ಪ್ರಚಲಿತ

ಪ್ರಕಾಶ್ ಜಾವ್ಡೇಕರ್ ಬಿಚ್ಚಿಟ್ಟರು ಕರ್ನಾಟಕದ ಗೆಲುವಿನ ಕಹಾನಿ.!! ಮಾಧ್ಯಮದಲ್ಲಿ ಕರ್ನಾಟಕ ಉಸ್ತುವಾರಿಗಳ ಸ್ಪೋಟಕ ಸಂದರ್ಶನ!!

ರಾಜ್ಯ ವಿಧಾನ ಸಭೆಗೆ ಚುನಾವಣೆ ಸಮೀಪಿಸುತ್ತಿದ್ದಂತೆಯೇ ರಾಜ್ಯ ರಾಜಕೀಯ ಪಕ್ಷಗಳ ಪ್ರಚಾರದ ಅಬ್ಬರಗಳು ಮೇಲೈಸಿವೆ. ರಾಜ್ಯದಲ್ಲಿ ಕಳೆದ ಐದು ವರ್ಷಗಳಿಂದ ರಾಜ್ಯಬಾರ ನಡೆಸುತ್ತಿರುವ ರಾಜ್ಯ ಕಾಂಗ್ರೆಸ್ ಸರ್ಕಾರದ ದುರಾಡಳಿತವು ಭಾರೀ ಸದ್ದು ಮಾಡುತ್ತಿದ್ದು, ಮುಂದಿನ ವಿಧಾನ ಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಅಧಿಕಾರ ಸಿಗೋದಿಲ್ಲ ಎಂಬ ಅಂಶವು ಈಗಾಗಲೇ ಅನೇಕ ಸಮೀಕ್ಷೆಯಲ್ಲಿ ಬಹಿರಂಗವಾಗಿದೆ.

ಇತ್ತೀಚೆಗೆ ಕರ್ನಾಟಕ ರಾಜ್ಯ ವಿಧಾನ ಸಭಾ ಚುನಾವಣೆಯ ಉಸ್ತುವಾರಿಗಳಾದ ಕೇಂದ್ರ ಸಚಿವರಾದ ಶ್ರೀ ಪ್ರಕಾಶ್ ಜಾವ್ಡೇಕರ್ ಅವರ ಸ್ಪೋಟಕ ಸಂದರ್ಶನವನ್ನು ಕನ್ನಡ ಸುದ್ಧಿವಾಹಿನಿಯಾದ ದಿಗ್ವಿಜಯದಲ್ಲಿ ನೀಡಿದ್ದಾರೆ. ಈ ವೇಳೆ ಕರ್ನಾಟಕ ವಿಧಾನ ಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ ಮಾಡುವಂತಹ ಸ್ಟಾಟರ್ಜಿ ಈ ಎಲ್ಲಾ ಸಂಗತಿಗಳನ್ನು ಪ್ರಕಾಶ್ ಜಾವ್ಡೇಕರ್ ಬಿಚ್ಚಿಟ್ಟಿದ್ದಾರೆ.

150 ಸ್ಥಾನ ಪಕ್ಕಾ…

ಮುಂದಿನ ಕರ್ನಾಟಕ ರಾಜ್ಯ ವಿಧಾನ ಸಭಾ ಚುನಾವಣೆಯಲ್ಲಿ ರಾಜ್ಯ ಭಾರತೀಯ ಜನತಾ ಪಕ್ಷ 150 ಸ್ಥಾನಗಳನ್ನು ಗಳಿಸುವ ಮೂಲಕ ಅಧಿಕಾರದ ಗದ್ದುಗೆಯನ್ನು ಏರಲಿದ್ದೇವೆ ಎಂದು ತಮ್ಮ ಆತ್ಮ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ. ನಮ್ಮದು ಮಿಷನ್ 150+ ಎಂಬ ಟಾರ್ಗೆಟ್. ಈ ಟಾರ್ಗೆಟ್‍ನ್ನು ನಾವು ಖಂಡಿತವಾಗಿಯೂ ಪೂರೈಸುತ್ತೇವೆ. ಇದರಲ್ಲಿ ಯಾವುದೇ ಸಂಶಯವಿಲ್ಲ. ಮುಂದಿನ ಬಾರಿಯ ರಾಜ್ಯ ವಿಧಾನ ಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ 20ನೇ ರಾಜ್ಯವನ್ನು ಗೆಲ್ಲುವುದು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಕರ್ನಾಟಕದಲ್ಲಿ ಬಿಜೆಪಿ ಗೆಲುವು ಸುಲಭವಲ್ಲ ಎನ್ನಿಸುತ್ತಿಲ್ಲವೇ?

