ಪ್ರಚಲಿತರಾಜ್ಯ

ಸದ್ಯದಲ್ಲೇ ಜೈಲು ಸೇರಲಿದ್ದಾರೆ ರಾಹುಲ್ ಮತ್ತು ಸೋನಿಯಾ!! ಸುಬ್ರಮಣಿಯನ್ ಸ್ವಾಮಿಯಿಂದ ಸ್ಫೋಟಕ ಭವಿಷ್ಯ!!

ಪ್ರಧಾನಿ ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ನಂತರ ಭ್ರಷ್ಟಾಚಾರಿಗಳ ವಿರುದ್ಧ, ವಿಶೇಷವಾಗಿ ಕಾಂಗ್ರೆಸ್ ಪೋಷಿತ ಭ್ರಷ್ಟಾಚಾರಿಗಳ ಒಂದೊಂದೆ ಹಗರಣಗಳು ಹೊರ ಬರುತ್ತಿದ್ದು, ಇದೀಗ ಐಎನ್ ಎಕ್ಸ್ ಮೀಡಿಯಾದಲ್ಲಿ ನಡೆದ ಅಕ್ರಮ ವಹಿವಾಟಿನ ಕುರಿತು ಆರೋಪ ಹೊತ್ತಿರುವ ಕೇಂದ್ರದ ಮಾಜಿ ಸಚಿವ ಚಿದಂಬರಂ ಪುತ್ರನನ್ನು ಸಿಬಿಐ ಬಂಧಿಸಿದೆ. ಹಗರಣಗಳ ಮೇಲೆ ಹಗರಣಗಳ ಸುರಿಮಳೆಯನ್ನೇ ಹೊತ್ತಿರುವ ಮಾಜಿ ಕೇಂದ್ರ ಹಣಕಾಸು ಸಚಿವ ಪಿ ಚಿದಂಬರಂ ಕುಟುಂಬ ಸಂಕಷ್ಟವನ್ನು ಎದುರುಸಿದ್ದು, ಇದೀಗ ತಮ್ಮ ಪುತ್ರ ಪೊಲೀಸರ ಅತಿಥಿಯಾಗಿ ಜೈಲು ಸೇರಿದ್ದಾರೆ.

ಈ ಹಿನ್ನಲೆಯಲ್ಲಿ ಬಿಜೆಪಿ ಹಿರಿಯ ನಾಯಕ ಸುಬ್ರಮಣಿಯನ್ ಸ್ವಾಮಿ ಹೇಳಿಕೆಯೊಂದನ್ನು ನೀಡಿ ಬಾರಿ ಸುದ್ದಿಯಾಗಿದ್ದಾರೆ. ಹೌದು…. ಐಎನ್ ಎಕ್ಸ್ ಮೀಡಿಯಾ ಭ್ರಷ್ಟಾಚಾರ ಹಾಗೂ ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ (ಫೆಮಾ) ಉಲ್ಲಂಘಿಸಿದ ಆರೋಪ ಎದುರಿಸುತ್ತಿರುವ ಕಾರ್ತಿ ಚಿದಂಬರಂ ಅವರ ವಿರುದ್ಧ ಸಿಬಿಐ ಸಹ ಪ್ರಕರಣ ದಾಖಲಿಸಿಕೊಂಡಿತ್ತು. ಹಲವು ದಿನಗಳಿಂದ ಪ್ರಕರಣ ಸಂಬಂಧ ಕಾರ್ತಿ ಚಿದಂಬರಂ ಅವರ ವಿರುದ್ಧ ದಾಖಲಾಗಿದ್ದ ದೂರಿನ ಅನ್ವಯ ಹಲವು ಬಾರಿ ವಿಚಾರಣೆಗೆ ಒಳಗಾಗಿದ್ದರು.

