ಪ್ರಚಲಿತ

ಡಾಲರ್ ಎದುರು ಪತರುಗಟ್ಟಿದ ಪಾಕಿಸ್ತಾನದ ಕರೆನ್ಸಿ – ಮೋದಿ ತಂತ್ರಗಾರಿಕೆಯಿಂದ ಭಾರತದ ರೂಪಾಯಿ ಏರಿಕೆ! ಒಂದೇ ಏಟಿಗೆ ಮೋದಿ ವಿರೋಧಿಗಳು ತೆಪ್ಪಾಗಾಗಿದ್ದು ಏಕೆ?

ಪ್ರಧಾನಿ ಮೋದಿ ಏನೇ ಮಾಡಿದರೂ ಅದರ ಹಿಂದೆ ಭಾರತದ ಭವಿಷ್ಯದ ಹಿತ ಇದ್ದೇ ಇರುತ್ತದೆ ಎಂಬುದನ್ನು ನಾವು ಅರ್ಥ ಮಾಡಿಕೊಳ್ಳಬೇಕು. ಯಾಕೆಂದರೆ ಮೋದಿ ಮಾಡುತ್ತಿರುವ ತಂತ್ರಗಾರಿಕೆಗೆ ಭಾರತದಲ್ಲಿ ಮಾತ್ರವಲ್ಲದೆ ಪಾಕಿಸ್ತಾನದಲ್ಲೂ ಮೋದಿ ವಿರೋಧಿಗಳು ಬಾಲ ಮಡಚಿ ಕೂರುವಂತಾಗಿದೆ. ಮೋದಿ ಏನು ಮಾಡಿದ್ದಾರೆ ಎಂದು ಪದೇ ಪದೇ ಪ್ರಶ್ನೆ ಮಾಡುವ ಕಾಂಗ್ರೆಸ್ ಮತ್ತು ಇತರ ವಿರೋಧ ಪಕ್ಷಗಳು ಇದನ್ನು ಗಮನಿಸಲೇಬೇಕು. ಅಂತರಾಷ್ಟ್ರೀಯ ಮಟ್ಟದಲ್ಲಿ ತೈಲ ಬೆಲೆ ಏರಿಕೆ ಕಂಡಾಗ ಭಾರತದಲ್ಲೂ ಸಾಮಾನ್ಯವಾಗಿ ಬೆಲೆ ಸ್ವಲ್ಪ ಮಟ್ಟಿಗೆ ಏರಿಕೆ ಕಂಡಿತ್ತು. ಆದರೆ ಮೋದಿ ವಿರೋಧಿಗಳು ಇದನ್ನೇ ಮೋದಿಯ ವೈಫಲ್ಯ ಎಂದು ಬಿಂಬಿಸಿ ಭಾರತ್ ಬಂದ್ ಕೂಡ ಮಾಡಿದ್ದರು.

ಆದರೆ ಇದೀಗ ಪೆಟ್ರೋಲ್ ಬೆಲೆ ವೇಗವಾಗಿ ಕಡಿಮೆ ಆಗುತ್ತಿದೆ ಕಳೆದ ಎರಡು ತಿಂಗಳುಗಳಿಂದ ಪೆಟ್ರೋಲ್ ಬೆಲೆ ಇಳಿಕೆ ಆಗುತ್ತಿದ್ದು ಯಾವೊಬ್ಬನೂ ಇದು ಮೋದಿಯ ಆಡಳಿತದ ಫಲ ಎಂದು ಹೇಳುತ್ತಿಲ್ಲ. ಇದೀಗ ಪೆಟ್ರೋಲ್ ಮಾತ್ರವಲ್ಲದೆ ಡಾಲರ್ ಎದುರು ಭಾರತದ ರೂಪಾಯಿ ಮೌಲ್ಯ ಕೂಡ ಕ್ರಮೇಣ ಚೇತರಿಕೆ ಕಂಡು ಬರುತ್ತಿದ್ದು ಭಾರತದ ಶತ್ರು ರಾಷ್ಟ್ರ ಪಾಕಿಸ್ತಾನದ ರೂಪಾಯಿ ಪಾತಾಳಕ್ಕೆ ಕುಸಿದು ಮೊದಲೇ ಭಿಕಾರಿಯಾಗಿರುವ ಪಾಕಿಸ್ತಾನ ಇದೀಗ ತನ್ನ ಎಲ್ಲಾ ಬಲ ಕಳೆದುಕೊಂಡಿದೆ. ಭಾರತವನ್ನೇ ಮಣಿಸುತ್ತೇವೆ ಎಂದು ಅಹಂಕಾರದಿಂದ ಮಾತನಾಡಿದ ಇಮ್ರಾನ್ ಖಾನ್ ಇದೀಗ ತಾನೇ ಬೇರೆ ದೇಶಗಳ ಎದುರು ಭಿಕ್ಷೆ ಬೇಡುವಂತಹ ಸ್ಥಿತಿಗೆ ಬಂದು ನಿಂತಿದ್ದಾನೆ.!

