ಪ್ರಚಲಿತ

ಭಾರತೀಯ ನೌಕಾಪಡೆಯನ್ನೇ ತನ್ನ ಸ್ವಂತಕ್ಕಾಗಿ ಬಳಸಿಕೊಂಡಿದ್ದರು ರಾಜೀವ್ ಗಾಂಧಿ! ಕಾಂಗ್ರೆಸಿಗರ ಜನ್ಮ ಜಾಲಾಡಿದ ಪ್ರಧಾನಿ ಮೋದಿ!

ಭಾರತಕ್ಕೆ ಸ್ವಾತಂತ್ರ್ಯ ತಂದು ಕೊಟ್ಟಿದ್ದೇ ನಾವು ಎಂದು ಕಾಂಗ್ರೆಸ್ ನಾಯಕರು ಹೋದಲ್ಲೆಲ್ಲಾ ಹೇಳಿಕೊಂಡು ತಿರುಗಾಡುತ್ತಾರೆ. ಭಾರತವನ್ನು ಅಭಿವೃದ್ಧಿಪಡಿಸಿದ್ದೇ ನಾವು ಎಂಬಂತೆ ಸುಳ್ಳು ಹೇಳುತ್ತಾರೆ ಕಾಂಗ್ರೆಸಿಗರು, ಆದರೆ ಕಾಂಗ್ರೆಸ್‌‌ನ ಜಾತಕ ಹುಡುಕುತ್ತಾ ಹೋದರೆ ನಮಗೆ ಸಿಗುವ ಒಂದೊಂದು ಸಂಗತಿಗಳು ಕೂಡ ಕಾಂಗ್ರೆಸ್‌ನ ಕರಾಳ ಮುಖವನ್ನು ಬಯಲಿಗೆಳೆಯುತ್ತದೆ. ಯಾಕೆಂದರೆ ಸ್ವಾತಂತ್ರ್ಯ ನಂತರದಲ್ಲಿ ಕಾಂಗ್ರೆಸ್ ಭಾರತವನ್ನು ಯಾವ ರೀತಿ ಲೂಟಿ ಮಾಡಿತ್ತು, ಯಾವ ರೀತಿ ತಮ್ಮ ಸ್ವಂತಕ್ಕಾಗಿ ಬಳಸಿಕೊಂಡಿದ್ದರು ಎಂದರೆ ಭಾರತೀಯ ಸೇನೆಯನ್ನೂ ಕೂಡ ತಮ್ಮ ಆಳುಗಳಂತೆ ನೋಡಿಕೊಂಡಿದ್ದರು. ಇದೀಗ ಕಾಂಗ್ರೆಸ್‌‌ನ ಕರಾಳಮುಖವನ್ನು ಪ್ರಧಾನಿ ನರೇಂದ್ರ ಮೋದಿ ಬಯಲಿಗೆಳೆದಿದ್ದಾರೆ. ಮೋದಿ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಮಾಜಿ ಪ್ರಧಾನಿ ನೆಹರೂ ಅವರ ಬಗ್ಗೆ ಆರೋಪ ಮಾಡುತ್ತಾ ಕಾಂಗ್ರೆಸಿಗರಿಗೆ ಟಾಂಗ್ ನೀಡುತ್ತಿದ್ದರು. ಆದರೆ ಈ ಬಾರಿಯ ಪ್ರಚಾರದ ಸಮಯದಲ್ಲಿ ನೆಹರೂ ಅವರನ್ನು ಬಿಟ್ಟು ರಾಜೀವ್ ಗಾಂಧಿ ಬಗ್ಗೆ ಆರೋಪ ಹೊರಿಸಿ ಸತ್ಯಾಂಶ ಬಯಲು ಮಾಡಿದ್ದಾರೆ.!

