ಪ್ರಚಲಿತ

ರಾಹುಲ್ ಗಾಂಧಿಯ ಡಬಲ್ ಲವ್ ಸ್ಟೋರಿ ಬಯಲು!! ಇಬ್ಬರು ಹುಡುಗಿಯರ ಮುದ್ದಿನ ಗಂಡು ಮಾಡಿದ್ದೇನು ಗೊತ್ತಾ?!

ಇಡೀ ಭಾರತಕ್ಕೆ ಗೊಂದಲವಾಗಿ ಹೋಗಿದೆ! ರಾಹುಲ್ ಗಾಂಧಿಯ ಬದುಕಿನ ಗತಿಯೇ ಅರ್ಥವಾಗದೇ ಹೋಗಿದೆ!! ಇಡೀ ಭಾರತಕ್ಕೆ ಉತ್ತರ ಕೊಡಬೇಕಾದವರು ರಾಹುಲ್ ಗಾಂಧಿಯೇ!! ಪ್ರಶ್ನೆ ಇಷ್ಟೇ!! ರಾಹುಲ್ ಗಾಂಧಿ ಇನ್ನೂ ಡೇಟಿಂಗ್ ಮಾಡುತ್ತಿದ್ದಾರಾ ಇಲ್ಲವೋ ಎಂಬಷ್ಟೇ!! ಹೌದೆಂದರೆ, ಮದುವೆ ಯಾವಾಗ?! ಅಚ್ಚರಿಯೇನು ಇಲ್ಲ! ಹಿಂದಿನ ವರ್ಷ “ನಾನು ನನಗೆ ಸರಿಯಾದ ಹುಡುಗಿ ಸಿಕ್ಕರೆ ಖಂಡಿತ ಮದುವೆಯಾಗುತ್ತೇನೆ!” ಎಂದಿದ್ದ ರಾಹುಲ್ ಗಾಂಧಿಗೆ ಇವತ್ತಿನ ತನಕವೂ ಸರಿಯಾದ ಹುಡುಗಿ ಸಿಗಲಿಲ್ಲವೋ, ಅಥವಾ ಸಿಕ್ಕಿದ್ದರೂ ರಾಹುಲ್ ಗಾಂಧಿಯ ಹೆಂಡತಿಯೆಂದು ಸಾರ್ವಜನಿಕರ ಮುಂದೆ ಮರ್ಯಾದೆ ತೆಗೆಸಿಕೊಳ್ಳುವ ಸಹವಾಸ ಯಾಕೆ ಬೇಕೆಂದು ಬಹುಷಃ ತೊರೆದರೋ!!

ಇರಲಿ!! ೪೭ ವರ್ಷದ ಯುವ ನಾಯಕ ರಾಹುಲ್ ಗಾಂಧಿ ಪ್ರಸ್ತುತವಾಗಿ ಯಾರನ್ನಾದರೂ ಇಷ್ಟ ಪಡುತ್ತಿದ್ದಾರೋ ಇಲ್ಲವೋ ಗೊತ್ತಿಲ್ಲದಿದ್ದರೂ, ಭವಿಷ್ಯದಲ್ಲಿಯಾದರೂ ಅದೃಷ್ಟ ತಿರುಗಿ, ಮಿಸ್ ರೈಟ್ ಸಿಗಬಹುದೆಂಬ ಸೂಚನೆ ನಮಗೆ ಅರಿವಾಗತೊಡಗಿದೆ! ಅದಲ್ಲದೇ, ನಮ್ಮ ಕಡೆಯಿಂದಲೂ ಹಾರೈಕೆಯಿದೆ!! ರಾಹುಲ್ ಗಾಂಧಿಗೆ ಮದುವೆಯಾಗಲಿ ಎಂದು!!