ಅಷ್ಟೇ ಅಲ್ಲದೇ, ಕೇಂದ್ರದಲ್ಲಿ ಯುಪಿಎ ಸರ್ಕಾರವಿದ್ದಾಗ ಚಿದಂಬರಂ ಸಚಿವರಾಗಿದ್ದರು, ಈ ವೇಳೆ ಐಎನ್ ಎಕ್ಸ್ ಮೀಡಿಯಾ ಸಂಸ್ಥೆ ಹಗರಣ ನಡೆದಿತ್ತು. ಆದರೆ ಅಕ್ರಮ ಹಣ ವಹಿವಾಟು ತಡೆ ಕಾಯ್ದೆ ಅಡಿ ಕಾರ್ತಿ ಚಿದಂಬರಂ ವಿರುದ್ಧ ಇಡಿ ಮೇ, 2017ರಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು, ವಿದೇಶಿ ವಿನಿಮಯ ನಿರ್ವಹಣಾ ಕಾಯಿದೆ ಉಲ್ಲಂಘನೆ ಆರೋಪದಲ್ಲಿ ಕಾರ್ತಿ ಚಿದಂರಬರಂ ನನ್ನು ಬಂಧಿಸಲಾಗಿದೆ.

Image result for sonia with rahul gandhi

ಅಷ್ಟಕ್ಕೂ ಸುಬ್ರಮಣಿಯಂ ಸ್ವಾಮಿ ಹೇಳಿದ್ದಾರೂ ಏನು ಗೊತ್ತೇ??

ಈ ಕುರಿತು ಮಾಧ್ಯಮದವರೊಂದಿಗೆ ಮಾತಾನಾಡಿದ ಬಿಜೆಪಿ ಹಿರಿಯ ನಾಯಕ ಸುಬ್ರಮಣಿಯನ್ ಸ್ವಾಮಿ ಇದು ಆರಂಭವಷ್ಟೇ, ಚಿದಂಬರಂ ಮಾಡಿದ 24 ಬೇರೆ ಹಗರಣದ ತನಿಖೆ ಇನ್ನು ಆರಂಭವಾಗಬೇಕಾಗಿದೆ. ಈಗ ಜಾಮೀನಿನಲ್ಲಿ ಹೊರಗಿರುವ ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿಯವರೂ ಬೇಗನೇ ಜೈಲು ಸೇರಲಿದ್ದಾರೆ. ಬರುವ ಮಾರ್ಚ್ 17ರಂದು ನ್ಯಾಷನಲ್ ಹೆರಾಲ್ಡ್ ಹಗರಣದ ಮುಂದಿನ ವಿಚಾರಣೆ ಇದ್ದು ಇವರ ಹಗರಣದ ತನಿಖೆ ನಡೆದು ತಪ್ಪಿತಸ್ಥರಾಗಿ ಜೈಲಿಗೆ ಹೋಗಲಿದ್ದಾರೆ ಎಂದು ಹೇಳಿದ್ದಾರೆ!!

ಹೌದು… ಪ್ರಕರಣದಲ್ಲಿ ಭ್ರಷ್ಟಾಚಾರ ಆರೋಪ ಹೊತ್ತಿರುವ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಮೋತಿಲಾಲ್ ವೊಹ್ರಾ, ಆಸ್ಕರ್ ಫರ್ನಾಂಡಿಸ್, ಸುಮನ್ ದುಬೆ ಹಾಗೂ ಸ್ಯಾಮ್ ಪಿತ್ರೋಡಾ ಅವರಿಗೆ ಸಂಕಷ್ಟ ತಂದೊಡ್ಡಿದ್ದಲ್ಲದೇ ನ್ಯಾಷನಲ್ ಹೆರಾಲ್ಡ್ ಕೇಸ್ ನಲ್ಲಿ ಭಾರೀ ಪ್ರಮಾಣದ ಆರ್ಥಿಕ ಅವ್ಯವಹಾರವಾಗಿದೆ ಎಂದು 2012ರಲ್ಲಿ ಬಿಜೆಪಿ ನಾಯಕ ಸುಬ್ರಮಣ್ಯನ್ ಸ್ವಾಮಿ ಈ ಪ್ರಕರಣವನ್ನು ದಾಖಲಿಸಿದ್ದರು.

