ಪ್ರಚಲಿತ

2 ವರ್ಷಗಳ ನಂತರ ಮೋದಿಯಿಂದ ಮೂಡಿತು ನಕ್ಸಲ್ ಪೀಡಿತ ಕರಾವಳಿಯ ಈ ಕುಗ್ರಾಮದ ಜನರಲ್ಲಿ ಸಂತಸ! ಪ್ರಧಾನಿಗೆ ಈ ಯುವಕ ಬರೆದ ಪತ್ರಕ್ಕೆ ಸಿಕ್ಕಿತು ಸ್ಪಂದನೆ!

ಕ್ಷಿಣಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕುತ್ಲೂರು ಎಂಬ ಗ್ರಾಮವಿದೆ. ಈ ಗ್ರಾಮದಲ್ಲಿ 350-400 ಕುಟುಂಬಗಳ ಸುಮಾರು ಕುಟುಂಬಗಳಿದ್ದು 2500-3000 ಜನಸಂಖ್ಯೆಯುಳ್ಳ ತೀರಾ ಹಿಂದುಳಿದ ನಕ್ಸಲ್ ಪೀಡಿತ ಕುಗ್ರಾಮ. ಸ್ಪರ್ಧಾತ್ಮಕ ಆಧುನಿಕ ತಂತ್ರಜ್ಞಾನ ಯುಗದಲ್ಲಿ ಈಗಾಗಲೇ 4ಜಿ ವೇಗದ ಇಂಟರ್ನೆಟ್ ಬಳಕೆಯಾಗುತ್ತಿದ್ದರೂ, ಈ ಕುಗ್ರಾಮದಲ್ಲಿ 2ಜಿ ನೆಟ್ವರ್ಕ್ ಕೂಡ ಇರಲಿಲ್ಲ. ಆದರೆ ಕಳೆದ ಎರಡು ವರ್ಷಗಳಿಂದ ನಡೆಸುತ್ತಿದ್ದ ಹೋರಾಟದ ಫಲವಾಗಿ ಕಡೆಗೂ ಗ್ರಾಮಕ್ಕೆ 3ಜಿ ನೆಟ್ವರ್ಕ್ ಬರುವಂತೆ ಆಗಿದೆ.

ಆನ್ಲೈನ್ ಮೂಲಕ ದೂರು ಸಲ್ಲಿಸಿ, ಪ್ರಧಾನಮಂತ್ರಿ ಕಚೇರಿಯಿಂದ ಒತ್ತಡ ಹಾಕಿಸಿದ ಯುವಕ!

ತನ್ನೂರಿನಲ್ಲಿ ಟವರ್ ಇಲ್ಲದ್ದನ್ನು ಮನಗಂಡು, ಪ್ರಧಾನಿ ನರೇಂದ್ರ ಮೋದಿಯವರ ಪ್ರತಿಯೊಂದು ಗ್ರಾಮಗಳಿಗೂ ತಂತ್ರಜ್ಞಾನ ತಲುಪಿಸುವ ಕನಸಿನ ಯೋಜನೆ ‘ಡಿಜಿಟಲ್ ಇಂಡಿಯಾ’ದ ಬಗ್ಗೆ ಅರಿವಿದ್ದ ಈ ಗ್ರಾಮದ ಯುವಕ ಸಂದೀಪ್ ಪೂಜಾರಿ ಅವರು ಸುಮಾರು ಎರಡು ವರ್ಷಗಳ ಹಿಂದೆ ಭಾರತ ಸರಕಾರದ “ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆಗಳು ಮತ್ತು ಪಿಂಚಣಿಗಳ” ಸಚಿವಾಲಯದ “ಆಡಳಿತ ಸುಧಾರಣೆ ಮತ್ತು ಸಾರ್ವಜನಿಕ ಕುಂದುಕೊರತೆಗಳ” ಇಲಾಖೆಯ “ಕೇಂದ್ರೀಕೃತ ಸಾರ್ವಜನಿಕ ಕುಂದುಕೊರತೆ ನಿವಾರಣೆ ಮತ್ತು ಮಾನಿಟರಿಂಗ್ ಸಿಸ್ಟಮ್” ವಿಭಾಗಕ್ಕೆ ಆನ್ಲೈನ್ ಮೂಲಕ ದೂರನ್ನು ಸಲ್ಲಿಸುತ್ತಾರೆ. ತದನಂತರ, ಅದು ಅಲ್ಲಿಂದ 25 ಮಾರ್ಚ್ 2016ರಂದು ಪ್ರಧಾನ ಮಂತ್ರಿಯವರ ಕಛೇರಿಗೆ ತಲುಪಿ, ಅಲ್ಲಿಂದ ದೂರಸಂಪರ್ಕ ಇಲಾಖೆಗೆ ವರ್ಗಾವಣೆಗೊಳ್ಳುತ್ತದೆ. ಅಲ್ಲಿಂದ ದಕ್ಷಿಣಕನ್ನಡ ಜಿಲ್ಲೆಯ ಬಿಎಸ್ಎನ್ಎಲ್ ಕಚೇರಿಗೆ ಗ್ರಾಮದ ನೆಟ್ವರ್ಕ್ ಸಮಸ್ಯೆ ಕುರಿತ ಬರೆದ ದೂರು ತಲುಪಿ, ಡಿಜಿಎಂ ಅವರು 4 ಮೇ 2016ರಂದು ಟವರ್ ಸ್ಥಾಪಿಸುವುದಾಗಿ ಪತ್ರ ಬರೆಯುತ್ತಾರೆ.

