ಪ್ರಚಲಿತ

ರಾಮಮಂದಿರ ಜಟಾಪಟಿ! 2019ರ ಲೋಕಸಭಾ ಚುನಾವಣೆಯನ್ನು ಅಸ್ತ್ರವಾಗಿರಿಸುತ್ತಿರುವ ರಾಜಕೀಯ ನಾಯಕರು!

ಮಂದಿರ್ ಬನಾಯೇಂಗೇ ಎಂದು ಅದೆಷ್ಟೋ ವರ್ಷಗಳಿಂದ ಅಯೋಧ್ಯಾ ಶ್ರೀರಾಮಮಂದಿರ ಹೋರಾಟಗಾರರು ಹೇಳುತ್ತಲೇ ಇದ್ದಾರೆ. ಆದರೆ ರಾಮಭಕ್ತರು ಮಾತ್ರ ಇಂದೋ ನಾಳೆನೋ ಮಂದಿರ ಆಗಬಹುದು ಎಂಬ ನಿರೀಕ್ಷೆಯಲ್ಲಿಯೇ ಇದ್ದಾರೆ. ತನ್ನ ಜೀವಿತಾವಧಿಯಲ್ಲಿಯೇ ರಾಮಮಂದಿರ ನಿರ್ಮಾಣವಾಗಬೇಕೆಂದು ಜೀವನದುದ್ದಕ್ಕೂ ರಾಮಮಂದಿರಕ್ಕೆ ಹೋರಾಟ ನಡೆಸಿ ಅಸುನೀಗಿದವರು ವಿಶ್ವ ಹಿಂದೂ ಪರಿಷತ್ತಿನ ನಾಯಕರಾದ ಶ್ರೀ ಅಶೋಕ್ ಸಿಂಘಾಲ್ ಅವರು. ಅಂತೆಯೇ ಅನೇಕ ಮಂದಿಗೆ ತಮ್ಮ ಜೀವನದಲ್ಲಿ ಒಂದು ಬಾರಿಯಾದರೂ ರಾಮಮಂದಿರವನ್ನು ನೋಡಬೇಕೆಂಬ ತುಡಿತವಿದೆ. ಆದರೆ ರಾಜಕೀಯ ಕೆಸರೆರೆಚಾಟಗಳಿಂದ ಇಷ್ಟರವರೆಗೂ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಮಾಡಲು ಸಾಧ್ಯವಾಗಿಲ್ಲ.

ಮೋಕ್ಷ ಸಿಗುವ 7 ಪುಣ್ಯಸ್ಥಳಗಳಲ್ಲಿ ಶ್ರೀರಾಮ ಜನ್ಮಭೂಮಿ ಅಯೋಧ್ಯಾ ಮೊದಲಿನದು. ಸರಯೂ ನದಿ ತೀರದಲ್ಲಿರುವ ಅಯೋಧ್ಯಾ ಎಂಬ ಪುಣ್ಯ ಕ್ಷೇತ್ರ ಮಾನವ ಮಾಡಿರುವ ಎಲ್ಲಾ ಪಾಪಗಳನ್ನು ಪರಿಹರಿಸುತ್ತದೆ ಎಂಬ ನಂಬಿಕೆ ಇದೆ. ಆದರೆ ಇಂತಹಾ ಕ್ಷೇತ್ರವನ್ನು ಭಾರತದಲ್ಲಿರುವ ಕೋಟ್ಯಾಂತರ ಹಿಂದೂ ಜನಾಂಗದವರು ಹಾಗೂ ಶ್ರೀರಾಮಚಂದ್ರನ ಪರಮ ಭಕ್ತರು ದರ್ಶಿಸಲು ಸಾಧ್ಯವಾಗುತ್ತಿಲ್ಲ ಅನ್ನೋದೇ ಖೇದಕರ.

