾಪನ್ನು ಮೂಡಿಸಿದ್ದ ಬಹುಭಾಷಾ ನಟಿ ಶ್ರೀದೇವಿ 54 ವರ್ಷವಾಗಿದ್ದರೂ ಈಗಲೂ ಅಮೃತ ಶಿಲೆಯಂತೆ ಕಂಗೋಳಿಸುವ ಚಿಲುಮೆಯಾಗಿದ್ದರು. ಅವರ ವ್ಯಕ್ತಿತ್ವವೇ ಡಿಫರೆಂಟ್ ಆಗಿತ್ತು. ಹೀಗೆ ತನ್ನ ವಿಶೇಷ ವ್ಯಕ್ತಿತ್ವವನ್ನೇ ಮೈಗೂಡಿಸಿಕೊಂಡು ಬರುತ್ತಿದ್ದ ಶ್ರೀದೇವಿಯ ಸಾವು ಭಾರತ ಚಿತ್ರರಂಗಕ್ಕೆ ಭಾರೀ ಆಘಾತವನ್ನೇ ನೀಡಿತ್ತು.

ದುಬೈನಲ್ಲಿ ನಿಧನರಾಗಿದ್ದರು ಶ್ರೀದೇವಿ…

ಬಾಲಿವುಡ್‍ನ ಖ್ಯಾತ ನಟಿ ಶ್ರೀ ದೇವಿ ದುಬೈನಲ್ಲಿ ನಡೆದಿದ್ದ ಮದುವೆ ಸಮಾರಂಭವೊಂದರಲ್ಲಿ ಭಾಗಿಯಾಗಿದ್ದರು. ಆದರೆ ನಿನ್ನೆ ಬೆಳ್ಳಂಬೆಳಗ್ಗೆ ಭಾರೀ ಆಘಾತಕಾರಿ ಸುದ್ಧಿಯೊಂದು ಕೇಳಿ ಬಂದಿದೆ. ಖ್ಯಾತ ಚಿತ್ರನಟಿ ಶ್ರೀ ದೇವಿ ದುಬೈನ ಹೊಟೇಲ್‍ವೊಂದರಲ್ಲಿ ಸಾವನ್ನಪ್ಪಿದ್ದಾರೆ ಎನ್ನುವ ಮಾಹಿತಿಯು ದೇಶದಲ್ಲಿ ಶೋಕ ಸಾಗರದಲ್ಲಿ ಮುಳುಗುವಂತೆ ಮಾಡಿತ್ತು. ಕೋಟ್ಯಾಂತರ ಅಭಿಮಾನಿಗಳು ಶ್ರೀದೇವಿ ಸಾವಿಗೆ ಕಂಬನಿ ಮಿಡಿದಿದ್ದರು. ಶ್ರೀ ದೇವಿ ಇನ್ನಿಲ್ಲ ಎಂಬ ಸುದ್ಧಿ ಕಾಡ್ಗಿಚ್ಚಿನಂತೆ ದೇಶದೆಲ್ಲೆಡೆ ಹರಡಿ ಅಭಿಮಾನದ ಅಲೆ ಉಕ್ಕುವಂತೆ ಆಗಿತ್ತು.

ಹೃದಯಾಘಾತವಾಗಿತ್ತೆಂದು ಸುದ್ಧಿ..!

ಮದುವೆ ಸಮಾರಂಭಕ್ಕೆಂದು ದುಬೈಗೆ ತೆರಳಿದ್ದ ಶ್ರೀದೇವಿ ಅನುಮಾನಾಸ್ಪದವಾಗಿ ಸಾವನ್ನಪ್ಪುತ್ತಾರೆ. ಶ್ರೀದೇವಿಯವರ ಸಾವಿಗೆ ಹೃದಯಾಘಾತವೇ ಕಾರಣ. ಅವರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂಬ ಸುದ್ಧಿಯೂ ಹರಡಿತ್ತು. ಈವರೆಗೂ ಈ ಸುದ್ಧಿಯೇ ನೈಜ ಸುದ್ಧಿ ಎಂದು ದೇಶದ ಜನತೆ ಭಾವಿಸಿದ್ದರು. ಆದರೆ ಅದರ ಮಧ್ಯೆಯೂ ಶ್ರೀ ದೇವಿ ಸಾವಿನ ಬಗ್ಗೆ ಭಾರೀ ಅನುಮಾನಗಳೇ ಎದ್ದಿಬಿಟ್ಟಿತ್ತು. ಶ್ರೀದೇವಿಯರ ಸಾವು ಸಹಜವಲ್ಲ ಎಂದೇ ಸಾಕಷ್ಟು ಚರ್ಚೆಯಾಗಿತ್ತು.

ದುಬೈನಿಂದ ಬಂತು ಸ್ಪೋಟಕ ಮಾಹಿತಿ..!

