ಅಂಕಣ

ಏನಿದು ಅಚ್ಚರಿ!! ನಾಸಾ ಸಾಧನೆ ಮಾಡುವ ಮೊದಲೇ ಮಂಗಳ ಗ್ರಹದಲ್ಲಿ ನೀರಿದೆ ಎಂದು ಕಂಡುಹಿಡಿದಿದ್ದರು ಭಾರತೀಯರು!!

ಭಾರತ ಎಂದರೆ ಅದೊಂದು ಬರೀ ದೇಶವಲ್ಲ, ಇದು ಸಂಸ್ಕೃತಿಯ ತವರೂರು, ವಿಭಿನ್ನತೆಯಲ್ಲಿ ಏಕತೆ ಎತ್ತಿ ತೋರಿಸುವ ಮಹಾನ್ ತಪೋ ಭೂಮಿ… ಇಂತಹ ಈ ಪುಣ್ಯ ಭೂಮಿಯಲ್ಲಿ ಅದೆಷ್ಟೋ ಸಾವಿರಾರು ವರ್ಷಗಳ ಹಿಂದೆಯೇ ಅನೇಕ ಆವಿಷ್ಕಾರಗಳನ್ನು ಮಾಡಿದ್ದಾರೆ. ಆದರೆ ನಾವು ಪಾಶ್ಚಿಮಾತ್ಯ ರಾಷ್ಟ್ರಗಳ ಪ್ರಭಾವದಲ್ಲಿದ್ದೇವೆ!! ಪಾಶ್ಚಿಮಾತ್ಯ ರಾಷ್ಟ್ರಗಳು ಹೊಸ ಆವಿಷ್ಕಾರವನ್ನು ಮಾಡಿದಾಗ ನಾವೆಲ್ಲರೂ ಖುಷಿ ಪಡುತ್ತೇವೆ.. ಏನೋ ಹೊಸ ಆವಿಷ್ಕಾರವನ್ನು ಮಾಡಿದ್ದಾರಂತ ಕಣ್ಣು ಬಾಯಿ ಬಿಡುತ್ತೇವೆ!! ಆದರೆ ಅದನ್ನು ಎಷ್ಟೋ ಸಾವಿರಾರು ವರ್ಷಗಳ ಮುಂಚಿತವಾಗಿ ಭಾರತೀಯರೇ ಅದನ್ನೆಲ್ಲಾ ಕಂಡುಹಿಡಿದಿದ್ದಾರೆ ಅಂತಾ ನಾವು ಮರೆತುಬಿಟ್ಟಿದ್ದೇವೆ!! ಭಾರತೀಯರ ದುರಾದೃಷ್ಟ ಎಂದರೆ ಪಾಶ್ಚಿಮಾತ್ಯರು ಆವಿಷ್ಕಾರ ಮಾಡುವ ಮೊದಲೇ ಅದನ್ನು ಭಾರತೀಯರು ಆವಿಷ್ಕಾರ ಮಾಡಿದ್ದರು ಎಂದು ನಮಗೇ ತಿಳಿದಿಲ್ಲ.

