ಪ್ರಚಲಿತ

ರಾಹುಲ್ ಗಾಂಧಿಯ ಮೂತ್ರ ನಿಮಗೆ ರುಚಿ ಇದ್ದರೆ ನೀವೇ ಕುಡಿಯಿರಿ, ನನ್ನನ್ನು ಕುಡಿಯಲು ಹೇಳಬೇಡಿಯೆಂದಿದ್ದರಂತೆ ಈ ಆಫೀಸರ್.! ಬಯಲಾಯಿತು ನಕಲಿ ಎನ್ ಕೌಂಟರ್ ನ ಅಸಲಿ ಸತ್ಯ.!

ನರೇಂದ್ರ ಮೋದಿ. ಈಗ ಭಾರತದ ಪ್ರಧಾನ ಮಂತ್ರಿ. ಭಾರತವನ್ನು ಜಗತ್ತೇ ಹಿಂತಿರುಗಿ ನೋಡವಂತೆ ಮಾಡಿರುವ ಅಪರೂಪದ ಪ್ರಧಾನಮಂತ್ರಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಪ್ರಧಾನ ಮಂತ್ರಿ. ಮೋದಿಯವರು ಈ ಹಿಂದೆ ಗುಜರಾತ್ ಮುಖ್ಯಮಂತ್ರಿಯಾಗಿದ್ದವರು. ಕಾಂಗ್ರೆಸ್ ನಾಯಕರಿಗೆ ಮೋದಿ ಹಾಗೂ ಅಮಿತ್ ಶಾ ಮೇಲಿರುವ ಸಿಟ್ಟು ಇಂದು ನಿನ್ನೆಯದಲ್ಲ. ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗಲೂ ಮೋದಿಯವರನ್ನು ಕೆಳಗಿಳಿಸಲು ಶತಪ್ರಯತ್ನ ಮಾಡಿದ್ದರು. ಇದರ ಮತ್ತೊಂದು ಸತ್ಯ ಇದೀಗ ಹೊರಬಿದ್ದಿದೆ.

ಗೃಹ ಸಚಿವಾಲಯದ ಇಲಾಖಾ ಕಾರ್ಯದರ್ಶಿಯಾಗಿರುವ ಆರ್.ವಿ.ಎಸ್. ಮಣಿಯವರು ಇತ್ತೀಚೆಗೆ ವೀಡಿಯೋ ಒಂದನ್ನು ರಿಲೀಸ್ ಮಾಡುತ್ತಾರೆ. ಈ ವೀಡಿಯೋದಲ್ಲಿ ಕಾಂಗ್ರೆಸ್ ನಾಯಕರು ಮೋದಿಯವರನ್ನು ಹೆಣೆಯಲು ರೂಪಿಸಿರುವ ತಂತ್ರಗಳ ಬಗ್ಗೆ ವಿವರವಾಗಿ ಹೇಳಿದ್ದಾರೆ. ಅಂದು ಗುಜರಾತಿನಲ್ಲಿ ಇಶ್ರತ್ ಜಹಾನ್ ಎಂಬಾಕೆಯ ಮೇಲೆ ಪೊಲೀಸರು ಎನ್ ಕೌಂಟರ್ ನಡೆಸಿದ್ದರು. ಈಕೆ ಉಗ್ರವಾದದ ಕೃತ್ಯವನ್ನು ನಡೆಸುತ್ತಿದ್ದಳು ಎಂಬ ಕಾರಣಕ್ಕೆ ಈಕೆಯ ಮೇಲೆ ಎನ್ ಕೌಂಟರ್ ಮಾಡಲಾಗಿತ್ತು.

