ಅಂಕಣ

ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟಿದ್ದು ಬೋಸರು ಎಂದ ಮೇಲೆ ಗಾಂಧೀಜಿಗೇಕೆ ರಾಷ್ಟ್ರಪಿತ ಪಟ್ಟ? ಲಕ್ಷಾಂತರ ಕ್ರಾಂತಿಕಾರಿಗಳ ರಕ್ತಕ್ಕೆ ಬೆಲೆ ನೀಡಿದ ಸೆಕ್ಯುಲರ್ ರಾಜಕಾರಣಿಗಳು..!

ಭಾರತದ ರಾಷ್ಟ್ರಪಿತ ಯಾರು? ಎಂದು ಯಾರಿಗಾದರೂ ಪ್ರಶ್ನೆ ಕೇಳಿದರೆ ಮಹಾತ್ಮಾ ಗಾಂಧಿ ಎಂದು ತಟ್ಟನೆ ಉತ್ತರ ಕೊಟ್ಟುಬಿಡುತ್ತಾರೆ. ಆ ಸ್ಥಾನಕ್ಕೆ ಗಾಂಧೀಜಿ ಯೋಗ್ಯರಾಗಿದ್ದಾರಾ ಎಂಬುವುದನ್ನು ಎಲ್ಲರೂ ಒಂದು ಬಾರಿ ಯೋಚಿಸಬೇಕಾಗುತ್ತದೆ!! ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದವರನ್ನು ಮರೆತು ಕಪಟ ಮುಖವಾಡವನ್ನು ಹಾಕಿಕೊಂಡು ತಿರುಗುತಿದ್ದ ಗಾಂಧಿಯನ್ನು ಮಾತ್ರ ಇಡೀ ಜಗತ್ತು ರಾಷ್ಟ್ರಪಿತ ಅಂತಾ ಕರೆಯುತ್ತೆ!! ನಮ್ಮ ದೇಶಕ್ಕೆ ಸ್ವಾತಂತ್ರ್ಯ ಸಿಗಲು ಕಾರಣ ಮಹಾತ್ಮ ಗಾಂಧಿಯೇ? ಅವರು ಈ ದೇಶಕ್ಕಾಗಿ ಏನು ಮಾಡಿದ್ದಾರೆ? ಇತಿಹಾಸದ ಪುಟದಲ್ಲಿ ಗಾಂಧಿ ಮಾಡಿದ ಒಂದೂ ತಪ್ಪು ಕೂಡಾ ಉಲ್ಲೇಖಿಸದೆ ಅವರನ್ನೇ ಪೂಜಿಸುವಂತಾಗಿದೆ ಎಂತಹ ವಿಪರ್ಯಾಸವಲ್ಲವೆ?!

ತಮ್ಮನ್ನು ರಾಷ್ಟ್ರಪಿತ ಎಂದು ಕರೆದ ಮಹಾನ್ ಚೇತನಕ್ಕೆ ದ್ರೋಹ ಬಗೆದ ಗಾಂಧಿ ಹೇಗೆ ಭಾರತದ ರಾಷ್ಟ್ರಪಿತನಾಗುತ್ತಾರೆ ಎಂಬುವುದು ಎಲ್ಲರೂ ಇಲ್ಲಿ ಯೋಚಿಸಬೇಕಾದದ್ದು!! ಗಾಂಧಿ ಭಾರತದ ಸ್ಥಾಪನೆಗೆ ಪ್ರೇರಕ ಶಕ್ತಿಯಾಗಿದ್ದರೆ, ಖಂಡಿತ ಇಲ್ಲ…. ಭಾರತಕ್ಕೆ ಸ್ವಾತಂತ್ರ್ಯ ಬಂದದ್ದು ಗಾಂಧಿಯಿಂದ ಅಲ್ಲ!! ಇದರ ಹಿಂದೆ ಅದೆಷ್ಟೋ ಲಕ್ಷಾಂತರ ಜನರ ಪ್ರಯತ್ನವಿದೆ!! ಗಾಂಧಿ ಮಾಡಿದ್ದು ದೇಶ ಒಡೆಯುವ ಕೆಲಸ ಎಂಬುವುದನ್ನು ಮರೆಯದಿರಿ!! ದೇಶದ ಸ್ವಾತಂತ್ರ್ಯಕ್ಕಾಗಿ ಕ್ರಾಂತಿಕಾರಿಗಳ ಪಾತ್ರ ತುಂಬಾ ಮಹತ್ವದ್ದು. ಚಂದ್ರಶೇಖರ್ ಅಜಾದ್, ಭಗತ್ ಸಿಂಗ್, ಸುಭಾಸ್‍ಚಂದ್ರ ಭೋಸ್‍ರಂತವರು ಎಲ್ಲಾ ಹೋರಾಟಗಾರರಿಗೆ ಸ್ಫೂರ್ತಿದಾಯಕ ನಾಯಕರು!!