ಇಲ್ಲಿ ಅದೆಷ್ಟೋ ಸಂತರು ತಪಗೈದು ಪುಣ್ಯಭೂಮಿಯಾಗಿ ಪರಿವರ್ತಿಸಿದ್ದಾರೆ!! ಈ ಭೂಮಿಯ ಬಗ್ಗೆ ವಿವರಿಸಲು ಸಾಧ್ಯವೇ ಇಲ್ಲ…!! ಆದರೆ ಯಾವಾಗ ಈ ಭೂಮಿಗೆ ಪಾಶ್ಚಿಮಾತ್ಯರು ಕಾಲಿಟ್ಟರೋ ಇಲ್ಲಿರುವ ಇಡೀ ಸಂಪತ್ತನ್ನು ದೋಚಿ ತಮ್ಮದೆಂದರು… ಶಿಕ್ಷಣ ಕ್ಷೇತ್ರದಲ್ಲೇ ಅಗಾಧ ಪಾಂಡಿತ್ಯವನ್ನು ಹೊಂದಿದ್ದ ಭಾರತವನ್ನು ಅನಾಗರಿಕರು ಎಂಬುವುದನ್ನು ಪಾಶ್ವಿಮಾತ್ಯರು ನಂಬಿಸಿಬಿಟ್ಟರು!! ಭಾರತ ವಿಶ್ವಗುರುವಿನ ಸ್ಥಾನದಲ್ಲಿತ್ತು. ಸನಾತನ ಸಂಸ್ಕೃತಿ, ಇಲ್ಲಿನ ಸಂಪತ್ತು, ಪ್ರಾವಿಣ್ಯತೆ, ಕಂಡು ವಿದೇಶಿಯರು ಇಲ್ಲಿಗೆ ದಾಳಿ ಇಟ್ಟು ಭಾರತೀಯರನ್ನು ಬರಿಗೈ ಮಾಡಿಸಿ ಬಿಟ್ಟರು!!

ಇಡೀ ಜಗತ್ತಿನ ಮುಂದೆ ಭಾರತಕ್ಕೆ ಏನೂ ಗೊತ್ತಿಲ್ಲ ಎಂದು ಸಾರಿದರು.. ಇಂದು ಎಲ್ಲಾ ಕಂಡುಹಿಡಿದದ್ದು ನಾವು ಎಂದು ಬೊಬ್ಬಿಡುವವರು ಒಂದು ಬಾರಿ ಯೋಚಿಸಿ… ಜಗತ್ತು ಕಣ್ಣು ತೆರೆಯುವ ಮುಂಚೆಯೇ ಭಾರತದಲ್ಲಿ ಅದೆಲ್ಲಾ ನಡೆದುಹೋಗಿತ್ತು!! ಭಾರತದಲ್ಲಿದ್ದ ಶಿಕ್ಷಣವನ್ನು ಕೊಳ್ಳೆ ಹೊಡೆದ ವಿದೇಶಿಯವರು ಅದು ಕಂಡುಹಿಡಿದದ್ದು ನಾವು ಇದನ್ನು ಕಂಡುಹಿಡಿದದ್ದು ನಾವು ಎಂದು ಸ್ಕೋಪ್ ತೆಗೆದುಕೊಳ್ಳುತ್ತಿದ್ದಾರೆ ಅಷ್ಟೆ!! ಆದರೆ ಎಲ್ಲಾ ಆವಿಷ್ಕಾರದ ಹಿಂದೆಯೂ ಭಾರತೀಯನಿದ್ದಾನೆ ಎಂಬುವುದನ್ನು ಮರೆಯಬೇಡಿ… ಯಾರೋ ಆವಿಷ್ಕಾರ ಮಾಡಿದ್ದನ್ನು ತಮ್ಮ ಪೇಟೆಂಟ್ ಹಾಕಿಕೊಂಡು ತಿರುಗಾಡಿದರೆ ಜಗತ್ತಿಗೆ ಒಂದಲ್ಲ ಒಂದು ದಿನ ಸತ್ಯದ ಅರಿವಾಗಿಯೇ ಆಗುತ್ತದೆ!!

