ಪ್ರಚಲಿತ

ಭಾರತದ ರಾಜತಾಂತ್ರಿಕ ನೀತಿಗೆ ತತ್ತರಿಸಿದ ಪಾಕ್! ಜಾಗತಿಕ ಮಟ್ಟದಲ್ಲಿ “ಕಂದು ಪಟ್ಟಿಗೆ” ಉಗ್ರ ರಾಷ್ಟ್ರ!

ನರೇಂದ್ರ ಮೋದಿಯವರು ಪ್ರಧಾನಿಯಾದ ನಂತರ ಭಾರತದಲ್ಲಿ ಯಾವ ರೀತಿಯ ಬದಲಾವಣೆ ಆಗಿದೆ ಎಂದರೆ ಬದಲಾವಣೆಯ ಪ್ರಭಾವ ಕೇವಲ ಭಾರತದಲ್ಲಿ ಮಾತ್ರ ಬೀರುತ್ತಿಲ್ಲ, ಬದಲಾಗಿ ಅಂತರಾಷ್ಟ್ರೀಯ ಮಟ್ಟದಲ್ಲಿ ಮೋದಿಯವರ ರಾಜತಾಂತ್ರಿಕ ನೀತಿಗೆ ಪಾಕಿಸ್ತಾನ ತತ್ತರಿಸಿದೆ. ಕಾಂಗ್ರೆಸ್ ಆಡಳಿತ ಅವಧಿಯಲ್ಲಿ ಪಾಕಿಸ್ತಾನ ಪದೇ ಪದೇ ಭಾರತದ ವಿರುದ್ಧ ಒಂದಲ್ಲ ಒಂದು ಪಿತೂರಿ ಹೂಡುತ್ತಲೇ ಇತ್ತು, ಆದರೆ ಸದ್ಯ ಮೋದಿ ಆಡಳಿತ ಬಂದ ನಂತರ ಪಾಕಿಸ್ತಾನ ಯಾವ ರೀತಿ ಮೂಲೆ ಗುಂಪಾಗಿದೆ ಎಂದರೆ ಈಗಾಗಲೇ ಪಾಕಿಸ್ತಾನವನ್ನು ಉಗ್ರ ರಾಷ್ಟ್ರ ಎಂದು ಘೋಷಿಸುವ ಭಾರತದ ಪ್ರಯತ್ನಕ್ಕೆ ಜಗತ್ತಿನ ಎಲ್ಲಾ ರಾಷ್ಟ್ರಗಳು ಬೆಂಬಲ ಸೂಚಿಸಿದ್ದು ಭಾರತಕ್ಕೆ ರಾಜತಾಂತ್ರಿಕ ಗೆಲುವು ಲಭಿಸಿತ್ತು. ಇದಾದ ನಂತರ ಭಾರತ ಪಾಕಿಸ್ತಾನದ ಮೇಲೆ ಒಂದಲ್ಲ ಒಂದು ಸಮರ ಸಾರುತ್ತಲೇ ಬಂದಿದ್ದು, ಇದೀಗ ಹಣಕಾಸು ಕಾರ್ಯ ಪಡೆಯು ಪಾಕಿಸ್ತಾನವನ್ನು ಕಂದು ಪಟ್ಟಿಗೆ ಸೇರಿಸುವ ಚಿಂತನೆ ನಡೆಸಿದೆ.!

ಕಂದು ಪಟ್ಟಿಯು ಸೇರಿಸಿದರೆ ಪಾಕಿಸ್ತಾನ ಸರ್ವನಾಶ ಖಂಡಿತ!