ದುಬೈನ ಅಮಿರೇಟ್ಸ್ ಹೊಟೇಲ್‍ನಲ್ಲಿ ಅನುಮಾನಾಸ್ಪದ ಸಾವಿಗೀಡಾದ ಖ್ಯಾತ ನಟಿ ಶ್ರೀದೇವಿ ಸಾವಿನ ಬಗ್ಗೆ ಸ್ಪೋಟಕ ಮಾಹಿತಿಯೊಂದು ಹೊರ ಬಿದ್ದಿದೆ. ಶ್ರೀ ದೇವಿಯವರ ಸಾವು ಹೃದಯಾಘಾತದಿಂದ ಸಂಭವಿಸಿಲ್ಲ ಎಂಬ ಮಾಹಿತಿ ದೇಶದಲ್ಲಿ ತಲ್ಲಣವನ್ನೇ ಸೃಷ್ಟಿಸಿದೆ. ಬಾಲಿವುಡ್ ಚಾಂದನಿ ನಟಿ ಶ್ರೀ ದೇವಿಯ ಸಾವು ಹೃದಯಾಘಾತದಿಂದ ಸಂಭವಿಸಿಲ್ಲ. ಬದಲಾಗಿ ನೀರಿನಲ್ಲಿ ಮುಳುಗಿ ನಟಿ ಶ್ರೀ ದೇವಿ ಸಾವನ್ನಪ್ಪಿದ್ದಾರೆ ಎನ್ನುವ ಮಾಹಿತಿಯನ್ನು ದುಬೈ ವೈಧ್ಯರು ನೀಡಿದ್ದಾರೆ.

ಮರಣೋತ್ತರ ಪರೀಕ್ಷೆಯ ವರದಿ ಹೀಗಿದೆ…

ದುಬೈನ ಅಮಿರೇಟ್ಸ್ ಹೊಟೇಲ್‍ನಲ್ಲಿ ಅನುಮಾಸ್ಪದವಗಿ ಸಾವನ್ನಪ್ಪಿದ್ದ ನಟಿ ಶ್ರೀದೇವಿಯ ಮರಣೋತ್ತರ ಪರೀಕ್ಷೆಯ ವರದಿಯನ್ನು ದುಬೈ ಪೊಲೀಸರು ಹಾಗೂ ವೈಧ್ಯರು ನೀಡಿದ್ದಾರೆ. ಈ ಮರಣೋತ್ತರ ಪರೀಕ್ಷೆಯ ಪ್ರಕಾರ ನಟಿ ಶ್ರೀದೇವಿಯ ಸಾವು ಹೃದಯಾಘಾತದಿಂದ ಸಂಭವಿಸಿಲ್ಲ. ಶ್ರೀದೇವಿಯವರು ಮದ್ಯಪಾನವನ್ನು ಸೇವಿಸಿದ್ದರು. ಅತಿಯಾದ ಮದ್ಯಪಾನದಿಂದ ಅವರು ತಮ್ಮ ಸ್ಥಿಮಿತ ತಪ್ಪಿದ್ದರು. ಹಾಗೂ ತಾನು ವಾಸ್ತವ್ಯವಿದ್ದ ಹೊಟೇಲ್‍ನ ಬಾತ್‍ರೂಮ್‍ನ ಸ್ನಾನ ಮಾಡುವ ಟಬ್‍ನ ನೀರಿಗೆ ಆಕಸ್ಮಿಕವಾಗಿ ಬಿದ್ದಿದ್ದಾರೆ. ಈ ವೇಳೆ ನಟಿ ಶ್ರೀದೇವಿಯವರು ಸಾವನ್ನಪ್ಪಿದ್ದಾರೆ ಎಂದು ಮರಣೋತ್ತರ ಪರೀಕ್ಷೆಯಲ್ಲಿ ತಿಳಿಸಲಾಗಿದೆ. ಶ್ರೀ ದೇವಿ ರಕ್ತ ಪರೀಕ್ಷೆ ನಡೆಸಿದ್ದು, ರಕ್ತದಲ್ಲಿ ಆಲ್ಕೋಹಾಲ್ ಅಂಶ ಪತ್ತೆಯಾಗಿದೆ ಎಂಬ ಅಂಶವೂ ಹೊರಬಿದ್ದಿದೆ. ದುಬೈನ ಪ್ರತಿಷ್ಟಿತ ರಶೀದ್ ಆಸ್ಪತ್ರೆಯಲ್ಲಿ ಶ್ರೀದೇವಿಯವರ ಮರಣೋತ್ತರ ಪರೀಕ್ಷೆಯನ್ನು ನಡೆಸಲಾಗಿದೆ.