Related image

ವೈಭವದಿಂದ ಮೆರೆಯುತ್ತಿದ್ದ ಶ್ರೀರಾಮಚಂದ್ರನ ಜನ್ಮಭೂಮಿ ಅಯೋಧ್ಯಾ ಅಂದು ಬಾಬರ್ ಎಂಬ ಆಕ್ರಮಣಕಾರಿ ದೊರೆಯ ಕ್ರೌರ್ಯಕ್ಕೆ ತುತ್ತಾಗಿದ್ದು ನಂತರ ಅಲ್ಲಿದ್ದ ರಾಮಮಂದಿರವನ್ನು ಧ್ವಂಸಗೊಳಿಸಿ ಅದರ ಅವಶೇಶಗಳ ಮೇಲೆಯೇ ಮಸೀದಿ ನಿರ್ಮಿಸಿದ್ದು, ಈ ಮಸೀದಿಯನ್ನು ಲಕ್ಷ ಲಕ್ಷ ಹಿಂದೂಗಳು ಕೆಡವಿ ಹಾಕಿದ್ದು, ನಂತರ ಅದು ವಿವಾದಗ್ರಸ್ತ ಪ್ರದೇಶವಾಗಿಯೇ ಉಳಿದಿದ್ದು ಇದೆಲ್ಲಾ ಈಗ ಇತಿಹಾಸ. ಇದೀಗ ಸುಪ್ರೀಂ ಕೋರ್ಟ್‍ನಲ್ಲಿನಲ್ಲಿರುವ ಅಯೋಧ್ಯಾ ಶ್ರೀರಾಮ ಜನ್ಮಭೂಮಿಯ ವಿವಾದ ಪ್ರತಿ ಬಾರಿಯೂ ಚುನಾವಣಾ ಅಸ್ತ್ರವಾಗಿಯೇ ಇರುತ್ತೆ. ಅದರಲ್ಲೂ ಲೋಕಸಭಾ ಚುನಾವಣೆಯಲ್ಲಿ ಅದು ಪ್ರಮುಖ ಅಸ್ತ್ರವಾಗಿದ್ದುಬಿಡುತ್ತದೆ.

ಪ್ರತಿ ಬಾರಿಯ ಲೋಕಸಭಾ ಚುನಾವಣೆಯಲ್ಲಿ ರಾಮಮಂದಿರ ಅಜೆಂಡಾವನ್ನು ಇಟ್ಟುಕೊಂಡಿದ್ದ ಭಾರತೀಯ ಜನತಾ ಪಕ್ಷ ಕಳೆದ ಬಾರಿ ಮಾತ್ರ ಅಭಿವೃದ್ಧಿಯ ಮಂತ್ರವನ್ನು ಮಾತ್ರವೇ ಪಠಿಸಿತ್ತು. ರಾಮಮಂದಿರ ನಮ್ಮ ಜನ್ಮಸಿದ್ದ ಹಕ್ಕು, ಆಧರೆ ಅದನ್ನು ರಾಜಕೀಯಗೊಳಿಸುವುದಿಲ್ಲ ಎಂದು ಭಾರತೀಯ ಜನತಾ ಪಕ್ಷ ಹೇಳಿತ್ತು. ಅಂರೆಯೇ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರು ಅಧಿಕಾರ ಹಿಡಿದ ನಂತರ ಅಯೋಧ್ಯೆಯಲ್ಲೂ ಭಾರೀ ಬದಲಾವಣೆಯಾಗಿತ್ತು. ರಾಮಮಂದಿರಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದ ಅದೆಷ್ಟೋ ಮುಸ್ಲಿಂ ಸಂಘಟನೆಗಳು ಮೋದಿ ಅಧಿಕಾರಕ್ಕೆ ಬಂದ ನಂತರ ಸ್ವತಃ ಭೂಮಿ ನೀಡಲು ಮುಂದೆ ಬಂದಿದ್ದವು. ಇತ್ತೀಚೆಗೆ ಮತ್ತೆ ತನ್ನ ನಿಲುವು ಸ್ಪಷ್ಟಪಡಿಸಿದ್ದ ಶಿಯಾ ಮುಸ್ಲಿಂ ಪಂಗಡವು “ಶ್ರೀರಾಮ ಮಂದಿರ ಅದೇ ಸ್ಥಳದಲ್ಲಿ ನಿರ್ಮಾಣವಾಗಬೇಕು. ಈ ಪುಣದಯ ಕಾರ್ಯಕ್ಕೆ ನಾವು ನಮ್ಮ ಸಂಪೂರ್ಣ ಜಾಗವನ್ನು ಮಂದಿರ ನಿರ್ಮಾಣಕ್ಕೆ ನೀಡುತ್ತೇವೆ. ದೇಶದಲ್ಲಿ ಶಾಂತಿ ಸುವ್ಯವಸ್ಥೆಯನ್ನು ಪಾಲಿಸುವುದೇ ನಮ್ಮ ಉದ್ಧೇಶ. ಅಲ್ಲಿ ರಾಮಮಂದಿರ ನಿರ್ಮಾಣವಾಗಲೇ ಬೇಕು, ಅದು ಆದಷ್ಟು ಬೇಗ ಆಗಲಿ” ಎಂದು ಸುಪ್ರೀಂ ಕೋರ್ಟ್ ಬಳಿ ಹೇಳಿತ್ತು.