ಅದಲ್ಲದೆ ಪ್ರತೀಯೊಂದು ವಿಚಾರವನ್ನು ಗಮನಿಸಿದರು ಕೂಡಾ ಸಾವಿರಾರು ವರ್ಷಗಳ ಹಿಂದೆಯೇ ಭಾರತೀಯರೇ ಆವಿಷ್ಕಾರವನ್ನು ಮಾಡಿರುವಂತಹದ್ದು.. ಆದರೆ ಭಾರತೀಯರು ಮಾತ್ರ ತಾವು ಆವಿಷ್ಕಾರವನ್ನು ಮಾಡಿದರೂ ಕೂಡಾ ಯಾವುದೇ ಪೇಟೆಂಟ್ ಅನ್ನು ಮಾಡಿರುವುದಿಲ್ಲ!! ಆದರೆ ಭಾರತಕ್ಕೆ ಯಾವಾಗ ವಿದೇಶಿಯರ ದಾಳಿಯಾಗುತ್ತೋ ಆ ಸಮಯದಲ್ಲಿ ತಾವು ಮಾಡಿದಂತಹ ಎಲ್ಲಾ ಆವಿಷ್ಕಾರಗಳನ್ನು ಭಾರತೀಯರಿಂದ ಕಸಿದುಕೊಂಡು ನಂತರ ತಾವು ಆವಿಷ್ಕಾರ ಮಾಡಿದ್ದು ಅಂತಾ ಪೇಟೆಂಟ್ ಹಾಕಿಕೊಂಡು ಪ್ರಪಂಚಕ್ಕೆ ತೋರಿಸಿಕೊಡುತ್ತಾರೆ!! ಆದರೆ ಪ್ರತೀ ಆವಿಷ್ಕಾರದ ಹಿಂದೆಯೂ ಭಾರತೀಯ ಶ್ರಮ ಇದ್ದೇ ಇದೆ!!

ಪಾಶ್ಚಾತ್ಯ ರಾಷ್ಟ್ರಗಳು ಭಾರತದ ಸಂಪತ್ತನ್ನು ಲೂಟಿ ಮಾಡಿ ಭಾರತದಿಂದ ಜ್ಞಾನವನ್ನು ಅವರೆಡೆಳೆದು ಸೆಳೆದುಕೊಂಡು ತಮ್ಮದೆಂದರು!! ನಮ್ಮ ಭಾರತೀಯ ಋಷಿಗಳು ಅದೆಷ್ಟೋ ಸಾವಿರಾರು ವರ್ಷಗಳ ಹಿಂದೆಯೇ ಇಂತಹ ಆವಿಷ್ಕಾರಗಳನ್ನು ಮಾಡಿದ್ದಾರೆ.. ವಿದ್ಯುತ್ ಕಂಡುಹಿಡಿದದ್ದು ಅಗಸ್ತ್ಯ ಮುನಿಗಳು ಆದರೆ ಯಾರೂ ಇವರ ಹೆಸರು ಹೇಳದೆ ಬೆಂಜಮಿನ್ ಪ್ರಾಂಕ್ಲಿನ್ ಹೆಸರನ್ನು ಹೇಳುತ್ತಾರೆ!! ಅದಲ್ಲದೆ ವಿಮಾನ ಕಂಡುಹಿಡಿದದ್ದು ನಮ್ಮ ಭಾರತೀಯ ಶಿವಕರ್ ಬಾಪೂಜಿ ತಲ್ಪಾಡೆ ಆದರೆ ಇತಿಹಾಸ ಹೇಳುವುದು ರೈಟ್ ಸಹೋದರರು ಅಂತಾ… ಗುರುತ್ವಾಕರ್ಷನಾ ಶಕ್ತಿ ಕೂಡಾ ನ್ಯೂಟನ್ ಕಂಡುಹಿಡಿದಿರುವುದಕ್ಕಿಂತ ಮುಂಚಿತವಾಗಿ ಭಾರತೀಯರೇ ಕಂಡುಹಿಡಿದಿದ್ದರು… ಹೀಗೆ ಎಲ್ಲಾ ಆವಿಷ್ಕಾರವನ್ನು ವಿದೇಶಿಗರು ಮಾಡಿದ್ದಾರೆ ಎಂದು ನಂಬಿದ್ದರೆ ಅದನ್ನು ಬಿಟ್ಟುಬಿಡಿ…

