ಅಂಕಣ

ಶ್ರೀಲಂಕಾದ ಸರಕಾರದ ಆದೇಶದ ವಿರುದ್ಧ ಯಾರೊಬ್ಬರೂ ಧ್ವನಿ ಎತ್ತುವುದಿಲ್ಲ! ಸ್ವಂತಕ್ಕಿಂತ ದೇಶ ಮೊದಲು ಎನ್ನುವ ಶ್ರೀಲಂಕನ್ನರಿಗೆ ಸೆಲ್ಯೂಟ್!

ಭಯೋತ್ಪಾದನೆ ಎಂಬುದು ಜಗತ್ತಿನ ಯಾವ ರಾಷ್ಟ್ರವನ್ನೂ ಬಿಟ್ಟಿಲ್ಲ, ಪ್ರತಿಯೊಂದು ದೇಶ ಕೂಡ ಉಗ್ರ ದಾಳಿಗೆ ತುತ್ತಾಗಿದೆ. ಭಯೋತ್ಪಾದನೆಗೆ ಧರ್ಮ ಇಲ್ಲ ಎಂದು ಅನೇಕರು ಹೇಳುತ್ತಾರೆ, ಆದರೆ ಭಯೋತ್ಪಾದಕರು ಯಾವ ಸಮುದಾಯದವರು ಎಂಬುದನ್ನು ಯಾರೂ ಯೋಚಿಸುವುದಿಲ್ಲ. ಇತ್ತೀಚಿನ ದಿನಗಳಲ್ಲಿ ಭಯೋತ್ಪಾದನಾ ಚಟುವಟಿಕೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಭಯೋತ್ಪಾದನೆಯ ವಿರುದ್ಧ ಜಗತ್ತಿನ ಎಲ್ಲಾ ರಾಷ್ಟ್ರ ಕೂಡ ಹೋರಾಡಬೇಕಾಗಿದೆ ಎಂದು ಕರೆ ನೀಡಿದ್ದರು.‌ಇದಾದ ನಂತರ ಉಗ್ರರಿಗೆ ನೆರವು ನೀಡುವ ಪಾಕಿಸ್ತಾನದ ಪರಿಸ್ಥಿತಿ ಯಾವ ಮಟ್ಟಕ್ಕೆ ಬಂದಿದೆ ಎಂಬುದು ನಮಗೆ ತಿಳಿದಿದೆ. ಇದೀಗ ಶ್ರೀಲಂಕಾದಲ್ಲೂ ಉಗ್ರ ದಾಳಿ ನಡೆದಿದ್ದು ನೂರಾರು ಜನರು ಪ್ರಾಣ ಕಳೆದುಕೊಂಡಿದ್ದಾರೆ.‌ ಈ ಘಟನೆಯ ನಂತರ ಎಚ್ಚೆತ್ತುಕೊಂಡ ಶ್ರೀಲಂಕಾ ಸರಕಾರ ದಿಟ್ಟ ನಿರ್ಧಾರವನ್ನು ಕೈಗೊಂಡಿದ್ದು ಹೊಸ ಆದೇಶ ಹೊರಡಿಸಿ ದೇಶದ ಪ್ರತಿಯೊಬ್ಬರೂ ಪಾಲಿಸುವಂತೆ ತಾಕೀತು ಮಾಡಿದೆ.!

ಹೌದು ಶ್ರೀಲಂಕಾದ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಅವರು ಇಂದು ಹೊಸ ಆದೇಶ ಹೊರಡಿಸಿದ್ದು, ದೇಶಾದ್ಯಂತ ಬುರ್ಖಾ ಧರಿಸುವುದನ್ನು ನಿಷೇಧ ಮಾಡಲಾಗಿದೆ ಮತ್ತು ಮುಖ ಮುಚ್ಚಿಕೊಳ್ಳುವ ಯಾವುದೇ ಪ್ರಕ್ರಿಯೆ ಕೂಡ ಮಾಡುವಂತಿಲ್ಲ ಎಂದು ಆದೇಶ ನೀಡಿದ್ದಾರೆ. ಈಸ್ಟರ್ ದಿನದಂದೇ ಚರ್ಚ್ ಮತ್ತು ಹೋಟೆಲ್‌ನಲ್ಲಿ ಉಗ್ರ ದಾಳಿ ನಡೆದಿದ್ದು ಇಡೀ ಶ್ರೀಲಂಕಾ ಮಾತ್ರವಲ್ಲದೆ ಜಗತ್ತು ದುಃಖದ ಕಡಲಲ್ಲಿ ತೇಲುವಂತಾಗಿದೆ.‌ ಮಕ್ಕಳು ವಯಸ್ಸಾದವರು ಮಹಿಳೆಯರು ಹೀಗೆ ಯಾರನ್ನೂ ನೋಡದೆ ಏಕಾಏಕಿ ದಾಳಿ ಮಾಡಿದ ಉಗ್ರರು ರಕ್ತದ ಕೋಡಿಯನ್ನೇ ಹರಿಸಿದ್ದರು. ಆದರೆ ಶ್ರೀಲಂಕಾ ಸರಕಾರ ಸುಮ್ಮನಾಗಲಿಲ್ಲ, ಭಯೋತ್ಪಾದನೆಯ ವಿರುದ್ಧ ಹೋರಾಡಲೇಬೇಕು ಎಂಬ ದಿಟ್ಟ ನಿಲುವು ಪ್ರದರ್ಶಿಸಿದ್ದು ಮೊದಲ ಹಂತವಾಗಿ ಬುರ್ಖಾ ನಿಷೇಧ ಎಂದು ಆದೇಶ ಹೊರಡಿಸಿದೆ.!

ವಿಶೇಷವೆಂದರೆ ಶ್ರೀಲಂಕಾ ಅಧ್ಯಕ್ಷರ ಈ ಆದೇಶದ ವಿರುದ್ಧ ಅಲ್ಲಿ ಯಾವ ಪ್ರತಿಭಟನೆಯೂ ನಡೆದಿಲ್ಲ ಮತ್ತು ಯಾವ ಪಕ್ಷ ಅಥವಾ ಸಂಘಟನೆಗಳಾಗಲಿ ಧ್ವನಿ ಎತ್ತಲಿಲ್ಲ. ಅಲ್ಲಿನ ಜನರಿಗೆ ತಮ್ಮ ಸ್ವಂತಕ್ಕಿಂತ ದೇಶವೇ ಮುಖ್ಯ ಎಂಬ ಮನೋಭಾವ ಇದೆ, ಆದರೆ ಭಾರತದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಯಾವುದಾದರೂ ಆದೇಶ ಹೊರಡಿಸಿದರೆ ವಿಪಕ್ಷಗಳು ಬೀದಿಗೆ ಬಂದು ಬೊಬ್ಬೆ ಹಾಕಲು ಆರಂಭಿಸುತ್ತಾರೆ. ಶ್ರೀಲಂಕಾ ಎಂಬ ಸಣ್ಣ ದೇಶದಿಂದ ಭಾರತದಲ್ಲೇ ಇದ್ದು ಭಾರತಕ್ಕೆ ದ್ರೋಹ ಬಗೆಯುವ ಕೆಲವರು ಕಲಿಯಬೇಕಾದದ್ದು ಸಾಕಷ್ಟಿದೆ.!

-ಸಾರ್ಥಕ್ ಶೆಟ್ಟಿ

Tags

Related Articles

FOR DAILY ALERTS
 
FOR DAILY ALERTS
 
Close