ಅತ್ತ ರಾಮಮಂದಿರಕ್ಕೆ ಶಿಯಾ ಮುಸ್ಲಿಮರು ಬೆಂಬಲ ನೀಡುತ್ತೇವೆ ಎಂದರೂ ಮುಸಲ್ಮಾನರ ಮತ್ತೊಂದು ಪಂಗಡ ಸುನ್ನಿ ನಾವು ಜಾಗ ನೀಡೋದಿಲ್ಲ ಎಂದು ವಿರೋಧಿಸಿತ್ತು. ಈ ಮಧ್ಯೆ ಲೋಕಸಭಾ ಚುನಾವಣೆಗೂ ಮುನ್ನ ರಾಮಮಮದಿರವನ್ನು ನಿರ್ಮಾಣ ಮಾಡಿಯೇ ಸಿದ್ಧ ಎಂದು ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಹೇಳಿದ್ದು ಅದರ ಬೆನ್ನಲ್ಲಿಯೇ ಸಂಸದ ಅಸಾದುದ್ದೀನ್ ಓವೈಸಿ ಅದನ್ನು ವಿರೋಧಿಸಿದ್ದಾನೆ. “ಯಾವುದೆ ಕಾರಣಕ್ಕೂ ಮುಂದಿನ ಲೋಕಸಭಾ ಚುನಾವಣೆಗೂ ಮುನ್ನ ರಾಮಮಂದಿರ ವಿವಾದದ ತೀರ್ಪನ್ನು ಸುಪ್ರೀಂ ಕೋರ್ಟ್ ನೀಡಬಾರದು. ಲೋಕಸಭಾ ಚುನಾವಣೆಯ ನಂತರ ಇದರ ತೀರ್ಪನ್ನು ನೀಡಬೇಕು” ಎಂದು ಹೇಳಿದ್ದಾನೆ.

Image result for amit shah

ಇಂತಹಾ ಹೇಳಿಕೆಗಳು ಹೊಸದೇನಲ್ಲ. ಈ ಹಿಂದೆ ಕಾಂಗ್ರೆಸ್ ನಾಯಕರೋರ್ವರು ಇಂತಹಾ ಹೇಳಿಕೆಯನ್ನು ನೀಡಿ ಪೇಚಿಗೆ ಸಿಲುಕಿದ್ದರು. ಲೋಕಸಭಾ ಚುನಾವಣೆಗೂ ಮುನ್ನ ಸುಪ್ರೀಂ ಕೋರ್ಟ್‍ನಿಂದ ರಾಮಮಂದಿರ ಬಗೆಗಿನ ತೀರ್ಪನ್ನು ಪ್ರಕಟಿಸಬಾರದು ಎಂದು ಕೆಲ ನಾಯಕರು ಹೇಳಿದ್ದರು. ಇದು ಈಗಲೂ ಪುನರಾವರ್ತನೆ ಆಗುತ್ತಲೇ ಇದೆ. ಇದೀಗ ಓವೈಸಿ ಸರದಿ…!