Image result for subramanian swamy

ಈ ಹಿಂದೆ ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ಆದಾಯ ತೆರಿಗೆ ಅಧಿಕಾರಿಗಳ ವಿಚಾರಣೆಗೆ ತಡೆ ನೀಡಬೇಕು ಎಂದು ಯಂಗ್ ಇಂಡಿಯಾ ಕಂಪನಿ ಸಲ್ಲಿಸಿದ್ದ ಅರ್ಜಿಯನ್ನು ದೆಹಲಿ ಹೈಕೋರ್ಟ್ ವಜಾಗೊಳಿಸಿದ್ದಲ್ಲದೇ ಆರೋಪಿಗಳು ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದರು. ತದನಂತರ ಕಾಂಗ್ರೆಸ್ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಅಧ್ಯಕ್ಷ ರಾಹುಲ್ ಗಾಂಧಿ ಸೇರಿದಂತೆ ಮುಖಂಡರು ಆರೋಪಿಗಳಾಗಿರುವ ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಯಂಗ್ ಇಂಡಿಯಾ ಕಂಪನಿಗೆ ಆದಾಯ ತೆರಿಗೆ ಇಲಾಖೆ 414 ಕೋಟಿ ರೂಪಾಯಿ ದಂಡ ವಿಧಿಸಿತ್ತು!!

ಅಷ್ಟೇ ಅಲ್ಲದೇ, ನ್ಯಾಷನಲ್ ಹೆರಾಲ್ಡ್ ಪ್ರಕರಣದ ವಿಚಾರಣೆ ನಡೆಸುತ್ತಿರುವ ದೆಹಲಿಯ ಮೆಟ್ರೋ ಪಾಲಿಟನ್ ಮ್ಯಾಜಿಸ್ಟ್ರೇಟ್ ಕೋರ್ಟ್ ಗೆ ಆದಾಯ ತೆರಿಗೆ ಇಲಾಖೆ ಈ ದಂಡ ವಿಧಿಸಿದೆ ಎಂದು ಈ ಪ್ರಕರಣದ ದೂರುದಾರರಾದ ಬಿಜೆಪಿ ಮುಖಂಡ ಸುಬ್ರಮಣಿಯನ್ ಸ್ವಾಮಿ ದಾಖಲೆ ಸಮೇತ ತಿಳಿಸಿದ್ದರು. ಸ್ವಾಮಿ ಅವರು ಸಲ್ಲಿಸಿದ ದಾಖಲೆಯನ್ನು ಮುಚ್ಚಿದ ಲಕೋಟೆಯಲ್ಲಿ ಪ್ರತ್ಯೇಕವಾಗಿರಿಸಲು ಕೋರ್ಟ್ ಆದೇಶಿಸಿದೆ!!

ಮಾಧ್ಯಮಗಳ ವರದಿಯಲ್ಲೇನಿತ್ತು ಗೊತ್ತೇ??

ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಸೇರಿದ್ದ ರೂ.1600 ಕೋಟಿ ಮೌಲ್ಯದ ಆಸ್ತಿಯನ್ನು ಕಬಳಿಸಿದ್ದಾರೆ ಎಂದು ಹಿರಿಯ ಬಿಜೆಪಿ ನಾಯಕ ಸುಬ್ರಮಣ್ಯನ್ ಸ್ವಾಮಿ ಅವರ ದೂರಿನ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಉಪಾಧ್ಯಕ್ಷ ರಾಹುಲ್ ಗಾಂಧಿಗೆ 1,300 ಕೋಟಿ ರೂಪಾಯಿ ಬೃಹತ್ ಮೊತ್ತದ ದಂಡ ಪಾವತಿಸುವಂತೆ ಆದಾಯ ತೆರಿಗೆ ಇಲಾಖೆ ನೋಟಿಸ್ ಜಾರಿ ಮಾಡುವ ಸಾಧ್ಯತೆ ಇದೆ ಎಂದು ಮಾಧ್ಯಮದ ವರದಿ ತಿಳಿಸಿದೆ.

