ಅಂಕಣ

ಪ್ಲೂರಿಪೊಟೆಂಟ್ ಸ್ಟೆಮ್ ಸೆಲ್ ತಂತ್ರಜ್ಞಾನದ ಮೂಲಕ ಜನುಮ ತಳೆದ ಮೊದಲ ಮಗು ನಮ್ಮ ಗಣೇಶ? ವೇದಕಾಲದಿಂದಲೂ ಭಾರತದಲ್ಲಿ ಕಾಂಡಕೋಶ ತಂತ್ರಜ್ಞಾನದ ಅಸ್ತಿತ್ವವಿತ್ತು!!

ಆದಿ ಯೋಗಿ ಶಿವ ಹಲವಾರು ಪ್ರಥಮಗಳ ಸರದಾರ. ಈ ಜಗತ್ತಿನ ಮೊತ್ತ ಮೊದಲ ಅಸ್ತ್ರ-ಶಸ್ತ್ರ ನಿರ್ಮಾಪಕ, ನ್ಯೂರೋ ಸರ್ಜನ್, ಸಂಸ್ಕೃತ-ತಮಿಳು ಭಾಷೆಗಳ ಜನಕ, ನಾಟ್ಯ-ಸಂಗೀತ-ಯೋಗ ಪ್ರವರ್ತಕ ಶಿವ ಎನ್ನುವುದಕ್ಕೆ ಯಾವ ಸಂದೇಹವೂ ಉಳಿದಿಲ್ಲ. ವೇದಗಳ ರಚನೆಯಲ್ಲಿ ಶಿವನ ಪಾತ್ರ ಬಹುದೊಡ್ಡದು. ಸಂಶೋಧನೆಗಳ ಮೂಲಕ ಶಿವನ ಕಾಲಮಾನವನ್ನು ಕಂಡುಹಿಡಿಯಲಾಗುತ್ತಿದೆ ಮತ್ತು ಆತ ಭರತ ಭೂಮಿಯಲ್ಲಿ ಕನಿಷ್ಟ 50 ಸಾವಿರದಿಂದ 70 ಸಾವಿರ ವರ್ಷಗಳ ಹಿಂದೆ ನಡೆದಾಡಿದ್ದ ಎಂದು ಕಂಡುಕೊಳ್ಳಲಾಗಿದೆ.

ಶಿವ ಪುರಾಣಗಳಿಂದ ಕಂಡು ಬಂದಂತಹ ವಿಚಾರವೆಂದರೆ ಶಿವ-ಪಾರ್ವತಿಯರಿಗೆ ಪ್ರಾಕೃತಿಕ ಸಮಾಗಮದಿಂದ ಹುಟ್ಟಿದ ಮಕ್ಕಳಿಲ್ಲ. ಶಿವನ ಎಲ್ಲಾ ಮಕ್ಕಳೂ ಹೆಚ್ಚು ಕಮ್ಮಿ ಕೃತಕ ಗರ್ಭಧಾರಣೆಯ ಮೂಲಕವೆ ಹುಟ್ಟಿದವರು. ಶಿವನ ಕಾಲದಲ್ಲಿಯೆ ಹೆಡ್ ಟ್ರಾನ್ಸ್ ಪ್ಲಾಂಟ್, ಟೆಸ್ಟ್ ಟ್ಯೂಬ್ ಬೇಬಿ, ಬಾಡಿಗೆ ತಾಯಿ, ಕ್ಲೋನಿಂಗ್, ನ್ಯೂರೋ ಸರ್ಜರಿ, ಸ್ಟೆಮ್ ಸೆಲ್ ತಂತ್ರಜ್ಞಾನ ಅಸ್ತಿತ್ವದಲ್ಲಿತ್ತೆಂದು ಹೇಳಬಹುದು. ಈ ಎಲ್ಲಾ ವಿಷಯಗಳು ನಮ್ಮ ವೇದ-ಪುರಾಣಗಳಲ್ಲಿ ಉಲ್ಲೇಖವಾಗಿವೆ ಮತ್ತು ಆಧುನಿಕ ಜಗತ್ತಿನಲ್ಲಿ ಇವುಗಳ ಮೇಲೆ ಸಂಶೋಧನೆ ನಡೆದು ಪಾಶ್ಚಾತ್ಯರೆ ಇದು ಸತ್ಯವೆಂದು ಒಪ್ಪಿಕೊಂಡಿದ್ದಾರೆ.

