ಪ್ರಚಲಿತ

ಹಿಂದೂ ಮಹಾಸಾಗರದಲ್ಲಿ ಭಾರತವನ್ನು ಸುತ್ತುವರಿಯುವ ಚೀನಾದ ಮುತ್ತಿನ ಹಾರಕ್ಕೆ ಕತ್ತರಿ ಹಾಕಿದ ಮಾಲ್ಡೀವ್ಸ್ ಅನ್ನು ತೆರೆದ ಬಾಹುಗಳಿಂದ ಆಲಂಗಿಸಲು ಭಾರತದ ಪ್ರಧಾನ ಸೇವಕ ತಯಾರು!

 

ಕಳೆದ ಹಲವು ವರ್ಷಗಳಲ್ಲಿ ಹಿಂದೂ ಮಹಾಸಾಗರದಲ್ಲಿ ಭಾರತವನ್ನು ಸುತ್ತುವರಿಯಲು ದಕ್ಷಿಣಾ ಏಷ್ಯಾದ ದೇಶಗಳನ್ನು ತನ್ನ ಕಪಿ ಮುಷ್ಟಿಯಲ್ಲಿಟ್ಟು ಚೀನಾದಿಂದ ಇರಾನ್ ವರೆಗೆ ಮುತ್ತಿನ ಹಾರವನ್ನು ಬೆಸೆದಿತ್ತು ಡ್ರ್ಯಾಗನ್. ಆದರೆ ಚೀನಾದ ದುರಾದೃಷ್ಟ, ಭಾರತದ ಗದ್ದುಗೆಯಲ್ಲಿ ಕುಳಿತಿದ್ದ “ಜೀ ಮೇಡಮ್ ಜಿ” ಸರಕಾರವನ್ನು ಕಿತ್ತೊಗೆದು ಒಬ್ಬ ಅಪ್ಪಟ ದೇಶಭಕ್ತನನ್ನು ಕುಳ್ಳಿರಿಸಿದ ಭಾರತದ ಮತದಾರ. ಆ ದೇಶಭಕ್ತನೂ ಅಷ್ಟೆ, ಮತದಾರ ತನ್ನ ಮೇಲೆ ಇಟ್ಟ ಭರವಸೆಯನ್ನು ಎಳ್ಳಷ್ಟೂ ಕುಂದಲು ಬಿಡಲಿಲ್ಲ. ‘ಎಲ್ಲಕ್ಕಿಂತ ಮೊದಲು ದೇಶ’ ಎನ್ನುವ ನೀತಿಯಡಿ ತನ್ನ ವಿದೇಶಾಂಗ ನೀತಿಯನ್ನು ಬಲಪಡಿಸುತ್ತಾ ಹೋದ ಪ್ರಧಾನ ಸೇವಕ ಇಂದು ಏಷ್ಯಾದ ಅತಿ ನಂಬಿಕಾರ್ಹ ವ್ಯಕ್ತಿ. ಮೋದಿ ಅವರದ್ದು ತಾನೂ ಬೆಳೆಯುತ್ತಾ ಇತರರನ್ನೂ ಬೆಳೆಸುವ ಸಹೃದಯತೆ.

