ಪ್ರಚಲಿತ

ಬಿಗ್ ಬ್ರೇಕಿಂಗ್! ಕಲ್ಲಡ್ಕ ಪ್ರಭಾಕರ್ ಭಟ್ ಸೇರಿದಂತೆ ಕರಾವಳಿಯ ಸಂಘಪರಿವಾರದ ಮುಖಂಡರ ಹತ್ಯೆಗೆ ಸ್ಕೆಚ್! ವಿದೇಶದಿಂದಲೇ ನಡೆದಿದೆಯಂತೆ ಭಾರೀ ತಂತ್ರ!

ರಾವಳಿ ಎಂದರೆ ಹಿಂದೂಗಳ ಭದ್ರಕೋಟೆ ಎಂದರೆ ತಪ್ಪಾಗದು, ದೇಶದ ಯಾವ ಮೂಲೆಯಲ್ಲಿ ಹಿಂದೂ ಸಂಗಮ ಅಥವಾ ಸಮಾವೇಶ ನಡೆಯಲಿ ಅಥವಾ ಭಾರತೀಯ ಜನತಾ ಪಕ್ಷದ ಯಾವುದೇ ಕಾರ್ಯಕ್ರಮವೇ ಆಗಿರಲಿ, ರಣಕಹಳೆ ಮೊಳಗುವುದು ಮಂಗಳೂರಿನಿಂದಲೇ ಎಂಬುದು ವಿಶೇಷ. ಯಾಕೆಂದರೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹತ್ತಾರು ಹಿಂದೂಪರ ಸಂಘಟನೆಗಳು ಬೇರೂರಿದ್ದು, ಧರ್ಮ ರಕ್ಷಣೆಗೆ ಸದಾ ಸಿದ್ಧರಾಗಿರುವ ಯುವಕರು ಇಲ್ಲಿ ಬೆಳೆದು ನಿಂತಿದ್ದಾರೆ. ಪದೇ ಪದೇ ಕೋಮುಗಲಭೆ ಕೂಡ ನಡೆಯುವ ಸ್ಥಳ ಕರಾವಳಿ ಎಂದರೆ ತಪ್ಪಾಗದು. ಹಿಂದೂಪರ ಸಂಘಟನೆಗಳ ಕಾರ್ಯಕರ್ತರನ್ನು ಮತ್ತು ಮುಖಂಡರನ್ನು ನಿಯಂತ್ರಿಸಲು ವಿರೋಧಿ ಪಡೆಗಳು ಈಗಾಗಲೇ ಹಲವಾರು ರೀತಿಯ ಪ್ರಯತ್ನ ನಡೆಸಿದ್ದಾರೆ ಮತ್ತು ಕೆಲ ಹಿಂದೂಪರ ಸಂಘಟನೆಗಳ ಕಾರ್ಯಕರ್ತರನ್ನು ಹತ್ಯೆ ಕೂಡ ಮಾಡಿದ್ದಾರೆ. ಆದರೆ ಇದೀಗ ವಿದೇಶದಿಂದಲೇ ಕೂತು ಕರಾವಳಿಯ ಪ್ರಮುಖ ಇಬ್ಬರು ಹಿಂದೂ ಮುಖಂಡರ ಹತ್ಯೆ ನಡೆಸಲು ಸ್ಕೆಚ್ ಹಾಕಲಾಗಿದೆ ಎಂಬ ಸುದ್ಧಿ ಸ್ವತಃ ಪೊಲೀಸ್ ಅಧಿಕಾರಿಗಳೇ ನೀಡಿದ್ದಾರೆ. ಅಷ್ಟೇ ಅಲ್ಲದೆ ಸದ್ಯ ವಾಸವಾಗಿರುವ ಮನೆಯನ್ನು ಬಿಟ್ಟು ಬೇರೆ ಕಡೆ ತೆರಳುವಂತೆ ಅಧಿಕಾರಿಗಳು ಸೂಚಿಸಿದ್ದಾರೆ.!

ಮತ್ತೆ ಕೋಮುಗಲಭೆ ಸೃಷ್ಟಿಸಲು ಕಾಯುತ್ತಿವೆ ವಿರೋಧಿಗಳ ತಂಡ!

