ಅಂಕಣಪ್ರಚಲಿತ

ಪೈಂಗಬರನ ನಿಜವಾದ ವಂಶಜ, ಐಸಿಸ್ ಆತಂಕವಾದಿಗಳನ್ನು ಕಾಲಡಿ ಹಾಕಿ ಹೊಸಕಿದ ಜೋರ್ಡಾನಿನ ರಾಜ ಅಬ್ದುಲ್ಲಾ ಅವರ ಭಾರತ ಭೇಟಿ ಯಾಕಿಷ್ಟು ಮಹತ್ವಪೂರ್ಣವೆಂಬುದು ಗೊತ್ತೆ?!

ನಿಮಗೆಲ್ಲರಿಗೂ ಗೊತ್ತಿರಬಹುದು ಇನ್ನೂ ಕೆಲವೇ ದಿನಗಳಲ್ಲಿ ಕಟ್ಟರ್ ಇಸ್ಲಾಂ ದೇಶದ ರಾಜ ಅಬ್ದುಲ್ಲಾ -ದ್ವಿತೀಯ, ಭಾರತ ಪ್ರವಾಸ ಮಾಡಲಿರುವರು. ಭಾರತಕ್ಕೆ ಇದು ಬಹು ನಿರೀಕ್ಷಿತ ಭೇಟಿ ಎಂದರೂ ತಪ್ಪಾಗಲಾರದು. ಭಾರತ ಮತ್ತು ಮಧ್ಯ ಪೂರ್ವ ದೇಶಗಳ ಅದರಲ್ಲೂ ಮುಸ್ಲಿಂರಾಷ್ಟಗಳ ಜೊತೆ ಸಂಬಂಧವನ್ನು ಬಲ ಪಡಿಸುವ ವಿದೇಶಾಂಗ ನೀತಿಯ ಮುಂದಿನ ಭಾಗವೇ ಜೋರ್ಡಾನ್ ರಾಜನ ಭಾರತ ಭೇಟಿ. ಈ ರಾಜ ಬೇರಾರೂ ಅಲ್ಲ, ಸ್ವತಃ ಪ್ರವಾದಿ ಮೊಹಮ್ಮದರ ವಂಶಜನೆನ್ನಲಾಗುತ್ತದೆ.

ಪೈಗಂಬರನ ಮಕ್ಕಳಲ್ಲಿ ಗಂಡು ಸಂತಾನವೆಲ್ಲಾ ಅಕಾಲಿಕ ಮರಣ ಹೊಂದಿದ ನಂತರ ಆತನ ವಂಶವು ಹೆಣ್ಣು ಮಕ್ಕಳಿಂದಲೇ ಮುಂದುವರಿಯಲ್ಪಟ್ಟಿತು. ಇಸ್ಲಾಂನ ಪ್ರಕಾರ ಗಂಡು ಸಂತಾನವೇ ವಂಶೋದ್ಧಾರಕನೆಂದು ಕರೆಸಿಕೊಳ್ಳುತ್ತಾನೆ. ಆದರೆ ಪೈಂಗಬರನ ವಿಷಯದಲ್ಲಿ ಹೀಗಾಗಲಿಲ್ಲ. ಭಾರತದಲ್ಲಿ ಇರುವ ಮುಸ್ಲಿಮರು ತಮ್ಮನ್ನು ತಾವು ಪೈಗಂಬರನ ವಂಶಜರೆಂದು ಕರೆಸಿಕೊಳ್ಳುತ್ತಾರೆ. ಆದರೆ ನಿಜವೆಂದರೆ ಭಾರತದಲ್ಲಿರುವ ಮುಸ್ಲಿಮರ ಪೂರ್ವಜರು ಹಿಂದೂಗಳು. ಮುಘಲರ ಖಡ್ಗಕ್ಕೆ ಹೆದರಿಯೋ, ಆಮಿಶಕ್ಕೊಳಗಾಗಿಯೋ ತಮ್ಮ ಸನಾತನ ಧರ್ಮವನ್ನು ತೊರೆದು ಇಸ್ಲಾಂಗೆ ಮತಾಂತರಗೊಂಡವರ ವಂಶಸ್ಥರೇ ಇವತ್ತು ಇಸ್ಲಾಂ ಮತ್ತು ಪೈಗಂಬರರನ್ನು ಗುತ್ತಿಗೆ ತೆಗೆದುಕೊಂಡವರಂತೆ ಮಾತಾಡುತ್ತಾರೆ.