ಹಾಗಾಗಿ ಏಷ್ಯಾದ ಅಷ್ಟೂ ದೇಶಗಳಿಗೆ ಇವತ್ತು ಭಾರತವೆಂದರೆ ಅತಿ ಪ್ರೀತಿ. ಥಾಯ್ ಲ್ಯಾಂಡ್, ಮಲೇಶಿಯಾ, ಬಾಂಗ್ಲಾದೇಶ, ಬರ್ಮಾ, ವಿಯೆಟ್ನಾಂ, ಮಂಗೋಲಿಯಾ ಮುಂತಾದ ದೇಶಗಳೆಲ್ಲಾ ಚೀನಾದ ಕಪಿ ಮುಷ್ಟಿಯಿಂದ ಆಗಲೆ ಹೊರಬಂದಾಗಿದೆ. ಚೀನಾದ ಬದ್ದ ವೈರಿ ಜಪಾನ್ ಮೋದಿಯನ್ನು ಅಪ್ಪಿಕೊಂಡು ಭಾರತ ನನ್ನ ಅತಿ ಘನಿಷ್ಟ ಮಿತ್ರ ಎಂದು ಷರಾ ಬರೆದಾಗಿದೆ. ಈ ಎಲ್ಲಾ ದೇಶಗಳಂತೆಯೆ ಮಾಲ್ಡೀವ್ಸ್ ಕೂಡಾ ಚೀನಾದ ಕಪಿಮುಷ್ಟಿಯಿಂದ ಹೊರಬಂದು ಬದಲಾವಣೆಗಾಗಿ ಹಾತೊರೆಯುತ್ತಿದೆ. ಚಾಣಕ್ಯ ನೀತಿಯಂತೆ ಉಪಾಯದಿಂದ ಚೀನಾದ ಮುತ್ತಿನ ಹಾರಕ್ಕೆ ಕತ್ತರಿ ಹಾಕುತ್ತಾ ಹೋದರು ಮೋದಿ.

ಮಾಲ್ಡೀವ್ಸ್ ಗೆ ಬೇಕು ಭಾರತದ ಸಹಾಯ ಹಸ್ತ

ಸೆಪ್ಟಂಬರಿನಲ್ಲಿ ನಡೆದ ಚುನಾವಣೆಯಲ್ಲಿ ಚೀನಾದ ಪರ ಒಲವು ಹೊಂದಿದ್ದ ಅಬ್ದುಲ್ಲಾ ಯಾಮೀನ್ ಅನ್ನು ಮನೆಗೆ ಕಳುಹಿಸಿ ಆಶ್ಚರ್ಯಕರ ರೀತಿಯಲ್ಲಿ ಇಬ್ರಾಹಿಮ್ ಮೊಹಮ್ಮದ್ ಸೋಲಿಹ್ ನನ್ನು ಅಧಿಕಾರದ ಗದ್ದುಗೆ ಹಿಡಿಯುವಂತೆ ಮಾಡಿದ್ದರು ಮಾಲ್ಡೀವ್ಸ್ ಮತದಾರರು. ಮಾಲ್ಡೀವ್ಸ್ ಮಟ್ಟಿಗೆ ಇದು ಆಶ್ಚರ್ಯಕರ ಮತ್ತು ತುರ್ತಾಗಿ ಬೇಕಾಗಿದ್ದ ಬದಲಾವಣೆಯಾಗಿತ್ತು. ಅಬ್ದುಲ್ಲಾ ಯಾಮೀನ್ ಪ್ರಜಾಪ್ರಭುತ್ವದ ಕಗ್ಗೊಲೆ ನಡೆಸಿ ತನ್ನ ದೇಶವನ್ನು ಚೀನಾದ ಪದತಲದಲ್ಲಿಟ್ಟಿದ್ದರು. ದೇಶದೊಳಗೆ ತನ್ನನ್ನು ವಿರೋಧಿಸುತ್ತಿದ್ದ ವಿರೋಧಿಗಳನ್ನೆಲ್ಲಾ ಜೈಲಿಗಟ್ಟಿದ್ದರು. ಅಬ್ದುಲ್ಲಾ ಯಾಮೀನ್ ನ ಸರ್ವಾಧಿಕಾರ ಮಿತಿ ಮೀರಿತ್ತು.

ತಾನು ಚುನಾವಣೆಯಲ್ಲಿ ಹೀನಾಯವಾಗಿ ಸೋತಿದ್ದರೂ ಆತ ಜನಾದೇಶವನ್ನು ಒಪ್ಪಿಕೊಳ್ಳಲು ತಯಾರಿರಲಿಲ್ಲ. ಆದರೆ ಈಗ ಹೊಸ ಅಧ್ಯಕ್ಷನ ಪದಗ್ರಹಣ ಸಮಾರಂಭಕ್ಕಿದ್ದ ಅಡೆತಡೆಯೆಲ್ಲಾ ತೊಡೆದು ಸೋಲಿಹ್ ಕೈಗೆ ಅಧಿಕಾರ ಹಸ್ತಾಂತರವಾಗಿದೆ. ಚುನಾವಣಾ ಫಲಿತಾಂಶ ಹೊರಬಿದ್ದ ಕೂಡಲೆ ಸೋಲಿಹ್ ನನ್ನು ಅಭಿನಂದಿಸಿದ ಮೊದಲ ವ್ಯಕ್ತಿ ನಮ್ಮ ಪ್ರಧಾನ ಸೇವಕ. ಈಗ ಸೋಲಿಹ್ ಪದಗ್ರಹಣ ಸಮಾರಂಭಕ್ಕೂ ಹೋಗುವ ಮೂಲಕ ಮಾಲ್ಡೀವ್ಸ್ ಅನ್ನು ಚೀನಾದ ಕೈಯಿಂದ ಅಕ್ಷರಶಃ ಕಿತ್ತುಕೊಳ್ಳಲಿದ್ದಾರೆ.