ವಾಸ್ತವವಾಗಿ, ರಾಹುಲ್ ಗಾಂಧಿಗೆ ಹುಡುಗಿಯರನ್ನು ಪಟಾಯಿಸಿ ಗೊತ್ತಿಲ್ಲವೆಂದೇನಿಲ್ಲ! ನೀವೇ ಹೇಳಿ! ರಾಹುಲ್ ಗಾಂಧಿಗೆ ಏನು ಕಡಿಮೆಯಾಗಿದೆ?! ಅಪ್ಪ ಅಮ್ಮ ಹೆಂಗೆಂಗೋ ಹಗರಣ ಮಾಡಿ ಕೂಡಿಟ್ಟಿದ್ದು ಬಹಳಷ್ಟಿದೆ! ರಾಜಕೀಯದಲ್ಲಿ ಶಾಶ್ವತವಾದ ಹೆಸರಿದೆ! ನೋಡಲಿಕ್ಕೂ ಅಷ್್ಟೇ! ಕೆನ್ನೆ ಮೇಲೊಂದು ಗುಳಿ ಬೀಳಿಸಿಕೊಂಡಿರುವ ಸ್ಪುರದ್ರೂಪಿ!! ಪದವಿಯೂ ಇದೆ! ಕಟ್ಟಿಕೊಂಡ ಹೆಂಡತಿ ಬುದ್ಧಿವಂತಳಾದರೆ ಸೆರಗು ಹಿಡಿದು ತಿರುಗುಗಷ್ಟು ಮುಗ್ಧತೆ! ಇನ್ನೇನಾದರೂ ಬೇಕಾ!?

೨೦೧೨, ಜೂನ್ ನಲ್ಲಿ ಸಂಡೆ ಗಾರ್ಡಿಯನ್ ಎಂಬ ಪತ್ರಿಕೆ ರಾಹುಲ್ ಗಾಂಧಿ ದಿವಂಗತ ಮುಹಮ್ಮದ್ ಜಹೀರ್ ಶಾ ರ ಮೊಮ್ಮಗಳಾದ ನೋಯಲ್ ಜೆಹೆರ್ ಜೊತೆ ಡೇಟಿಂಗ್ ಶುರುವಿಟ್ಟಿದ್ದಾರೆ ಎಂಬ ಮಾಹಿತಿಯೊಂದನ್ನು ನೀಡಿ, ಲೇಖನ ಪ್ರಕಟಿಸಿತ್ತು! ೧೯೩೩ ರಿಂದ ೧೯೭೩ ರ ವರೆಗೆ ಅಫ್ಘನ್ ರಾಷ್ಟ್ರವನ್ನಾಳಿದ ದೊರೆ ಜಹೀರ್ ಶಾ!! ಇಟಲಿಯಲ್ಲಿ, ಶಾ ರನ್ನು ಹತ್ಯೆಗೈದ ನಂತರ, ಐದನೇ ಮಗನಾದ ಮಹಮ್ಮದ್ ದಾವೂನ್ ಖಾನ್ ಇಟಾಲಿಯಳನ್ನೇ ವರಿಸಿದ್ದನಷ್ಟೆ!! ರಾಹುಲ್ ಗಾಂಧಿಯ ಕ್ಷಣಿಕ ಮಾತ್ರದ ಕನಸಿನ ಹುಡುಗಿ ನೋಯಲ್ ಜೆಹೆರ್ ೧೯೮೦ ರಲ್ಲಿ ಭುವಿಯ ಮೇಲೆ ಅವತರಿಸಿದ್ದಳು!!