Image result for modi digital india

ಒಂದೊಳ್ಳೆ ಕೆಲಸಕ್ಕೆ ನೂರಾರು ವಿಘ್ನದಂತೆ ಅಡ್ಡಗಾಲಾದ ಸ್ಥಳೀಯ ಪುಢಾರಿಗಳನ್ನು ಹಿಮ್ಮೆಟ್ಟಿಸಿದ ಯುವಕ!

ಇನ್ನು, ದೇವರು ಕೊಟ್ಟರೂ ಪೂಜಾರಿ ಬಿಡ ಎಂಬ ಮಾತಿನಂತೆ, ದೂರಸಂಪರ್ಕ ಇಲಾಖೆ ಗ್ರಾಮದಲ್ಲಿ ಟವರ್ ನಿರ್ಮಿಸಲು ಮುಂದಾದರೂ, ಸ್ಥಳೀಯ  ಪುಢಾರಿಗಳು ಇದನ್ನು ಪ್ರಶ್ನಿಸಿ, ಈ ಯೋಜನೆ ಸಾಕಾರಗೊಳ್ಳದಂತೆ ಸ್ಥಳೀಯ ಪಂಚಾಯತ್ ಮೂಲಕ ಆಕ್ಷೇಪಣೆ ಸಲ್ಲಿಸುತ್ತಾರೆ. ಆದರೆ, ಅವರ ಆಕ್ಷೇಪಣೆ ಮಾನ್ಯ ಮಾಡಲಾಗುವುದಿಲ್ಲ. ನಂತರ ಟವರ್ ನಿರ್ಮಾಣಕ್ಕೆ ಗೊತ್ತು ಮಾಡಿದ್ದ ಜಾಗ ಸರಕಾರಿ ಜಾಗ ಎಂದು ಮತ್ತೊಬ್ಬರು ತಕರಾರು ತೆಗೆಯುತ್ತಾರೆ. ಆದರೆ, ಅಸಲಿಗೆ ಅದು ಹಾಲು ಉತ್ಪಾದಕರ ಸಹಕಾರಿ ಸಂಘದ ಜಾಗವಾಗಿದ್ದು, ಕೃಷಿಕರಿಗೆ ಅನುಕೂಲವಾಗುತ್ತದೆ ಎಂದು ಗೊತ್ತಿದ್ದರಿಂದ ವಿರೋಧಿಗಳ ಈ ಯತ್ನವೂ ಕೈಗೂಡುವುದಿಲ್ಲ. ಕಡೆಗೂ ಭೂಮಿಯನ್ನು ದೂರಸಂಪರ್ಕ ಇಲಾಖೆಗೆ ಹಸ್ತಾಂತರ ಮಾಡಿ, ಟವರ್ ನಿರ್ಮಾಣಕ್ಕೆ ಅಡಿಗಲ್ಲು ಹಾಕಲಾಗುತ್ತದೆ.

ಟವರ್ ಕಾಮಗಾರಿ ಪೂರ್ಣವಾದ ನಂತರ ಉದ್ಭವಿಸಿತು ಮತ್ತೊಂದು ಸಮಸ್ಯೆ!