ಪ್ರಧಾನಿಯಾದ ಮೇಲೆ ಮಾಲ್ದೀವ್ಸ್ ಗೆ ಇದೆ ಮೊದಲ ಭೇಟಿ ನೀಡುತ್ತಿರುವ ನರೇಂದ್ರ ಮೋದಿ ಏನಾದರೊಂದು ಒಪ್ಪಂದ ಮಾಡಿಕೊಂಡೆ ಬರುತ್ತಾರೆ. ಬರಿಗೈಯಲ್ಲಿ ಬರುವ ಆಸಾಮಿ ಅಲ್ಲ ನಮ್ಮ ಪ್ರಧಾನ ಸೇವಕ. ಚೀನಾಕ್ಕೆ ಮರ್ಮಾಘಾತ ನೀಡಲು ಏನಾದರೊಂದು ‘ಖಿಚಡಿ’ ಬೇಯಿಸಿಯೆ ತೆರಳಿರುತ್ತಾರೆ ಮೋದಿ. ಅತ್ತ ಸೋಲಿಹ್ ಕೂಡಾ ಭಾರತದ ಸ್ನೇಹಕ್ಕಾಗಿ ಹಾತೊರೆಯುತ್ತಿದ್ದಾರೆ. ಮೋದಿ ನೇತೃತ್ವದ ಬಲಿಷ್ಟ ಭಾರತದ ಗೆಳೆತನ ಮಾಲ್ಡೀವ್ಸ್ ನಂತಹ ಪುಟ್ಟ ದೇಶಕ್ಕೂ ಬೇಕು, ಅಮೇರಿಕಾದಂತಹ ದೊಡ್ಡ ದೇಶಕ್ಕೂ ಬೇಕು. ಭಾರತದಲ್ಲಿ ಮೋದಿಗೆ ಬಾಯಿಗೆ ಬಂದಂತೆ ಬೈಯ್ದರೂ ಜಗತ್ತಿನಲ್ಲಿ ಇವತ್ತು ಮೋದಿ ಮೋಡಿ ಚಿಕ್ಕ ದೊಡ್ಡ ದೇಶಗಳನ್ನೆಲ್ಲಾ ಆವರಿಸಿ ಬಿಟ್ಟಿದೆ. ಇಷ್ಟಾಗಿಯೂ ಕೆಲವರು ಮೋದಿ ನಾಲ್ಕೂವರೆ ವರ್ಷದಲ್ಲಿ ಏನು ಮಾಡಿದ್ದಾರೆ ಎಂದು ಕೇಳುತ್ತಾರೆ. ಒಲ್ಲದ ಗಂಡನಿಗೆ ಮೊಸರಿನಲ್ಲೂ ಕಲ್ಲು ಅನ್ನುವ ಹಾಗೆ ಮೋದಿ ಪ್ರಾಣವೆ ಒತ್ತೆ ಇಟ್ಟು ದೇಶಕ್ಕಾಗಿ ಹೋರಾಡಿದರೂ ಇವರುಗಳು ಅದೆ ಹಳಸಲು ಪ್ರಶ್ನೆಯನ್ನೆ ಕೇಳುತ್ತಾರೆ.

–ಶಾರ್ವರಿ

Tags

Related Articles

FOR DAILY ALERTS
 
FOR DAILY ALERTS
 
Close