ಸುದ್ದಿಯ ಪ್ರಕಾರ, ರಾಹುಲ್ ಗಾಂಧಿ ದೆಹಲಿಯ ಅಮನ್ ಹೋಟೆಲ್ ನಲ್ಲಿ ಮಾತ್ರವಲ್ಲ, ಬದಲಾಗಿ ಫ್ರಾನ್ಸಿನ ಫಿಟ್ನೆಸ್ ಸೆಂಟರಿನಲ್ಲಿಯೂ ಸಹ ನೋಯಲ್ ಳೊಂದಿಗೆ ರೆಡ್ ಹ್ಯಾಂಡ್ ಆಗಿಯೇ ಮಾಧ್ಯಮದ ಕಣ್ಣಿಗೆ ಸಿಕ್ಕಿ ಬಿದ್ದಿದ್ದರು! ನೋಯಲ್, ಫ್ರೆಂಚ್ ಯುನಿವರ್ಸಿಟಿಯ ಸೇಂಟ್ ಡಾಮಿನಿಕ್ ಕಾಲೇಜಿನಲ್ಲಿ ಯುರೋಪಿಯನ್ ಬ್ಯುಸಿನೆಸ್ ನಲ್ಲಿ ಪದವಿ ಗಿಟ್ಟಿಸಿದ್ದಲ್ಲದೇ, ನಂತರ ಲಂಡನ್ ನ ವೆಬ್ಸ್ಟರ್ ಯುನಿ್ರ್ಸಿಟಿಯಲ್ಲಿ ಜ್ಯುವೆಲ್ಲರಿ ಡಿಸೈನ್ ನಲ್ಲಿ ಸ್ಪೆಷಲೈಸೇಷನ್ ಮಾಡಿದ್ದ ನೋಯಲ್ ರಾಹುಲ್ ಗಾಂಧಿಯ ಮನಸ್ಸು ಗೆದ್ದಿದ್ದಳು!

ಅಚ್ಚರಿಯೇನು ಗೊತ್ತಾ?! ರಾಹುಲ್ ಗಾಂಧಿಯ ಕೈ ಹಿಡಿಯಬೇಕು ಎಂದು ಕನಸು ಹೊತ್ತು ರೋಮನ್ ಕ್ಯಾಥೋಲಿಕ್ ಗೆ ಮತಾಂತರವೂ ಆಗಿ, ಕೊನೆಗೆ ಇಟಲಿಯಲ್ಲಿರುವ ಸೋನಿಯಾ ಗಾಂಧಿಯ ಚಾಪೆಲ್ ನಲ್ಲಿ ಇಬ್ಬರೂ ಕೂತು ಪ್ರಾರ್ಥನೆ ಕೂಡಾ ಸಲ್ಲಿಸಿದ್ದರು ಎಂದು ವರದಿ ಮಾಡಿದೆ!!

ಪೂರಕವಾಗಿ, ಕಾಂಗ್ರೆಸ್ ನಾಯಕರಿಗೂ ಕೂಡ ರಾಹುಲ್ ಗಾಂಧಿ ಈ ಅಫ್ಘನ್ ರಾಜಕುಮಾರಿಯನ್ನೇ ಮದುವೆಯಾಗಲಿ ಎಂದು ಬಹಳ ಮನಸ್ಸಿತ್ತು ಎಂಬುದು ಸತ್ಯವಾದರೂ, ಪಾಪ!! ಯಾಕೋ ಒಗ್ಗೂಡಿ ಬರಲಿಲ್ಲ! ರಾಹುಲ್ ಗಾಂಧಿಯ ಜೊತೆ ಪ್ರಾರ್ಥನೆ ಸಲ್ಲಿಸಿದ್ದ ರಾಜಕುಮಾರಿ, ಕೊನೆಗೆ ಈಜಿಪ್ತಿನ ರಾಜಕುವರ ಮುಹಮ್ನದ್ ನನ್ನು ೨೦೧೩ ರಲ್ಲಿ ಅದ್ದೂರಿಯಾಗಿ ಮದುವೆಯಾಗಿಬಿಟ್ಟಳು! ರಾಹುಲ್ ಗಾಂಧಿ ದೇವದಾಸನಾಗಿ ಹೋದರೆ, ಇತ್ತ ಕಾಂಗಿಗಳಿಗೆ ತಮ್ಮ ಅಲ್ಪಸಂಖ್ಯಾತ ಮತಗಳ ಬ್ಯಾಂಕ್ ತಪ್ಪಿತಲ್ಲ ಎಂದು ಸಿಕ್ಕಾಪಟ್ಟೆ ದುಃಖವಾಗಿ ಹೋಗಿತ್ತು ಬಿಡಿ! ರಾಹುಲ್ ಗಾಂಧಿಯ ಖುಷಿ ಮುಖ್ಯವಾಗಿರಲಿಲ್ಲ! ಬದಲಾಗಿ, ಮತಬ್ಯಾಂಕು ಬೇಕಿತ್ತು ಕಾಂಗಿಗಳಿಗೆ!!