ಆದರೆ ಕಾಂಗ್ರೆಸ್ ಮಾತ್ರ “ಇದು ನಕಲಿ ಎನ್ ಕೌಂಟರ್. ಇಶ್ರತ್ ಜಹಾನ್ ಓರ್ವ ಅಮಾಯಕಿ. ಆಕೆಯನ್ನು ನಿರಾಧಾರವಾಗಿ ಕೊಂದುಬಿಟ್ಟಿದ್ದಾರೆ” ಎಂದು ಆರೋಪಿಸಿತ್ತು. ಮಾತ್ರವಲ್ಲದೆ ಮೋದಿ ಹಾಗೂ ಅಮಿತ್ ಶಾರನ್ನು ರಾಜೀನಾಮೆ ನೀಡುವಂತೆ ಆಗ್ರಹಿಸಿ ವ್ಯಾಪಕ ಪ್ರತಿಭಟನೆಯನ್ನು ನಡೆಸಿತ್ತು. ನಂತರ ಸ್ವತಃ ನ್ಯಾಯಾಲಯವೇ ಈ ಬಗ್ಗೆ ತೀರ್ಪು ನೀಡಿ ಮೋದಿ ಹಾಗೂ ಅಮಿತ್ ಶಾ ಜೋಡಿಯನ್ನು ಆರೋಪಮುಕ್ತರನ್ನಾಗಿ ಮಾಡಿತ್ತು.

ಇದೀಗ ಆರ್.ವಿ.ಎಸ್. ಮಣಿಯವರು ನೀಡಿರುವ ಹೇಳಿಕೆ ವ್ಯಾಪಕ ಚರ್ಚೆಗೆ ಕಾರಣವಾಗಿದೆ. ಹಾಗೂ ಕಾಂಗ್ರೆಸ್ಸಿನ ಮತ್ತೊಂದು ಮುಖವನ್ನು ಪರಿಚಯಿಸಿಯಿದೆ. ಅಂದು ಗೃಹ ಸಚಿವಾಲಯದ ಇಲಾಖಾ ಕಾರ್ಯದರ್ಶಿಯಾಗಿದ್ದ ಆರ್.ವಿ.ಎಸ್. ಮಣಿಯವರ ಬಳಿ ಬಂದಿದ್ದ ಕಮಲನಾಥ್ ಎಂಬ ಕಾಂಗ್ರೆಸ್ ನಾಯಕ ಮೋದಿ ಮೇಲೆ ಆರೋಪ ಮಾಡುವಂತೆ ಒತ್ತಡ ಹೇರಿದ್ದರು. “ಮೋದಿಯವರು ಇಶ್ರತ್ ಜಹಾನ್ ಎನ್ ಕೌಂಟರ್ ನಡೆಸಿದ್ದು ಅಪರಾಧ ಎನ್ನುವ ಹೇಳಿಕೆ ನೀಡಿ, ಈ ಬಗೆಗಿನ ತನಿಖೆಯನ್ನು ಧಿಕ್ಕು ತಪ್ಪಿಸಿ ಮೋದಿ ರಾಜೀನಾಮೆ ನೀಡುವಂತೆ ಮಾಡಿ. ಇಶ್ರತ್ ಜಹಾನ್ ಅಮಾಯಕಿ ಎಂದು ಬಿಂಬಿಸಿ” ಎಂದು ಮನವಿ ಮಾಡಿದ್ದರು.