100 ನೇ ದಿನದ ಸಂಭ್ರಮಾಚರಣೆಯ ನಡುವೆಯೇ ಪಾಕಿಸ್ತಾನಕ್ಕೆ ಭಾರೀ ಹೊಡೆತ!

ಇಮ್ರಾನ್ ಖಾನ್ ಪ್ರಧಾನಿಯಾಗಿ ನೂರನೇ ದಿನದ ಸಂಭ್ರಮಾಚರಣೆಯಲ್ಲಿ ತೊಡಗಿದ್ದರೆ ಮಾರನೇ ದಿನವೇ ಪಾಕಿಸ್ತಾನಕ್ಕೆ ಭಾರೀ ಹೊಡೆತ ಬಿದ್ದಿದೆ. ಏಕಾಏಕಿ ಡಾಲರ್ ಎದುರು ಪಾಕಿಸ್ತಾನದ ರೂಪಾಯಿ ಮೌಲ್ಯ ಪಾತಾಳಕ್ಕೆ ಕುಸಿದಿದ್ದು ಪಾಕಿಸ್ತಾನ ಅಕ್ಷರಶಃ ತತ್ತರಿಸಿದೆ. ಡಾಲರ್ ಎದುರು ಪಾಕ್ ರೂಪಾಯಿ ಮೌಲ್ಯ ೧೪೪ಕ್ಕೆ ಇಳಿಕೆ ಕಂಡಿದ್ದು ಪಾಕಿಸ್ತಾನ ಕಂಗಾಲಾಗಿದೆ.‌ ಯಾಕೆಂದರೆ ಪಾಕಿಸ್ತಾನ ರೂಪಾಯಿ ಮೌಲ್ಯ ಇತಿಹಾಸದಲ್ಲೇ ಕನಿಷ್ಠ ಮಟ್ಟಕ್ಕೆ ಇಳಿಕೆಯಾಗಿದೆ ಎಂದು ಬಣ್ಣಿಸಲಾಗಿದೆ. ಒಂದೆಡೆ ಈಗಾಗಲೇ ಪಾಕಿಸ್ತಾನದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದ್ದು ಸರಕಾರ ನಡೆಸುವುದೇ ಕಷ್ಟ ಎಂಬಂತಾಗಿದೆ ಪಾಕ್ ಸ್ಥಿತಿ . ಈ ಮಧ್ಯೆಯೇ ಇದೀಗ ರೂಪಾಯಿ ಮೌಲ್ಯ ಕುಸಿದಿದ್ದು ಪ್ರಧಾನಿ ಇಮ್ರಾನ್ ಖಾನ್ ತಲೆ ಮೇಲೆ ಕೈ ಹೊತ್ತು ಕೂರುವಂತಾಗಿದೆ.

ನೂರನೇ ದಿನದ ಸಂಭ್ರಮಾಚರಣೆಯ ಸಂದರ್ಭದಲ್ಲಿ ಮಾತನಾಡಿದ ಇಮ್ರಾನ್ ಖಾನ್, ಪಾಕಿಸ್ತಾನದ ಆರ್ಥಿಕ ಸ್ಥಿತಿ ಸುಧಾರಿಸುತ್ತಿದೆ ಇನ್ನು ಮುಂದಿನ‌ ದಿನಗಳಲ್ಲಿ ನಮ್ಮ ದೇಶ ಉತ್ತಮ ರೀತಿಯಲ್ಲಿ ಅಭಿವೃದ್ಧಿ ಹೊಂದಲಿದೆ, ಈಗಾಗಲೇ ಅನೇಕ ಹೂಡಿಕೆದಾರರು ನಮ್ಮ ದೇಶದಲ್ಲಿ ಹೂಡಿಕೆ ಮಾಡಲು ಆಸಕ್ತಿ ತೋರಿದ್ದಾರೆ ಎಂದು ಪಾಕ್ ಜನರಿಗೆ ಭರವಸೆ ನೀಡಿದ್ದರು. ಆದರೆ ಅದಾದ ಒಂದೇ ದಿನಕ್ಕೆ ಪಾಕಿಸ್ತಾನಕ್ಕೆ ಈ ರೀತಿಯ ಹೊಡೆತ ಬಿದ್ದಿದ್ದು ಮುಂದಿನ ದಿನಗಳಲ್ಲಿ ಪಾಕಿಸ್ತಾನದ ಸ್ಥಿತಿ ಇನ್ನೂ ಶೋಚನೀಯವಾಗಲಿದೆ.!

