ಪ್ರಚಲಿತ

ಸಂಸತ್ ಬ್ರೇಕಿಂಗ್.!ಮತ್ತೆ ಲೋಕಸಭೆಯಲ್ಲಿ ಅಬ್ಬರಿಸಿದ ಪ್ರಧಾನಿ ಮೋದಿ.! ಕಾಂಗ್ರೆಸ್, ಮಹಾಘಟಬಂಧನದ ವಿರುದ್ಧ ಹಿಗ್ಗಾಮುಗ್ಗಾ ವಾಗ್ದಾಳಿ.! ದಾಖಲೆ ಸಮೇತ ಆಡಳಿತದ ವೈಖರಿ ಬಿಚ್ಚಿಟ್ಟ ನಮೋ…

ನಿರೀಕ್ಷೆಯಂತೆಯೇ ಪ್ರಧಾನಿ ಮೋದಿಯವರು ಸಂಸತ್ ಅಧಿವೇಶನದಲ್ಲಿ ಇಂದು ಅಬ್ಬರದ ಮಾತುಗಳನ್ನು ಆಡಿದ್ದಾರೆ. ಸಹಜವಾಗಿಯೇ ಪ್ರಧಾನಿ ಮೋದಿ ಭಾಷಣದ ಕುತೂಹಲಗಳನ್ನು ಕೆರಳಿಸಿದ್ದು ಇಂದು ಈ ಎಲ್ಲಾ ಕುತೂಹಲಗಳಿಗೆ ತೆರೆ ಎಳೆದಿದ್ದಾರೆ. ಕಾಂಗ್ರೆಸ್ ಹಾಗೂ ಮಹಾಘಟಬಂಧನದ ವಿರುದ್ಧ ಬಾಣಗಳನ್ನು ಹೂಡುತ್ತಲೇ ತಮ್ಮ ಸರ್ಕಾರದ ಅಭಿವೃದ್ಧಿ ಕಾರ್ಯವನ್ನು ವಿಶ್ಲೇಷಿಸಿದ ಮೋದಿಯವರು ದೇಶದ ಗಮನವನ್ನು ಸೆಳೆದಿದ್ದಾರೆ.

ನಮೋ ಭಾಷಣದ ಹೈಲೆಟ್ಸ್…

* ಕಾಂಗ್ರೆಸ್ 55 ವರ್ಷ ಆಡಳಿತ ನಡೆಸಿತ್ತು, ನಾವು 55 ತಿಂಗಳು ಆಡಳಿತ ನಡೆಸಿದ್ದೇವೆ. 10 ಕೋಟಿಗೂ ಹೆಚ್ಚು ಶೌಚಾಲಯ, ಎಲ್ಲಾ ಗ್ರಾಮಗಳಿಗೂ ವಿದ್ಯುತ್, ಶೇ.50ಕ್ಕೂ ಅಧಿಕ ಬ್ಯಾಂಕ್ ಖಾತೆಗಳು ನಮ್ಮ ಅವಧಿಯಲ್ಲಿ ನಡೆದಿದೆ. ಹಾಗಾದರೆ ಅಷ್ಟು ವರ್ಷಗಳ ಕಾಲ ಕಾಂಗ್ರೆಸ್ ಸರ್ಕಾರ ಮಾಡಿದ್ದೇನು?

* ಈ ಹಿಂದೆ ಅಂಬೆಡ್ಕರ್ ಹೇಳಿದ್ದರು, “ಕಾಂಗ್ರೆಸ್ ಜೊತೆ ನಂಟು ಬೆಳೆಸುವುದು ಅದು ಆತ್ಮಹತ್ಯೆಗೆ ಸಮಾನ” ಎಂದಿದ್ದರು. ಅದು ನಿಜವಾಗಿಯೂ ಸತ್ಯವಾಗಿದೆ.

* ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಲೆಲ್ಲಾ ಬೆಲೆಏರಿಕೆ ನಡೆಯುತ್ತಿತ್ತು. ನಾವು ಬಂದಾಗಲೆಲ್ಲಾ ಬೆಲೆ ಇಳಿಯುತ್ತಿದೆ. ಅದು ಹೇಗೆ?

* ಕಾಂಗ್ರೆಸ್ ಮುಕ್ತ ಭಾರತ ನಮ್ಮ ಘೋಷಣೆ ಅಲ್ಲ. ಅದು ಗಾಂಧೀಜಿಯ ಘೋಷಣೆ. ನೀವು ಯಾರ ಜೊತೆ ಬೇಕಾದರೂ ಕೈಜೋಡಿಸಿ, ಆದರೆ ನಾವು ಮಾತ್ರ ಕಾಂಗ್ರೆಸ್ ಮುಕ್ತ ಭಾರತ ಕನಸಸನ್ನು ಸಾಕಾರಗೊಳಿಸುತ್ತೇವೆ.

* ನಮಗೆ ಸಿಕ್ಕ ಬಹುಮತದ ರೀತಿ ಅಟಲ್ ಬಿಹಾರಿ ವಾಜಪೇಯಿಯವರಿಗೂ ಸಿಗಬೇಕಿತ್ತು. ಹಾಗಾಗಿದ್ದರೆ ಭಾರತದ ಅಭಿವೃದ್ಧಿಯ ರೀತಿಯೇ ಬದಲಾಗುತ್ತಿತ್ತು. ಅದನ್ನು ಊಹೆ ಮಾಡಲೂ ಸಾಧ್ಯವಿಲ್ಲ.

* ನೀವು ಇಂದು ಮಿಲನದ ಬಗ್ಗೆ ಮಾತನಾಡುತ್ತಿದ್ದೀರಿ. ವಾಜಪೇಯಿಯವರಿಗೂ ಮಿಲನ ಎಂದು ಹೇಳಿ ಮೋಸ ಮಾಡಿದ್ದರು. ಅದನ್ನು ನಾವು ಇಂದಿಗೂ ಮರೆತಿಲಲ್ಲ.

* ನಿಮ್ಮ (ಕಾಂಗ್ರೆಸ್) ಅವಧಿಯಲ್ಲೂ ಸರ್ಜಿಕಲ್ ಸ್ಟ್ರೈಕ್ ನಡೆದಿತ್ತೆಂದು ಹೇಳ್ತೀರಾ.! ನಿಮ್ಮ ಅವಧಿಯಲ್ಲಿ ಸೇನೆ ಆಧುನೀಕರಣವೇ ನಡೆದಿರಲಿಲ್ಲ. ಸೇನೆಗೆ ಬುಲೆಟ್ ಪ್ರೂಫ್ ಜಾಕೆಟ್, ಶೂಸ್, ಹೆಲ್ಮೆಟ್ ಸಹಿತ ಯಾವುದೇ ಆಧುನಿಕ ಉಪಕರಣವನ್ನು ನೀಡುತ್ತಿರಲಿಲ್ಲ. ಆದರೂ ಸರ್ಜಿಕಲ್ ಸ್ಟ್ರೈಕ್ ನಡೆಸಿದ್ದೇವೆ ಎಂದು ಸುಳ್ಳು ಹೇಳ್ತೀರಾ?

* ಕಾಂಗ್ರೆಸ್ ಅವಧಿಯಲ್ಲಿ ಕಾಮನ್ ವೆಲ್ತ್ ಕ್ರೀಡಾಕೂಟವನ್ನು ನಡೆಸಿತ್ತು. ಈ ಕ್ರೀಡಾಕೂಟದಲ್ಲಿ ವಿದೇಶಗಳಿಂದ ಚಿನ್ನ ಗೆಲ್ಲಲು ಸ್ಪರ್ಧಾಳುಗಳು ಆಗಮಿಸುತ್ತಿದ್ದರು. ಆದರೆ ಕಾಂಗ್ರೆಸ್ಸಿಗರು ತಮ್ಮ ವೆಲ್ತ್ ಹೆಚ್ಚಿಸುವುದರಲ್ಲೇ ಬ್ಯುಸಿಯಾಗಿದ್ದರು. ದೇಶದ ಮರ್ಯಾದೆ ಮಾತ್ರ ಹರಾಜಾಗಿತ್ತು.

