ಪ್ರಚಲಿತರಾಜ್ಯ

ಸ್ವಚ್ಛ ಭಾರತ ಯೋಜನೆಯನ್ನು ಗ್ರಾಮೀಣ ಭಾಗದಲ್ಲಿ ಚುರುಕುಗೊಳಿಸಲು ನರೇಂದ್ರ ಮೋದಿಯವರ ಈ ನೂತನ ಯೋಜನೆ ಶೀಘ್ರದಲ್ಲಿಯೇ ಜಾರಿ!!!

ಈಗಾಗಲೇ ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಸರ್ಕಾರ ಹಲವು ರೋಗಗಳಿಗೆ ರಾಮಬಾಣವಾಗಿರುವ ಗೋಮೂತ್ರದ ಮೂಲಕ ಔಷಧ ತಯಾರಿಸಲು ಮುಂದಾಗಿದ್ದರೆ ಇತ್ತ ಕೇಂದ್ರ ಸರ್ಕಾರವು ಜನೋಪಯೋಗಿ ಯೋಜನೆಯನ್ನು ಜಾರಿಗೊಳಿಸಲು ಮುಂದಾಗಿದ್ದು, ರೈತರ ಮೊಗದಲ್ಲಿ ಸಂತಸ ಮೂಡುವಂತೆ ಮಾಡಿದೆ.

ಹೌದು… ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದಂತೆ 2018-19 ನೇ ಸಾಲಿನ ಬಜೆಟ್ ನಲ್ಲಿ ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಹೊಸ ಯೋಜನೆ ಘೋಷಿಸಿದ್ದು, ಜಾನುವಾರು ಗೊಬ್ಬರ ನಿರ್ವಹಣೆಯನ್ನು ಈ ಯೋಜನೆ ಉತ್ತೇಜಿಸಲಿದೆ. ಜಾನುವಾರು ಗೊಬ್ಬರವನ್ನು ಉತ್ತಮ ರೀತಿಯಲ್ಲಿ ನಿರ್ವಹಣೆ ಮಾಡುವುದನ್ನು ಉತ್ತೇಜಿಸುವುದಕ್ಕಾಗಿ ಕೇಂದ್ರ ಸರ್ಕಾರವು ಗೋಬರ್ ಧನ್ ಯೋಜನೆ ಘೋಷಿಸಿದ್ದು, ಇದೀಗ ಈ ಯೋಜನೆ ಜಾರಿ ಬರುವ ಹೊಸ್ತಿಲಲ್ಲಿದೆ.

ಜಾನುವಾರು ಗೊಬ್ಬರವಷ್ಟೇ ಅಲ್ಲದೇ ಕೃಷಿ ಭೂಮಿಯಲ್ಲಿನ ಘನ ತ್ಯಾಜ್ಯ ನಿರ್ವಹಣೆಗೂ ಉತ್ತೇಜನ ನೀಡಲಿದ್ದು, ಅವುಗಳನ್ನು ಕಾಂಪೆÇೀಸ್ಟ್, ರಸಗೊಬ್ಬರ, ಜೈವಿಕ ಅನಿಲ ಮತ್ತು ಜೈವಿಕ-ಸಿಎನ್ ಜಿ ಯನ್ನಾಗಿ ಮರುಬಳಕೆ ಮಾಡುವುದನ್ನೂ ಸಹ ಈ ಯೋಜನೆ ಉತ್ತೇಜಿಸಲಿದೆ ಎಂದು ಬಜೆಟ್ ಮಂಡನೆಯ ವೇಳೆ ಅರುಣ್ ಜೇಟ್ಲಿ ಹೇಳಿಕೆ ನೀಡಿದ್ದರು. ಅದರಂತೆಯೇ ಇದೀಗ ಜನೋಪಯೋಗಿ ಯೋಜನೆಯಾದ “ಗೋಬರ್ ಧನ್” ಯೋಜನೆ ಘೋಷಿಸಿ ರೈತರ ಮೊಗದಲ್ಲಿ ಸಂತಸ ಮನೆಮಾಡುವಂತೆ ಮಾಡಿರುವುದು ಹೆಮ್ಮೆಯ ವಿಚಾರವಾಗಿದೆ.

