ಪ್ರಚಲಿತ

ಅಯ್ಯಪ್ಪ ಸ್ವಾಮಿ ದೇವರೇ ಅಲ್ಲವೆಂದ ನಗರ ನಕ್ಸಲ್ ಪ್ರಕಾಶ್ ರೈ.! ಮತ್ತೆ ಪ್ರಚಾರಕ್ಕಾಗಿ ಹುಚ್ಚಾಟ ಆರಂಭಿಸಿದ ಖಳನಾಯಕ.!

ಮೂರು ಬಿಟ್ಟವರು ಊರಿಗೆ ದೊಡ್ಡವರು ಎಂಬ ಮಾತು ನಟ ಪ್ರಕಾಶ್ ರಾಜ್‌ಗೆ ಹೇಳಿ ಮಾಡಿಸಿದಂತಿದೆ‌. ಯಾಕೆಂದರೆ ತಾನು ಏನು ತನ್ನ ವ್ಯಕ್ತಿತ್ವ ಏನು ಎಂಬುದನ್ನು ಪದೇ ಪದೇ ಪ್ರದರ್ಶಿಸುತ್ತಿರುವ ಪ್ರಕಾಶ್ ರಾಜ್, ಸದಾ ಒಂದಿಲ್ಲೊಂದು ವಿವಾದಾತ್ಮಕ ಹೇಳಿಕೆ ನೀಡಿ ಸುದ್ದಿಯಲ್ಲಿರುತ್ತಾರೆ. ಹಿಂದೂ ಧರ್ಮವನ್ನು ಅವಮಾನಿಸಿ ಮಾತನಾಡುವ ಪ್ರಕಾಶ್ ರಾಜ್ ಸದ್ಯ ಶಬರಿಮಲೆ ವಿಚಾರವಾಗಿ ಭಾರೀ ಕೀಳಾಗಿ ಮಾತನಾಡಿ ಹೊಸ ವಿವಾದ ಸೃಷ್ಟಿಸಿದ್ದಾರೆ. ದೇಶಾದ್ಯಂತ ಚರ್ಚೆಗೆ ಗ್ರಾಸವಾಗಿರುವ ಶಬರಿಮಲೆ ಕ್ಷೇತ್ರ ಸದ್ಯ ಕಾನೂನು ಚೌಕಟ್ಟಿಗೆ ಬಿದ್ದು ತನ್ನ ಪಾವಿತ್ರ್ಯತೆ ಕಳೆದುಕೊಳ್ಳುತ್ತಿದೆ. ಸುಪ್ರೀಂ ಕೋರ್ಟ್ ತೀರ್ಪಿನ ಪ್ರಕಾರ ಎಲ್ಲಾ ವಯಸ್ಸಿನ ಮಹಿಳೆಯರೂ ಕೂಡ ಸನ್ನಿಧಾನಕ್ಕೆ ಪ್ರವೇಶಿಸಬಹುದು, ಆದರೆ ದೇವಾಲಯದ ನೀತಿ ನಿಯಮದ ಪ್ರಕಾರ ದೇವಾಲಯ ಪ್ರವೇಶಿಸಲು ಮಹಿಳೆಯರಿಗೆ ವಯಸ್ಸಿನ ಮಿತಿ ಇದೆ. ಆದ್ದರಿಂದ ಭಾರೀ ವಿರೋಧ ವ್ಯಕ್ತವಾಗುತ್ತಿದ್ದು ಶಾಂತಿಗೆ ಹೆಸರಾಗಿದ್ದ ಶಬರಿಮಲೆ ಇಂದು ಘರ್ಷಣೆಗೆ ಕಾರಣವಾಗುವಂತೆ ಮಾಡಿದೆ. ಇದರ ಮಧ್ಯೆ ಇದೀಗ ಪ್ರಕಾಶ್ ರಾಜ್, ಹೆಣ್ಣು ಮಕ್ಕಳನ್ನು ನೋಡದ ಶಬರಿಮಲೆ ಅಯ್ಯಪ್ಪ ದೇವರೇ ಅಲ್ಲ, ಹೆಣ್ಣು ಮಕ್ಕಳಿಗೆ ದೇವರ ದರ್ಶನ ಮಾಡಲು ಅವಕಾಶ ಮಾಡಿಕೊಡದ ಧರ್ಮ ನನ್ನ ಪ್ರಕಾರ ಧರ್ಮವೇ ಅಲ್ಲ ಎಂದು ಮತ್ತೊಂದು ವಿವಾದ ಸೃಷ್ಟಿಸಿದ್ದಾರೆ.!!