ರಾಹುಲ್ ಗಾಂಧಿಯ ಅದೃಷ್ಟ ಖಾಲಿಯಾಗಿರಲಿಲ್ಲ! ಆಗ ಸಿಕ್ಕವಳೇ ವೆರೋನಿಕೆ ಕಾರ್ಟೆಲ್ಲಿ!!

ರಾಹುಲ್ ಗಾಂಧಿ, ವೆರೋನಿಕೆಯನ್ನು ಕ್ಯಾಂಬ್ರಿಡ್ಜ್ ನಲ್ಲಿ ಭೇಟಿಯಾಗಿದ್ದು ೧೯೯೦ರಲ್ಲಿ!! ಈ ವಿಚಾರ ಬೆಳಕಿಗೆ ಬಂದಿದ್ದು ೧೯೯೮ ರಲ್ಲಿ!! ರಾಹುಲ್ ಗಾಂಧಿ, ತನ್ನ ತಾಯಿಯಾದ ಸೋನಿಯಾಳ ಅಭಿಯಾನವೊಂದರಲ್ಲಿ ಪಾಲ್ಗೊಳ್ಳಲು ದೆಹಲಿಗೆ ವೆರೋನಿಕೆಯೊಂದಿಗೆ ಆಗಮಿಸಿದ್ದರು!! ಅದಾದ ಮೇಲೆ, ವರ್ಷ ಕಳೆಯೊದರೊಳಗೆ, ಬ್ರಿಮಿಂಗ್ ಹಾಮ್ ನಲ್ಲಿ ನಡೆದ ಭಾರತ v/s ಇಂಗ್ಲೆಂಡ್ ವರ್ಲ್ಡ್ ಕಪ್ ಕ್ರಿಕೆಟ್ ಮ್ಯಾಚನ್ನು ನೋಡಲು ವೆರೋನಿಕೆಯೊಂದಿಗೆ ಆಗಮಿಸಿದ್ದನ್ನು ಛಾಯಾಚಿತ್ರಗಾರನೊಬ್ಬ ಸೆರೆಹಿಡಿದಿದ್ದು ಬಹಳ ಸುದ್ದಿ ಮಾಡಿತ್ತು!

೧೯೯೯ರಲ್ಲಿ, ರಾಹುಲ್ ಗಾಂಧಿ ತನ್ನ ಗೆಳತಿಯೊಟ್ಟಿಗೆ ಅಂಡಮಾನಿನಲ್ಲಿ ರಜೆ ಕಳೆಯುತ್ತಿದ್ದದ್ದು ಸುದ್ದಿಯಾಯಿತು!! ಆಕೆ, ಕೊಲಂಬಿಯನ್ ಇರಬಹುದು ಎಂಬ ಊಹಾಪೋಹಗಳೂ ಜೋರಾಗಿಯೇ ನಡೆದವು!! ೨೦೦೩ ರಲ್ಲಿ, ಮತ್ತೊಮ್ಮೆ ವೆರೋನಿಕೆ ತನ್ನ ಕುಟುಂಬ ಮತ್ತು ರಾಹುಲ್ ಗಾಂಧಿಯ ಕುಟುಂಬದ ಜೊತೆ ಲಕ್ಷದ್ವೀಪ ಮತ್ತು ಕೇರಳಲದಲ್ಲಿದ್ದಳು ಎಂಬುದನ್ನು ಮಾಧ್ಯಮಗಳು ಬ್ರೇಕಿಂಗ್ ನ್ಯೂಸ್ ಆಗಿಸಿದ್ದಲ್ಲದೇ ಆಕೆ ವೆರೋನಿಕೆಯಲ್ಲ, ಬದಲಿಗೆ ಜುನಿಟಾ ಎಂಬುದಾಗಿ ಸುದ್ದಿ ಬಿತ್ತರಿಸಿದ್ದವು!!