ಶಿವನ ಪುತ್ರ ಕಾರ್ತಿಕೇಯ, ಗಣೇಶ, ಪುತ್ರಿಯರಾದ ಜ್ಯೋತಿ ಮತ್ತು ಮಾನಸ ಇವರುಗಳು ಪುರುಷ-ಮಹಿಳೆಯರ ಸಮಾಗಮದಿಂದ ಹುಟ್ಟಿದವರಲ್ಲ. ಅಯ್ಯಪ್ಪನನ್ನು ಶಿವ ಮತ್ತು ಮೋಹಿನಿಯ ಸಮಾಗಮದಿಂದ ಹುಟ್ಟಿದ್ದೆನ್ನಲಾಗುತ್ತದೆ. ಮೋಹಿನಿ ವಿಷ್ಣುವಿನ ಅವತಾರ ಅಂದರೆ ಬಹುಶಃ ಲಿಂಗ ಪರಿವರ್ತನೆ ನಡೆಸಿರಬಹುದು. ಹಾಗಾಗಿ ಸಾವಿರಾರು ವರ್ಷಗಳಿಂದಲೂ ಭಾರತದಲ್ಲಿ ತಂತ್ರಜ್ಞಾನ ಮತ್ತು ವಿಜ್ಞಾನ ಉಚ್ಚ್ರಾಯ ಸ್ಥಿತಿಯಲ್ಲಿತ್ತು ಎನ್ನುವುದು ಸಾಬೀತಾಗುತ್ತದೆ.

ಕಾಂಡಕೋಶ ತಂತ್ರಜ್ಞಾನದಿಂದ ಗಣೇಶನ ಜನನ?

ಕಾಂಡಕೋಶ ಅಥವಾ ಸ್ಟೆಮ್ ಸೆಲ್ ತಂತ್ರಜ್ಞಾನದ ಬಗ್ಗೆ ನೀವೆಲ್ಲಾ ಕೇಳಿರಬಹುದು. ಆಧುನಿಕ ವಿಜ್ಞಾನದ ಅತಿ ದೊಡ್ಡ ಸಾಧನೆ ಇದು. ವೈದ್ಯಕೀಯ ಕ್ಷೇತ್ರದಲ್ಲಿ ವಿಜ್ಞಾನಿಗಳನ್ನು ಹುಚ್ಚೆದ್ದು ಕುಣಿಯುವಂತೆ ಮಾಡಿದ ಸಂಜೀವನೀ ಆವಿಷ್ಕಾರವಿದು. ಇವತ್ತು ಸ್ಟೆಮ್ ಸೆಲ್ ತಂತ್ರಜ್ಞಾನದಿಂದ ಹೃದಯ, ಮೂತ್ರಕೋಶ, ಮನುಷ್ಯನ ಚರ್ಮ, ಅಷ್ಟೇ ಏಕೆ ಒಂದು ಭ್ರೂಣವನ್ನೇ ತಯಾರಿಸಬಹುದು ಎನ್ನುತ್ತದೆ ವಿಜ್ಞಾನ!! ಶರೀರದ ಎಲ್ಲಾ ಕಾಂಡಕೋಶಗಳು ಸ್ವಯಂ-ನವೀಕರಿಸುವ ಸಾಮರ್ಥ್ಯ ಹೊಂದಿವೆ ಮತ್ತು ಅವು ವಿಭಿನ್ನವಾಗಿವೆ.

ಸ್ಟೆಮ್ ಸೆಲ್ ಗಳಲ್ಲಿ ನಾಲ್ಕು ವಿಧ

Totipotent ಜೀವಕೋಶಗಳು ಎಲ್ಲಾ ಜೀವಕೋಶಗಳನ್ನು (ಭ್ರೂಣದ ಮತ್ತು ಹೆಚ್ಚುವರಿ ಭ್ರೂಣದ ಜರಾಯು) ಉತ್ಪತ್ತಿ ಮಾಡಬಹುದು.
Pluripotent ಜೀವಕೋಶಗಳು ಮಾತ್ರ ಭ್ರೂಣದ ಜೀವಕೋಶಗಳನ್ನು ಸರಿಯಾಗಿ ಮಾಡಬಹುದು.
Multipotent ಜೀವಕೋಶಗಳು ಕೊಟ್ಟಿರುವ ಜೀವಾಂಕುರದ ಪದರದೊಳಗೆ ಜೀವಕೋಶಗಳನ್ನು ಮಾತ್ರ ಮಾಡಬಹುದು.
Unipotent ಜೀವಕೋಶಗಳು ಏಕಕೋಶದ ವಿಧದ ಜೀವಕೋಶಗಳನ್ನು ರಚಿಸುತ್ತವೆ.

2006 ರಲ್ಲಿ ಶಿನ್ಯಾ ಯಮನಕ ಮತ್ತು ಸಹೋದ್ಯೋಗಿಗಳು ಪ್ರೌಢ ಕೋಶಗಳಾಗಿ ಸಮಗ್ರ ಜೀವಕೋಶಗಳಲ್ಲಿ ವ್ಯಕ್ತಪಡಿಸಿದ ವಂಶವಾಹಿಗಳನ್ನು iPS ತಂತ್ರಜ್ಞಾನದ ಮೂಲಕ ಪ್ರೇರೇಪಿಸಿದರು. ಇದರಲ್ಲಿ Pluripotent ಜೀವಕೋಶಗಳನ್ನು ಒಂದು ಪ್ರೌಢ ಕೋಶದೊಳಗೆ ಪ್ರೇರೇಪಿಸಿ ಹೊಸತೊಂದು ಅಂಗವನ್ನೆ ಪಡೆಯಲಾಗುತ್ತದೆ. ಅದನ್ನು induced pluripotent cells (iPS) ಎನ್ನುತ್ತಾರೆ.

