ಪ್ರಚಲಿತ

ರೇಪ್ ವಿಷಯದಲ್ಲಿ ಪ್ರಧಾನಿಗಳೇ ಬಾಯ್ಬಿಡಿ ಎಂದ ರಘು ದೀಕ್ಷಿತ್ ಮೇಲೆಯೇ ಅತ್ಯಾಚಾರ ಆರೋಪ.! ಇಬ್ಬರು ಗಾಯಕಿಯರಿಂದ ಸೆಕ್ಸ್ ಹೆರಾಜ್‍ಮೆಂಟ್ ಬಗ್ಗೆ ಗಂಭೀರ ಆರೋಪ.?

ನೆನಪಿರಬಹುದು., ಕಳೆದ ಕೆಲ ತಿಂಗಳ ಹಿಂದೆ ಕಾಶ್ಮೀರದ ಕಥುವಾ ಎಂಬಲ್ಲಿನ ಅತ್ಯಾಚಾರ ಪ್ರಕರಣ. ವಲಸೀ ಮುಸ್ಲಿಮರೇ ಅತ್ಯಾಚಾರಗೈದು, ಅತ್ಯಾಚಾರಕ್ಕೊಳಗಾದ ಸಣ್ಣ ಬಾಲಕಿಯ ಮೃತದೇಹವನ್ನು ದೇವಾಲಯದ ಒಳಗಿಟ್ಟು ಅದನ್ನು ಹಿಂದೂಗಳೇ ಮಾಡಿದ್ದು ಎಂಬಂತೆ ಬಿಂಬಿಸಿ ರಾಷ್ಟ್ರದಾದ್ಯಂತ ಪ್ರತಿಭಟನೆ ನಡೆಸಿದ ಆ ಘಟನೆ. ಈ ಪ್ರತಿಭಟನೆಯಲ್ಲಿ ತಾನೇನೂ ಕಮ್ಮಿಯಿಲ್ಲ ಎಂಬಂತೆ ಖ್ಯಾತ ಗಾಯಕ ರಘು ದೀಕ್ಷಿತ್ ಕೂಡಾ ವರ್ತಿಸಿದ್ದರು. ಮುಸ್ಲಿಂ ಬಾಲಕಿ ಎಂದ ಮಾತ್ರಕ್ಕೆ ಹಾಗೂ ಈ ಅತ್ಯಾಚಾರವನ್ನು ಹಿಂದೂಗಳೇ ಮಾಡಿದ್ದೆಂದು ರಾಹುಲ್ ಗಾಂಧಿಯ ರೀತಿ ಕ್ಯಾಂಡಲ್ ಹಿಡಿದು, ಇತರೆ ಬಾಲಿವುಡ್ ತಾರೆಗಳ ಸಾಲಿನಲ್ಲಿ ನಿಂತು ಪೋಸ್ಟರ್ ಹಿಡಿದು ಪ್ರತಿಭಟನೆ ಸಲ್ಲಿಸಿದ್ದರು. ಆದರೆ ಯಾವಾಗ ಇದರ ಬಣ್ಣ ಬಯಲಾಗಿತ್ತೋ ನಂತರ ಈ ಎಲ್ಲಾ ಸೋಗಲಾಡಿಗಳ ಹುಟ್ಟಡಗಿತ್ತು. ಇದೀಗ ಲೈಂಗಿಕ ಕಿರುಕುಳದ ಪ್ರಕರಣ ಸ್ವತಃ ರಘು ದೀಕ್ಷಿತ್‍ಗೇ ಅಂಟಿಕೊಂಡಿದೆ.

