ದೇಶಪ್ರಚಲಿತ

ನಾನೇ ಸಿಎಂ ಎಂದ ಸಿಎಂ ಗೆ ಪರಂ ಟಾಂಗ್..!! ಕಾಂಗ್ರೆಸ್ ನಲ್ಲಿ ಬಹಿರಂಗವಾಯಿತು ಒಳಜಗಳ.!!

ಕರ್ನಾಟಕದಲ್ಲಿ ಚುನಾವಣೆಗೆ ದಿನ ಎಣಿಕೆ ಆಗುತ್ತಿದ್ದಂತೆ ರಾಜಕೀಯ ಪಕ್ಷಗಳ ಅಬ್ಬರವೂ ಹೆಚ್ಚಾಗುತ್ತಿದೆ. ಇಡೀ ದೇಶವೇ ಕುತೂಹಲದಿಂದ ಎದುರು ನೋಡುತ್ತಿರುವ ಕರ್ನಾಟಕ ವಿಧಾನಸಭಾ ಚುನಾವಣೆಗೆ ಇದೀಗ ಎಲ್ಲಾ ರಾಜಕೀಯ ಪಕ್ಷಗಳು ಪ್ರಚಾರಕ್ಕಾಗಿ ಕಣಕ್ಕಿಳಿದಿದ್ದಾರೆ. ರಾಜ್ಯ ಸರಕಾರದ ಜನ ವಿರೋಧಿ ನೀತಿಯಿಂದಾಗಿ ರಾಜ್ಯದಲ್ಲಿ ಆಡಳಿತ ವಿರೋಧಿ ಅಲೆ ಎದ್ದು ಕಾಣುತ್ತಿದೆ.

ಆಡಳಿತದಲ್ಲಿ ಇರುವ ಕಾಂಗ್ರೆಸ್ ತನ್ನ ಅಸ್ತಿತ್ವ ವನ್ನು ಹೇಗಾದರೂ ಉಳಿಸಿಕೊಳ್ಳಲೇಬೇಕೆಂಬ ಪಣ ತೊಟ್ಟರೆ, ಇತ್ತ ಇಡೀ ದೇಶದಲ್ಲಿ ಕೇಸರಿ ಪತಾಕೆ ಹಾರಿಸುವ ಮೂಲಕ ಬಿಜೆಪಿಯನ್ನು ಅಧಿಕಾರಕ್ಕೆ ತರುತ್ತಿರುವ ಮೋದಿ ಸರಕಾರ ಕರ್ನಾಟಕದಲ್ಲೂ ಗೆಲವು ಸಾಧಿಸಲು ಸಜ್ಜಾಗಿದ್ದಾರೆ.! ಕಾಂಗ್ರೆಸ್ ನ್ನು ಉಳಿಸಿಕೊಳ್ಳಲೇಬೇಕೆಂದು ಹರಸಾಹಸ ಪಡುತ್ತಿರುವ ರಾಷ್ಟ್ರೀಯ ನಾಯಕರು ಒಂದೆಡೆಯಾದರೆ, ಇತ್ತ ಕರ್ನಾಟಕದಲ್ಲಿ ಒಳಗೊಳಗೇ ಕಾಂಗ್ರೆಸ್ ನಾಯಕರ ಮನಸ್ಥಾಪ ಶುರುವಾಗಿದೆ.

ತಮ್ಮ ಪಕ್ಷವನ್ನು ಅಧಿಕಾರಕ್ಕೆ ತರಬೇಕೆಂದು ಎಲ್ಲಾ ಪಕ್ಷಗಳು ಹರಸಾಹಸ ಪಡುತ್ತಿದ್ದರೆ, ಇತ್ತ ಕರ್ನಾಟಕ ಕಾಂಗ್ರೆಸ್ ನಾಯಕರು ತಾವೇ ಮುಂದಿನ ಮುಖ್ಯಮಂತ್ರಿ ಆಗಬೇಕೆಂದು ಪಣ ತೊಟ್ಟಿದ್ದಾರೆ.


ಈ ಬಾರಿಯೂ ನಾನೇ ಸಿಎಂ..!

ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತಲೇ ಮುಖ್ಯಮಂತ್ರಿ ಯಾಗಿ ಆಯ್ಕೆಯಾದ ಸಿದ್ದರಾಮಯ್ಯನವರ ಆಡಳಿತ ವ್ಯವಸ್ಥೆಯಿಂದ ರಾಜ್ಯದ ಜನತೆ ಬೇಸತ್ತು ಹೋಗಿದ್ದಾರೆ. ಹಿಂದೂ ವಿರೋಧಿ ನೀತಿಯಿಂದಾಗಿ ಇಡೀ ರಾಜ್ಯದಲ್ಲಿ ಶಾಂತಿ ಎಂಬೂದನ್ನೆ ಮರೆಯುವಂತೆ ಮಾಡಿಬಿಟ್ಟಿದ್ದಾರೆ ಈ ಸಿದ್ದರಾಮಯ್ಯನವರು. ಇದೀಗ ಚುನಾವಣೆ ಹತ್ತಿರವಾಗುತ್ತಿದೆ, ರಾಜಕೀಯ ಪಕ್ಷಗಳು ಪ್ರಚಾರ ಕಾರ್ಯದಲ್ಲಿ ತೊಡಗಿದ್ದರೆ , ಇತ್ತ ಸಿದ್ದರಾಮಯ್ಯನವರು ಮಾತ್ರ ತಮ್ಮ ವೈಯಕ್ತಿಕ ಪ್ರಚಾರದಲ್ಲಿ ತೊಡಗಿದ್ದಾರೆ.

ಹೋದಲ್ಲೆಲ್ಲಾ ಈ ಬಾರಿಯೂ ನಾನೇ ಮುಖ್ಯಮಂತ್ರಿ ಎಂದು ಹೇಳಿಕೊಂಡು ತಿರುಗುತ್ತಿರುವ ಸಿದ್ದರಾಮಯ್ಯನವರು ಒಳಗೊಳಗೇ ತಮ್ಮ ಪಕ್ಷದ ಪ್ರಚಾರ ಬಿಟ್ಟು ಕೇವಲ ತಮ್ಮ ಸ್ವಾರ್ಥ ನೋಡಿಕೊಂಡು ಈ ಬಾರಿ ಚುನಾವಣೆ ಎದುರಿಸುತ್ತಿದ್ದಾರೆ. ಮೇಲ್ಮನವಿಯಲ್ಲಿ ಮಾತನಾಡಿದ ಸಿದ್ದರಾಮಯ್ಯನವರು, ‘ಈ ಬಾರಿ ನೂರಕ್ಕೆ ನೂರರಷ್ಟು ನಾನೇ ಸಿಎಂ’ ಎಂದು ಹೇಳಿಕೆ ನೀಡುವ ಮೂಲಕ ಸ್ಪರ್ಧಿಸಲು ತಯಾರಾಗಿರುವ ಕಾಂಗ್ರೆಸ್ ನಾಯಕರಿಗೆ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ.

ನಾನೂ ಸಿಎಂ ಅಕಾಂಕ್ಷಿ..!

ಸಿದ್ದರಾಮಯ್ಯನವರು ಹೋದಲ್ಲೆಲ್ಲಾ ಮುಂದಿನ ಬಾರಿಯೂ ನಾನೇ ಸಿಎಂ ಎಂದು ಹೇಳಿಕೊಂಡು ಬರುತ್ತಿದ್ದರೆ, ಇತ್ತ ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ತಾನೂ ಈ ಬಾರಿಯ ಸಿಎಂ ಆಕಾಂಕ್ಷಿ ಎಂದು ಬಹಿರಂಗವಾಗಿ ಹೇಳಿಕೊಂಡಿದ್ದಾರೆ. ಕಾಂಗ್ರೆಸ್ ಶಾಸಕಾಂಗ ಪಕ್ಷ (ಸಿ ಎಲ್ ಒ) ನನ್ನನ್ನು ನಾಯಕನನ್ನಾಗಿ ಆಯ್ಕೆ ಮಾಡಿದರೆ ಮುಂದಿನ ಬಾರಿ ನಾನೇ ಮುಖ್ಯಮಂತ್ರಿ ಆಗುವೆ, ಅದೇ ರೀತಿ ಸಭೆ ಸಿದ್ದರಾಮಯ್ಯನವರನ್ನು ಆಯ್ಕೆ ಮಾಡಿದರೆ ಅದಕ್ಕೂ ನನ್ನ ಸಹಮತ ಇದೆ’ ಎಂದು ಜಿ ಪರಮೇಶ್ವರ್ ಹೇಳಿಕೊಂಡಿದ್ದಾರೆ.  ಸುದ್ದಿಗಾರರೊಂದಿಗೆ ಮಾತನಾಡುವ ವೇಳೆಯಲ್ಲಿ ಮಾಧ್ಯಮಗಳು, ‘ನೀವು ಕೂಡ ಈ ಬಾರಿ ಸಿಎಂ ಆಕಾಂಕ್ಷಿಯೇ?’ ಎಂದು ಕೇಳಿದ ಪ್ರಶ್ನೆಗೆ ‘ಯಾಕಾಗಬಾರದು? ಪಕ್ಷ ಆಯ್ಕೆ ಮಾಡಿದರೆ ನಾನೇ ಸಿಎಂ ಎಂದು ಬಹಳ ಉತ್ಸಾಹದಿಂದ ಹೇಳಿದರು.