ಇಂದು ನಾನು ನಿಮ್ಮೊಂದಿಗೆ ಭಾರತ ಮಾಡಿದ ಮತ್ತೊಂದು ಅನ್ವೇಷಣೆಯನ್ನು ಹಂಚಿಕೊಳ್ಳುಬೇಕಾಗಿದೆ!! 2012 ರಲ್ಲಿ, ಅಮೆರಿಕದ ಉನ್ನತ ಬಾಹ್ಯಾಕಾಶ ಸಂಸ್ಥೆಯಾದ ನಾಸಾ (ನ್ಯಾಷನಲ್ ಏರೋನಾಟಿಕ್ಸ್ ಆಂಡ್ ಸ್ಪೇಸ್ ಅಡ್ಮಿನಿಸ್ಟ್ರೇಷನ್) ಮಾಚ್ರ್ನಲ್ಲಿ ಚಂದ್ರನಲ್ಲಿ ನೀರಿನ ಅಂಶ ಇರುವುದನ್ನು ದೃಢಪಡಿಸಿತ್ತು!! ಆದರೆ ಮಂಗಳ ಗ್ರಹದ ನೀರಿನ ಉಪಸ್ಥಿತಿಯು 1500 ವರ್ಷಗಳ ಮುಂಚೆಯೇ ನಮ್ಮ ಭಾರತೀಯ ಕಂಡುಹಿಡಿದಿದ್ದರು ಎಂದರೆ ನಂಬುತ್ತೀರಾ?! ನಂಬಲೇ ಬೇಕು… 2012ರಲ್ಲಿ ಮಂಗಳ ಗ್ರಹದಲ್ಲಿ ನೀರಿನ ತೊರೆ ಹರಿದಿದ್ದ ಸುಳಿವನ್ನು ಪತ್ತೆ ಹಚ್ಚಿದೆ. ಎಂಬ ಸುದ್ದಿ ಇಡೀ ಪ್ರಪಂಚದಾದ್ಯಂತ ಸುದ್ದಿ ಮಾಡಿತ್ತು!! ಆದರೆ ನಿಮಗೆ ಗೊತ್ತೆ ಈ ವಿಷಯವನ್ನು ಭಾರತದ ಉಜ್ಜಯನಿಯ ಖಗೋಳ, ಗಣಿತ ಶಾಸ್ತ್ರಜ್ಞ ಹಾಗೂ ಜೋತಿಷಿ ವರಾಹಮಿಹಿರ ಕಂಡುಹಿಡಿದಿದ್ದರು!!

ವರಾಹಮಿಹಿರ ಉಜ್ಜಯಿನಿಯಲ್ಲಿ ಜನಿಸಿದ್ದು ಇವರೊಬ್ಬ ಭಾರತೀಯ ಖಗೋಳ ಶಾಸ್ತ್ರಜ್ಞ, ಗಣಿತಶಾಸ್ತ್ರಜ್ಞ ಹಾಗೂ ಜ್ಯೊತಿಷಿ. ವರಾಹಮಿಹಿರನು ಅವಂತಿ ದೇಶದ ಮಾಲ್ವ ಎಂಬಲ್ಲಿ ಖಗೋಳಶಾಸ್ತ್ರಜ್ಞನಾದ ಆದಿತ್ಯದಾಸ ಹಾಗು ಸತ್ಯವತಿಯರ ಮಗನಾಗಿ ಜನಿಸಿದರು.. ನಂತರ ಕಪಿತ್ತಕ ಎಂಬಲ್ಲಿ ವಿದ್ಯಾಭ್ಯಾಸವನ್ನು ಪಡೆದು ಯಶೋವರ್ಮನ ಆಸ್ಥಾನದ ನವರತ್ನಗಳಲೊಬ್ಬರಾಗಿದ್ದರು!!