ಏಕಾಂಗಿಯಾಗಿದ್ದ ಶ್ರೀದೇವಿ…

ದುಬೈನ ಮದುವೆ ಸಮಾರಂಭಕ್ಕೆಂದು ತೆರಳಿದ್ದ ಶ್ರೀದೇವಿ ಅಮಿರೇಟ್ಸ್ ಹೊಟೇಲ್‍ನಲ್ಲಿ ವಾಸ್ತವ್ಯವಿದ್ದರು. ಆದರೆ ಆಕೆ ವಾಸ್ತವ್ಯವಿದ್ದ ಆ ಎರಡೂ ದಿನಗಳೂ ಏಕಾಂಗಿಯಾಗಿಯೇ ಇದ್ದರಂತೆ. ತಮ್ಮ ವ್ಯಕ್ತಿಕ ಬದುಕಿನಲ್ಲೂ ಏರುಪೇರನ್ನು ಕಂಡಿದ್ದಂತಹ ನಟಿ ಶ್ರೀದೇವಿ ಯಾವುದೋ ಒಂದು ಜಿಗುಪ್ಸೆಯನ್ನು ಅನುಭವಿಸಿಕೊಂಡಿದ್ದರು ಎಂದು ಹೇಳಲಾಗುತ್ತಿದೆ.

ರಾಯಭಾರ ಕಛೇರಿಗೆ ಶವ ಹಸ್ತಾಂತರ…!

ದುಬೈನಲ್ಲಿ ಸಾವನ್ನಪ್ಪಿದ ನಟಿ ಶ್ರೀ ದೇವಿಯ ಶವವನ್ನು ಮರಣೋತ್ತರ ಪರೀಕ್ಷೆಯನ್ನು ನಡೆಸಿದ ನಂತರ ದುಬೈನಲ್ಲಿರುವ ರಾಯಭಾರ ಕಛೇರಿಗೆ ಹಸ್ತಾಂತರ ಮಾಡಲಾಗುವ ಸಾಧ್ಯತೆಗಳಿವೆ. ಸದ್ಯ ಮರಣೋತ್ತರ ಪರೀಕ್ಷೆಯ ರಿಪೋರ್ಟ್‍ನ್ನು ರಾಯಭಾರ ಕಛೇರಿ ಹಾಗೂ ಶ್ರೀದೇವಿಯವರ ಕುಟುಂಬಕ್ಕೆ ಸಲ್ಲಿಸಲಾಗಿದೆ.

ತನಿಖೆ ಮುಂದುವರೆಯುವ ಸಾಧ್ಯತೆ..!

ಸದ್ಯ ನಟಿ ಶ್ರೀದೇವಿಯವರ ಸಾವಿನ ತನಿಖೆಯ ಬಗ್ಗೆ ಭಾರತದಲ್ಲಿರುವ ಯಾರಿಗೂ ಸಮಧಾನವನ್ನು ತಂದಿಲ್ಲ. ಈ ಬಗ್ಗೆ ಟ್ವೀಟ್ ಮಾಡಿರುವ ಭಾರತದ ವೈದ್ಯರೋರ್ವರು ಟಬ್‍ಗೆ ಬಿದ್ದು ಸಾವನ್ನಪ್ಪಿದ್ದರೆ ತಲೆಗೆ ಅಥವಾ ಮುಖಕ್ಕೆ ಗಾಯವಾಗಿರಬೇಕಿತ್ತು. ಆದರೆ ಆ ತರಹದ ಯಾವುದೇ ಅಂಶವೂ ಪತ್ತೆಯಾಗಿಲ್ಲ ಎಂದಾದರೆ ಸಾವಿನ ಬಗ್ಗೆ ಏನೋ ಅನುಮಾನವಿದೆ ಎಂದು ಹೇಳಿದ್ದಾರೆ.

ಕನ್ನಡ ಚಿತ್ರರಂಗದಲ್ಲಿ ಮಿಂಚಿದ್ದ ಶ್ರೀದೇವಿ!!

13ನೇ ವಯಸ್ಸಿನಲ್ಲಿ ಜೂಲಿ ಚಿತ್ರದೊಂದಿಗೆ ಬಾಲಿವುಡ್‍ಗೆ ಎಂಟ್ರಿಕೊಟ್ಟ ಶ್ರೀದೇವಿ 300ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದರು. ಹಿಂದಿ, ತಮಿಳು, ತೆಲುಗು, ಮಲೆಯಾಳಂ ಮತ್ತು ಕನ್ನಡದಲ್ಲಿ ನಟಿಸುವ ಮೂಲಕ ಪಂಚಭಾಷಾ ಕಲಾವಿದೆಯಾಗಿ ಪ್ರಸಿದ್ಧಿ ಪಡೆದಿದ್ದರು.