ಮಾಡಿದ ಪಾಪ ಎಲ್ಲೂ ಹೋಗೋಲ್ಲ. ಅಂದ ಹಾಗೆ ರಘು ದೀಕ್ಷಿತ್ ಕೋಮುವಾದದ ವಿಷಭೀಜ ಬಿತ್ತಿ ಕೆಲವೇ ಸಮಯಗಳಾಗಿವೆ ಅಷ್ಟೇ. ಇದೀಗ ಸ್ವತಃ ರಘು ದೀಕ್ಷಿತ್ ಅವರ ಮೇಲೆಯೇ ಲೈಂಗಿಕ ಕಿರುಕುಳ ಆರೋಪಗಳು ಎದುರಾಗಿವೆ. ಇತ್ತೀಚೆಗೆ ಭಾರತದಲ್ಲಿ ಮೀಟೂ ಆಂದೋಲನ ಭಾರೀ ಸುದ್ಧಿಯಲ್ಲಿದ್ದು ಈಗ ರಘು ದೀಕ್ಷಿತ್ ಅವರ ಮೇಲೆಯೂ ಇದು ಸಿದ್ಧಿಸಿದೆ. ರಘು ದೀಕ್ಷಿತ್ ತಮಗೆ ಲೈಂಗಿಕ ಕಿರುಕುಳ ಕೊಟ್ಟಿದ್ದಾರೆ ಎಂದು ಇಬ್ಬರು ಬಾಲಕಿಯರು ಆರೋಪಿಸಿದ್ದಾರೆ ಎಂದು ಗಾಯಕಿ ಚಿನ್ಮಯಿ ಶ್ರೀಪಾದ ಟ್ವೀಟ್ ಮಾಡಿದ್ದು ರಾಷ್ಟ್ರಮಟ್ಟದಲ್ಲೇ ವ್ಯಾಪಕ ಚರ್ಚೆಗಳಾಗುತ್ತಿದೆ.

“ಹಲವು ವರ್ಷಗಳ ಹಿಂದೆ ರಘು ದೀಕ್ಷಿತ್ ಅವರು ನನ್ನನ್ನು ರೆಕಾರ್ಡಿಂಗ್ ಸ್ಟೂಡಿಯೋ ಗೆ ಬರ ಹೇಳಿದ್ದರು. ನಂತರ ಅವರು ತಮ್ಮ ಪತ್ನಿಯ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದರು (ಎಲ್ಲಾ ಗಂಡಸರು ಮಾತನಾಡುವ ಹಾಗೆ). ಅವರ ಪತ್ನಿ ಉತ್ತಮ ವ್ಯಕ್ತಿ” ಎಂದು ಚಿನ್ಮಯಿ ಶ್ರೀಪಾದ ಟ್ವೀಟ್ ಮಾಡಿದ್ದಾರೆ. “ರೆಕಾರ್ಡಿಂಗ್ ಮಾಡುತ್ತಿದ್ದಾಗ ರಘು ದೀಕ್ಷಿತ್ ನನ್ನನ್ನು ಬರಸೆಳೆದು ಚುಂಬಿಸುವಂತೆ ಕೇಳಿದರು. ನಂತರ ನನ್ನ ಚೆಕ್ ಗೆ ಸಹಿ ಹಾಕುವಾಗ—-. ನಂತರ ಬಾಗಿಲ ಬಳಿ ನನ್ನನ್ನು ಎತ್ತಲು ನೋಡಿದರು. ನಾನು ಅಳುತ್ತಾ ಓಡಿದೆ” ಎಂದು ಗಾಯಕಿಯೋರ್ವರು ಆರೋಪಿಸಿದ್ದಾರೆಂದು ಚಿನ್ಮಯಿ ಟ್ವೀಟ್ ಮಾಡಿದ್ದಾರೆ.

ತಪ್ಪೊಪ್ಪಿಕೊಂಡ ರಘು ದೀಕ್ಷಿತ್.!

ಚಿನ್ಮಯಿ ಎಂಬ ಗಾಯಕಿ ಟ್ವೀಟ್ ಮಾಡಿದನ್ನು ಪ್ರತಿಕ್ರಿಯಿಸಿದ ರಘು ದೀಕ್ಷಿತ್ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾರೆ. “ಚಿನ್ಮಯಿ ಪೋಸ್ಟ್ ಮಾಡಿರುವ ಘಟನೆ ನನಗೆ ಈಗಲೂ ನೆನಪಿದೆ. ನಾನು ಆ ವ್ಯಕ್ತಿಯೊಂದಿಗೆ ಈ ಹಿಂದೆಯೂ ಕ್ಷಮೆ ಕೇಳಿದ್ದೇನೆ. ಬೇಕಿದ್ದರೆ ಮತ್ತೊಮ್ಮೆ ಕ್ಷಮೆ ಕೇಳುತ್ತೇನೆ. ನನ್ನ ಭಾಗದಿಂದ ತಪ್ಪಾಗಿದೆ. ನಾನು ಆಕೆಯನ್ನು ಅಪ್ಪಿಕೊಂಡೆ. ನಂತರ ಚುಂಬಿಸಲು ಯತ್ನಿಸಿದೆ” ಎಂದು ತಪ್ಪೊಪ್ಪಿಕೊಂಡಿದ್ದಾರೆ.