* ಮೇಲ್ವರ್ಗದ ಬಡವರಿಗೆ 10% ಮೀಸಲಾತಿ ನೀಡಿದ್ದೇವೆ. ಆಯುಷ್ಮಾನ್ ಯೋಜನೆಯ ಮೂಲಕ ಎಲ್ಲಾ ಬಡವರಿಗೂ ಉಚಿತ ಆರೋಗ್ಯ ಮೊತ್ತ ನೀಡುವಂತೆ ಮಾಡಿದ್ದೇವೆ. ಪ್ರತಿ ಮನೆಗೂ ಉಚಿತ ಗ್ಯಾಸ್ ನೀಡಿದ್ದೇವೆ, ಸ್ವದ್ಯೋಗಕ್ಕಾಗಿ 7 ಲಕ್ಷ ಕೋಟಿ ಸಾಲ ನೀಡಿದ್ದೇವೆ, ಕಾರ್ಮಿಕರಿಗೆ ಭರಪೂರ ಸವಲತ್ತುಗಳನ್ನು ನೀಡಿದ್ದೇವೆ, ಕೆಲಸದ ಅವಧಿಯಲ್ಲಿ ಮೃತಪಟ್ಟ ಕಾರ್ಮಿಕರಿಗೆ 6 ಲಕ್ಷ ಪರಿಹಾರ, ಅಸಂಘಟಿತ ಕಾರ್ಮಿಕರಿಗೆ ಸವಲತ್ತುಗಳನ್ನು ನಮ್ಮ ಸರ್ಕಾರ ನೀಡಿದೆ.

* ಹೊಸ ವಿಮಾನ ನಿಲ್ದಾಣಗಳು ತಲೆ ಎತ್ತುತ್ತಿವೆ, ಹೊಸ ರೈಲುಗಳು ಓಡಾಡುತ್ತಿವೆ. ಮುದ್ರಾ ಯೋಜನೆಯಡಿ ಸಾಲ ಪಡೆದವರ ಸಂಖ್ಯೆಗಳು ಹೆಚ್ಚಾಗುತ್ತಿದೆ. 2 ಲಕ್ಷ ಸರ್ವೀಸ್ ಸೆಂಟರ್ ಗಳಲ್ಲಿ 4 ಲಕ್ಷ ಕೆಲಸ ಹೆಚ್ಚಿವೆ. ಆಯುಷ್ಮಾನ್ ಭಾರತ ಯೋಜನೆಯಿಂದಲೂ ಲಕ್ಷಾಂತರ ಉದ್ಯೋಗ ಸೃಷ್ಟಿಯಾಗಿದೆ.

* 2009ರಲ್ಲಿ ಏನೆಲ್ಲಾ ಭರವಸೆಗಳನ್ನು ನೀಡಿ ಅಧಿಕಾರಕ್ಕೆ ಬಂದಿದ್ರಿ? ಬಂದ ನಂತರ ಯಾವ ಕೆಲಸವನ್ನು ಮಾಡಿದ್ದೀರಿ. ರೈತರು ಸಾಯುತ್ತಿದ್ದರೆ ನೀವು ಅವರ ಹೆಸರಿನಲ್ಲಿ ಹಗರಣಗಳನ್ನು ಮಾಡಿಕೊಂಡು ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದಿರಿ. ಈಗ ಮೋದಿ ಕಡೆ ಬೊಟ್ಟು ಮಾಡಿ ತೋರಿಸುತ್ತಿದ್ದೀರಿ.!

