ಅಂಕಣ

ಫನಿಗೆ ತತ್ತರಿಸಿದ್ದ ಒಡಿಶಾ ಜನತೆಗೆ ಧಾವಿಸಿ ಬಂದ ಪ್ರಧಾನಿ ಮೋದಿ.! ವೈಮಾನಿಕ ಸಮೀಕ್ಷೆ ಬೆನ್ನಲ್ಲೇ ಭರ್ಜರಿ ಪರಿಹಾರ ಘೋಷಿಸಿದ ಪ್ರಧಾನಿ…

ಫನಿ“ಚಂಡಮಾರುತ ಉತ್ತರ ಭಾಗವನ್ನು ಅಕ್ಷರಶಃ ತತ್ತರಿಸುವಂತೆ ಮಾಡಿತ್ತು. ಒಡಿಶಾ ಭಾಗದಲ್ಲಿ ಬೀಸಿದ ಚಂಡುಮಾರುತಕ್ಕೆ ಇಡೀ ರಾಜ್ಯವೇ ನಲುಗಿ ಹೋಗಿದೆ. ಸಾವಿರಾರು ಮನೆಗಳು ಹಾನಿಗೊಂಡಿದ್ದರೆ ಕೋಟ್ಯಾಂತರ ಆಸ್ತಿಪಾಸ್ತಿಗೆ ಧಕ್ಕೆಯಾಗಿದೆ. ಕೃಷಿ ವಲಯಗಳು ಸಂಪೂರ್ಣ ನಾಶವಾಗಿ ಹೋಗಿದೆ. ಆಹಾರಕ್ಕೆ ಆಹಾಕಾರ ಉಂಟಾಗಿದೆ.

ಈ ನಿಟ್ಟಿನಲ್ಲಿ ಇಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ವೈಮಾನಿಕ ಸಮೀಕ್ಷೆಯನ್ನು ನಡೆಸಿದ್ದಾರೆ. ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಜೊತೆ ವೈಮಾನಿಕ ಸಮೀಕ್ಷೆ ನಡೆಸಿದ ಮೋದಿಯವರು ತನ್ನ ಕೈನಲ್ಲಿ ನಕಾಶೆಯೊಂದನ್ನು ಹಿಡಿದುಕೊಂಡೇ ಪ್ರತಿ ಭಾಗಗಳಲ್ಲಿ ಆಗಿರುವ ಹಾನಿಗಳನ್ನು ಖುದ್ದಾಗಿ ಪರಿಶೀಲಿಸಿದ್ದಾರೆ. ಪ್ರಧಾನಿ ಮೋದಿಯವರಿಗೆ ಒಡಿಶಾ ಮುಖ್ಯಮಂತ್ರಿಗಳು ಹಾನಿಗೊಳಗಾದ ಪ್ರದೇಶದ ಮಾಹಿತಿಯನ್ನು ವಿವರಿಸಿದ್ದಾರೆ.

ಸಂಪೂರ್ಣವಾಗಿ ಪರಿಶೀಲಿಸಿದ ಪ್ರಧಾನಿ ಮೋದಿಯವರು ನಂತರ ಒಡಿಶಾ ರಾಜ್ಯಕ್ಕೆ ಬರೋಬ್ಬರಿ 1000 ಕೋಟಿಗಳ ಬೃಹತ್ ಪರಿಹಾರವನ್ನು ನೀಡಿದ್ದಾರೆ. ಬೆಳೆ ಹಾನಿ, ಮನೆಗಳ ಹಾನಿ ಸಹಿತ ಅನೇಕ ಹಾನಿಗಳಿಗೆ ಮತ್ತು ಹಲವಾರು ಕಟ್ಟಡಗಳ ಮರುನಿರ್ಮಾಣಕ್ಕೆ ಪ್ರಧಾನಿ ಮೋದಿಯವರು ಈ ಪರಿಹಾರವನ್ನು ಘೋಷಿಸಿದ್ದಾರೆ. ಮಾತ್ರವಲ್ಲದೆ ಯಾವುದೇ ತುರ್ತು ಕಾರ್ಯಗಳಿಗೆ ಭಾರತೀಯ ಸೇನೆ ಸಜ್ಜಾಗಿರುತ್ತದೆ. ಕೇಂದ್ರ ಸರ್ಕಾರದಿಂದ ಯಾವುದೇ ಸಹಕಾರಕ್ಕೂ ನಾವು ಬದ್ಧರಾಗಿದ್ದೇವೆ. ಒಡಿಶಾ ಜನರೊಂದಿಗೆ ನಾವಿದ್ದೇವೆ ಎಂದು ಹೇಳಿದ್ದಾರೆ. ಆಹಾರ ಸಾಮಾಗ್ರಿ ಪೂರೈಕೆಗೂ ಸಹಕರಿಸುತ್ತೇವೆ ಎಂದು ಹೇಳಿದ್ದಾರೆ.

ಫನಿ ಚಂಡಮಾರುತದಿಂದ ತತ್ತರಿಸಿದ ಒಡಿಶಾಗೆ ಕೂಡಲೇ ಧಾವಿಸಿದ ಪ್ರಧಾನಿ ಮೋದಿಯವರಿಗೆ ಒಡಿಶಾ ಮುಖ್ಯಮಂತ್ರಿ ಪಟ್ನಾಯಕ್ ಧನ್ಯವಾದಗಳನ್ನು ಅರ್ಪಿಸಿದ್ದಾರೆ. ಖುದ್ದು ಪ್ರಧಾನಿಯವರೇ ಸಮೀಕ್ಷೆ ನಡೆಸಿ ಪರಿಹಾರ ಒದಗಿಸಿದ್ದು ಸಂತಸ ತಂದಿದೆ. ಪ್ರಧಾನಿ ಮೋದಿ ಹಾಗೂ ಕೇಂದ್ರ ಸರ್ಕಾರಕ್ಕೆ ಧನ್ಯವಾದಗಳು ಎಂದು ಹೇಳಿದ್ದಾರೆ.

-ಏಕಲವ್ಯ

Tags

Related Articles

FOR DAILY ALERTS
 
FOR DAILY ALERTS
 
Close