ದೇಶಪ್ರಚಲಿತ

ಪ್ರಧಾನಿ ಮೋದಿ ಮುಡಿಗೆ ಮತ್ತೊಂದು ಗರಿ ಸೇರ್ಪಡೆ! ಅಮೇರಿಕಾದ ಪ್ರತಿಷ್ಠಿತ ಪ್ರಶಸ್ತಿ ಪಟ್ಟಿಗೆ ನಮೋ‌ ಹೆಸರು ಘೋಷಣೆ!

ಪ್ರಧಾನಿ ನರೇಂದ್ರ ಮೋದಿ, ವಾಹ್ ಈ‌ ಹೆಸರು ಕೇವಲ ಒಬ್ಬ ವ್ಯಕ್ತಿ ಎಂದು ಹೇಳುವುದಕ್ಕಿಂತ ಇಡೀ ದೇಶದ ಶಕ್ತಿ ಎಂದು ಹೇಳಬಹುದು. ಯಾಕೆಂದರೆ ಮೋದಿ ಮುಂದೆ ಇಂದು ಇಡೀ ಜಗತ್ತು ಮಂಡಿಯೂರಿ ಕೂತಿದೆ ಎಂದರೆ ನಾವು ಹೆಮ್ಮೆ‌ ಪಡಲೇಬೇಕು ಅಲ್ವೇ. ಜಗತ್ತಿನಲ್ಲಿ ಶ್ರೇಷ್ಠ ವ್ಯಕ್ತಿಗಳಿಗೆ, ಮಹಾನ್ ಸಾಧಕರಿಗೆ ನೀಡುವ ಗೌರವ ಪ್ರಶಸ್ತಿಗಳು ಇಂದು ನಮ್ಮ ಪ್ರಧಾನಿ ನರೇಂದ್ರ ಮೋದಿಯವರ ಮುಡಿಗೆ ಅರ್ಪಣೆಯಾಗುತ್ತಿದೆ ಎಂದರೆ ನಾವೂ ಕೂಡ ಹೆಮ್ಮೆ ಪಡುವಂತಹ ವಿಚಾರ. ಈಗಾಗಲೇ ಅನೇಕ ಬಲಿಷ್ಠ ರಾಷ್ಟ್ರಗಳು ತಮ್ಮ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿ ಮತ್ತು ಗೌರವ ಪ್ರಶಸ್ತಿಯನ್ನು ಮೋದಿಜೀಗೆ ನೀಡಿದ್ದು, ಇದೀಗ ಅಮೇರಿಕಾದ ಅತ್ಯುನ್ನತ ಪ್ರಶಸ್ತಿ ನರೇಂದ್ರ ಮೋದಿಯವರಿಗೆ ಸಿಕ್ಕಿದೆ. ನರೇಂದ್ರ ಮೋದಿಯವರನ್ನು ಇಂದು ಇಡೀ‌ ಜಗತ್ತು ಒಪ್ಪಿಕೊಂಡಿದೆ ಎಂಬುದಕ್ಕೆ ಇದಕ್ಕಿಂತ ಒಳ್ಳೆಯ ಉದಾಹರಣೆ ಬೇಕಾಗಿಲ್ಲ. ಯಾಕೆಂದರೆ ಎಲ್ಲಾ ದೇಶಗಳು ಕೂಡ ಭಾರತದ ಜೊತೆ ಸ್ನೇಹ ಸಂಬಂಧ ಬೆಳೆಸಲು ತುದಿಕಾಲಲ್ಲಿ ನಿಂತಿವೆ ಮಾತ್ರವಲ್ಲದೆ ಮೋದಿಯವರನ್ನು ವಿಶ್ವ ನಾಯಕ‌ ಎಂದು ಒಪ್ಪಿಕೊಂಡಿವೆ.‌ ಅನೇಕ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿರುವ ಮೋದಿಗೆ ಇದೀಗ ಮತ್ತೊಂದು ಪ್ರಶಸ್ತಿ ಸಿಕ್ಕಿದೆ, ಅದುವೇ ಫಿಲಿಪ್ ಕೋಟ್ಲರ್ ಪ್ರೆಸಿಡೆಂಟಲ್ ಅವಾರ್ಡ್. ಇದು ಅಮೇರಿಕ ನೀಡುವ ಅತ್ಯುನ್ನತ ಪ್ರಶಸ್ತಿಗಳಲ್ಲಿ ಒಂದು, ಇಂತಹ ಗೌರವ ಕೂಡ ನಮ್ಮ ಪ್ರಧಾನಿಗೆ ಲಭಿಸಿರುವುದು ಭಾರತೀಯರಾದ ನಮಗೂ ಹೆಮ್ಮೆಯ ವಿಚಾರ.!