-ಇಲ್ಲ. ಇಲ್ಲ. ಕರ್ನಾಟಕದಲ್ಲಿ ಗೆಲವು ಅತ್ಯಂತ ಸುಲಭದ ಕೆಲಸ. ಆದರೆ, ಕಾಂಗ್ರೆಸ್​ಗೆ ಕಷ್ಟದ ಕೆಲಸ. ಅವರು ಇಲ್ಲಿ ಗೆಲ್ಲುವುದು ಸಾಧ್ಯವೇ ಇಲ್ಲ. ಬಿಜೆಪಿ ಎಲ್ಲೆಡೆ ಅಸ್ತಿತ್ವದಲ್ಲಿದೆ. ಮೇ 10 ರಂದು ಚುನಾವಣೆ ಫಲಿತಾಂಶ ಪ್ರಕಟವಾದ ಬಳಿಕ ನಿಮಗೆ ಗೊತ್ತಾಗುತ್ತದೆ. ಬಿಜೆಪಿ ಮೂರನೇ ಎರಡರಷ್ಟು ಬಹುಮತದೊಂದಿಗೆ ಅಧಿಕಾರ ಹಿಡಿಯಲಿದೆ. ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಲಿದ್ದಾರೆ.

ರಾಜ್ಯದಲ್ಲಿ ಅಭಿವೃದ್ಧಿ ಮಾಡುತ್ತಿದ್ದೇವೆ ಎಂದು ಕಾಂಗ್ರೆಸ್ ಹೇಳುತ್ತಿದೆಯಲ್ಲ?

-ನಾವು ರಾಜ್ಯ ಸರ್ಕಾರವನ್ನು ಪ್ರಶ್ನಿಸುತ್ತಲೇ ಇದ್ದೇವೆ. ಇತ್ತೀಚೆಗೆ, ರಾಜ್ಯ ಬಿಜೆಪಿ ನಾಯಕರು ಸರ್ಕಾರದ ವಿರುದ್ಧ ಪ್ರಶ್ನೆಗಳ ಸುರಿಮಳೆ ಸುರಿಸುತ್ತಿದ್ದಾರೆ. 3,500ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸರ್ಕಾರ, ನೀರಾವರಿ ಕಾಮಗಾರಿಗಳ ಕುರಿತು ಎರಡು ಪುಟದ ಜಾಹೀರಾತು ನೀಡಿದೆ. ಭವಿಷ್ಯದ ಕಾಮಗಾರಿಗಳಿವೆಯೇ ಹೊರತು, ಕಳೆದ 5 ವರ್ಷಗಳಲ್ಲಿ ಏನು ಮಾಡಿದ್ದೇವೆ ಎಂದು ಎಲ್ಲಿಯೂ ಹೇಳಿಲ್ಲ. ರಾಜಕೀಯದಲ್ಲಿ ಕೋಮುವಾದ ಬೆರೆಸುತ್ತಿದ್ದಾರೆ. ಈ ನೀತಿಗಳು ರಾಜ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತವೆ.

ಬಿಜೆಪಿಯ ಹಲವು ನಾಯಕರು ಪಕ್ಷ ತೊರೆಯುತ್ತಿದ್ದಾರೆ. ಇದಕ್ಕೇನು ಹೇಳುತ್ತೀರಿ?