ಇಂಡಿಯನ್ ಎಕ್ಸ್ ಪ್ರೆಸ್ ವರದಿ ಪ್ರಕಾರ, ಯಂಗ್ ಇಂಡಿಯಾ ಲಿಮಿಟೆಡ್ ನಿಂದ ಆದಾಯ ಗಳಿಸಿರುವ ಪ್ರಕರಣದಲ್ಲಿ ದಂಡ ಪಾವತಿಸುವಂತೆ ಆದಾಯ ತೆರಿಗೆ ಇಲಾಖೆ ಸೋನಿಯಾ ಗಾಂಧಿಯವರನ್ನು ನೋಟಿಸ್ ನೀಡಿ ಕೇಳುವ ಸಾಧ್ಯತೆ ಇದೆ ಎಂದು ಹೇಳಿದೆ. ಅಷ್ಟೇ ಅಲ್ಲದೇ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಕಾಂಗ್ರೆಸ್ ಉಪಾಧ್ಯಕ್ಷ (ಆಗಿನ ಪ್ರಧಾನ ಕಾರ್ಯದರ್ಶಿ) ರಾಹುಲ್ ಗಾಂಧಿ ಅವರು ಅಸೋಸಿಯೇಟೆಡ್ ಜರ್ನಲ್ಸ್ ಲಿಮಿಟೆಡ್ ಎಂಬ ಸಾರ್ವಜನಿಕ ಸಂಸ್ಥೆಯನ್ನು ಖಾಸಗಿ ಕಂಪನಿಯನ್ನಾಗಿ ಮಾರ್ಪಡಿಸಿಕೊಂಡಿದ್ದಾರೆ ಎಂದು ಬಿಜೆಪಿ ಮುಖಂಡ ಸುಬ್ರಮಣಿಯನ್ ಸ್ವಾಮಿ ಆರೋಪಿಸಿ ದೂರು ದಾಖಲಿಸಿದ್ದರು.

ಯಂಗ್ ಇಂಡಿಯನ್ ಎಂಬ ಹೆಸರಿನ ಖಾಸಗಿ ಕಂಪನಿ ಸ್ಥಾಪಿಸಿಕೊಂಡಿರುವ ಸೋನಿಯಾ ಮತ್ತು ರಾಹುಲ್ ಇದರ ಮೂಲಕ ಹೆರಾಲ್ಡ್ ಮಾತೃಸಂಸ್ಥೆ ಅಸೋಸಿಯೇಟೆಡ್ ಜರ್ನಲ್ಸ್ ಲಿಮಿಟೆಡ್ ಎಂಬ ಪಬ್ಲಿಕ್ ಕಂಪನಿಯನ್ನು ಖರೀದಿಸಿದ್ದಾರೆ. ಇದಕ್ಕಾಗಿ ಎಐಸಿಸಿ 90 ಕೋಟಿ ರೂಪಾಯಿ ಸಾಲವನ್ನು ಯಾವುದೇ ಭದ್ರತೆಯಿಲ್ಲದೆ ಯಂಗ್ ಇಂಡಿಯನ್‍ಗೆ ನೀಡಿದೆ. ವಾಣಿಜ್ಯ ಉದ್ದೇಶಗಳಿಗಾಗಿ ರಾಜಕೀಯ ಪಕ್ಷವೊಂದು ಸಾಲ ನೀಡುವುದು ಆದಾಯ ತೆರಿಗೆ ಕಾಯ್ದೆ ಅಡಿಯಲ್ಲಿ ಕಾನೂನಿನ ಸ್ಪಷ್ಟ ಉಲ್ಲಂಘನೆ ಎಂದು ಸ್ವಾಮಿ ಆರೋಪಿಸಿದ್ದರು.

ನ್ಯಾಷನಲ್ ಹೆರಾಲ್ಡ್ ಮತ್ತು ಕ್ವಾಮಿ ಆವಾಜ್ ಎಂಬ ವಾರ್ತಾಪತ್ರಿಕೆಗಳ ಒಡೆತನ ಹೊಂದಿದ್ದ ದಿ ಅಸೋಸಿಯೇಟೆಡ್ ಜರ್ನಲ್ಸ್ ಲಿಮಿಟೆಡ್ ಕಂಪನಿ ದೆಹಲಿ ಮತ್ತು ಉತ್ತರಪ್ರದೇಶಗಳಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿ ಹೊಂದಿದೆ. ಅಲ್ಲದೇ, ಸುಮಾರು 1,600 ಕೋಟಿ ರೂ. ಮೌಲ್ಯದ ದೆಹಲಿಯ ಹೆರಾಲ್ಡ್ ಹೌಸ್ ಕಬಳಿಸಲು ಸೋನಿಯಾ ಹಾಗೂ ರಾಹುಲ್ ಅವರು ಅಸೋಸಿಯೇಟೆಡ್ ಜರ್ನಲ್ಸ್ ಲಿಮಿಟೆಡ್ ಕಂಪನಿಯೊಂದಿಗೆ ಅಕ್ರಮ ಒಪ್ಪಂದ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದ್ದರು.