ಕಾಂಗ್ರೆಸ್ ನ ಪ್ರಭಾವಿ ಶಾಸಕರಲ್ಲಿ ಒಬ್ಬರಾದ ಬೆಂಗಳೂರಿನ ಶಾಂತಿನಗರ ಕ್ಷೇತ್ರದ ಶಾಸಕ ಹ್ಯಾರಿಸ್ ನಲಪಾಡ್ ಇತ್ತೀಚೆಗೆ ತಮ್ಮ ಗೂಂಡಾ ಮಗ ನಡೆಸಿದ ರಂಪಾಟದಿಂದ ಮುಂದಿನ ಬಾರಿ ಪಕ್ಷದಿಂದ ಟಿಕೆಟ್ ಕೈತಪ್ಪುವ ಸಾಧ್ಯತೆ ಇದೆ. ಕಾಂಗ್ರೆಸ್ ನಾಯಕರಲ್ಲಿ ಇತ್ತೀಚೆಗೆ ಪರಸ್ಪರ ವೈಮನಸ್ಸು ಎದ್ದು ಕಾಣುತ್ತಲೇ ಇದೆ.

ರಾಜ್ಯದಲ್ಲಿ ಚುನಾವಣೆಯ ಕಾವು ಹೆಚ್ಚುತ್ತಿದ್ದಂತೆ ಕಾಂಗ್ರೆಸ್ ನ ಒಳಗೊಳಗೇ ಮಸಲತ್ತು ನಡೆಯುತ್ತಿದೆ. ಒಂದೆಡೆಯಲ್ಲಿ ರಾಷ್ಟ್ರೀಯ ಪಕ್ಷವಾದ ಕಾಂಗ್ರೆಸ್ ದೇಶದಲ್ಲಿ ತನ್ನ ಎಲ್ಲಾ ಅಧಿಕಾರವನ್ನು ಕಳೆದುಕೊಂಡು ಸೊರಗುತ್ತಿದೆ. ಕರ್ನಾಟಕದಲ್ಲಿ ಮಾತ್ರ ತಮ್ಮ ಬಲ ಹೊಂದಿರುವ ಕಾಂಗ್ರೆಸ್, ಸಿದ್ದರಾಮಯ್ಯನವರ ಆಡಳಿತದಿಂದ ಇದೀಗ ಕರ್ನಾಟಕವನ್ನೂ ಕಳೆದುಕೊಳ್ಳುವ ಭೀತಿಯಲ್ಲಿದೆ. ಪಕ್ಷವನ್ನು ಗೆಲ್ಲಿಸಲು ಪಣತೊಡಬೇಕಾಗಿದ್ದ ಪಕ್ಷದ ನಾಯಕರೇ ತಮ್ಮ ವೈಯಕ್ತಿಕ ಲಾಭಕ್ಕಾಗಿ ಲಾಭಿ ನಡೆಸುತ್ತಿರುದು ಕಾಂಗ್ರೆಸ್ ನ ವೈಮನಸ್ಸು ಎದ್ದು ಕಾಣುತ್ತಿದೆ..!

–ಅರ್ಜುನ್

 

Tags

Related Articles

FOR DAILY ALERTS
 
FOR DAILY ALERTS
 
Close