-ಕೆಲವರಿಗೆ ಟಿಕೆಟ್ ಖಾತ್ರಿಯಾಗಿಲ್ಲ. ಕೆಲವರು ಸ್ಥಳೀಯ ಅಂಶಗಳನ್ನು ಪರಿಗಣಿಸಿ, ತಮಗೆ ತಾವೇ ಕೆಲವು ರಣತಂತ್ರಗಳನ್ನು ರೂಪಿಸಿಕೊಂಡಿದ್ದಾರೆ. ಅಂತಹವರು ಪಕ್ಷ ಬಿಡುತ್ತಿದ್ದಾರೆ. ಆದರೆ, ಹೆಚ್ಚು ಜನ ಬಿಜೆಪಿ ಸೇರ್ಪಡೆಯಾಗುತ್ತಿದ್ದಾರೆ. ಕಳೆದ ವಾರ ಸಂಡೂರಿನ ಮಹಾರಾಜ ಬಿಜೆಪಿ ಸೇರ್ಪಡೆಯಾದರು. ಇದು ಬಳ್ಳಾರಿಯಲ್ಲಿ ಪಕ್ಷಕ್ಕೆ ಬಲ ತುಂಬಲಿದೆ. ಇನ್ನೂ ಹಲವರು ಸರದಿಯಲ್ಲಿ ಕಾಯುತ್ತಿದ್ದಾರೆ. ಇಬ್ಬರು ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ.

ಬಿಜೆಪಿ ನಾಯಕರ ಸ್ಲಂ ವಾಸ್ತವ್ಯದ ಹಿಂದಿರುವ ಗುಟ್ಟೇನು?

ಕಾಂಗ್ರೆಸ್ ಜತೆ ಗುರುತಿಸಿಕೊಂಡಿದ್ದ ಬಡವರು ಈಗ ಮೋದಿ ಮತ್ತು ಬಿಜೆಪಿ ಜತೆ ಗುರುತಿಸಿಕೊಳ್ಳುತ್ತಿದ್ದಾರೆ. ಮುಂದಿನ 5 ವರ್ಷದಲ್ಲಿ ಮೋದಿ ಮಾತ್ರ ನಮಗೆ ಸೂರಿನ ಭರವಸೆ ನೀಡಬಲ್ಲರು, ಸ್ಲಂಗಳು ಮಾಯವಾಗುತ್ತವೆ ಎಂಬುದನ್ನು ಅರಿತಿದ್ದಾರೆ.

ನಿಮ್ಮ ಸಿಎಂ ಅಭ್ಯರ್ಥಿ ಯಡಿಯೂರಪ್ಪ ವಿರುದ್ಧ ಹಲವು ಆರೋಪಗಳನ್ನು ಕಾಂಗ್ರೆಸ್ ಹೊರಿಸುತ್ತಿದೆ?

ಈ ಆರೋಪಗಳೆಲ್ಲವೂ ಸಾಬೀತಾಗುವುದಿಲ್ಲ. ಯಡಿಯೂರಪ್ಪ ಖುಲಾಸೆಯಾಗಿದ್ದಾರೆ. ಅವರು ಅತ್ಯಂತ ಜನಪ್ರಿಯ ನಾಯಕ. ಮುಂದಿನ ಟಾರ್ಗೆಟ್ ನೀವೇ ಎಂದು ವಿಧಾನಸಭೆಯಲ್ಲಿ ಸಿ.ಟಿ. ರವಿ ಅವರಿಗೆ ಕಾಂಗ್ರೆಸ್ ಸದಸ್ಯರೊಬ್ಬರು ಹೇಳಿದ್ದರು. ಕಾಂಗ್ರೆಸ್ಸಿನ ಅಸಲಿ ಮುಖ. ಬೆದರಿಕೆಗಳಿಗೆ ಮಣಿಯಲ್ಲ. ಹೋರಾಡುತ್ತೇವೆ. ಎಸ್​ಡಿಪಿಐ, ಪಿಎಎಫ್​ಐ ಬ್ಯಾನ್ ಮಾಡಲೇಬೇಕಿದ್ದ ಸರ್ಕಾರ, ಅವಕ್ಕೆ ಸ್ವಾಗತ ನೀಡುತ್ತಿದೆ.

