ಪ್ರಚಲಿತ

ಈ ಬಾರಿಯ ದೀಪಾವಳಿಗೂ ಜೈ ಜವಾನ್ ಎಂದ ನಮೋ.! ಗಡಿಗೆ ತೆರಳಲಿದ್ದಾರೆ ಪ್ರಧಾನಿ ಮೋದಿ.!

ದೀಪಾವಳಿಯನ್ನು ಪ್ರತಿವರ್ಷವೂ ವಿಶಿಷ್ಟವಾಗಿ ಆಚರಿಸಿಕೊಳ್ಳುವ ಪ್ರಧಾನಿ ಮೋದಿ ಈ ಬಾರಿಯೂ ದೀಪಾವಳಿಯನ್ನು ವಿಶಿಷ್ಟವಾಗಿ ಆಚರಿಸಿಕೊಂಡಿದ್ದಾರೆ. ಪ್ರಧಾನಿಯಾದ ನಂತರ ಪ್ರತಿ ದೀಪಾವಳಿಯಲ್ಲೂ ಭಾರತೀಯ ಸೇನೆಯೊಂದಿಗೆ ದೀಪಾವಳಿ ಹಬ್ಬ ಆಚರಿಸಿಕೊಳ್ಳುವ ಪ್ರಧಾನಿ ನರೇಂದ್ರ ಮೋದಿಯವರು ಈ ಬಾರಿ ಮತ್ತೆ ಸೈನಿಕರಿಗೆ ನಮೋ ಎಂದಿದ್ದಾರೆ. ಮತ್ತೊಮ್ಮೆ ಈ ಬಾರಿಯ ದೀಪಾವಳಿಯನ್ನು ದೇಶವನ್ನು ಕಾಯುತ್ತಿರುವ ಯೋಧರೊಂದಿಗೆ ಆಚರಿಸಿಕೊಳ್ಳಲು ಮೋದಿ ನಿರ್ಧರಿಸಿದ್ದಾರೆ.

ಇಸ್ರೇಲ್ ಪ್ರಧಾನಿ ಪ್ರಧಾನಿ ಮೋದಿಗೆ ದೀಪಾವಳಿ ಶುಭಾಶಯಗಳನ್ನು ಸಲ್ಲಿಸಿದ್ದರು. ಈ ವೇಳೆ ಅವರಿಗೆ ಪ್ರತಿಕ್ರಿಯೆ ನೀಡಿರುವ ಪ್ರಧಾನಿ ಮೋದಿ ಇಸ್ರೇಲ್ ಪ್ರಧಾನಿ ನೇತಾನ್ಯಾಹುಗೆ ಅಭಿನಂದನೆ ಸಲ್ಲಿಸಿ ಪ್ರತಿವರ್ಷದಂತೆ ಈ ಬಾರಿಯ ದೀಪಾವಳಿಯನ್ನೂ ನಾವು ಯೋಧರೊಂದಿಗೆ ಆಚರಿಸುತ್ತಿದ್ದೇನೆ ಎಂದು ಹೇಳಿದ್ದಾರೆ. ಮಾತ್ರವಲ್ಲದೆ ಇದರ ವಿಶೇಷ ಫೋಟೋಗಳನ್ನು ಹಂಚಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ.

2014 ರಲ್ಲಿ ಭಾರತದ ತುತ್ತ ತುದಿ ಗಡಿ ಪ್ರದೇಶವಾದ ಸಿಯಾಚಿನ್, 2015ರಲ್ಲಿ ಪಂಜಾಬ್ ಗಡಿ, 2016ರಲ್ಲಿ ಹಿಮಾಚಲ ಪ್ರದೇಶದ ಇಂಡೋ-ಟಿಬೆಟ್ ಗಡಿ ಹಾಗೂ 2017ರಲ್ಲಿ ಜಮ್ಮು ಕಾಶ್ಮೀರದ ಗುರೇಜ್ ಎಂಬಲ್ಲಿ ದೀಪಾವಳಿ ಹಬ್ಬವನ್ನು ಆಚರಿಸಿಕೊಂಡಿದ್ದರು. ಈ ಬಾರಿ ಮತ್ತೆ ಭಾರತೀಯ ಸೈನಿಕರೊಂದಿಗೆ ಪ್ರಧಾನಿ ಮೋದಿಯವರು ದೀಪಾವಳಿ ಆಚರಿಸಿಕೊಳ್ಳಲಿದ್ದಾರೆ. ಈ ದೀಪಾವಳಿಗೆ ಕೇದಾರನಾಥ ದೇವಾಲಯಕ್ಕೂ ಪ್ರಧಾನಿ ಮೋದಿ ತೆರಳಲಿದ್ದಾರೆ.

-ಸುನಿಲ್ ಪಣಪಿಲ

Tags

Related Articles

FOR DAILY ALERTS
 
FOR DAILY ALERTS
 
Close