* ಕರ್ನಾಟಕದ ಮಣ್ಣಿನ ಮಗ ಎನಿಸಿಕೊಂಡವರು ಮಾನ್ಯ ಮಾಜಿ ಪ್ರಧಾನಿಗಳಾದ ದೇವೇಗೌಡರೇ, ನೀವು ನಿಮ್ಮ ಕರ್ನಾಟಕದಲ್ಲಿ 45 ಲಕ್ಷ ರೈತರ ಸಾಲವನ್ನು ಮನ್ನಾ ಮಾಡಿದ್ದೇವೆ ಎಂದು ಹೇಳಿಕೊಳ್ಳುತ್ತಿದ್ದೀರಿ. ಅಸಲಿಗೆ ಅಲ್ಲಿ ಸಾಲ ಮನ್ನಾ ಆಗಿದೆಯಾ? ಇದದುವರೆಗೂ ಕೇವಲ 5000 ಜನರಿಗೆ ಮಾತ್ರವೇ ಸಾಲ ಮನ್ನಾದ ಫಲ ದೊರಕಿದೆ. ಇದು ನಿಮ್ಮದೇ ಸರ್ಕಾರ ನೀಡಿದ ಮಾಹಿತಿ. ನಿಮ್ಮ ಸುಳ್ಳು ಭರವಸಸೆಗಳಿಗೆ ಇದಕ್ಕಿಂತ ಉತ್ತಮ ಉದಾಹರಣೆ ಬೇಕಾ.?

* ಕಾಂಗ್ರೆಸ್ ಪಕ್ಷ ತನ್ನ ಅಹಂಕಾರದಿಂದ ನೂರರಿಂದ 40ನೇ ಸ್ಥಾನಕ್ಕೆ ಕುಸಿದಿತ್ತು. ಆದರೂ ತನ್ನ ಅಹಂಕಾರವನ್ನು ಕಡಿಮೆಗೊಳಿಸಿಲ್ಲ. 2014ರ ನಂತರ ದೇಶದಲ್ಲಿ ನಡೆದಿರುವ ಬದಲಾವಣೆ ದೇಶಕ್ಕೇ ಗೊತ್ತಿದೆ. ದೇಶದಲ್ಲಿ ನಂತರ ಆದ ಬದಲಾವಣೆಗಳನ್ನು ದೇಶ ಗಮನಿಸುತ್ತಿದೆ. ಕಾಂಗ್ರೆಸ್ಸಿಗರಿಗೆ ಮೋದಿ ಫೋಟೋ ನೋಡುವಾಗ ಭಯ ಆರಂಭವಾಗುತ್ತದೆ. ಭ್ರಷ್ಟರಿಗೆ ಮೋದಿ ಫೋಟೋ ನೋಡುವಾಗ ಭಯ ಪಡಲೇಬೇಕು ಅಲ್ವೇ.? ಯಾರನ್ನೂ ಸುಮ್ಮನೇ ಬಿಡೋದಿಲ್ಲ. ಒಬ್ಬೊಬ್ಬರನ್ನೇ ಜೈಲಿಗಟ್ಟುತ್ತೇವೆ.

* ಮಹಾಘಟಬಂಧನದ ಮೂಲಕ ನಮ್ಮನ್ನು ಹೆಣೆಯಲು ಬರುತ್ತೀರಾ, ಬನ್ನಿ… ದೇಶದ ಜನತೆ ನಿಮ್ಮನ್ನು ಈ ಹಿಂದೆ ಯಾವ ರೀತಿ ನೋಡಿಕೊಂಡಿದ್ದಾರೆ ಎಂದು ನೆನಪಿನಲ್ಲಿಟ್ಟುಕೊಂಡು ಬನ್ನಿ. ಮತ್ತೆ ನಿಮಗೆ ಮುಖಭಂಗ ಆಗುವ ಆ ಕ್ಷಣವನ್ನು ಭಾರತ ಮತ್ತೆ ನೋಡಲಿದೆ.