ಸ್ಥಳೀಯ ಪುಢಾರಿಗಳ ಅಡ್ಡಿಯನ್ನು ನಿವಾರಿಸಿ, 2017 ಜುಲೈ ತಿಂಗಳಲ್ಲಿ ಟವರ್ ನಿರ್ಮಾಣ ಕಾರ್ಯ ಆರಂಭಗೊಳ್ಳುತ್ತದೆ. ಕೇಂದ್ರ ಸರ್ಕಾರ ತನ್ನಿಂದಾಗುವ ಎಲ್ಲಾ ಕೆಲಸವನ್ನೂ ಮಾಡಿತು. ನಂತರ ಟವರ್ ಗೆ ವಿದ್ಯುತ್ ಪೂರೈಕೆ ಮಾಡಬೇಕಾಗಿ ಬರುತ್ತದೆ. ಅದು ರಾಜ್ಯ ಸರ್ಕಾರದ ವ್ಯಾಪ್ತಿಗೆ ಒಳಪಟ್ಟಿರುತ್ತದೆ. ಆಗ ಅಂದು ಆಡಳಿತದಲ್ಲಿದ್ದ ರಾಜ್ಯ ಕಾಂಗ್ರೆಸ್ ಸರಕಾರ, ಸ್ಥಳೀಯ ಕಾಂಗ್ರೆಸ್ ಶಾಸಕ ಸಂಬಂಧ ಪಟ್ಟ ಇಲಾಖೆ ಮೇಲೆ ಒತ್ತಡ ಹಾಕಿಸಿದ್ದರಿಂದ ವಿದ್ಯುತ್ ಪೂರೈಕೆ ಸಮಸ್ಯೆ ಉಂಟಾಗುವಂತೆ ಮಾಡಿ ಟವರ್ ನಿರ್ಮಾಣ ಕಾರ್ಯಕ್ಕೆ ತೀವ್ರ ಹಿನ್ನೆಡೆಯಾಗಿ ಕಾಮಗಾರಿ ಅಪೂರ್ಣವಾಗುತ್ತದೆ.

ಕಡೆಗೂ ಟವರ್ ಸ್ಥಾಪನೆ ಸವಾಲು ಸ್ವೀಕರಿಸಿ ಕಾರ್ಯ ಪೂರ್ಣಗೊಳಿಸಿದ ಯುವ ಶಾಸಕ


ವಿದ್ಯುತ್ ಸಂಪರ್ಕ ಸಮಸ್ಯೆಯಿಂದ ಟವರ್ ನಿರ್ಮಾಣ ಕಾರ್ಯ ಸಂಪೂರ್ಣವಾಗಿ ನೆನೆಗುದಿಗೆ ಬಿದ್ದಿತ್ತು. ಸಂದೀಪ್ ಪೂಜಾರಿಯವರು ಛಲ ಬಿಡದ ತ್ರಿವಿಕ್ರಮನಂತೆ ಸತತವಾಗಿ ಸಾಮಾಜಿಕ ಜಾಲತಾಣಗಳ ಮೂಲಕ, ದೂರವಾಣಿಯ ಮುಖಾಂತರ ಅಧಿಕಾರಿಗಳ, ಜನ ಪ್ರತಿನಿಧಿಗಳ ಮೇಲೆ ಒತ್ತಡ ಹೇರುತ್ತ ಬಂದರೂ, ಸ್ಥಳೀಯ ಜನಪ್ರತಿನಿಧಿಗಳು ಯೋಜನೆ ಪೂರ್ಣವಾಗದಂತೆ ನೋಡಿಕೊಳ್ಳಲು ಯಶಸ್ವಿಯಾಗಿದ್ದರು. ತದನಂತರ, ರಾಜ್ಯ ವಿಧಾನಸಭಾ ಚುನಾವಣೆ ನಡೆದು, ಬೆಳ್ತಂಗಡಿ ವಿಧಾನಸಭಾ ಕ್ಷೇತ್ರಕ್ಕೆ ನೂತನ ಶಾಸಕರಾಗಿ ಯುವ ನಾಯಕ ಹರೀಶ್ ಪೂಂಜಾ ಆಯ್ಕೆಯಾಗುತ್ತಾರೆ. ಸಂದೀಪ್ ಪೂಜಾರಿಯವರು ಟವರ್ ನಿರ್ಮಾಣಕ್ಕೆ ನಡೆಸುತ್ತಿರುವ ಹೋರಾಟದ ಬಗ್ಗೆ ಮೊದಲೇ ತಿಳಿದಿದ್ದ ಶಾಸಕ ಹರೀಶ್ ಪೂಂಜಾ ಅವರು, ಸಂದೀಪ್ ಪೂಜಾರಿಯವರ ಕೆಲಸಕ್ಕೆ ಸಾಥ್ ನೀಡಿದರು. ಮೊದಲು 2ಜಿ ನೆಟ್ವರ್ಕ್’ಗೆ ಅನುಮೋದನೆ ನೀಡಿದ್ದು, ಶಾಸಕರು ಸವಾಲು ಹಾಕಿ, 3ಜಿ ನೆಟ್ವರ್ಕ್ ಹಾಕಿಸುವಲ್ಲಿ ಯಶಸ್ವಿಯಾಗುತ್ತಾರೆ. 5 ಆಗಸ್ಟ್, 2018ರಂದು ಇಲ್ಲಿನ ಟವರ್ ಲೋಕಾರ್ಪಣೆಗೊಂಡಿತು. ಸಂದೀಪ್ ಪೂಜಾರಿಯವರ ಹೋರಾಟಕ್ಕೆ ಗೆಲುವು ಸಿಗುತ್ತದೆ.