ಹೌದು ಪ್ರಧಾನಿ ಮೋದಿ ಈ ಬಾರಿ ಅಂತಿಂತಹ ಬಾಂಬ್ ಸಿಡಿಸಿಲ್ಲ, ಮೋದಿ ಹೇಳಿದ ಒಂದೇ ಒಂದು ಮಾತು ಕಾಂಗ್ರೆಸ್ ಪಾಳಯದಲ್ಲಿ ಕೋಲಾಹಲ ಎಬ್ಬಿಸಿದೆ. ಯಾಕೆಂದರೆ ಇತ್ತೀಚಿಗೆ ಮಾತನಾಡುತ್ತಾ ಮೋದಿಯವರು, ತನ್ನ ಮೇಲೆ ರಾಹುಲ್ ಗಾಂಧಿ ಚೋರ್ ಎಂದು ಆರೋಪ ಮಾಡುತ್ತಾರೆ, ಆದರೆ ನಿಜವಾದ ಕಳ್ಳ ರಾಜೀವ್ ಗಾಂಧಿ ಎಂದು ಸಾಕ್ಷಿ ಸಮೇತ ತಿರುಗೇಟು ನೀಡಿದ್ದರು. ಇದನ್ನು ಕೇಳುತ್ತಿದ್ದಂತೆ ರಾಹುಲ್ ಗಾಂಧಿ ಸೇರಿದಂತೆ ಕಾಂಗ್ರೆಸ್ ನಾಯಕರು ತಬ್ಬಿಬ್ಬಾಗಿದ್ದಾರೆ. ಅಷ್ಟೇ ಅಲ್ಲದೆ ಇದೀಗ ಮತ್ತೊಂದು ಸುದ್ಧಿ ಬಯಲಾಗಿದ್ದು, ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರು ತಮ್ಮ ಕುಟುಂಬದ ಸದಸ್ಯರ ಪ್ರವಾಸಕ್ಕಾಗಿ ಭಾರತೀಯ ನೌಕಾದಳದ ಹಡಗುಗಳನ್ನು ಬಳಸಿಕೊಂಡಿದ್ದರು ಎಂಬುದು ಬಯಲಾಗಿದೆ. ಈ ಸತ್ಯಾಂಶವನ್ನು ಸ್ವತಃ ಪ್ರಧಾನಿ ನರೇಂದ್ರ ಮೋದಿಯವರೇ ಹೇಳಿಕೊಂಡಿದ್ದು, ಇದಕ್ಕೆ ಸಂಬಂಧಿಸಿದ ಫೋಟೋಗಳು ಕೂಡ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.!

ರಾಜೀವ್ ಗಾಂಧಿ ತಮ್ಮ ಕುಟುಂಬದ ಸದಸ್ಯರ‌ ಜೊತೆ ಪ್ರವಾಸಕ್ಕೆ ಹೋಗಲು ಭಾರತೀಯ ನೌಕಾದಳದ ಹಡಗುಗಳನ್ನು ಬಳಸಿಕೊಳ್ಳುತ್ತಿದ್ದರು ಮತ್ತು ಸೇನೆಯನ್ನು ತಮಗೆ ಬೇಕಾದ ರೀತಿಯಲ್ಲಿ ಉಪಯೋಗಿಸಿಕೊಳ್ಳುತ್ತಿದ್ದರು ಎಂದು ಮೋದಿ ಆರೋಪಿಸಿದ್ದಾರೆ. ಭಾರತದ ನೌಕಾದಳದ ಯುದ್ಧ ನೌಕೆ ಐಎನ್‌ಎಸ್ ವಿರಾಟ್ ಹಡಗನ್ನು ರಾಜೀವ್ ಗಾಂಧಿ ಅವರು ತಮ್ಮ ಕುಟುಂಬದ ಸದಸ್ಯರ‌ ಜೊತೆ ಪ್ರವಾಸಕ್ಕೆ ಹೋಗಲು ಬಳಸಿಕೊಂಡಿದ್ದರು ಎಂಬ ಮೋದಿಯವರ ಹೇಳಿಕೆ ದೇಶಾದ್ಯಂತ ಚರ್ಚೆಗೆ ಗ್ರಾಸವಾಗಿದೆ. ಇತ್ತ ಸಾಮಾಜಿಕ ಜಾಲತಾಣಗಳಲ್ಲಿ ಅದಕ್ಕೆ ಸಂಬಂಧಿಸಿದ ಫೋಟೋಗಳು ಕೂಡ ಹರಿದಾಡುತ್ತಿದ್ದು ಕಾಂಗ್ರೆಸ್ ಪಕ್ಷದ ಕರಾಳ ಮುಖ ಬಯಲಾಗಿದೆ.!

ಅದೇನೇ ಇರಲಿ, ಕಾಂಗ್ರೆಸಿಗರು ತಾವೇ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟವರಂತೆ ಹೇಳಿಕೊಳ್ಳುತ್ತಾರೆ. ಆದರೆ ಪ್ರಧಾನಿ ಮೋದಿ ಇದೀಗ ಇಡೀ ಕಾಂಗ್ರೆಸ್ ಪಕ್ಷದ ಹಿನ್ನೆಲೆಯನ್ನು ಕೆಣಕಿದ್ದು ಕಾಂಗ್ರೆಸ್‌‌ ಪಾಳಯದಲ್ಲಿ ಭಾರೀ ಕೋಲಾಹಲ ಉಂಟು ಮಾಡಿದೆ.!

-ಸಾರ್ಥಕ್ ಶೆಟ್ಟಿ

Tags

Related Articles

FOR DAILY ALERTS
 
FOR DAILY ALERTS
 
Close