ಈಗಾಗಲೇ ಬೂದಿ ಮುಚ್ಚಿದ ಕೆಂಡದಂತಿರುವ ಕರಾವಳಿಯಲ್ಲಿ ಮತ್ತೆ ಕೋಮುಗಲಭೆ ಸೃಷ್ಟಿಸಲು ಪ್ರಯತ್ನ ನಡೆಯುತ್ತಿದೆ ಎಂಬ ಆತಂಕಕಾರಿ ವಿಚಾರವನ್ನು ಪೊಲೀಸಲು ಹೇಳಿದ್ದಾರೆ. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಮುಖರಾದ ಅಷ್ಟೇ ಅಲ್ಲದೆ ಕರಾವಳಿಯ ಶಿವಾಜಿ ಎಂದೇ ಕರೆಯಲ್ಪಡುವ ಪ್ರಭಾಕರ್ ಭಟ್ ಕಲ್ಲಡ್ಕ ಅವರನ್ನು ಹತ್ಯೆ ಮಾಡಲು ವಿದೇಶದಿಂದಲೇ ಸ್ಕೆಚ್ ಹಾಕಲಾಗಿದೆ ಎಂಬ ಸ್ಫೋಟಕ ಮಾಹಿತಿಯನ್ನು ಇದೀಗ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಅಧಿಕಾರಿಗಳು ನೀಡಿದ್ದಾರೆ. ಸಂಘಪರಿವಾರದ ಮುಖಂಡರನ್ನೇ ಟಾರ್ಗೆಟ್ ಮಾಡಿರುವ ತಂಡವೊಂದು ಬಜರಂಗದಳ ಮುಖಂಡ ಶರಣ್ ಪಂಪ್‌ವೆಲ್ ಅವರ ಹತ್ಯೆಗೂ ಪ್ರಯತ್ನ ನಡೆಯುತ್ತಿದೆ ಎಂಬ ಎಚ್ಚರಿಕೆಯನ್ನು ನೀಡಿದ್ದಾರೆ. ಇನ್ನೇನು ಕೆಲವೇ ದಿನಗಳಲ್ಲಿ ಲೋಕಸಭಾ ಚುನಾವಣೆ ನಡೆಯಲಿದೆ, ಈ ಸಂದರ್ಭದಲ್ಲಿ ರಾಜಕೀಯ ಲಾಭಕ್ಕಾಗಿ ಇಂತಹ ಘಟನೆ ನಡೆಸಲು ಹೊಂಚು ಹಾಕುವ ವಿರೋಧಿಗಳು ಯಾವ ಸಂದರ್ಭದಲ್ಲೂ ದಾಳಿ ನಡೆಸುವ ಸಾಧ್ಯತೆ ಇದೆ ಎಂದು ಹೇಳಿಕೊಂಡಿದ್ದಾರೆ.!

ಪ್ರಭಾಕರ್ ಭಟ್ ಅವರ ಮೇಲೆ ಈ ಹಿಂದೆ ಕೂಡ ದಾಳಿ ನಡೆಸಲು ಅನೇಕ ಬಾರಿ ಪ್ರಯತ್ನ ನಡೆದಿತ್ತಾದರೂ ಭದ್ರತಾ ಸಿಬ್ಬಂದಿಗಳು ಜೊತೆಯಲ್ಲೇ ಇರುವುದರಿಂದ ಯಾವ ದುಶ್ಕೃತ್ಯ ನಡೆಸಲು ಸಾಧ್ಯವಾಗಿರಲಿಲ್ಲ. ಆದರೆ ಇದೀಗ ಗಂಭೀರವಾಗಿ ಪರಿಗಣಿಸಿದ ಪೊಲೀಸರು, ಕೂಡಲೇ ಸದ್ಯ ವಾಸವಿರುವ ಮನೆಯನ್ನು ಬಿಟ್ಟು ಬೇರೆ ಮನೆಗೆ ತೆರಳುವಂತೆ ಸೂಚಿಸಿದ್ದಾರೆ.!

ಕರಾವಳಿಯಲ್ಲಿ ಹಿಂದೂಪರ ಸಂಘಟನೆಗಳ ಪ್ರಾಬಲ್ಯ ಹೆಚ್ಚಿರಿವುದರಿಂದ ಹಿಂದೂಗಳ ಬಲ ಕುಗ್ಗಿಸಲು ಈ ರೀತಿಯ ಬೆದರಿಕೆಗಳು ಬರುತ್ತವೆ, ಆದರೆ ಯಾವುದನ್ನೂ ತಿರಸ್ಲರಿಸುವಂತಿಲ್ಲ ಎಂದು ಎಚ್ಚರಿಕೆ ನೀಡಿರುವ ಅಧಿಕಾರಿಗಳು, ಮುಂಜಾಗ್ರತಾ ಕ್ರಮವಾಗಿ ಈಗ ಇರುವ ಮನೆಯಿಂದ ಬೇರೆ ಮನೆಗೆ ಸ್ಥಳಾಂತರಿಸುವಂತೆ ಸೂಚಿಸಿದ್ದಾರೆ. ಒಟ್ಟಾರೆಯಾಗಿ ಶಾಂತ ಸ್ಥಿತಿಯಲ್ಲಿರುವ ಕರಾವಳಿಯಲ್ಲಿ ಮತ್ತೆ ಕೋಮುಗಲಭೆ ಸೃಷ್ಟಿಸಲು ಕೆಲವೊಂದು ಕಾಣದ ಕೈಗಳು ಪಿತೂರಿ ನಡೆಸುತ್ತಿವೆ ಎಂಬುದು ಸ್ಪಷ್ಟ.!!

-ಅರ್ಜುನ್

Tags

Related Articles

FOR DAILY ALERTS
 
FOR DAILY ALERTS
 
Close