ಪ್ರಚಲಿತ

ರಾಹುಲ್, ಸೋನಿಯಾ ಗಾಂಧಿಯಿಂದ ಬರೋಬ್ಬರಿ ನೂರು ಕೋಟಿ ತೆರಿಗೆ ವಂಚನೆ ! ಐಟಿ ಆರೋಪ ಸಾಬೀತಾದರೆ ಅಮ್ಮ ಮಗನಿಗೆ ಜೈಲು ಶಿಕ್ಷೆ ಗ್ಯಾರಂಟಿ!

ಒಂದಲ್ಲ ಎರಡಲ್ಲ ಬರೋಬ್ಬರಿ 100 ಕೋಟಿ ತೆರಿಗೆ ಪಾವತಿಸದೆ ಸರಕಾರಕ್ಕೆ ವಂಚಿಸಿದ್ದಾರೆ ಎಂಬ ಆರೋಪ ಇದೀಗ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ರಾಹುಲ್ ಗಾಂಧಿ ಮತ್ತು ಅಮ್ಮ ಸೋನಿಯಾ ಗಾಂಧಿ ಮೇಲೆ ಬಂದಿದೆ. ಆರೋಪ ಹೊರಿಸಿದವರು ಐಟಿ ಇಲಾಖೆಯ ಅಧಿಕಾರಿಗಳು,ಕೇವಲ ಆರೋಪ ಹೊರಿಸಿ ಸುಮ್ಮನಾಗದ ಅಧಿಕಾರಿಗಳು ಅಮ್ಮ ಮಗ ಇಬ್ಬರಿಗೂ ನೋಟೀಸ್ ಜಾರಿಗೊಳಿಸಿದ್ದಾರೆ. ಈಗಾಗಲೇ ನ್ಯಾಷನಲ್ ಹೆರಾಲ್ಡ್ ಮತ್ತು ಅಗಸ್ಟಾ ವೆಸ್ಟ್ ಲ್ಯಾಂಡ್ ಹಗರಣದಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪ ಹೊತ್ತಿರುವ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿಗೆ ಇದೀಗ ಮತ್ತೊಂದು ಕಂಟಕ ಎದುರಾಗಿದೆ. 2011 – 12ರಲ್ಲಿ ಸುಮಾರು 100 ಕೋಟಿ ತೆರಿಗೆ ವಂಚಿಸಿರುವ ಸತ್ಯಾಂಶ ಇದೀಗ ಬಯಲಾಗಿದ್ದು, ಐಟಿ ಅಧಿಕಾರಿಗಳು ಇಬ್ಬರಿಗೂ ನೋಟೀಸ್ ನೀಡಿದ್ದಾರೆ. ಆರೋಪ ಸಾಬೀತಾದರೆ ಅಮ್ಮ ಮಗ ಇಬ್ಬರಿಗೂ ಜೈಲು ಶಿಕ್ಷೆ ಖಾಯಂ. ದೇಶದ ಸಂಪತ್ತನ್ನು ಲೂಟಿ ಮಾಡಿ ತಮ್ಮ ಖಜಾನೆ ತುಂಬಿಸಿಕೊಳ್ಳುವ ಕಾಂಗ್ರೆಸ್ ನಾಯಕರ ಒಂದೊಂದೇ ಹಗರಣಗಳನ್ನು ಮೋದಿ ಸರಕಾರ ಬಯಲಿಗೆಳೆಯುತ್ತಿದ್ದು, ಒಟ್ಟಾಗಿ ಎಲ್ಲಾ ಆರೋಪವೂ ಸಾಬೀತಾದರೆ ಪಕ್ಷದ ದೊಡ್ಡ ದೊಡ್ಡ ತಲೆಗಳೇ ಕಂಬಿ ಹಿಂದೆ ಹೋಗಬೇಕಾಗುತ್ತದೆ. ಯಾಕೆಂದರೆ ಇದೀಗ ಸ್ವತಃ ಸೋನಿಯಾ ಮತ್ತು ರಾಹುಲ್ ಮೇಲೆ ಐಟಿ ಇಲಾಖೆ ಕಣ್ಣಿಟ್ಟಿದ್ದು, ಒಂದೊಂದೇ ಹಗರಣವನ್ನು ಬಯಲಿಗೆಳೆಯುತ್ತಿದ್ದಾರೆ.!