Image result for sonia with rahul gandhi

ಆದರೆ ಸುಬ್ರಮಣಿಯನ್ ಸ್ವಾಮಿ ಸಲ್ಲಿಸಿದ ಐಟಿ ದಾಖಲೆಗಳು ಅನಧಿಕೃತ ಮತ್ತು ಇಲಾಖೆಯಿಂದ ಅಕ್ರಮವಾಗಿ ಪಡೆಯಲಾಗಿದೆ ಎಂದು ಆರೋಪಿಗಳ ಪರ ವಕೀಲರು ಕೋರ್ಟ್‍ನಲ್ಲಿ ಹೇಳಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಸ್ವಾಮಿ, “2017ರ ಡಿ.27 ರಂದು ಬೆಳಗ್ಗೆ ದಿನಪತ್ರಿಕೆಗಳ ಜತೆಗೆ ಈ ದಾಖಲೆಗಳು ಮನೆ ಬಾಗಿಲಿನಲ್ಲಿ ಬಂದು ಬಿದ್ದಿದ್ದವು. ಅದರಲ್ಲಿ ದಂಡ ಹಾಕಿರುವ ವಿವರಗಳಿದ್ದವು. ಅದನ್ನೇ ನೀಡಿದ್ದೇನೆ” ಎಂದು ಸಮಜಾಯಿಷಿ ಕೊಟ್ಟರು. ಇದಕ್ಕೆ ಮತ್ತೆ ತಿರುಗೇಟು ನೀಡಿದ ಆರೋಪಿಗಳ ಪರ ವಕೀಲ “ಅಫಿಡವಿಟ್ ಮೂಲಕ ದಾಖಲೆಗಳ ಮೂಲಗಳ ಬಗ್ಗೆ ತಿಳಿಸಿದರೆ ಮಾತ್ರ ಪರಿಗಣಿಸಬೇಕು” ಎಂದು ವಾದಿಸಿದರು. ಪ್ರಕರಣದ ವಿಚಾರಣೆಯನ್ನು ಕೋರ್ಟ್ ಮಾರ್ಚ್ 27ಕ್ಕೆ ಮುಂದೂಡಿದೆ.

ಈ ಬೆಳವಣಿಗೆಗಳ ಬಗ್ಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಕಾಂಗ್ರೆಸ್, ಇದು ರಾಜಕೀಯ ಪ್ರೇರಿತವಾಗಿದ್ದು, ಕಾಂಗ್ರೆಸ್ ನಾಯಕರ ವಿರುದ್ಧ ಬಿಜೆಪಿ ಸರಕಾರದ ದುರುದ್ದೇಶಪೂರಿತ ತಂತ್ರವಾಗಿದೆ ಎಂದು ಆರೋಪಿಸಿದ್ದರು. ಆದರೆ ಇದೀಗ ಪಿ ಚಿದಂಬರಂ ಪತ್ರ ಕಾರ್ತಿ ಚಿದಂಬರಂ ಜೈಲು ಪಾರಾದ ಹಿನ್ನಲೆಯಲ್ಲಿ ಈಗ ಜಾಮೀನಿನಲ್ಲಿ ಹೊರಗಿರುವ ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿಯವರೂ ಬೇಗನೇ ಜೈಲು ಸೇರಲಿದ್ದಾರೆ ಎಂದು ಸ್ವಾಮಿ ಹೇಳಿಕೆ ನೀಡುತ್ತಿರುವುದನ್ನು ನೋಡಿದರೆ, ಸದ್ಯದಲ್ಲಿಯೇ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿಯವರ ಹಗರಣ ಸಾಬೀತಾಗುವ ಎಲ್ಲಾ ಲಕ್ಷಣಗಳು ಗೋಚರಿಸಿದಂತಿದೆ!!

– ಅಲೋಖಾ

Tags

Related Articles

FOR DAILY ALERTS
 
FOR DAILY ALERTS
 
Close