ಭಾರತದ ರೂಪಾಯಿ ಮೌಲ್ಯ ಏರಿಕೆ – ಮೋದಿ ವಿರೋಧಿಗಳು ಗಪ್ ಚುಪ್!

ಕೆಲ ದಿನಗಳ ಹಿಂದೆ ಭಾರತದ ರೂಪಾಯಿ ಮೌಲ್ಯ ಕೂಡ ಡಾಲರ್ ಎದುರು ಸ್ವಲ್ಪ ಮಟ್ಟಿಗೆ ಕುಸಿದಿತ್ತು ಈ ಸಂದರ್ಭದಲ್ಲಿ ಮೋದಿ ವಿರೋಧಿಗಳು ಇದೇನಾ ಅಚ್ಚೇದಿನ್? ಎಂದು ಪ್ರಧಾನಿ ನರೇಂದ್ರ ಮೋದಿಯವರನ್ನು ಹೀಯಾಳಿಸಲು ಆರಂಭಿಸಿದ್ದರು. ಆದರೆ ಇದೀಗ ಭಾರತದ ರೂಪಾಯಿ ಮೌಲ್ಯ ಏರಿಕೆ ಕಂಡಿದೆ, ದಿನದಿಂದ ದಿನಕ್ಕೆ ಮೌಲ್ಯ ಹೆಚ್ಚುತ್ತಿದ್ದು ಪೆಟ್ರೋಲ್ ಬೆಲೆ ಕೂಡ ಇಳಿಕೆ ಆಗುತ್ತಿದ್ದು ಮೋದಿ ಮಾಡಿದ ತಂತ್ರಗಾರಿಕೆಗಳು ಈಗ ಫಲ ನೀಡುತ್ತಿದೆ ಎಂದು ಹೇಳಲಾಗುತ್ತಿದೆ. ಕಳೆದ ಆರು ವಾರದಲ್ಲಿ ಪೆಟ್ರೋಲ್ ಬೆಲೆ ಸುಮಾರು ೧೦ ರೂಪಾಯಿ ಮತ್ತು ಡೀಸೆಲ್ ಬೆಲೆ ೮ ರೂಪಾಯಿ ಕಡಿಮೆ ಆಗಿದ್ದು ಭಾರತೀಯರಲ್ಲಿ ಸಂತಸ ತಂದಿದೆ. ಭಾರತ ಪ್ರತೀ ದಿನ ಒಂದೊಂದು ರೀತಿಯಲ್ಲಿ ಏಳಿಗೆ ಹೊಂದುತ್ತಿದ್ದು ಮೋದಿ ಆಡಳಿತದಲ್ಲಿ ಭಾರತ ಉತ್ತುಂಗಕ್ಕೆ ಏರುವುದರಲ್ಲಿ ಸಂಶಯವಿಲ್ಲ. ಆದರೂ ಮೋದಿ ವಿರೋಧಿಗಳು ಮಾತ್ರ ಅಚ್ಚೇದಿನ್ ಎಲ್ಲಿ ಎಂದು ಅರಚಾಡುತ್ತಲೇ ಇದ್ದಾರೆ, ಮೋದಿ ಮಾತ್ರ ತನ್ನ ಪಾಡಿಗೆ ತಾನು ಭಾರತದ ಭವಿಷ್ಯ ರೂಪಿಸುತ್ತಿದ್ದಾರೆ. ಭಾರತಕ್ಕೆ ಅಪರೂಪವಾಗಿ ಈ ವ್ಯಕ್ತಿ ಸಿಕ್ಕಿದ್ದು ಇಂತಹ ಮಾಣಿಕ್ಯವನ್ನು ಕಳೆದುಕೊಂಡರೆ ಭಾರತ ಮತ್ತೆಂದೂ ಮೇಲೇಳಲು ಸಾಧ್ಯವಿಲ್ಲ ಎಂಬುದಂತು ಸತ್ಯ.!!!

–ಸಾರ್ಥಕ್ ಶೆಟ್ಟಿ

Tags

Related Articles

FOR DAILY ALERTS
 
FOR DAILY ALERTS
 
Close