ಈ ಸಂಶೋಧನೆ ವೈಜ್ಞಾನಿಕ ಜಗತ್ತಿನಲ್ಲಿ ತಲ್ಲಣವನ್ನೇ ಸೃಷ್ಟಿಸಿದೆ. ಏಕೆಂದರೆ ಚರ್ಮದಿಂದ ಉತ್ಪತ್ತಿಯಾದ ಕೆರಾಟಿನೋಸೈಟ್ ಎನ್ನುವ ವಸ್ತುವಿನಿಂದ Pluripotent ಜೀವಕೋಶಗಳನ್ನು ಪ್ರೇರೇಪಿಸಬಹುದಾಗಿದೆ!! ನೆನಪಿಸಿ, ಪಾರ್ವತಿಯು ತನ್ನ ಶರೀರದ ಕಶ್ಮಲಗಳಿಂದ ಗಣೇಶನನ್ನು ತಯಾರಿಸುತ್ತಾಳೆ. ಬಹುಶಃ ಆಕೆ ತನ್ನ ಚರ್ಮದಲ್ಲಿದ್ದ ಜೀವಕೋಶಗಳ ವಂಶವಾಹಿನಿಯಿಂದ ಸ್ಟೆಮ್ ಸೆಲ್ ತಂತ್ರಜ್ಞಾನದ ಮೂಲಕ Pluripotent ಜೀವಕೋಶಗಳನ್ನು ಪ್ರೇರೇಪಿಸಿ ಒಂದು ಮಗುವನ್ನು ಪಡೆಯುತ್ತಾಳೆ. ಅಂದರೆ ಆ ಕಾಲದಲ್ಲಿ ಇಂತಹ ಒಂದು ತಂತ್ರಜ್ಞಾನ ಮತ್ತು ಅದಕ್ಕೆ ಸಂಬಂಧ ಪಟ್ಟ ವೈದ್ಯ ವಿಜ್ಞಾನಿಗಳು ಭಾರತದಲ್ಲಿದ್ದರು ಎಂದಾಯ್ತು!!

ಈ Pluripotent ಜೀವಕೋಶಗಳಿಂದ ಮಾನವನ ಯಾವುದೇ ಅಂಗವನ್ನು ಮಾತ್ರವಲ್ಲದೆ ಭ್ರೂಣವನ್ನೂ ತಯಾರಿಸಬಹುದೆನ್ನಲಾಗಿದೆ. ಈ ಜೀವಕೋಶಗಳನ್ನು ನಮ್ಮ ಚರ್ಮವೆಂಬ ಅಂಗದಿಂದ ಅತ್ಯಂತ ಸುಲಭವಾಗಿ ಪಡೆಯಬಹುದು. ಇದೆ ರೀತಿ ಹನುಮಂತನ ಬೆವರಿನ, ಚರ್ಮದ ಅಥವಾ ಶರೀರದ ಮಲಿನದ ಮೂಲಕ ಸ್ಟೆಮ್ ಸೆಲ್ ಪಡೆದು ಮಕರಧ್ವಜನನ್ನು ಪಡೆಯಲು ಸಾಧ್ಯವಾಗಿರಬಹುದು. ಮತ್ಸ್ಯಕನ್ಯೆಯ ಗರ್ಭದಲ್ಲಿ ಭ್ರೂಣವನ್ನು ಬೆಳೆಸಿ ಮಕರಧ್ವಜನ ಜನನವಾಗಿರುವ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ.

ಈ ಎಲ್ಲಾ ವಿಷಯಗಳಿಂದಾಗಿಯೆ ವೇದಗಳ ಮೇಲಿನ ಗೌರವ ಇನ್ನಷ್ಟು ಹೆಚ್ಚಾಗುತ್ತದೆ. ಗಾದೆ ಸುಳ್ಳಾಗಬಹುದು, ಅಥವಾ ಕಾಲಕ್ಕೆ ತಕ್ಕಂತೆ ಬದಲಾಗಬಹುದು. ಆದರೆ ವೇದ ಸಾರ್ವಕಾಲಿಕ ಸತ್ಯ ಮತ್ತು ಎಂದಿಗೂ ಸುಳ್ಳಾಗದು.

source: http://blog.kkaggarwal.com/

Postcard team

Tags

Related Articles

FOR DAILY ALERTS
 
FOR DAILY ALERTS
 
Close