Related image

ಹಿಂದಿನಿಂದಲೂ ರಾಮಮಂದಿರ ನಿರ್ಮಾಣಕ್ಕೆ ಅವಿರತ ಶ್ರಮ ವಹಿಸುತ್ತಿರುವ ವಿಶ್ವ ಹಿಂದೂ ಪರಿಷತ್ ಹಾಗೂ ಭಾರತೀಯ ಜನತಾ ಪಕ್ಷಕ್ಕೆ ಸುಪ್ರೀಂ ಕೋರ್ಟ್ ತೀರ್ಮಾಣವೂ ಸವಾಲಾಗಿ ನಿಂತಿದೆ. ಬಹುತೇಕ ಸುಪ್ರೀಂ ಕೋರ್ಟ್‍ನ ಅಂತಿಮ ತೀರ್ಪು ಹಿಂದೂಗಳ ಪಾಲಿಗೆ ಲಭಿಸಲಿದೆ.! ಅಯೋಧ್ಯೆಯಲ್ಲಿ ಶ್ರೀ ರಾಮಮಂದಿರ ಕಟ್ಟಲು ಅನುಮತಿ ಸಿಗುವುದು ಖಂಡಿತಾ ಎಂಬ ಹುಮ್ಮಸ್ಸಿನಲ್ಲಿದೆ ಭಾರತೀಯ ಜನತಾ ಪಕ್ಷ. ಒಂದೊಮ್ಮೆ ಲೋಕಸಭಾ ಚುನಾವಣೆಗೂ ಮುನ್ನ ಅಯೋಧ್ಯೆ ತೀರ್ಪು ಹೊರಬಿದ್ದು ರಾಮಮಂದಿರಕ್ಕೆ ಮತ್ತೆ ಚಾಲನೆ ಸಿಕ್ಕಿದ್ದೇ ಆದರೆ ಅದು ವಿರೋಧ ಪಕ್ಷಗಳಿಗೆ ಭಾರೀ ಹೊಡೆತ ನೀಡಲಿದೆ. ಕೋಟ್ಯಾಂತರ ಹಿಂದೂಗಳು ಎತ್ತ ಕಡೆ ನೋಡದೆಯೂ ಸರಾಗವಾಗಿ ಮತ್ತೆ ಭಾರತೀಯ ಜನತಾ ಪಕ್ಷವನ್ನು ಗೆಲ್ಲಿಸಿಕೊಡಲಿದ್ದಾರೆ. ಈ ಕಾರಣಕ್ಕಾಗಿಯೇ ಲೋಕಸಭಾ ಚುನಾವಣೆಗೂ ಮುನ್ನ ಸುಪ್ರೀಂ ಕೋರ್ಟ್ ಅಯೋಧ್ಯಾ ವಿವಾದದ ಅಂತಿಮ ತೀರ್ಪನ್ನು ಪ್ರಕಟಿಸುವುದು ಬೇಡ ಎಂಬ ಹೇಳಿಕೆಗಳನ್ನು ವಿರೋಧ ಪಕ್ಷಗಳ ನಾಯಕರು ನೀಡುತ್ತಿದ್ದಾರೆ.

Related image

ಒಂದೊಮ್ಮೆ ಸುಪ್ರೀಂ ಕೋರ್ಟ್ ಅಂತಿಮ ತೀರ್ಪನ್ನು ಲೋಕಸಭಾ ಚುನಾವಣೆಗೂ ಮುನ್ನ ನೀಡಲಿಲ್ಲವಾದರೆ ಇದೇ ವಿಚಾರವನ್ನು ಇಟ್ಟುಕೊಂಡು ವಿರೋಧ ಪಕ್ಷಗಳು ಮೋದಿ ಹಾಗೂ ಭಾರತೀಯ ಜನತಾ ಪಕ್ಷದ ವಿರುದ್ಧ ದಾಳಿ ಮಾಡಲಿದೆ. ಬಿಜೆಪಿ ರಾಮಮಂದಿರ ನಿರ್ಮಾಣ ಮಾಡಿಲ್ಲ ಎಂಬ ವಿಚಾರವನ್ನು ಇಟ್ಟುಕೊಂಡು ವಿರೋಧ ಪಕ್ಷಗಳು ಚುನಾವಣೆಯನ್ನು ಎದುರಿಸಲು ಸಿದ್ಧವಗುತ್ತಿವೆ. ಆದರೆ ರಾಮಮಂದಿರದ ಬಗ್ಗೆ ಇತಿಹಾಸದಲ್ಲಿ ಒಂದೇ ಒಂದು ಬಾರಿಗೆ ಬೆಂಬಲ ನೀಡಿದೆಯೋ ಎಂದರೆ ಅವುಗಳ ಯೋಗ್ಯತೆಗೆ ಒಂದೇ ಒಂದು ಬಾರಿಯ ಉದಾಹರಣೆಗಳೂ ಸಿಗಲ್ಲ.ಅಷ್ಟೇ…

-Sunilpanapila

Tags

Related Articles

FOR DAILY ALERTS
 
FOR DAILY ALERTS
 
Close