ವಿಚಾರಣೆಯ ವೇಳೆ ಸಿಕ್ಕಿಬಿತ್ತು ಬಹುಕೋಟಿ ವಂಚನೆಯ ಸತ್ಯಾಂಶ!

ಈಗಾಗಲೇ ನ್ಯಾಷನಲ್ ಹೆರಾಲ್ಡ್ ಹಗರಣದಲ್ಲಿ ವಿಚಾರಣೆ ಎದುರಿಸುತ್ತಿರುವ ರಾಹುಲ್ ಮತ್ತು ಸೋನಿಯಾ ವಿರುದ್ಧ ಅಧಿಕಾರಿಗಳು ಹದ್ದಿನ ಕಣ್ಣಿಟ್ಟು ಗಮನಿಸುತ್ತಿದ್ದಾರೆ. ಈ ಕೇಸಿಗೆ ಸಂಬಂಧಪಟ್ಟಂತೆ ವಿಚಾರಣೆ ನಡೆಸುವ ಸಂದರ್ಭದಲ್ಲಿ ಈ ಇಬ್ಬರೂ ಕೂಡ ತೆರಿಗೆ ಪಾವತಿಸದೆ ಸರಕಾರಕ್ಕೆ ವಂಚಿಸಿದ್ದಾರೆ ಎಂಬ ಸತ್ಯಾಂಶವನ್ನು ಐಟಿ ಅಧಿಕಾರಿಗಳು ಹೇಳಿಕೊಂಡಿದ್ದಾರೆ. ತೆರಿಗೆ ಇಲಾಖೆಗೆ 2011-12ರಲ್ಲಿ ಆದಾಯ ತೆರಿಗೆ ಇಲಾಖೆಗೆ ತೆರಿಗೆ ಘೋಷಣೆ ಮತ್ತು ತೆರಿಗೆ ಪಾವತಿಸುವಲ್ಲಿ ವಂಚನೆ ಮಾಡಿರುವುದು ಗೊತ್ತಾಗಿದೆ. ನ್ಯಾಷನಲ್ ಹೆರಾಲ್ಡ್ ಹಗರಣದಲ್ಲೇ ಕ್ರಿಮಿನಲ್ ಕೇಸ್‌ನ ವಿಚಾರಣೆ ಎದುರಿಸುತ್ತಿರುವ ರಾಹುಲ್ ಮತ್ತು ಸೋನಿಯಾ ಕೊರಳಿಗೆ ಇದೀಗ ಮತ್ತೊಂದು ಪಾಶಾನ ಬಂದು ಬಿದ್ದಿದೆ. ಯಾಕೆಂದರೆ ಐಟಿ ಅಧಿಕಾರಿಗಳು ನೋಟೀಸ್ ಜಾರಿಗೊಳಿಸಿದ್ದು ಮುಂದಿನ ದಿನಗಳಲ್ಲಿ ಇದರ ಬಗ್ಗೆಯೂ ತನಿಖೆ ಎದುರಿಸಬೇಕಾಗುತ್ತದೆ. ಈ ಸಂದರ್ಭದಲ್ಲಿ ಹಗರಣ ಸಾಬೀತಾದರೆ ಅಮ್ಮ ಮಗ ಇಬ್ಬರೂ ಜೈಲು ಸೇರುವುದು ಗ್ಯಾರಂಟಿ.!