“ಪಂಚ ಸಿದ್ಧಾಂತಿಕ'”ಇದು ವರಾಹಮಿಹಿರ ರಚಿಸಿದ ಮುಖ್ಯ ಸಿದ್ಧಾಂತಗಳಲ್ಲೊಂದು. ಸುಮಾರು 1500 ವರ್ಷಕ್ಕೂ ಮುನ್ನವೇ ಮಂಗಳ ಗ್ರಹದಲ್ಲಿ ನೀರು, ಕಬ್ಬಿಣ ಇದೆ ಎಂದು ವರಹಮಿಹಿರ ತಿಳಿಸಿದ್ದರು!! 512ನೇ ಇಸವಿಯಲ್ಲಿ ಅಂದರೆ ತನ್ನ 13ನೇ ವಯಸ್ಸಿನಲ್ಲಿ ‘ಸೂರ್ಯಸಿದ್ಧಾಂತ’ ಬರೆದಿದ್ದಾರೆ. ಇದರಲ್ಲಿ ನಕ್ಷತ್ರ ಮಂಡಲ, ಸೂರ್ಯ ಗ್ರಹಣ ಮತ್ತು ಗ್ರಹಗಳ ಸ್ಥಾನಗಳ ಕುರಿತು ವಿವರಿಸಿದ್ದಾರೆ!! ಗಣಿತದ ತ್ರಿಕೋಣಮಿತಿ ನಿಯಮ ಹಾಗು ‘ಜ್ಯಾ’ ಮಾನದ ಸರಣಿಯನ್ನೂ ಆರಂಭಿಸಿದ್ದರು!!

ಇದಲ್ಲದೇ ವರಹಮಿಹಿರ ಷಟ್ ಪಂಚಾಂಗ, ಹೋರಾ-ಪಂಚ-ಹೋತ್ರೀಯ ಯೋಗಯಾತ್ರಾ, ಟಿಕನಿಯಾತ್ರಾ, ಬೃಹಜ್ಜಾತಕ, ವಾಹ ಪಟಲ ಮೊದಲಾದ ಕೃತಿಗಳನ್ನು ರಚಿಸಿದ್ದರು!! ಇವನ ಕಾಲದಲ್ಲಿ ಉಜ್ಜಯಿನಿ ವಿಶ್ವವಿದ್ಯಾಲಯದಲ್ಲಿ ಗಣಿತ ಸಂಶೋಧನೆಗಳು ಆರಂಭವಾಗಿದ್ದವು. ಇವರ ನಂತರ ಬಂದ ಆರ್ಯಭಟ ಇದನ್ನು ಮುಂದುವರಿಸಿ ಆಧುನಿಕ ಗಣಿತದ ರೂವಾರಿಯಾದರು!! ಹಾಗಾಗಿ ನಾಸಾ 2012ರಲ್ಲಿ ಮಂಗಳಗ್ರಹದಲ್ಲಿ ನೀರಿದೆ ಎಂಬ ಅಂಶವನ್ನು ಪತ್ತೆ ಹಚ್ಚುವ ಮೊದಲೇ 1500 ವರ್ಷಗಳ ಹಿಂದೆಯೇ ನಮ್ಮ ಭಾರತೀಯನಾದ ವರಹಮಿಹಿರ ಪತ್ತೆ ಹಚ್ಚಿದ್ದರು!!

ಹೀಗೆ ಭಾರತಕ್ಕೆ ಯಾವಾಗ ವಿದೇಶಿಯರ ದಾಳಿಯಾಗುತ್ತೋ ಆ ಸಮಯದಲ್ಲಿ ತಾವು ಮಾಡಿದಂತಹ ಎಲ್ಲಾ ಆವಿಷ್ಕಾರಗಳನ್ನು ಭಾರತೀಯರಿಂದ ಕಸಿದುಕೊಂಡು ನಂತರ ತಾವು ಆವಿಷ್ಕಾರ ಮಾಡಿದ್ದು ಅಂತಾ ಪೇಟೆಂಟ್ ಹಾಕಿಕೊಂಡು ಪ್ರಪಂಚಕ್ಕೆ ತೋರಿಸಿಕೊಡುತ್ತಾರೆ!! ಆದರೆ ಪ್ರತೀ ಆವಿಷ್ಕಾರದ ಹಿಂದೆಯೂ ಭಾರತೀಯ ಶ್ರಮ ಇದ್ದೇ ಇದೆ ಎಂಬುವುದನ್ನು ಮರೆಯಬಾರದು…

  • ಪವಿತ್ರ
Tags

Related Articles

FOR DAILY ALERTS
 
FOR DAILY ALERTS
 
Close