ಶಬರಿಮಲೆಗೆ ಹೋಗಲು ನನಗೆ ಇಚ್ಚೇ ಇಲ್ಲ!

ಸದಾ ಹಿಂದೂ ಧರ್ಮದ ಆಚರಣೆಗಳ ಬಗ್ಗೆ ಕೀಳಾಗಿ ಮಾತನಾಡುವ ಪ್ರಕಾಶ್ ರಾಜ್‌ನಂತವರು ತಮ್ಮ ತೀಟೆ ತೀರಿಸಿಕೊಳ್ಳಲು ಯಾವ ಕೀಳು ಮಟ್ಟಕ್ಕೂ ಇಳಿಯುತ್ತಾರೆ ಎಂಬುದಕ್ಕೆ ಈ ಹೇಳಿಕೆಯೇ ಉದಾಹರಣೆ. ಯಾಕೆಂದರೆ ಶಬರಿಮಲೆ ದೇವಾಲಯದ ಸಂಪ್ರದಾಯದ ಪ್ರಕಾರ ಮಹಿಳೆಯರಿಗೆ ವಯಸ್ಸಿನ ಮಿತಿ ಇದೆ, ಅದೇ ರೀತಿ ಇಷ್ಟೊಂದು ವರ್ಷ ನಡೆಯುತ್ತಾ ಬಂದಿದೆ. ಆದರೆ ಈಗ ಸುಪ್ರೀಂ ಕೋರ್ಟ್ ತೀರ್ಪು ನೀಡುತ್ತಿದ್ದಂತೆ ಹಿಂದೂ ವಿರೋಧಿಗಳು ಎಲ್ಲಾ ಒಟ್ಟಾಗಿ ಬಾಯಿ ಬಡಿದುಕೊಳ್ಳಲು ಆರಂಭಿಸಿದೆ. ಶಬರಿಮಲೆಗೆ ಎಲ್ಲಾ ಮಹಿಳೆಯರಿಗೂ ಪ್ರವೇಶ ನೀಡಬೇಕು, ಹೆಣ್ಣು ಮಕ್ಕಳಿಗೆ ದೇವರ ದರ್ಶನ ನೀಡದೇ ಇರುವುದು ಧರ್ಮದ ಆಚರಣೆ ಅಲ್ಲ. ಅಂತಹ ಆಚರಣೆ ಮಾಡುವ ಧರ್ಮವನ್ನು ನಾನು ಧರ್ಮ ಎಂದು ಒಪ್ಪಿಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ. ನನಗೆ ಶಬರಿಮಲೆಗೆ ಹೋಗಲು ಇಚ್ಚೇಯಿಲ್ಲ, ಇಚ್ಛೆ ಇರುವ ಮಹಿಳೆಯರಿಗೆ ಯಾಕೆ ಅಡ್ಡಿಪಡಿಸುತ್ತೀರಿ ಎಂದು ಪ್ರಶ್ನಿಸಿದ ಪ್ರಕಾಶ್ ರಾಜ್, ಹೆಣ್ಣು ಮಕ್ಕಳನ್ನು ಕಾಣದ ಅಯ್ಯಪ್ಪ ದೇವರೇ ಅಲ್ಲ ಎಂದು ವಿವಾದದ ಹೇಳಿಕೆ ನೀಡಿದ್ದಾನೆ. ಸ್ವತಃ ಸುಪ್ರೀಂ ಕೋರ್ಟ್ ಆದೇಶ ನೀಡಿದೆ ಮಹಿಳೆಯರು ಪ್ರವೇಶಿಸಬಹುದು ಎಂದು, ಆದರೆ ಅಯ್ಯಪ್ಪ ಭಕ್ತರು ಮತ್ತು ಹಿಂದೂಪರ ಸಂಘಟನೆಗಳು ಏಕೆ ಅಡ್ಡಿಪಡಿಸುತ್ತಿವೆ ಎಂದು ಹೇಳಿದ ಪ್ರಕಾಶ್ ರಾಜ್, ಮಹಿಳೆಯರನ್ನು ದೇವಾಲಯ ಪ್ರವೇಶಿಸಲು ಅಡ್ಡಿಪಡಿಸಬಾರದು ಎಂದು ಹೇಳಿದ್ದಾರೆ.!