Related image

ಬ್ರಿಟಿಷರು 1947ರಲ್ಲಿ ಭಾರತದಿಂದ ತೊಲಗಲು ನೇತಾಜಿ ಸುಭಾಷ್ ಚಂದ್ರ ಬೋಸ್ ರವರ ಐಎನ್‍ಎ ಕೂಡಾ ಕಾರಣವಾಗಿತ್ತಲ್ಲದೆ ಇದಕ್ಕೆ ಹಲವಾರು ಲಕ್ಷಾಂತರ ಜನರು ಪ್ರಾಣತ್ಯಾಗ ಮಾಡಿದ್ದಾರೆ!! ಇಷೆಲ್ಲಾ ಕಷ್ಟ ಪಟ್ಟು ಭಾರತವನ್ನು ಸ್ವತಂತ್ರ ರಾಷ್ಟ್ರವನ್ನಾಗಿ ಮಾಡಿದರು ಕೂಡಾ ಅದರ ಕ್ರೆಡಿಟ್ ಎಲ್ಲಾ ಮಹತ್ಮಾ ಗಾಂಧಿಗೆ ಸಲ್ಲುತ್ತದೆ ಎಂದರೆ ಅವರು ಯಾವ ರೀತಿ ಭಾರತದ ಜನರಿಗೆ ಚಳ್ಳೆ ಹಣ್ಣು ತಿನ್ನಿಸಿರಬಹುದು ಎಂದು ಯೋಚಿಸಿ!!

ಭಾರತವನ್ನು ಸ್ವತಂತ್ರ ರಾಷ್ಟ್ರವನ್ನಾಗಿ ಮಾಡಲು ಸುಭಾಸ್‍ಚಂದ್ರ ಭೋಸರು ಕೂಡಾ ಅಷ್ಟೇ ಕಷ್ಟ ಪಟ್ಟಿದ್ದರು!! ಬ್ರಿಟಿಷರೊಂದಿಗೆ ಒಮ್ಮೆ ವಿರೋಧ ಕಟ್ಟಿಕೊಳ್ಳುವುದು, ಮತ್ತೊಮ್ಮೆ ಅವರನ್ನೇ ಬೆಂಬಲಿಸುವುದು ಇವೆಲ್ಲವನ್ನೂ ಭೋಸ್ ಖಂಡಿಸುತ್ತಿದ್ದರು. ಗಾಂಧಿ ಮತ್ತು ನೆಹರೂ ಇದು ತಮ್ಮದೇ ಸಾಧನೆ ಎಂದು ಭಾಷಣ ಬಿಗಿದರು. ನೆಹರೂ ಅಂತು ಅದರ ಕ್ರೆಡಿಟ್ ತಾನೇ ಪಡೆದುಕೊಂಡು ದೇಶವನ್ನೇ ಆಳ್ವಿಕೆ ನಡೆಸಿದರು!! ಯಾರೋ ಕಷ್ಟ ಪಟ್ಟು ಈ ನೆಲಕ್ಕಾಗಿ ನೆತ್ತರು ಸುರಿಸಿದ್ದಕ್ಕೆ ಗಾಂಧಿಗೆ ರಾಷ್ಟ್ರಪಿತ ಅಂತಾ ಹೆಸರು ಸಿಗುವಂತಾಯಿತು!!