ಮತ್ತೊಂದು ಟ್ವೀಟ್…

ರಘು ದೀಕ್ಷಿತ್ ನೀಡಿರುವ ಸ್ಪಷ್ಟನೆಯ ಬೆನ್ನಲ್ಲೇ ಚಿನ್ಮಯಿ ಮತ್ತೊಂದು ಟ್ವೀಟ್ ಮಾಡಿದ್ದಾರೆ. “ಹೊಸ ಚಿತ್ರಕ್ಕಾಗಿ ತನ್ನ ಟ್ಯೂನ್ ಗಳನ್ನು ಆಲಿಸುವಂತೆ ಮತ್ತು ಅಭಿಪ್ರಾಯ ತಿಳಿಸುವಂತೆ ನನ್ನನ್ನು ಮನೆಗೆ ಕರೆದಿದ್ದರು. ಅವರು ನಂತರ ಟ್ಯೂನ್ ಪ್ಲೇ ಮಾಡುತ್ತಾ “ನನ್ನ ತೊಡೆಯಲ್ಲಿ ಕುಳಿತುಕೊಳ್ಳಿ, ಆಗ ಹತ್ತಿರದಿಂದ ಕೇಳಲು ಸಾಧ್ಯವಾಗುತ್ತೆ” ಎಂದರು. ಕೊನೆಗೆ ಏನೂ ನಡೆಯುವುದಿಲ್ಲ ಎಂದು ಅವರಿಗೆ ತಿಳಿಯಿತು ಎಂದು ಮತ್ತೋರ್ವ ಗಾಯಕಿ ನನ್ನನ್ನ ಬಳಿ ಆರೋಪಿಸಿದ್ದರು” ಎಂದು ಚಿನ್ಮಯಿ ಟ್ವೀಟ್ ಮಾಡಿದ್ದಾರೆ.

ಒಟ್ಟಾರೆ ಕೋಮುಧ್ವೇಷದ ಕೆಂಡ ಕಾರುತ್ತಾ, ತಾನೊಬ್ಬ ದೇಶದಲ್ಲಿ ಮತ್ತೊಂದು ಬಲವಂತದ ಲೈಂಗಿಕ ಚಟುವಟಿಕೆಯನ್ನು ವಿರೋಧಿಸುವ ಶ್ರೇಷ್ಟ ವ್ಯಕ್ತಿಯೆಂದು ಬಿಂಬಿಸಲು ಹೊರಟಿದ್ದ ಪ್ರಚಾರ ಪ್ರಿಯ ರಘು ದೀಕ್ಷಿತ್ ಮೇಲೆ ಇದೀಗ ಸ್ವತಃ ಲೈಂಗಿಕ ಕೇಸ್ ಅಂಟಿಕೊಂಡಿದ್ದು ಮುಖಕ್ಕೆ ಮಸಿ ಬಳಿದ ಹಾಗೆ ಆಗಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಕಥುವಾ ರೇಪ್ ಕೇಸಿನಲ್ಲಿ ಪ್ರಶ್ನಿಸಿ, ಕೈನಲ್ಲಿ ಸ್ಲೇಟ್ ಹಿಡಿದುಕೊಂಡು ಪೋಸ್ ಕೊಟ್ಟಿದ್ದ ರಘು ದೀಕ್ಷಿತ್ ಇದೀಗ ತಾನೇ ಲೈಂಗಿಕ ಅಪರಾಧಿ ಆಗಿದ್ದಂತು ವಿಪರ್ಯಾಸ.

-ಏಕಲವ್ಯ

Tags

Related Articles

FOR DAILY ALERTS
 
FOR DAILY ALERTS
 
Close