Related image

ಆದರೆ ಇದಕ್ಕೆ ಒಪ್ಪದಿದ್ದ ನಿಷ್ಟಾವಂತ ಅಧಿಕಾರಿ ಆರ್.ವಿ.ಎಸ್. ಮಣಿ ಒಲ್ಲೆ ಎನ್ನುತ್ತಾರೆ. ಈ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕ ಕಮಲನಾಥ್ ಮಣಿಯವರ ಬಳಿ “ಅನೇಕ ಜನರು ಈ ಕೇಸಿನಲ್ಲಿ ಮೋದಿಯವರನ್ನು ಹೆಣೆಯಬೇಕು ಎಂದುಕೊಂಡಿದ್ದಾರೆ. ಈ ಕಾರಣಕ್ಕಾಗಿ ಅವರು ರಾಹುಲ್ ಗಾಂಧಿಯ ಮೂತ್ರ ಕುಡಿಯುಲೂ ಸಿದ್ಧರಾಗಿದ್ದಾರೆ. ಹೀಗಿರುವಾಗ ಇಷ್ಟು ಸಣ್ಣ ಕೆಲಸ ನಿಮಗ್ಯಾಕೆ ಆಗೋದಿಲ್ಲ. ಮೋದಿಯನ್ನು ತಗಲಾಕಿ ನೀವೂ ಲಾಭ ಪಡೆಯಿರಿ” ಎಂದು ಹೇಳುತ್ತಾರೆ. ಈ ವೇಳೆ ಆರ್.ವಿ.ಎಸ್. ಮಣಿಯವರು ನೀಡಿರುವ ಹೇಳಿಕೆ ನಿಜವಾಗಿಯೂ ಅವರ ಸತ್ಯದ ಮುಖವನ್ನು ಪರಿಚಯಿಸುತ್ತದೆ. “ನಿಮಗೆ ರಾಹುಲ್ ಗಾಂಧಿಯ ಮೂತ್ರ ರುಚಿಯಾಗಿದ್ದರೆ ನೀವು ಕುಡಿಯಿರಿ. ಆದರೆ ನಾನು ಅಂತವರ ಮೂತ್ರ ಕುಡಿಯಲು ಹೋಗೋದಿಲ್ಲ. ನಾನು ಸತ್ಯದ ಪರವಾಗಿದ್ದೇನೆ. ಸತ್ಯದ ಪರವಾಗಿಯೇ ನಿಲ್ಲುತ್ತೇನೆ” ಎಂದು ಖಡಕ್ ಆಗಿ ಹೇಳಿದ್ದರು.

ಈ ಮಾತನ್ನು ಆರ್.ವಿ.ಎಸ್. ಮಣಿಯವರು ಅವರೇ ಬರೆದಿದ್ದ “ಹಿಂದೂ ಟೆರರ್” ಎಂಬ ಪುಸ್ತಕದಲ್ಲೂ ಹೇಳಿದ್ದರು. ಕಾಂಗ್ರೆಸ್ ನಾಯಕ ಹಾಗೂ ಅಂದಿನ ಯುಪಿಎ ಸರ್ಕಾರದ ಮಂತ್ರಿಯಾಗಿದ್ದ ಪಿ.ಚಿದಂಬರಂ ಇಶ್ರತ್ ಜಹಾನ್ ಎನ್ ಕೌಂಟರ್ ಗೆ ಹಿಂದೂ ಟೆರರ್ ಎಂಬ ಪದಬಳಕೆ ಮಾಡಿದ್ದರು. ಹೀಗಾಗಿ ಆರ್.ವಿ.ಎಸ್. ಮಣಿಯವರು ಬರೆದಿರುವ ಹಿಂದೂ ಟೆರರ್ ಪುಸ್ತಕದಲ್ಲಿ ಕಾಂಗ್ರೆಸ್ ಸರ್ಕಾರ ಮೋದಿಯವರನ್ನು ಹೆಣೆಯಲು ಯಾವೆಲ್ಲಾ ತಂತ್ರಗಳನ್ನು ಮಾಡಿದ್ದವು ಎಂಬುವುದನ್ನು ಬಿಡಿಬಿಡಿಯಾಗಿ ಹೇಳಿದ್ದರು.

ಕಾಂಗ್ರೆಸ್ ನಾಯಕರು ಸುಳ್ಳಿನ ಸರಮಾಲೆ ಕಟ್ಟಿ ಉತ್ತಮ ನಾಯಕನನ್ನು ಮಟ್ಟಹಾಕಲು ಯಾವ ತಂತ್ರವನ್ನು ನಡೆಸಲು ಸಿದ್ಧರಿದ್ದಾರೆ. ಹಾಗೂ ಇವರು ರಾಹುಲ್ ಗಾಂಧಿ ಮಾತು ಕೇಳಲು ರಾಹುಲ್ ಗಾಂಧಿಯ ಮೂತ್ರ ಕುಡಿಯಲೂ ಸಿದ್ಧರಿದ್ದಾರೆ ಎಂಬುವುದು ಮತ್ತೊಮ್ಮೆ ಸಾಭೀತಾಗಿದೆ.

-ಏಕಲವ್ಯ

Tags

Related Articles

FOR DAILY ALERTS
 
FOR DAILY ALERTS
 
Close