ಪ್ರಧಾನಮಂತ್ರಿಯವರ ಕಟ್ಟಾ ಬೆಂಬಲಿಗ ಸಂದೀಪ್ ಪೂಜಾರಿ ಅವರ ಸೇವಾ ಮನೋಭಾವನೆ

‘ಇನ್ನು ತಾನೊಬ್ಬ ಸಾಮಾನ್ಯ ನಾಗರಿಕ, ತನ್ನಿಂದ ಮತ್ತೊಬ್ಬರಿಗೆ ಏನು ಸಹಾಯ ಮಾಡಲು ಸಾಧ್ಯ?’ ಎಂದು ಪ್ರಶ್ನೆ ಮಾಡುವವರಿಗೆ ಉತ್ತರವಾಗಿ ನಿಲ್ಲುತ್ತಾರೆ ಸಂದೀಪ್ ಪೂಜಾರಿ. ನರೇಂದ್ರ ಮೋದಿ ಅವರು ಪ್ರಧಾನಿ ಆದ ಬಳಿಕ, ಸಾಮಾನ್ಯ ಪ್ರಜೆ ಕೂಡ ಕೇಂದ್ರ ಸರಕಾರವನ್ನು ತಲುಪಬಹುದು ಎಂದು ಸಂದೀಪ್ ಪೂಜಾರಿಯವರು ತೋರಿಸಿಕೊಟ್ಟಿದ್ದಾರೆ. ಸೌದಿ ದೇಶಕ್ಕೆ ಉದ್ಯೋಗ ಅರಸುತ್ತ ಹೋಗಿದ್ದ ಯುವಕ ತನ್ನ ಯಜಮಾನನ ನಿರ್ಲಕ್ಷ್ಯತದಿಂದ ಅಲ್ಲಿನ ಅಧಿಕೃತ ಐಡಿ ಇಲ್ಲದೆ(ಅಲ್ಲಿನ ಅಧಿಕೃತ ಐಡಿ ಇಲ್ಲದೆ ಕೆಲಸ ಮಾಡುವುದು ಅಪರಾಧ), ನಾಲ್ಕು ವರ್ಷಗಳಿಂದ ದುಡಿದು ಊರಿಗೆ ಹಿಂದಿರುಗಿ ಬರಲಾರದೆ ತುಂಬಾ ನೋವು ಅನುಭವಿಸುತ್ತಿದ್ದ. ಈ ಸಮಸ್ಯೆಯ ಬಗ್ಗೆ ಸಂದೀಪ್ ಪೂಜಾರಿಯವರಿಗೆ ತಿಳಿಸಿದಾಗ ತಕ್ಷಣ ಕಾರ್ಯಪ್ರವೃತ್ತರಾಗಿ ಸೌದಿ ರಾಯಭಾರಿ ಕಛೇರಿಗೆ ಟ್ವಿಟರ್ ಮೂಲಕ ವಿಷಯ ಮುಟ್ಟಿಸುತ್ತಾರೆ. ನಂತರ ರಾಯಭಾರಿ ಕಛೇರಿಯ ಒತ್ತಡಕ್ಕೆ ಮಣಿದು ಯಜಮಾನ ಐಡಿ ಮಾಡದಿದ್ದಕ್ಕೆ ದಂಡ ಕಟ್ಟಿ ಯುವಕನನ್ನು ಪೋಲೀಸರಿಗೆ ಒಪ್ಪಿಸುತ್ತಾನೆ. ಈ ಸಮಯದಲ್ಲಿ ಸೌದಿ ರಾಯಭಾರಿ ಕಛೇರಿಗೆ ಮತ್ತೊಮ್ಮೆ ಮನವಿ ಮಾಡಿದಾಗ 6 ಜುಲೈ 2018ರಂದು ಭಾರತಕ್ಕೆ ಮರಳಿ ಬರುವಂತೆ ಮಾಡಲು ಪ್ರಯತ್ನಿಸುವುದಾಗಿ ಉತ್ತರ ಬರುತ್ತದೆ ಮಾತ್ರವಲ್ಲದೇ, ಯುವಕನಿಗೆ ವಿಮಾನಯಾನದ ಟಿಕೆಟ್ ಖುದ್ದು ರಾಯಭಾರಿ ಕಛೇರಿಯ ಅಧಿಕಾರಿಗಳು ನೀಡಿ ಏರ್ ಪೋರ್ಟ್ ವರೆಗೂ ಬಿಟ್ಟು, ದೆಹಲಿ ಮೂಲಕ ತನ್ನ ಮನೆಗೆ ಸೇರಿಸುವ ವ್ಯವಸ್ಥೆ ಮಾಡಿರುತ್ತಾರೆ.