2011-12ರಲ್ಲಿ ಸೋನಿಯಾ ಗಾಂಧಿ 155 ಕೋಟಿ ತೆರಿಗೆ ಘೋಷಣೆ ಮಾಡಿದ್ದರು, ಅದೇ ರೀತಿ ರಾಹುಲ್ ಗಾಂಧಿ 155.4 ಕೋಟಿ ಘೋಷಣೆ ಮಾಡಿಕೊಂಡಿದ್ದರು. ಆದರೆ ಆಂಗ್ಲ ಪತ್ರಿಕೆಯೊಂದು ಹೇಳುವ ಪ್ರಕಾರ, ಇವರಿಬ್ಬರ ಆದಾಯವೂ ಘೋಷಣೆ ಮಾಡಿರುವುದಕ್ಕಿಂತ ಹೆಚ್ಚಿದೆ. ಆದರೆ ಸರಕಾರಕ್ಕೆ ವಂಚಿಸುವ ಉದ್ದೇಶದಿಂದ ಕಡಿಮೆ ಆದಾಯ ಎಂದು ಘೋಷಿಸಿದ್ದಾರೆ‌ ಎಂಬುದಾಗಿ ಈ ಹಿಂದೆ ವರದಿ ಮಾಡಿತ್ತು. ಅದೇ ರೀತಿ ರಾಹುಲ್ ಆ ವರ್ಷ 68.12 ಲಕ್ಷ ರೂಪಾಯಿ ತೆರಿಗೆ ಘೋಷಣೆ ಮಾಡಿದ್ದರೆ ಅವರ ಆದಾಯ 155.4 ಕೋಟಿ ರೂಪಾಯಿ ಎಂಬುದಾಗಿ ತೆರಿಗೆ ಇಲಾಖೆ ಹೇಳಿಕೊಂಡಿದೆ. ಇವರಿಬ್ಬರೇ ಅಲ್ಲದೆ ಕಾಂಗ್ರೆಸ್ ಮುಖಂಡ ಫರ್ನಾಂಡೀಸ್ ಅವರ ಆದಾಯ ಕೂಡ 48.93 ಕೋಟಿ ರೂಪಾಯಿ ಹೊಂದಿದ್ದರು ಎಂದು ಹೇಳಿಕೊಂಡಿದ್ದಾರೆ.!

ತಮ್ಮದು ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸಿದ ಪಕ್ಷ ಎಂದು ಹೇಳುತ್ತಲೇ ಭಾರತದ ಸಂಪತ್ತನ್ನು ಲೂಟಿ ಮಾಡಿದ ಕಾಂಗ್ರೆಸಿಗರು ನಮ್ಮ ಸರಕಾರಕ್ಕೆ ಯಾವ ರೀತಿ ವಂಚನೆ ಮಾಡಿದ್ದಾರೆ ಎಂಬುದನ್ನು ಸೂಚಿಸುತ್ತದೆ. ಯಾಕೆಂದರೆ ಯಾವುದೇ ಆಧಾರವಿಲ್ಲದೆ ಪ್ರಧಾನಿ ನರೇಂದ್ರ ಮೋದಿಯವರ ಮೇಲೆ ಹಗರಣಗಳ ಆರೋಪ ಮಾಡಿ ಚೌಕಿದಾರ್ ಚೋರ್ ಹೈ ಎಂದು ಬಿಂಬಿಸಲು ಪ್ರಯತ್ನಿಸಿದ ರಾಹುಲ್ ಗಾಂಧಿ ಎಷ್ಟು ದೊಡ್ಡ ಕಳ್ಳ ಎಂಬುದು ಇದೀಗ ಸಾಬೀತಾಗಿದೆ. ಭ್ರಷ್ಟರೆಲ್ಲರನ್ನೂ ಒಂದು ದಿನ ಬೀದಿಯಲ್ಲಿ ತಂದು ನಿಲ್ಲಿಸುತ್ತೇನೆ ಎಂದಿರುವ ಪ್ರಧಾನಿ ಮೋದಿಯವರ ಅಂದಿನ ಮಾತು ಇಂದು ನೆನಪಾಗುತ್ತಿದೆ. ಸದ್ಯಕ್ಕೆ ಈ ಆರೋಪ ಸಾಬೀತಾದರೆ ಸೋನಿಯಾ ರಾಹುಲ್ ಇಬ್ಬರಿಗೂ ಜೈಲೂಟ ಗ್ಯಾರಂಟಿ.!

–ಅರ್ಜುನ್

Tags

Related Articles

FOR DAILY ALERTS
 
FOR DAILY ALERTS
 
Close