* ಈ ಹಿಂದೆ ನಾಮ್ ದಾರಿಗಳು ಬ್ಯಾಂಕುಗಳಿಗೆ ಕಾಲ್ ಮಾಡುತ್ತಿದ್ದರು. ತಮಗೆ ಸಂಬಂಧಪಟ್ಟವರಿಗೆ ಸಾಲ ಕೊಡಿ ಎಂದು ಹೇಳುತ್ತಿದ್ದರು. ತಮಗೆ ಬೇಕಾದವರಿಗೆ ಸಾಲ ನೀಡಿ ಅವರನ್ನು ತಮ್ಮ ತೆಕ್ಕೆಗೆ ಇಟ್ಟುಕೊಳ್ಳುತ್ತಿದ್ದರು. ಆದರೆ ಈಗ ನಾವು ದೇಶದ ಸಾಮಾನ್ಯ ಜನರನ್ನೂ ಬ್ಯಾಂಕ್ ಗೆ ಕಳಿಸುತ್ತಿದ್ದೇವೆ. ಪ್ರತಿಯೋರ್ವರಿಗೂ ಸಾಲ ಸಿಗುವಂತೆ ಯೋಜನೆ ರೂಪಿಸುತ್ತಿದ್ದೇವೆ.

* ಲೋಕಸಭಾ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆಯವರು ಬಸವಣ್ಣನ ವಚನವನ್ನು ಹೇಳುತ್ತಾರೆ. ಅವರು ನಮ್ಮ ಸರ್ಕಾರ ಬಂದ ನಂತರ ಬಸವಣ್ಣನ ವಚನವನ್ನು ಓದಲು ಆರಂಭಿಸಿದ್ದಾರೆ. ಹಿಂದಿನಿಂದಲೂ ಬಸವಣ್ಣರನ್ನು ಅರ್ಥಮಾಡಿಕೊಂಡಿರುತ್ತಿದ್ದರೆ ಇಂದು ದೇಶ ಈ ರೀತಿ ಇರುತ್ತಿರಲಿಲ್ಲ. ಕಾಂಗ್ರೆಸ್ಸಿನ ಪ್ರತಿ ಮನೆಯಲ್ಲೂ ಬಸವಣ್ಣನ ಫೋಟೋ ಇಟ್ಟು ಅವರ ಕಥೆಗಳನ್ನು ಹೇಳಿ.

ಇದು ಪ್ರಧಾನಿ ಮೋದಿಯವರು ತನ್ನ ಸರ್ಕಾರವನ್ನು ಟಾರ್ಗೇಟ್ ಮಾಡುತ್ತಿರುವ ಕಾಂಗ್ರೆಸ್ ಹಾಗೂ ಮಹಾಘಟಬಂಧನದ ವಿರುದ್ಧ ವಾಗ್ದಾಳಿ ನಡೆಸಿದ ಪರಿ. ಲೋಕಸಭೆಯ ಕೊನೆಯ ಅವಧಿಯಲ್ಲಿ ತನ್ನ ಅದ್ಭುತ ಭಾಷಣವನ್ನು ಮಾಡಿದ ಮೋದಿಯವರು ವಿಪಕ್ಷಗಳಿಗೆ ತೀಕ್ಷ್ಣವಾಗಿ ತಿವಿದಿದ್ದಾರೆ. ಮೋದಿ ಭಾಷಣ ಇದೀಗ ಬಿಜೆಪಿ ಕಾರ್ಯಕರ್ತರಲ್ಲಿ ಮತ್ತಷ್ಟು ಹುರುಪನ್ನು ಮೂಡಿಸಿದ್ದು ಚುನಾವಣೆಗೂ ಸಜ್ಜಾಗುವಂತೆ ಪ್ರೇರೇಪಿಸಿದ್ದಂತು ಸುಳ್ಳಲ್ಲ.

-ಸುನಿಲ್ ಪಣಪಿಲ

Tags

Related Articles

FOR DAILY ALERTS
 
FOR DAILY ALERTS
 
Close