 ಈ ಸಂಘಟನೆಗಳ ವಿರುದ್ಧ ಕೇಂದ್ರ ಸರ್ಕಾರ ಏಕೆ ಕ್ರಮ ಕೈಗೊಳ್ಳುತ್ತಿಲ್ಲ?

ಕಾನೂನು ಸುವ್ಯವಸ್ಥೆ ರಾಜ್ಯದ ವಿಚಾರ. ಕೇಂದ್ರ ಸರ್ಕಾರ ಮೂಗು ತೂರಿಸುವಂತಿಲ್ಲ. ಬೆಂಗಳೂರಿನ ಪಾದಚಾರಿ ಮಾರ್ಗದಲ್ಲೇ ಅತ್ಯಾಚಾರಗಳು ನಡೆಯುತ್ತಿವೆ. ಪೊಲೀಸರಿಗೇ ರಕ್ಷಣೆ ಇಲ್ಲ. ಪೊಲೀಸರ ಪಿಸ್ತೂಲ್, ರೈಫಲ್​ಗಳನ್ನು ಕಿತ್ತುಕೊಳ್ಳುತ್ತಿದ್ದಾರೆ. ಇದು ರಾಜ್ಯ ಸರ್ಕಾರ ಕಾನೂನು ಸುವ್ಯವಸ್ಥೆಯ ಪ್ರತಿಬಿಂಬ.

ಎಲ್ಲ ಸಮೀಕ್ಷೆಗಳೂ ಅತಂತ್ರ ಸ್ಥಿತಿ ಎನ್ನುತ್ತಿವೆಯಲ್ಲ?

ಸರ್ವೆಗಳ ಬಗ್ಗೆ ಸಹಮತ ವ್ಯಕ್ತಪಡಿಸಲ್ಲ. ಉತ್ತರಪ್ರದೇಶ ಚುನಾವಣೆಗೂ ಮುನ್ನ ಬಿಜೆಪಿ 160 ರಿಂದ 180 ಸ್ಥಾನಗಳನ್ನು ಗೆಲ್ಲುತ್ತದೆ ಎಂದು ಸರ್ವೆಗಳು ಹೇಳಿದ್ದವು. ಬಿಜೆಪಿ 325 ಸ್ಥಾನ ಪಡೆಯಿತು.

ಪರಿವರ್ತನಾ ಯಾತ್ರೆ ಬಳಿಕ ಯಾವ ಪರಿವರ್ತನೆ ಕಂಡು ಬಂದಿದೆ?

ಪರಿವರ್ತನಾ ರ‍್ಯಾಲಿ ಅಭೂತಪೂರ್ವ ಯಶಸ್ಸು ಕಂಡಿದೆ. ಬೆಂಗಳೂರಿನಲ್ಲಿ ಮೋದಿಯವರು ಚಾರಿತ್ರಿಕ ಮತ್ತು ಬೃಹತ್ ರ‍್ಯಾಲಿ ಉದ್ದೇಶಿಸಿ ಮಾತನಾಡಿದರು. ಫೆ.19ಕ್ಕೆ ಮೈಸೂರಿಗೆ, 27ಕ್ಕೆ ದಾವಣಗೆರೆಗೆ ಪ್ರಧಾನಿ ಮೋದಿ ಬರಲಿದ್ದಾರೆ.

ಮೋದಿಯವರನ್ನಷ್ಟೇ ಬಿಂಬಿಸೋದು ಏಕೆ? ರಾಜ್ಯದಲ್ಲಿ ಸಮರ್ಥರಿಲ್ಲವೇ?

ನಮ್ಮ ಘೊಷಣೆಯೇ ಕರ್ನಾಟಕದ ವಿಕಾಸ ಜೋಡಿ, ಯಡಿಯೂರಪ್ಪ-ಮೋದಿ. ಇಬ್ಬರನ್ನೂ ಬಿಂಬಿಸುತ್ತಿದ್ದೇವೆ.