ಈ ಹಿಂದೆಯೂ ಕೂಡ ಅಂದರೆ 18 ಏಪ್ರಿಲ್ 2018ರಂದು ಸಂದೀಪ್ ಪೂಜಾರಿಯವರು ಇದೇ ರೀತಿ ಉದ್ಯೋಗದ ನಿಮಿತ್ತ ಸೌದಿ ದೇಶಕ್ಕೆ ಹೋಗಿ ತೊಂದರೆಯಲ್ಲಿ ಸಿಲುಕಿ ಹಾಕಿಕೊಂಡು ಹಿಂದಿರುಗಿ ಬರಲಾರದೆ ಯಾತನೆ ಅನುಭವಿಸುತ್ತಿದ್ದ ಯುವಕನಿಗೆ ಟ್ವಿಟರ್ ಮೂಲಕ ಕೇಂದ್ರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್’ಜಿಯವರಿಗೆ ಮನವಿ ಮಾಡಿ, ಅದರಲ್ಲಿ ಯಶಸ್ವಿಯಾಗಿ ಸುರಕ್ಷಿತವಾಗಿ ತಾಯ್ನಾಡಿಗೆ ಮರಳುವಂತೆ ಮಾಡಿದ ಖ್ಯಾತಿ ಕೂಡ ಸಂದೀಪ್ ಪೂಜಾರಿಯವರಿಗೆ ಸಲ್ಲುತ್ತದೆ. ಇದಿಷ್ಟೇ ಅಲ್ಲದೇ, ಕಾಸರಗೋಡಿನ ಬೇಕಲ್ ಪೋರ್ಟ್ ರೈಲ್ವೇ ನಿಲ್ದಾಣದಲ್ಲಿ ಇದ್ದ ಅವ್ಯವಸ್ಥೆಯ ಕುರಿತು ರೈಲ್ವೇ ಇಲಾಖೆಯ ಗಮನಕ್ಕೆ ತಂದು, ಸರಿಪಡಿಸಿರುತ್ತಾರೆ. ಇನ್ನು, ಸಾಮಾಜಿಕ ಜಾಲತಾಣದಲ್ಲಿ ಗುಂಪುಗಳನ್ನು ರಚಿಸಿ, ಕೇಂದ್ರ ಸರ್ಕಾರದ ಎಲ್ಲಾ ಸಚಿವಾಲಯದ ಯೋಜನೆ, ಕಾಮಗಾರಿ, ಉದ್ದೇಶ ಜನಸಾಮಾನ್ಯರಿಗೆ ತಲುಪಿಸಿ ತಿಳಿಯಪಡಿಸುತ್ತಿದ್ದಾರೆ.
ಸದ್ಯ, “ತುಳುವಾಸ್ ಪ್ರೈಡ್ ಟ್ರಸ್ಟ್(ರಿ)” ಎಂಬ ಸೇವಾ ಟ್ರಸ್ಟ್’ ನ ಸಹ ಸ್ಥಾಪಕರಾಗಿ, ತನ್ನ ನೇತೃತ್ವದಲ್ಲಿ ಸಮಾಜಕ್ಕೆ ತನ್ನಿಂದ ಆದಷ್ಟು ಕೊಡುಗೆ ಕೊಡುತ್ತಿದ್ದಾರೆ.
ಸಂದೀಪ್ ಪೂಜಾರಿ ಅವರ ಸೇವಾ ಮನೋಭಾವಕ್ಕೆ ಅಭಿನಂದನೆಗಳು. ಇದೇ ರೀತಿ ಸಮಾಜ ಸೇವೆಯಲ್ಲಿ ತೊಡಸಿಕೊಳ್ಳಿ ಎಂದು ಶುಭ ಹಾರೈಕೆ.

-Shrimunna

Tags

Related Articles

FOR DAILY ALERTS
 
FOR DAILY ALERTS
 
Close