ಬಹುಭಾಷಾ ನಟಿಯಾಗಿರುವ ಇವರು ಕನ್ನಡದ ‘ಭಕ್ತಕುಂಬಾರ’ ಚಿತ್ರದಲ್ಲಿ ಡಾ.ರಾಜ್‍ಕುಮಾರ್ ಅವರೊಂದಿಗೆ ಮುಕ್ತಾ ಬಾಯಿಯಾಗಿ ನಟಿಸಿದ್ದರು. ‘ಹೆಣ್ಣು ಸಂಸಾರದ ಕಣ್ಣು’, ಸಂಪೂರ್ಣ ರಾಮಾಯಣ, ಯಶೋಧಾ ಕೃಷ್ಣ, ಬಾಲ ಭಾರತ, ಸೇರಿದಂತೆ 6 ಕನ್ನಡ ಚಿತ್ರಗಳಲ್ಲಿ ಅವರು ಅಭಿನಯಿಸಿದ್ದಾರೆ. ತಮಿಳಿನ 76, ಹಿಂದಿಯ 71, ತೆಲುಗಿನ 72 ಹಾಗೂ 26 ಮಲಯಾಳಂ ಚಿತ್ರಗಳಲ್ಲಿ ಅವರು ಅಭಿನಯಿಸಿದ್ದಾರೆ. ವಿವಿಧ ಭಾಷೆಗಳ ಸುಮಾರು 260 ಚಿತ್ರಗಳಲ್ಲಿ ಅಭಿನಯಿಸಿದ್ದ ಅವರು, ಉತ್ತುಂಗದಲ್ಲಿದ್ದಾಗಲೇ ವೈವಾಹಿಕ ಜೀವನಕ್ಕೆ ಕಾಲಿಟ್ಟು ಅಭಿನಯದಿಂದ ದೂರ ಉಳಿದಿದ್ದರು.

ಪತಿಯ ವಿಚಾರಣೆಯೂ ಸಾಧ್ಯತೆ..!

ನಟಿ ಶ್ರೀದೇವಿಯ ಸಾವಿನ ವಿಚಾರವಾಗಿ ಆಕೆಯ ಪತಿ ಚಲನ ಚಿತ್ರ ನಿರ್ಮಾಪಕ ಬೋನಿ ಕಪೂರ್‍ರನ್ನು ವಿಚಾರಣೆಗೆ ಒಳಪಡಿಸುವ ಸಾಧ್ಯತೆಗಳೂ ಇವೆ ಎಂದು ಹೇಳಲಾಗುತ್ತಿದೆ. ಕುಟುಂಬ ಕಲಹಗಳು ಹಾಗೂ ಸಾಂಸಾರಿಕ ವೈಮನಸ್ಸುಗಳು ಸಂಭವಿಸಿದೆಯಾ ಎಂಬ ಅಂಶವನ್ನು ತಿಳಿಯುವ ಉದ್ಧೇಶದಿಂದ ದುಬೈ ಪೊಲೀಸರಿಂದ ಆಕೆಯ ಪತಿ ಬೋನಿ ಕಪೂರ್‍ರನ್ನು ತನಿಖೆಗೆ ಒಳಪಡಿಸಿ ಮಾಹಿತಿ ಕಳೆ ಹಾಕುವ ಸಾಧ್ಯತೆಗಳೂ ಇದೆ ಎನ್ನಲಾಗಿದೆ.

ಒಟ್ಟಾರೆ ಬಾಲಿವುಡ್ ಚಾಂದನಿಯ ಸಾವಿನ ಕೇಸ್ ತೀವ್ರ ಸ್ವರೂಪದ ತಿರುವು ಪಡೆದುಕೊಂಡಿರುವುದು ಸಾವಿನ ಬಗ್ಗೆ ಇನ್ನೂ ತನಿಖೆ ನಡೆಯುವ ಸಾಧ್ಯತೆಗಳಿವೆ ಎಂದೂ ಹೇಳಲಾಗುತ್ತಿದೆ. ಭಾರತದ ಹಲವಾರು ಮಂದಿಗೆ ಈ ಬಗ್ಗೆ ಅನುಮಾನಗಳು ಇರುವುದರಿಂದ ಇದು ಅಸಹಜ ಸಾವು ಎಂದು ಬಣ್ಣಿಸಲಾಗುತ್ತಿದೆ. ಈ ಮೂಲಕ ಶ್ರೀದೇವಿ ಸಾವಿನ ಕುರಿತಾದ ಅನುಮಾನಗಳು ಮತ್ತಷ್ಟು ಬಲವಾಗುವ ಸಾಧ್ಯತೆಗಳೂ ಇವೆ ಎನ್ನಲಾಗಿದೆ.

-ಸುನಿಲ್ ಪಣಪಿಲ

Tags

Related Articles

FOR DAILY ALERTS
 
FOR DAILY ALERTS
 
Close