ಪಶುಗಳ ಸಗಣಿಯನ್ನು ಬಳಸಿ ಇಂಧನ ಉತ್ಪಾದಿಸುವ “ಗೋಬರ್-ಧನ್” ಯೋಜನೆಯನ್ನು ಬರುವ ಏಪ್ರಿಲ್‍ನಿಂದ ಜಾರಿಗೊಳಿಸಲು ಕೇಂದ್ರ ಕುಡಿಯುವ ನೀರು ಹಾಗೂ ನೈರ್ಮಲ್ಯ ಸಚಿವಾಲಯ ಮುಂದಾಗಿದೆ. ಈ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರ ಸ್ವಚ್ಛ ಭಾರತ ಯೋಜನೆಯನ್ನು ಗ್ರಾಮೀಣ ಭಾಗದಲ್ಲಿ ಚುರುಕುಗೊಳಿಸಿದಂತೆ ಆಗುತ್ತದೆ ಹಾಗೂ ಇಂಧನ ಕ್ಷೇತ್ರದಲ್ಲಿ ಕ್ಷಮತೆ, ರೈತರಿಗೆ ಲಾಭ ತಲುಪಿಸಿದಂತೆಯೂ ಆಗುತ್ತದೆ ಎಂಬ ಯೋಚನೆ ಸರ್ಕಾರದ್ದಾಗಿದೆ.

ಈಗಾಗಲೇ ನಾನಾ ರೋಗಗಳಿಗೆ ಚಿಕಿತ್ಸೆ ನೀಡುವ ಎಂಟು ಔಷಧಗಳನ್ನು ಗೋಮೂತ್ರದಿಂದ ಯೋಗಿ ಸರ್ಕಾರ ಸಿದ್ಧಪಡಿಸಿದ್ದು, ದೇಶದ ಹಲವು ಖಾಸಗಿ ಸಂಸ್ಥೆಗಳು ಮತ್ತು ಫಾರ್ಮಸಿಗಳು ಗೋಮೂತ್ರದಿಂದ ಔಷಧ ತಯಾರಿಸುತ್ತಿವೆಯಾದರೂ ಸರಕಾರವೇ ಪೆÇ್ರೀತ್ಸಾಹಿಸುತ್ತಿರುವುದು ಇದೇ ಮೊದಲಾಗಿತ್ತು!! ಈ ಬಗ್ಗೆ, ಆಯುಷ್ ಇಲಾಖೆ ನಿರ್ದೇಶಕ ಡಾ. ಆರ್.ಆರ್. ಚೌಧರಿ ಮಾತಾಡಿ, “ಆರಂಭದಲ್ಲಿ ಗೋಮೂತ್ರದಿಂದ ಸ್ವಚ್ಛತೆ ಮಾಡುವ ವಸ್ತುಗಳನ್ನು ತಯಾರಿಸುವ ಪ್ರಸ್ತಾವನೆ ಹೊಂದಲಾಗಿತ್ತು. ಆದರೆ ನಂತರ ಔಷಧಗಳನ್ನು ಸಿದ್ಧಡಿಸಲು ಮುಂದಾಗಿದೆ. ಅಷ್ಟೇ ಅಲ್ಲದೇ, ಆಯುರ್ವೇದ ಇಲಾಖೆಯು ಲಖನೌ ಮತ್ತು ಪಿಲಿಭಿತ್‍ನಲ್ಲಿರುವ ಎರಡು ಸರಕಾರಿ ಫಾರ್ಮಸಿ ಮತ್ತು ಖಾಸಗಿ ಘಟಕಗಳ ಸಹಯೋಗದಲ್ಲಿ ಔಷಧಗಳನ್ನು ಸಿದ್ಧಪಡಿಸಲಾಗುತ್ತಿದೆ ಎಂದು ತಿಳಿಸಿದ್ದರು.