ತನ್ನ ಹೆಂಡತಿಯನ್ನು ನೋಡಲಾಗದ ಪ್ರಕಾಶ್ ರಾಜ್‌ಗೆ ಅಯ್ಯಪ್ಪನ ಬಗ್ಗೆ ಏಕೆ ಚಿಂತೆ?

ಪರ ಹೆಣ್ಣು ಮಕ್ಕಳ ಬಗ್ಗೆ ಭಾರೀ ಚಿಂತೆ ಮಾಡುವ ಪ್ರಕಾಶ್ ರಾಜ್ ಸ್ವತಃ ತನ್ನ ಹೆಂಡತಿಯ ಬಗ್ಗೆ ಏಕೆ ಚಿಂತಿಸುವುದಿಲ್ಲ. ಹೆಣ್ಣು ಮಕ್ಕಳನ್ನು ಕಾಣದ ಅಯ್ಯಪ್ಪ ದೇವರೇ ಅಲ್ಲ ಎನ್ನುವ ಪ್ರಕಾಶ್ ರಾಜ್ ತನ್ನ ಹೆಂಡತಿಯನ್ನು ಸರಿಯಾಗಿ ನೋಡಿಕೊಳ್ಳದೆ ನಡು ಬೀದಿಯಲ್ಲಿ ಕೈಬಿಟ್ಟು ಯಾರ ಜೊತೆ ಕೈಜೋಡಿಸಿದ್ದಾರೆ ಎಂಬುದನ್ನು ವಿವರವಾಗಿ ವರ್ಣಿಸಬೇಕಾಗಿಲ್ಲ. ಯಾಕೆಂದರೆ ಅಯ್ಯಪ್ಪ ಸ್ವಾಮಿಯ ಇತಿಹಾಸ ಗೊತ್ತಿದ್ದ ಯಾರೂ ಕೂಡ ಈ ರೀತಿ ಮಾತನಾಡಲು ಸಾಧ್ಯವಿಲ್ಲ, ಆದರೆ ತೀಟೆ ತೀರಿಸಿಕೊಳ್ಳಲು ಕಾಯುತ್ತಲೇ ಇರುವ ಪ್ರಕಾಶ್ ರಾಜ್‌ನಂತವರಿಗೆ ಹಿಂದೂ ಧರ್ಮದ ಬಗ್ಗೆ ಕೀಳಾಗಿ ಮಾತನಾಡುವುದೇ ಒಂದು ಕೆಲಸವಾಗಿ ಬಿಟ್ಟಿದೆ. ಬಿಟ್ಟಿ ಪ್ರಚಾರ ಗಿಟ್ಟಿಸಿಕೊಳ್ಳಬಹುದು ಎಂದು ನಾಲಗೆ ಹೊರಳಾಡಿಸುವ ಪ್ರಕಾಶ್ ರಾಜ್ ಇತಿಹಾಸ ಏನು ಎಂಬುದು ಇಡೀ ದೇಶಕ್ಕೆ ಗೊತ್ತಿದೆ. ಅಷ್ಟಕ್ಕೂ ಪ್ರಕಾಶ್ ರಾಜ್‌ಗೆ ಶಬರಿಮಲೆಯ ಬಗ್ಗೆ ಯಾವ ಮಾಹಿತಿ ಇದೆ ಎಂದು ಈ ರೀತಿ ಮಾತನಾಡುತ್ತಾರೆ? ತನಗೆ ಹೋಗಲು ಇಚ್ಚೇಯಿಲ್ಲ ಎನ್ನುವ ಪ್ರಕಾಶ್ ರಾಜ್‌ಗೆ ಏಕೆ ಬೇರೆಯವರಿಗ ಚಿಂತೆ? ಏನಾದರೊಂದು ಹೇಳಿಕೆ ನೀಡಿ ಪ್ರಚಾರ ಪಡೆಯುವ ಉದ್ದೇಶವಿದ್ದರೆ ನಿಮ್ಮ ಹಿನ್ನಲೆಯನ್ನೇ ಕೆದಕೋಣ ಪ್ರಕಾಶ್ ರಾಜ್ ಅವರೇ, ಎಲ್ಲರೂ ತಿಳಿಯಲಿ ನಿಮ್ಮ ಅಸಲಿ ಮುಖವನ್ನು..!!!

–ಎಂ.ಎಸ್. ಕುಮಾರ್

Tags

Related Articles

FOR DAILY ALERTS
 
FOR DAILY ALERTS
 
Close