ಜನ ಬಿಜೆಪಿಗೆ ಏಕೆ ಮತ ನೀಡಬೇಕು?

ನಾವು ತಾರತಮ್ಯ ಮಾಡುವುದಿಲ್ಲ. ಸಬ್ ಕಾ ಸಾಥ್- ಸಬ್ ಕಾ ವಿಕಾಸ್ ನಮ್ಮ ತತ್ವ. ಭ್ರಷ್ಟಾಚಾರದ ನಿಮೂಲನೆಗೆ ಕ್ರಮ ತೆಗೆದುಕೊಳ್ಳುತ್ತಿದ್ದೇವೆ. ಜನ ಸಾಮಾನ್ಯರು ಉತ್ತಮ ಜೀವನ ನಡೆಸಲು ಮೂಲಸೌಕರ್ಯ ಕಲ್ಪಿಸುತ್ತಿದ್ದೇವೆ. ದೇಶದ 50 ಕೋಟಿ ಜನರಿಗೆ ಆರೋಗ್ಯ ರಕ್ಷಣೆ ನಿಡುವ ಆಯುಷ್ಮಾನ್ ಭಾರತ, ರೈತರ ಬವಣೆ ನೀಗಿಸಲು ಮೊಟ್ಟ ಮೊದಲ ಬಾರಿಗೆ ಸ್ವಾಮಿನಾಥನ್ ಸಮಿತಿ ವರದಿ ಅಂಗೀಕರಿಸಿದ್ದೇವೆ.

 ಮೈತ್ರಿ ಕುರಿತು ನಿಮ್ಮ ದೃಷ್ಟಿಕೋನವೇನು?

ಮೈತ್ರಿಯ ಪ್ರಶ್ನೆಯೇ ಇಲ್ಲ. ಬಿಜೆಪಿ ಏಕಾಂಗಿಯಾಗಿ ಸೆಣಸುತ್ತಿದೆ. ಬಿಜೆಪಿ ಮೂರನೇ ಎರಡರಷ್ಟು ಸ್ಪಷ್ಟ ಬಹುಮತ ಪಡೆಯುತ್ತದೆ.

ಪ್ರಧಾನಿ ನರೇಂದ್ರ ಮೋದಿಯವರ ಅಬ್ಬರ ಅಲೆಗಳು, ಮತ್ತೊಂದೆಡೆ ಚುನಾವಣಾ ಚಾಣಾಕ್ಯ, ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರ ಕಾರ್ಯತಂತ್ರ, ಇನ್ನೊಂದೆಡೆ ರಾಜ್ಯ ಉಸ್ತುವಾರಿಗಳಾದ ಪ್ರಕಾಶ್ ಜಾವ್ಡೇಕರ್, ಫಿಯೂಶ್ ಗೋಯಲ್, ಮುರುಳೀಧರ್ ರಾವ್, ಭೂಪೇಂದ್ರ ಯಾದವ್ ಸಹಿತ ಅನೇಕ ದಿಗ್ಗಜರ ತಂಡವೇ ರಾಜ್ಯದಲ್ಲಿ ಬೀಡು ಬಿಟ್ಟಿದೆ. ಹೀಗಾಗಿ ಮುಂದಿನ ರಾಜ್ಯ ವಿಧಾನ ಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ನೆಲಕಚ್ಚಿ ಭಾರತೀಯ ಜನತಾ ಪಕ್ಷ ಮತ್ತೆ ಅಧಿಕಾರದ ಗದ್ದುಗೆ ಏರುವುದರಲ್ಲಿ ಯಾವುದೇ ಸಂದೇಹ ಇಲ್ಲ ಎಂಬುವುದು ಸ್ಪಷ್ಟವಾಗಿದೆ.

source: vijayavani

-ಸುನಿಲ್ ಪಣಪಿಲ

Tags

Related Articles

Close