ಇನ್ನು…. ಬಾಂಡಾ, ಝಾನ್ಸಿ, ಮುಜಫ್ಫರ್ ನಗರ, ಅಲಹಾಬಾದ್, ವಾರಾಣಸಿ, ಬರೇಲಿ, ಲಖನೌ ಮತ್ತು ಪಿಲಿಭಿತ್ ಗಳಲ್ಲಿರುವ ಎಂಟು ಮೆಡಿಕಲ್ ಕಾಲೇಜುಗಳಲ್ಲಿ ಆಯುರ್ವೇದ ಕೋರ್ಸ್ ಆರಂಭಿಸಲಾಗಿದ್ದು, ಇಲ್ಲಿಗೆ ನಿತ್ಯ ಸಾವಿರಾರು ರೋಗಿಗಳು ಚಿಕಿತ್ಸೆ ಬರುತ್ತಾರೆ. ಲೌಖನೌ ಆಸ್ಪತ್ರೆಯಗೆ ನಿತ್ಯ 700 ಜನರು ಔಷಧ ಪಡೆಯುತ್ತಿದ್ದಾರೆ ಎಂದು ಅವರು ತಿಳಿಸಿದ್ದಾರೆ. ಇದುವರೆಗೆ ಲಿವರ್ ಸಮಸ್ಯೆ, ಗಂಟು ನೋವು ಮತ್ತು ರೋಗ ನಿರೋಧಕ ಶಕ್ತಿ ಹೆಚ್ಚಳಕ್ಕೆ 8 ಔಷಧ ತಯಾರಿಸಿದ್ದೇವೆ. ಇತರ ಸಮಸ್ಯೆ ಮತ್ತು ರೋಗಗಳಿಗೆ ಗೋಮೂತ್ರ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಪ್ರಯತ್ನ ನಡೆಯುತ್ತಿದೆ ಎಂದು ಆರ್.ಆರ್. ಚೌಧರಿ ತಿಳಿಸಿದ್ದರು.

ಆದರೆ ಇದೀಗ ಪಶುಗಳ ಸಗಣಿಯನ್ನು ಬಳಸಿ ಇಂಧನ ಉತ್ಪಾದಿಸುವ “ಗೋಬರ್-ಧನ್” ಯೋಜನೆಯನ್ನು ಶೀಘ್ರದಲ್ಲಿಯೇ ಜಾರಿಗೊಳಿಸಲು ನಿರ್ಧರಿಸಿದ್ದು, ಈ ಯೋಜನೆಯಿಂದ ದೇಶದ 350 ಜಿಲ್ಲೆಗಳಲ್ಲಿ ಮೊದಲ ಹಂತದಲ್ಲಿಯೇ ಈ ಯೋಜನೆ ಆರಂಭಿಸುವ ಗುರಿ ಹಾಕಿಕೊಳ್ಳಲಾಗಿದೆ. ಅಷ್ಟೇ ಅಲ್ಲದೇ, ದೇಶದಲ್ಲಿ ಸುಮಾರು 30 ಕೋಟಿ ಪಶುಗಳ ಸಂಖ್ಯೆ ಇದ್ದು, ದಿನಕ್ಕೆ 30 ಲಕ್ಷ ಟನ್ ಸಗಣಿ ಸೃಷ್ಟಿಯಾಗುತ್ತದೆ. ಹಾಗಾಗಿ ಈ ಸಗಣಿಯನ್ನು ಬಳಸಿ ಜೈವಿಕ ಅನಿಲ ಹಾಗೂ ಜೈವಿಕ ಸಿಎನ್‍ಜಿ ಉತ್ಪಾದಿಸುವುದು ಮತ್ತು ಅದನ್ನು ಇ-ಕಾಮರ್ಸ್ ವೇದಿಕೆಯ ಮೂಲಕ ಆನ್‍ಲೈನ್‍ನಲ್ಲೇ ಮಾರಾಟ ಮಾಡುವುದು- ಯೋಜನೆಯ ಮುಖ್ಯ ಭಾಗವಾಗಿದೆ. ಸಾರ್ವಜನಿಕ ಸ್ವಾಮ್ಯದ ಬೃಹತ್ ತೈಲ ಕಂಪನಿಯೊಂದು ಈ ಜೈವಿಕ ಅನಿಲ ಖರೀದಿಗೂ ಮುಂದೆ ಬಂದಿದೆ ಎಂದು ಮೂಲಗಳು ಹೇಳಿವೆ.