ಅದಲ್ಲದೆ ಒಂದು ಸಂದರ್ಶನದಲ್ಲಿ ಅಂಬೆಡ್ಕರ್ ರವರು ಕೂಡಾ ಮಹಾತ್ಮ ಗಾಂಧಿಯಿಂದ ನಮಗೆ ಸ್ವಾತಂತ್ರ್ಯ ದೊರಕಿಲ್ಲ ಅಂತಾ ರಹಸ್ಯವನ್ನು ಬಿಚ್ಚಿಟ್ಟಿದ್ದರು!! 1939ರಲ್ಲಿ ಎರಡನೇ ಜಾಗತಿಕ ಯುದ್ಧ ಆರಂಭವಾಯಿತು. ಈ ವೇಳೆ ಭೋಸ್ ಕಾಂಗ್ರೆಸ್ ಸೇರಿದ್ದರು. ಭೋಸ್ ನೇತೃತ್ವದಲ್ಲಿ ಹೋರಾಟ ನಡೆಸಲಾಯಿತು. ಇನ್ನಾರು ತಿಂಗಳಲ್ಲಿ ಬ್ರಿಟಿಷರು ಭಾರತವನ್ನು ಬಿಟ್ಟುಬಿಡುವುದಾಗಿ ಹೇಳಿದ್ದರು. ಆದರೆ ಈ ನಡುವೆ ಹೋರಾಟವನ್ನು ಮೃದುಗೊಳಿಸಲಾಯಿತು. ಇದನ್ನು ನೋಡಿದ ಭೋಸ್ ಗಾಂಧಿ ಮತ್ತು ನೆಹರೂನಲ್ಲಿ ಸ್ವಾತಂತ್ರ್ಯವನ್ನು ತೀವ್ರಗೊಳಿಸುವಂತೆ ಕೋರಿದರು. ಆದರೆ ಅವರೇನೂ ಮಾಡದೆ ಸುಮ್ಮನೆ ಕುಳಿತರು. ಸ್ವಾತಂತ್ರ್ಯ ಹೋರಾಟದ ಹೆಸರಲ್ಲಿ ತನ್ನ ಅಸ್ತಿತ್ವವನ್ನು ಜೀವಂತವಾಗಿ ಉಳಿಸಿಕೊಳ್ಳಲು ಯತ್ನಿಸುತ್ತಿದ್ದರೇ ಎಂಬ ಕುತೂಹಲವೂ ಹುಟ್ಟುತ್ತದೆ. ಭೋಸರು ಭಾರತದ ರಾಷ್ಟ್ರೀಯ ಸೇನೆಯನ್ನು ಕಟ್ಟಿದರು. ಗಾಂಧೀಜಿ 1942ರಲ್ಲಿ ಕ್ವಿಟ್ ಇಂಡಿಯಾ ಚಳುವಳಿಯನ್ನು ಆರಂಭಿಸಿದರು.. ಇದು 1939ನಡೆದ ಚಳುವಳಿಯಂತೆ ಇದೂ ಕೂಡಾ ತೀವ್ರವಾಗಿತ್ತು. ಆದರೆ ಕೆಲವು ತಿಂಗಳ ನಂತರ ಈ ಹೋರಾಟವನ್ನೂ ನಿಲ್ಲಿಸಲಾಯಿತು.

