ಪ್ರಚಲಿತ

ಜಗತ್ತಿನ ಅತಿ ಎತ್ತರದ ಪ್ರತಿಮೆಯನ್ನು ನೋಡುವ ಮನಸ್ಸಿದೆಯೆ? ಹಾಗಾದರೆ ಇಂದಿನಿಂದಲೆ ನಿಮ್ಮ ಪ್ರಯಾಣದ ಯೋಜನೆಗಳನ್ನು ಮಾಡಿಕೊಳ್ಳಿ ಮತ್ತು ಸರ್ದಾರರನ್ನು ಕಣ್ಮನದಲ್ಲಿ ತುಂಬಿಕೊಳ್ಳಿ

 

ಜಗತ್ತಿನ ಅತಿ ಎತ್ತರದ “ಏಕತಾ ಪ್ರತಿಮೆ” ಇಂದಿನಿಂದ ನಾಗರಿಕರ ವೀಕ್ಷಣೆಗೆ ತೆರಯಲ್ಪಟ್ಟಿದೆ. ನಿಮಗೆ ಪಟೇಲರ ಪ್ರತಿಮೆಯನ್ನು ಕಣ್ಣಾರೆ ನೋಡುವ ಮನಸ್ಸಿದ್ದರೆ ನೀವು ‘ಸ್ಟ್ಯಾಚ್ಯೂ ಆಫ್ ಯುನಿಟಿ’ ವೆಬ್ಸೈಟ್ ಗೆ ಭೇಟಿ ನೀಡಿ ಆನ್ಲೈನ್ ಮುಖಾಂತರ ನಿಮ್ಮ ಟಿಕೆಟ್ ಗಳನ್ನು ಬುಕ್ ಮಾಡಬಹುದು. ಅಥವಾ ಅಲ್ಲಿ ಹೋದ ಮೇಲೆ ಸ್ಥಳದಲ್ಲೆ ಟಿಕೇಟ್ ಖರೀದಿಸಬಹುದು.

ಒಂದು ಟಿಕೇಟಿನ ಬೆಲೆ -1500 ರೂ. ಪ್ರತಿ ವ್ಯಕ್ತಿ

ಪ್ರತಿಮೆಯ ಅತ್ಯುತ್ತಮ ನೋಟವು 400 ಅಡಿ ಎತ್ತರದಲ್ಲಿರುವ ವೀಕ್ಷಕ ಡೆಕ್ ನಿಂದ ಕಾಣಸಿಗುತ್ತದೆ. ಅಲ್ಲಿಗೆ ತಲುಪಲು ಟಿಕೇಟ್ ದರ-350 ರೂ.

ಈ ಮೊತ್ತದಲ್ಲಿ ಅಬ್ಸರ್ವೇಶನ್ ಡೆಕ್ ವೀಕ್ಷಣೆ, ಹೂವಿನ ಕಣಿವೆ, ಸ್ಮಾರಕ, ಮ್ಯೂಸಿಯಂ ಮತ್ತು ಆಡಿಯೊ ವಿಷುಯಲ್ ಗ್ಯಾಲರಿ ಮತ್ತು ಬಸ್ ಸೇವೆ ಸೇರಿವೆ. ಉನ್ನತ ವೇಗದ ಎಲಿವೇಟರ್ ಮೂಲಕ ಅಬ್ಸರ್ವೇಶನ್ ಡೆಕ್ ಅನ್ನು ತಲುಪಬಹುದು. ಈ ಡೆಕ್ ನಿಂದ ನೀವು ಬೆಟ್ಟಗಳಿಂದ ಸುತ್ತುವರಿದಿರುವ ಸಂಪೂರ್ಣ ನರ್ಮದಾ ಕಣಿವೆಯ ಸುಂದರ ನೋಟವನ್ನು ವೀಕ್ಷಿಸಬಹುದು ಮತ್ತು ಸರ್ದಾರ್ ಸರೋವರ ಅಣೆಕಟ್ಟಿನ ಸೌಂದರ್ಯವನ್ನು ಆಸ್ವಾದಿಸಬಹುದು.

ಒಂದು ವೇಳೆ ನಿಮಗೆ ಅಬ್ಸರ್ವೇಶನ್ ಡೆಕ್ ವೀಕ್ಷಣೆ ಬೇಡವೆಂದಾದರೆ ಕೇವಲ ಹೂವಿನ ಕಣಿವೆ, ಮ್ಯೂಸಿಯಂ ಗ್ಯಾಲರಿಗೆ ನಿಯಮಿತ ಪ್ರವೇಶದ ಟಿಕೇಟ್ ಪಡೆದು ನೋಡಿಕೊಂಡು ಬರಬಹುದು. ಇದರ ಬೆಲೆ ಪ್ರತಿ ವ್ಯಕ್ತಿಗೆ ಕೇವಲ 120 ರೂ.ಗಳು ಮತ್ತು 3-15 ವರ್ಷದವರೆಗಿನ ಮಕ್ಕಳಿಗೆ 60 ರೂ.ಗಳು. ಮೂರಕ್ಕಿಂತ ಸಣ್ಣ ಪ್ರಾಯದ ಮಕ್ಕಳಿಗೆ ಪ್ರವೇಶ ಉಚಿತ.

ಬೆಳಿಗ್ಗೆ 9 ರಿಂದ ಸಾಯಂಕಾಲ 6 ರವರೆಗೆ ವೀಕ್ಷಣೆ ಲಭ್ಯ. ಬೋಟ್ ಸವಾರಿಗಳು ಶೀಘ್ರದಲ್ಲೇ ಪ್ರಾರಂಭಗೊಳ್ಳಲಿವೆ. ಪ್ರತಿದಿನ ಸಂಜೆ 30 ನಿಮಿಷದ ಲೇಸರ್ ಪ್ರದರ್ಶನಗಳನ್ನು ಆನಂದಿಸಬಹುದಾಗಿದೆ. ಸಂಕೀರ್ಣ ಒಳಗೆ ತ್ರೀ ಸ್ಟಾರ್ ಹೋಟೆಲ್ ವಸತಿ ಸೌಲಭ್ಯವೂ ಇದೆ. ಇನ್ನು ರಜಾದಿನಗಳಲ್ಲಿ ಎಲ್ಲಿ ಹೋಗುವುದು ಎನ್ನುವ ತಲೆ ಬಿಸಿ ಬೇಡ. ನೇರವಾಗಿ ಏಕತಾ ಪ್ರತಿಮೆಯನ್ನು ನೋಡಲು ಹೋಗಬಹುದು. ಭವ್ಯ ಭಾರತದ ನೈಜ ಇತಿಹಾಸವನ್ನು ನಮ್ಮ ಮಕ್ಕಳಿಗೂ ತಿಳಿಸಬಹುದು.

–ಶಾರ್ವರಿ

Tags

Related Articles

FOR DAILY ALERTS
 
FOR DAILY ALERTS
 
Close