ಗ್ರಾಮೀಣ ಜನರ ಬದುಕು ಹಸನಾಗಬೇಕು ಎನ್ನುವ ಉದ್ದೇಶದಿಂದ ಹಾಗೂ ಗ್ರಾಮೀಣ ಭಾಗದ ಜನ ಜೀವನದಲ್ಲಿ ನೈರ್ಮಲ್ಯಕ್ಕೆ ವಿಶೇಷ ಆದ್ಯತೆ ನೀಡವ ದೆಸೆಯಲ್ಲಿ ಗ್ಯಾಲ್ಟನೈಸಿಂಗ್ ಆಗ್ರ್ಯಾನಿಕ್ ಬಯೋ-ಆಗ್ರೋ ರಿಸೋರ್ಸ್ ಧನ್(ಗೋಬರ್ ಧನ್) ಯೋಜನೆ ಆರಂಭಿಸುವುದರ ಜೊತೆಗೆ ಆ ಭಾಗದ ಜೀವನದಲ್ಲಿ ಹಾಸುಹೊಕ್ಕಾಗಿರುವ ಜಾನುವಾರುಗಳ ಸಗಣಿ ಸೇರಿದಂತೆ ಇತರೆ ಘನ ತ್ಯಾಜ್ಯಗಳ ನಿರ್ವಹಣೆಯ ಈ ಯೋಜನೆಯಿಂದ ವಿದ್ಯುತ್ ಹಾಗೂ ಗೊಬ್ಬರ ಉತ್ಪಾದನೆ ಸೇರಿದಂತೆ ಹಲವು ರೀತಿಯ ಉಪಯೋಗಗಳು ಇದರಿಂದ ಆಗಲಿದೆ!!

ಇನ್ನು ಗ್ರಾಮ ಪಂಚಾಯ್ತಿಯು “ಗೋಬರ್ ಧನ್” ಯೋಜನೆಯ ಕೇಂದ್ರವಾಗಲಿದೆ. ಆಸಕ್ತ ಗ್ರಾಮೀಣರು ಬಯೋ ಗ್ಯಾಸ್ ಮತ್ತು ಬಯೋ ಸಿಎನ್‍ಜಿ ಘಟಕಗಳನ್ನು ಸ್ಥಾಪಿಸಬಹುದಾಗಿದೆ. ಎಲ್ಲಿ ಘಟಕ ಸ್ಥಾಪಿಸಬೇಕು, ಯಾವ ತಂತ್ರಜ್ಞಾನ ಎಂಬುದು ಇನ್ನಷ್ಟೇ ನಿರ್ಧಾರವಾಗಬೇಕಿದೆ. ಇಲ್ಲಿ ಉತ್ಪಾದನೆಯಾದ ಜೈವಿಕ ಅನಿಲವನ್ನು ಆನ್‍ಲೈನ್‍ನಲ್ಲಿ ಕಂಪನಿಗಳನ್ನು ಸಂಪರ್ಕಿಸಿ ಮಾರಾಟ ಮಾಡಲು ಕೇಂದ್ರ ಸರ್ಕಾರವೇ ನೆರವು ನೀಡಲಿದೆ ಎಂದು ಮೂಲಗಳು ತಿಳಿಸಿವೆ.

ಈ ಯೋಜನೆಯಿಂದ ಏನೇನು ಲಾಭ ಗೊತ್ತೇ?

* ಸಗಣಿ ಸೂಕ್ತ ಬಳಕೆಯಿಂದ ಕೃಷಿಗೆ ಉತ್ತಮ ಕಾಂಪೆÇೀಸ್ಟ್ ಗೊಬ್ಬರ ಲಭ್ಯ.
* ಗ್ರಾಮ ಆಧರಿತ ಈ ಯೋಜನೆ ಜಾರಿಗಾಗಿ ಮೂಲಸೌಕರ್ಯ ಅಭಿವೃದ್ಧಿ.
* ಬಯೋಗ್ಯಾಸ್ ಜೊತೆಗೆ, ಇದರಿಂದ ವಿದ್ಯುತ್ ಉತ್ಪಾದನೆಗೂ ಆದ್ಯತೆ.
* ಇಡೀ ಯೋಜನೆಯಿಂದ ಗ್ರಾಮಗಳಲ್ಲಿ ಹೆಚ್ಚಿನ ಸ್ವಚ್ಛತೆ ಸಾಧ್ಯವಾಗುತ್ತದೆ.