Related image

ಅಂಬೇಡ್ಕರ್ 1956ಲ್ಲಿ ಮೃತಪಡುವ ಎರಡು ತಿಂಗಳ ಮುಂಚೆ ಬ್ರಿಟಿಷ್ ಪ್ರಧಾನಿ ಕ್ಲೆಮೆಂಟ್ ಅಟ್ಲೀ ಜೊತೆ ಖಾಸಗಿ ಮಾತುಕತೆ ನಡೆಸಿದ್ದರು. ಅವರು 20 ವರ್ಷಗಳ ಕಾಲ ಮುಚ್ಚಿಟ್ಟಿದ್ದ ಕೆಲವೊಂದು ಪ್ರಮುಖವಾದ ಮಾಹಿತಿಗಳನ್ನು ಬಹಿರಂಗಪಡಿಸಿದ್ದರು. ಈ ಎಲ್ಲಾ ಮಾಹಿತಿಗಳು ಅಂಬೇಡ್ಕರ್‍ಗೆ ಅಚ್ಚರಿ ತರಲಿಲ್ಲ ಯಾಕೆಂದರೆ ಅವರಿಗೆ ಈ ವಿಷಯವನ್ನು ಮೊದಲೇ ಅರಿತಿದ್ದರು. ಬ್ರಿಟಿಷರು ಭಾರತವನ್ನು ತೊರೆಯಲು ಕಾರಣವೇನೆಂಬ ಎರಡು ವಿಷಯಗಳನ್ನು ಅಟ್ಲೀ ಅಂಬೇಡ್ಕರ್ಗೆ ತಿಳಿಸಿದ್ದರು. ಬ್ರಿಟಿಷ್ ಅಧಿಕಾರಿಗಳಿಗೆ ಭಾರತದಲ್ಲಿ ಆಡಳಿತನ ನಡೆಸುವ ಬಗ್ಗೆ ಕಾಳಜಿಯೇ ಇರಲಿಲ್ಲ. ಯಾಕೆಂದರೆ ಜಾಗತಿಕ ಯುದ್ಧ ಅವರನ್ನು ಹೈರಾಣಾಗಿಸಿತ್ತು. ಯುದ್ಧಕ್ಕಾಗಿ ಅವರು ಸಂಪೂರ್ಣವಾಗಿ ಭಾರತದ ಸೈನ್ಯವನ್ನೇ ನೆಚ್ಚಿಕೊಂಡಿದ್ದರು. ಭಾರತೀಯರನ್ನು ತನ್ನ ಸೈನ್ಯದಲ್ಲಿ ಬಳಸಿಕೊಂಡು ಬೇರೆ ಬೇರೆ ಕಡೆಗಳಿಗೆ ಯುದ್ಧಕ್ಕೆ ಕಳುಹಿಸುತ್ತಿದ್ದರು. ಸೈನಿಕರ ನಿಷ್ಠೆಯ ಮೇಲೆ ಇಡೀ ದೇಶದಲ್ಲಿ ಸಂಪೂರ್ಣ ಹಿಡಿತ ಹೊಂದಿದ್ದೇವೆಂದು ಬ್ರಿಟಿಷರು ಭಾವಿಸಿದ್ದರು. ಆದರೆ ಭಾರತೀಯ ಸೈನಿಕರು ಬ್ರಿಟಿಷರ ವಿರುದ್ಧ ಕೆಂಡವಾಗಿದ್ದು, ಒಟ್ಟಾಗಿದ್ದರು. ಸೂಕ್ತ ಸಂದರ್ಭ ನೋಡಿಕೊಂಡು ಬ್ರಿಟಿಷರ ವಿರುದ್ಧ ಸಿಡಿದೇಳಲು ಸಿದ್ಧವಾಗಿ ನಿಂತಿದ್ದರು.