ನರೇಂದ್ರ ಮೋದಿಯವರು ಪ್ರಧಾನಿಯಾದ ಬಳಿಕ ಭಾರತ ಮತ್ತು ಭಾರತೀಯರು ಉನ್ನತ ಮಟ್ಟದ ಜೀವನ ನಡೆಸುತ್ತಿದ್ದಾರೆ ಎಂದು ಸಮೀಕ್ಷೆಗಳೇ ಹೇಳುತ್ತಿವೆ ಮಾತ್ರವಲ್ಲದೆ ಅದೇ ಕಾರಣಕ್ಕೆ ಇಂದು ಅಮೇರಿಕಾ ಕೂಡ ಮೋದಿಗೆ ಪ್ರಶಸ್ತಿ ಪ್ರಧಾನ ಮಾಡಿದೆ. ಪ್ರಧಾನಿ ಮೋದಿ ಭಾರತೀಯರ ಸಾಮಾಜಿಕ ಆರ್ಥಿಕ ಮತ್ತು ತಾಂತ್ರಿಕ ವ್ಯವಸ್ಥೆಯ ಜೊತೆಗೆ ಜನರ ಜೀವನವನ್ನು ಕೂಡ ಸುಧಾರಿಸಿಕೊಂಡು ಹೋಗುತ್ತಿದ್ದಾರೆ ಎಂದು ಹೇಳಿಕೊಂಡ ಅಮೇರಿಕಾ, ತನ್ನ ದೇಶದ ಪ್ರತಿಷ್ಠಿತ “ನಾರ್ಥ್ ವೆಸ್ಟರ್ನ್ ಯೂನಿವರ್ಸಿಟಿ”ಯು ಈ ಪ್ರಶಸ್ತಿ ಪಟ್ಟಿಗೆ ಮೋದಿಯವರ ಹೆಸರನ್ನು ಘೋಷಣೆ ಮಾಡಿದೆ. ಈಗಾಗಲೇ ಹಲವಾರು ಪ್ರಶಸ್ತಿ ಮೋದಿಯವರ ಪಾಲಿಗೆ ಬಂದಿದ್ದು, ಇದೀಗ ಮತ್ತೊಂದು ಪ್ರತಿಷ್ಠಿತ ಪ್ರಶಸ್ತಿ ಲಭಿಸಿದೆ.!

Image result for modi

ನರೇಂದ್ರ ಮೋದಿಯವರ ವರ್ಚಸ್ಸು ಕಡಿಮೆಯಾಗುತ್ತಿದೆ ಎಂದು ಹೇಳುತ್ತಲೇ ಇರುವ ವಿರೋಧಿಗಳಿಗೆ ಇದೀಗ ಕಪಾಳಮೋಕ್ಷ ಮಾಡಿದಂತಾಗಿದೆ.‌ ಯಾಕೆಂದರೆ ಅಮೇರಿಕಾದಂತಹ ರಾಷ್ಟ್ರವೇ ಮೋದಿಯವರ ಆಡಳಿತಕ್ಕೆ ಶಿರಬಾಗಿ ನಮಿಸುತ್ತಿದೆ ಎಂದರೆ ಇದು ಭಾರತೀಯರೆಲ್ಲರಿಗೂ ಹೆಮ್ಮೆಯ ವಿಷಯ. ಮೋದಿ ಮುಸ್ಲಿಂ ವಿರೋಧಿ ಎಂದು ಬಿಂಬಿಸಲು ಯತ್ನಿಸಿದ ವಿಪಕ್ಷಗಳು ಅರಬ್ ದೇಶಗಳು ಮೋದಿಗೆ ತಮ್ಮ ದೇಶದ ಅತ್ಯುತ್ತಮ ಪ್ರಶಸ್ತಿಯನ್ನು ನೀಡಿ ಗೌರವಿಸಿದಾಗ ತೆಪ್ಪಗಾಗಿದ್ದರು.‌ ಹೀಗೆ ಮೋದಿ ಮೋಡಿಗೆ ಬೆರಗಾದ ಎಲ್ಲಾ ರಾಷ್ಟ್ರಗಳು ಕೂಡ ಮೋದಿ ಮುಂದೆ ಮಂಡಿಯೂರಿ ಕೂತಿದೆ. ಅಷ್ಟಕ್ಕೂ ಮೋದಿ ಕೇವಲ ಭಾರತವನ್ನು ಅಭಿವೃದ್ಧಿಪಡಿಸುತ್ತಿಲ್ಲ, ಭಾರತದ ಜೊತೆಗೆ ಇತರ ರಾಷ್ಟ್ರಗಳ ಮನಸ್ಥಿತಿಯನ್ನು ಕೂಡ ಅಭಿವೃದ್ಧಿ ಪಡಿಸುತ್ತಿದ್ದಾರೆ ಎಂಬುದು ನಮಗೆ ಸ್ಪಷ್ಟವಾಗಿ ಅರ್ಥ ಆಗುತ್ತಿದೆ. ಅದೇನೇ ಇರಲಿ ನಮ್ಮ ದೇಶದ ಪ್ರಧಾನಮಂತ್ರಿ ಇಂದು ಇಡೀ ವಿಶ್ವಕ್ಕೆ ನಾಯಕನಾಗಿ ಹೊರಹೊಮ್ಮಿದ್ದಾರೆ ಎಂಬುದರಲ್ಲಿ ಸಂಶಯವಿಲ್ಲ.!

-ಅರ್ಜುನ್

Tags

Related Articles

FOR DAILY ALERTS
 
FOR DAILY ALERTS
 
Close