ಪ್ರಚಲಿತ

ನಿವೃತ್ತಿಯಾದ ಕೂಡಲೇ ಬಿಜೆಪಿ ಪಕ್ಷಕ್ಕೆ ಜೈ ಎಂದ ರಾಜ್ಯ ಸರ್ಕಾರದ ಕಾರ್ಯದರ್ಶಿ ರತ್ನಪ್ರಭಾ.! ಮೋದಿಯನ್ನೂ ಮೆಚ್ಚಿಸಿಕೊಂಡಿದ್ದರು ಈ ಮಹಿಳೆ.!

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರವಿರುವಾಗ ರಾಜ್ಯ ಸರ್ಕಾರದ ಕಾರ್ಯದರ್ಶಿಯಾಗಿದ್ದ ರತ್ನಪ್ರಭಾರವರು ಭಾರೀ ಸುದ್ಧಿಯಾಗಿದ್ದರು. ಕಾರಣ ಇಷ್ಟೇ. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ರತ್ನಪ್ರಭಾ ಕಾರ್ಯವೈಖರಿಯನ್ನು ಮುಕ್ತಕಂಠದಿಂದ ಹೊಗಳಿದ್ದರು. ಈ ವೇಳೆಗಾಗಲೇ ಹೂ ಈಸ್ ರತ್ನ ಪ್ರಭಾ ಎಂಬ ಮಾತುಗಳು ಕೇಳಿಬಂದಾಗಲೇ ದುಂಡನೆ ಕುಂಕುಮ ಇಟ್ಟು ಮಲ್ಲಿಗೆ ಮುಡಿದುಕೊಂಡಿದ್ದ ಸಾಮಾನ್ಯರಂತಿರುವ ಮಹಿಳೆಯ ಫೋಟೋ ಮಾಧ್ಯಮಗಳಲ್ಲಿ ಬಿತ್ತರವಾಗಿತ್ತು.

ಸರ್ಕಾರದ ಕಾರ್ಯಚಟುವಟಿಕೆಯಲ್ಲಿ ನಿಷ್ಟಾವಂತರಾಗಿ ಕಾರ್ಯನಿರ್ವಹಿಸಿ ನಿವೃತ್ತಿ ಹೊಂದಿದ್ದ ಇವರು ಇದೀಗ ಭಾರತೀಯ ಜನತಾ ಪಕ್ಷದ ಮೂಲಕ ತಮ್ಮ ರಾಜಕೀಯ ಜೀವನವನ್ನು ಆರಂಭಿಸಿದ್ದಾರೆ. ಕಳೆದ 6 ವರ್ಷಗಳಿಂದ ಕಾಂಗ್ರೆಸ್ ಸರ್ಕಾರದೊಂದಿಗೆ ಸರ್ಕಾರದ ಹುದ್ದೆಯೊಂದನ್ನು ನಿಭಾಯಿಸಿದ್ದರೂ ರತ್ನಪ್ರಭಾ ನಿವೃತ್ತಿಯ ನಂತರ ಭಾರತೀಯ ಜನತಾ ಪಕ್ಷವನ್ನು ಅಪ್ಪಿಕೊಂಡಿದ್ದಾರೆ.

ಇಂದು ಕಲಬುರ್ಗಿಯಲ್ಲಿ ನಡೆದ ಬೃಹತ್ ಸಮಾವೇಶದಲ್ಲಿ ರತ್ನಪ್ರಭಾರನ್ನು ಮಾಜಿ ಮುಖ್ಯಮಂತ್ರಿ ಹಾಗೂ ಭಾರತೀಯ ಜನತಾ ಪಕ್ಷದ ರಾಜ್ಯಾಧ್ಯಕ್ಷ ಯಡಿಯೂರಪ್ಪನವರು ಪಕ್ಷಕ್ಕೆ ಬರಮಾಡಿಕೊಂಡಿದ್ದಾರೆ. ಕಾಂಗ್ರೆಸ್ ಪಕ್ಷದಿಂದ ಬಂಡಾಯವೆದ್ದು ಬಿಜೆಪಿ ಪಕ್ಷಕ್ಕೆ ಸೇರಿದ್ದ ಮಾಜಿ ಶಾಸಕ ಉಮೇಶ್ ಜಾಧವ್ ರವರು ಇಂದು ಕಲಬುರ್ಗಿ ಲೋಕಸಭಾ ಕ್ಷೇತ್ರದಿಂದ ಲೋಕಸಭಾ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆಯ ವಿರುದ್ಧ ಸ್ಪರ್ಧಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಇಂದು ನಾಮಪತ್ರ ಸಲ್ಲಿಸಿದ್ದ ಉಮೇಶ್ ಜಾಧವ್ ಗೆ ಯಡಿಯೂರಪ್ಪ ಸಾಥ್ ನೀಡಿದ್ದರು. ಈ ವೇಳೆ ರತ್ನಪ್ರಭಾರವರನ್ನು ಪಕ್ಷಕ್ಕೆ ಸೇರ್ಪಡೆಗೊಳಿಸಿದ್ದಾರೆ.

ಈ ವೇಳೆ ಮಾತನಾಡಿದ ರತ್ನಪ್ರಭಾ ಪ್ರಧಾನಿ ಮೋದಿಯವರ ಪಾರದರ್ಶಕ ಆಡಳಿತ ರಾಷ್ಟ್ರಕ್ಕೆ ಹಿತವಾಗಿದೆ ಮಾತ್ರವಲ್ಲದೆ ಇದೇ ರೀತಿಯ ಆಡಳಿತ ಮುಂದುವರೆದರೆ ಭಾರತ ಮತ್ತಷ್ಟು ಸಧೃಢಗೊಳ್ಳುವುದರಲ್ಲಿ ಯಾವುದೇ ಅನುಮಾನವಿಲ್ಲ. ದೇಶದ ಸಮಗ್ರ ಅಭಿವೃದ್ಧಿ ಬಿಜೆಪಿಯಿಂದ ಮಾತ್ರ ಸಾಧ್ಯ. ಈ ಕಾರಣಕ್ಕಾಗಿ ನಾನು ಬಿಜೆಪಿಯನ್ನು ಸೇರಿದ್ದೇನೆ ಎಂದು ಹೇಳಿದ್ದಾರೆ.

-ಏಕಲವ್ಯ

Tags

Related Articles

FOR DAILY ALERTS
 
FOR DAILY ALERTS
 
Close