ಭಯೋತ್ಪಾದನೆಗೆ ಬೆಂಬಲ ನೀಡಿ ಉಗ್ರರಿಗೆ ಆಶ್ರಯ ನೀಡುತ್ತಾ ಬಂದಿರುವ ಪಾಕಿಸ್ತಾನಕ್ಕೆ ಭಾರತ ಸೇರಿದಂತೆ ಜಗತ್ತಿನ ಎಲ್ಲಾ ದೊಡ್ಡ ರಾಷ್ಟ್ರಗಳು ಎಚ್ಚರಿಕೆ ನೀಡುತ್ತಲೇ ಇದೆ. ಆದರೂ ತನ್ನ ಕಪಟ ಬುದ್ಧಿ ಬಿಡದ ಪಾಕಿಸ್ತಾನ ನೇರವಾಗಿ ಭಯೋತ್ಪಾದನೆಗೆ ಬೆಂಬಲ ನೀಡುತ್ತಿದೆ. ಇದೇ ಕಾರಣಕ್ಕೆ ಪ್ಯಾರಿಸ್ ಮೂಲದ ಎಫ್‌ಟಿಎಎಫ್ ಸಂಸ್ಥೆಯು ಪಾಕಿಸ್ತಾನವನ್ನು ಕಂದು ಪಟ್ಟಿಗೆ ಸೇರಿಸಿತ್ತು.‌ ಇತ್ತ ಭಾರತ ಜಾಗತಿಕ ಮಟ್ಟದಲ್ಲಿ ಪಾಕಿಸ್ತಾನವನ್ನು ಮೂಲೆಗುಂಪು ಮಾಡಲು ಪಣತೊಟ್ಟಿದೆ. ಒಂದು ವೇಳೆ ಪಾಕಿಸ್ತಾನವನ್ನು ಕಂದು ಪಟ್ಟಿಗೆ ಸೇರಿಸಿದ್ದೇ ಆದಲ್ಲಿ ಪಾಕಿಸ್ತಾನ ವಾರ್ಷಿಕ ೧೦ ಶತಕೋಟಿ ಡಾಲರ್‌ನಷ್ಟು ನಷ್ಟ ಅನುಭವಿಸಲಿದೆ. ಈ ಬಗ್ಗೆ ಸ್ವತಃ ಪಾಕಿಸ್ತಾನದ ವಿದೇಶಾಂಗ ಸಚಿವ ಮೊಹಮ್ಮದ್ ಖುರೇಶಿ ಅವರು ಹೇಳಿಕೆ ನೀಡಿದ್ದು, ಪಾಕಿಸ್ತಾನವನ್ನು ಕಂದು ಪಟ್ಟಿಗೆ ಸೇರಿಸಿದರೆ ಪಾಕಿಸ್ತಾನ ಆರ್ಥಿಕ ಸಮಸ್ಯೆ ಎದುರಿಸಬೇಕಾಗುತ್ತದೆ, ಮಾತ್ರವಲ್ಲದೆ ಜಾಗತಿಕ ಮಟ್ಟದಲ್ಲಿ ಪಾಕಿಸ್ತಾನ ಏಕಾಂಗಿಯಾಗಿ ನಿಲ್ಲಬೇಕಾಗುತ್ತದೆ , ಮತ್ತು ಭಾರತ ಈ ಬಗ್ಗೆ ಪರೋಕ್ಷವಾಗಿ ಪ್ರಯತ್ನಿಸುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.!

ಸ್ವತಃ ಎಫ್‌ಎಟಿ‌ಎಫ್ ಸಂಸ್ಥೆಯ ಪರಿಣತರ ತಂಡ ಪರಿಶೀಲನೆಗೆ ಪಾಕಿಸ್ತಾನಕ್ಕೆ ಭೇಟಿ ನೀಡಿದ್ದು, ಪಾಕಿಸ್ತಾನ ಭಯೋತ್ಪಾದನೆಯ ವಿರುದ್ಧ ಯಾವ ಕ್ರಮ ಕೈಗೊಂಡಿದೆ ಮತ್ತು ಉಗ್ರರಿಗೆ ನೆರವಾಗುವ ಹಣಕಾಸು ವ್ಯವಸ್ಥೆ ಬಗ್ಗೆ ಯಾವ ರೀತಿಯ ಕಾನೂನು ಹೊರಡಿಸಿದೆ ಎಂದು ಪರಿಶೀಲನೆ ನಡೆಸಿತ್ತು. ಅಕ್ರಮ ಹಣ ಸರಬರಾಜು, ಉಗ್ರರಿಗೆ ಆಶ್ರಯ, ಹೀಗೆ ಹಲವಾರು ವಿಚಾರಗಳನ್ನು ಪರಿಶೀಲನೆ ನಡೆಸಿದೆ. ಈಗಾಗಲೇ ಅನೇಕ ಬಾರಿ ಇಮ್ರಾನ್ ಖಾನ್ ಸರಕಾರಕ್ಕೆ ಎಚ್ಚರಿಕೆ ನೀಡಿದ್ದು, ಯಾವ ಕ್ರಮ ಕೈಗೊಂಡಿದ್ದೀರಿ ಎಂದು ಪ್ರಶ್ನಿಸಿದೆ.!

ಮೋದಿ ಸರಕಾರ ಯಾವ ರೀತಿ ಪಾಕಿಸ್ತಾನದ ವಿರುದ್ಧ ಸಮರ ಸಾರಿದೆ ಎಂದರೆ ಸ್ವತಃ ಪಾಕಿಸ್ತಾನವೇ ಇದನ್ನು ಒಪ್ಪಿಕೊಂಡಿದೆ. ಭಾರತ ಜಾಗತಿಕ ಮಟ್ಟದಲ್ಲಿ ಪಾಕಿಸ್ತಾನವನ್ನು ಮೂಲೆಗುಂಪು ಮಾಡಲು ಪ್ರಯತ್ನಿಸುತ್ತಿದೆ, ಇದು ಪಾಕಿಸ್ತಾನದ ವಿರುದ್ಧ ಮಾಡುತ್ತಿರುವ ಷಡ್ಯಂತ್ರ ಎಂದು ಆರೋಪಿಸಿದೆ. ಆದರೆ ಒಂದಂತೂ ನಿಜ, ಮೋದಿ ಬಂದ ನಂತರ ಪಾಕಿಸ್ತಾನ ಅಕ್ಷರಶಃ ನಲುಗಿ ಹೋಗಿರುವುದು ಸತ್ಯ..!

-ಅರ್ಜುನ್

Tags

Related Articles

FOR DAILY ALERTS
 
FOR DAILY ALERTS
 
Close