 

ಅಂತೂ ಇಂತೂ ಕೊನೆಗೆ ಸ್ವತಃ ರಾಹುಲ್ ಗಾಂಧಿಯೇ ೨೦೦೪ ರಲ್ಲಿ, ಇಂಡಿಯನ್ ಎಕ್ಸ್ ಪ್ರೆಸ್ ಪತ್ರಕರ್ತೆಯಾದ ವೃಂದಾ ಗೋಪಿನಾಥ್ ರ ಸಂದರ್ಶನದಲ್ಲಿ ತನ್ನ ಪ್ರೇಮ ಕಥೆಗಳಿಗೆ ತೆರೆ ಎಳೆದಿದ್ದರು!! ತನ್ನ ಗೆಳತಿಯ ಹೆಸರು ವೆರೋನಿಕೆ! ಜುನಿಟಾಳಲ್ಲ ಎಂದ ರಾಹುಲ್ ಗಾಂಧಿ, ಆಕೆ ಕೊಲಂಬಿಯನ್ನಳೂ ಅಲ್ಲ, ವೆನೆಜೂಲಿಯನ್ ಳೂ ಅಲ್ಲ! ಬದಲಿಗೆ ಸ್ಪಾನಿಷ್ ಮೂಲ ಎಂದು ಬಹಿರಂಗ ಪಡಿಸಿದ್ದರು! ಜೊತೆಗೆ, ಆಕೆ ವೇಟ್ರೆಸ್ ಅಲ್ಲ, ಆರ್ಕಿಟೆಕ್ಟ್ ಇಂಜಿನಿಯರ್!! ಆಕೆ ವೇಟ್ರೆಸ್ ಆದರೂ ನನ್ನದು ಅಭ್ಯಂತರವಿಲ್ಲ ಎಂದು ಹೇಳಿದ್ದ ರಾಹುಲ್ ಗಾಂಧಿ ಆಕೆ ನನ್ನ ಆತ್ಮೀಯ ಸ್ನೇಹಿತೆ ಅಷ್ಟೆ ಎಂದು ಕೈ ತೊಳೆದುಕೊಂಡಿದ್ದರೋ ಅಥವಾ, ತೊಳೆಯುವಂತೆ ಮಾಡಿದ್ದರೋ! ಅಂತೂ, ರಾಹುಲ್ ಗಾಂಧಿ ಮತ್ತೆ ದೇವದಾಸರಾಗಿದ್ದರು!! ಅದಾದ ನಂತರ, ಚುನಾವಣೆಯಾದ ಮೇಲೆ ಮಾಧ್ಯಮಗಳು ಮಾತಿಗೆ ವೆರೋನಿಕೆಯ ಪ್ರಜಾಪ್ರಭುತ್ವದ ಬಗ್ಗೆ ಕೇಳಿದಾಗ, ಆಕೆಯ ಕುಟುಂಬ ವೆನೆಜುಲ್ ನಲ್ಲಿ ವಾಸವಾಗಿದ್ದಾರೆ ಎಂಬಷ್ಟಕ್ಕೆ ಮಾತು ತುಂಡರಿಸಿದ್ದ ರಾಹುಲ್ ಗಾಂಧಿ ತದನಂತರ ಯಾವುದೇ ವೆರೋನಿಕೆಯ ಬಗ್ಗೆಯೂ ಸೊಲ್ಲೆತ್ತಿರಲಿಲ್ಲ!!

ಬೇಜಾರಾಗೋದು ಸಹಜ ಬಿಡಿ! ಆದರೇನು!!? ನಮ್ಮ ರಾಹುಲ್ ಗಾಂಧಿಗೆ ಹೀಗಾಗುವುದು ಬೇಡವಾಗಿತ್ತು ಅಷ್ಟೇ!! ಪಾಪ!! ಈಗಿನ ಪರಿಸ್ಥಿತಿ ನೋಡಿ!

source: https://www.outlookindia.com/magazine/story/decoding-rahul-gandhi/281985

– ಪೃಥು ಅಗ್ನಿಹೋತ್ರಿ

Tags

Related Articles

Close