ಇನ್ನೊಂದು ಕಡೆ ಸುಭಾಷ್ ಚಂದ್ರ ಬೋಸರ ಐಎನ್‍ಎ ಕೂಡಾ ಬ್ರಿಟಿಷರಿಗೆ ಇನ್ನಿಲ್ಲದ ಕಾಟ ಕೊಡುತ್ತಿತ್ತು. ಭಾರತೀಯ ಬ್ರಿಟಿಷ್ ಸೈನಿಕರು ದಂಗೆ ನಡೆಸಲು ಮುಂದಾಗಿದ್ದರು. ಬೋಸರ ಐಎನ್‍ಎ ಇವರಿಗೆ ಸ್ಫೂರ್ತಿಯನ್ನು ನೀಡಿತ್ತು. ಈ ಸೈನಿಕರು ಸಿಡಿದೇಳಲು ಸೂಕ್ತ ಸಮಯ, ಸಂದರ್ಭಕ್ಕಾಗಿ ಕಾಯುತ್ತಿದ್ದರು. ಇದರಿಂದ ಭಯಗೊಂಡಿದ್ದ ಬ್ರಿಟಿಷರು ಭಾರತವನ್ನು ತೊರೆಯಲು ನಿರ್ಧರಿಸಿದ್ದರು. ಇಂದು ಸ್ವಾತಂತ್ರ್ಯ ಅಂದಾಗ, ಗಾಂಧೀಜಿ, ನೆಹರೂ ಎಂದು ಹೇಳುತ್ತೇವೆ. ಆದರೆ ಬ್ರಿಟಿಷರು ಭಾರತವನ್ನು ಬಿಟ್ಟುಹೋಗುವಂತೆ ಮಾಡಿದ ನಿಜವಾದ ವ್ಯಕ್ತಿಗಳ ಬಗ್ಗೆ ಎಲ್ಲಿಯೂ ಪ್ರಸ್ತಾಪವಾಗುವುದಿಲ್ಲ!!

Image result for subhas chandra bose

ಭಾರತವನ್ನು ಬ್ರಿಟಿಷರ ಕೈಯಿಂದ ಸ್ವತಂತ್ರವನ್ನಾಗಿ ಮಾಡಬೇಕು ಎಂದು ಉದ್ಧೇಶಿಸಿದ ನಮ್ಮ ಭಾರತೀಯರು ತಮ್ಮ ಪ್ರಾಣಕ್ಕೂ ಹೆದರದೆ 1857ರಿಂದ 1947ರವರೆಗೆ ಸುಮಾರು 7,32,000 ಭಾರತೀಯರು ಬ್ರಿಟಿಷರೊಂದಿಗೆ ಹೋರಾಟ ಮಾಡಿ ಪ್ರಾಣತ್ಯಾಗ ಮಾಡಿದ್ದಾರೆ!! ಹಾಗಾದರೆ ಗಾಂಧಿ ಏನು ಮಾಡಿದ್ದಾರೆ ಅಂತಾ ಅವರಿಗೆ ರಾಷ್ಟ್ರಪಿತ ಎಂದು ಹೆಸರು ಪಡೆದಿದ್ದಾರೆ!! ನಿಜವಾಗಿಯೂ ಇಲ್ಲಿ ನಮ್ಮ ದೇಶವನ್ನು ಬ್ರಿಟಿಷರ ದಾಸ್ಯದಿಂದ ಬಿಡುಗಡೆ ಮಾಡಬೇಕು ಎಂದು ಪ್ರಾಣತ್ಯಾಗ ಮಾಡಿದವರನ್ನು ನಾವು ಎಂದಿಗೂ ಮರೆಯಬಾರದು!! ನಾವು ಇಂದು ಇಷ್ಟು ಸುಖವಾಗಿ ಜೀವನ ಮಾಡುತ್ತಿದ್ದೇವೆ ಎಂದರೆ ಅದಕ್ಕೆ ಕಾರಣ ದೇಶಕ್ಕಾಗಿ ಪ್ರಾಣ ತ್ಯಾಗಮಾಡಿದವರು!! ನೆಹರೂ ಗಾಂಧಿ ಈ ದೇಶಕ್ಕಾಗಿ ಏನೂ ಮಾಡಿಲ್ಲ ಬರೀ ಅಧಿಕಾರದ ಆಸೆಗಾಗಿ ಎಂಬುವುದನ್ನು ಮರೆಯಬಾರದು!!

ಪವಿತ್ರ

Tags

Related Articles

FOR DAILY ALERTS
 
FOR DAILY ALERTS
 
Close