ದೇಶದ ಬೆನ್ನೆಲುಬು ಆಗಿರುವ ರೈತರು ಅನ್ನವನ್ನು ನೀಡುವ ಅನ್ನದಾತರೂ ಹೌದು!! ಈ ಹಿಂದೆ ನಮ್ಮ ದೇಶದ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿಯವರು ” ಜೈ ಕಿಸಾನ್ ” ಎಂದು ಶ್ಲಾಘಿಸಿದ್ದರೆ, “ಭೂಮಿಯನುಳುವ ನೇಗಿಲ ಯೋಗಿಯ ನೋಡಲ್ಲಿ” ಎಂದು ರೈತನ್ನು ಕವಿಗಳು ಕೊಂಡಾಡಿದ್ದರು. ಆದರೆ ಈಗಾಗಲೇ ಹಲವು ರೋಗಗಳಿಗೆ ರಾಮಬಾಣವಾಗಿರುವ ಗೋಮೂತ್ರದ ಮೂಲಕ ಔಷಧ ತಯಾರಿಸಲು ಮುಂದಾಗಿರುವ ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಸರ್ಕಾರ ನಾನಾ ರೋಗಗಳಿಗೆ ಚಿಕಿತ್ಸೆ ನೀಡುವ ಎಂಟು ಔಷಧಗಳನ್ನು ಈಗಾಗಲೇ ಯೋಗಿ ಸರ್ಕಾರ ಸಿದ್ಧಪಡಿಸಿರುವ ಬೆನ್ನಲ್ಲೇ “ಗೋಬರ್-ಧನ್” ಯೋಜನೆಯನ್ನು ಬರುವ ಏಪ್ರಿಲ್‍ನಿಂದ ಜಾರಿಗೊಳಿಸಲು ಇದೀಗ ಕೇಂದ್ರ ಸರ್ಕಾರವೇ ಮುಂದಾಗಿದೆ.

ಸ್ವಚ್ಚ ಭಾರತ ಅಭಿಯಾನದಡಿ ಈಗಾಗಲೇ ಆರು ಕೋಟಿಗೂ ಅಧಿಕ ಶೌಚಾಲಯಗಳನ್ನು ನಿರ್ಮಿಸಲಾಗಿದ್ದು, ಮಹಿಳೆಯರ ಘನತೆ, ಬಾಲಕಿಯರ ಶಿಕ್ಷಣ ಮತು ಕುಟುಂಬದ ಒಟ್ಟಾರೆ ಆರೋಗ್ಯದ ಮೇಲೆ ಈ ಶೌಚಾಲಯಗಳ ಧನಾತ್ಮಕ ಪರಿಣಾಮ ಕಾಣತೊಡಗಿದೆ. ಅದೇ ರೀತಿ 2019, ಆಗಸ್ಟ್ 2ರ ಒಳಗಡೆ ದೇಶವನ್ನು ಬಹಿರಂಗ ಶೌಚ ಮುಕ್ತವನ್ನಾಗಿಸುವ ಗುರಿಸಾಧನೆಗಾಗಿ ಸರ್ಕಾರವು ಘನತ್ಯಾಜ್ಯ ನಿರ್ವಹಣೆಗೆ ಗೋಬರ್-ಧನ್ ಎಂಬ ನೂತನ ಯೋಜನೆಯನ್ನು ಜಾರಿಗೊಳಿಸಲಿರುವುದು ಹೆಮ್ಮೆಯ ವಿಚಾರವಾಗಿದೆ!!

– ಅಲೋಖಾ

Tags

Related Articles

FOR DAILY ALERTS
 
FOR DAILY ALERTS
 
Close