ಆದರೆ ಪೈಂಗಬರ ಸ್ವಂತ ಊರಿನಲ್ಲಿ, ಆತನದೇ ಮನೆಯ ಮೇಲೆ ಸೌದಿಯ ರಾಜ ಪರಿವಾರ ಬುಲ್ಡೋಜ಼ರ್ ಚಲಾಯಿಸುವಾಗ ಇಲ್ಲಿಯ ಮಿನಿ ಪೈಂಗಬರ್ ಗಳ ಬಾಯಿಂದ ಮಾತೇ ಹೊರಡುವುದಿಲ್ಲ! ಇದೇ ಪೈಂಗಂಬರನ ವಂಶದ ಕುಡಿಯಾದ ಜೋರ್ಡಾನಿನ ರಾಜ ‘ಐಸಿಸ್’ ಎಂಬ ರಕ್ಕಸರ ಅಟ್ಟಹಾಸವನ್ನು ಮಟ್ಟಹಾಕಿದಾಗ ಜಗದಗಲದ ಯಾವೂದೇ ಇಮಾಮು, ಖಲೀಫಾ, ಮೌಲ್ವಿ, ಮದರಸಾಗಳು ಲಬೋ ಲಬೋ ಎನ್ನಲಿಲ್ಲ. ಜೋರ್ಡಾನಿನ ರಾಜನ ಖದರ್ ಅಂದರೆ ಹಾಗೇನೆ. ಸ್ವತಃ ಸೈನಿಕನಾಗಿರುವ ಅಬ್ದುಲ್ಲಾರವರು ಯಾವುದೇ ಮುಲಾಜಿಲಾದೆ ಉಗ್ರರನ್ನು ಮಟ್ಟಹಾಕುತ್ತಾರೆ.

ತನ್ನ ದೇಶದ ಒಬ್ಬ ಪ್ರಜೆಯ ತಲೆಗೆ ಬದಲಾಗಿ ಶತ್ರು ದೇಶದ ಇಬ್ಬರ ತಲೆ ತೆಗೆಯುತ್ತಾರೆ! ಒಂದರ ಬದಲಿಗೆ ಎರಡೆಂಬ ಆಕ್ರಾಮಕ ನೀತಿಯಿಂದಾಗಿಯೇ ಜೋರ್ಡಾನ್ ನ ಕಡೆ ಕಣ್ಣಿತ್ತಿ ನೋಡಲೂ ಹೆದರುತ್ತಾರೆ ಉಗ್ರವಾದಿಗಳು. ತನ್ನ ನೆರೆಕರೆಯ ಎರಡು ಕಟ್ಟರ್ ಇಸ್ಲಾಂ ದೇಶಗಳಾದ ಇರಾನ್ ಮತ್ತು ಸೌದಿಯ ಸಾಂಪದಾಯಿಕತೆಯ ನಡುವೆಯೂ ಉದಾರವಾದದ ಇಸ್ಲಾಂ ಅನ್ನು ಪ್ರತಿಪಾದಿಸಲು ಸಮ್ಮೇಳವನ್ನು ಮಾಡಿರುವುದು ಅಬ್ದುಲ್ಲಾರವರ ಹೆಗ್ಗಳಿಕೆ. ಸಾಂಪ್ರದಾಯಿಕ ನೆರೆಹೊರೆಯವರಿದ್ದಾರೂ ತನ್ನ ದೇಶದಲ್ಲಿ ಲೋಕತಂತ್ರವನ್ನು ಪ್ರತಿಪಾಸುವುದು ಸಾಮಾನ್ಯ ವಿಶಯವಲ್ಲ ನೆನಪಿರಲಿ.

ರಾಜಾ ಅಬ್ದುಲ್ಲಾ- ದ್ವಿತೀಯ, ಉದಾರವಾದಿ ಇಸ್ಲಾಂ ನ ಪ್ರತಿಪಾದಕರು. ತನ್ನ ಸುತ್ತುಮುತ್ತಲೂ ಕಟ್ಟರವಾದಿ ಮುಸ್ಲಿಂ ದೇಶಗಳಾದ ಇರಾನ್ ಮತ್ತು ಸೌದಿಯಂತಹ ದೇಶಗಳಿದ್ದರೂ ತಮ್ಮ ದೇಶದಲ್ಲಿ ಲೋಕತಾಂತ್ರಿಕ ವ್ಯವಸ್ತೆಯನ್ನು ಊರ್ಜಿತ ಗೊಳಿಸಿದ್ದಾರೆ. ಜೋರ್ಡಾನ್, ಅಮೇರಿಕಾ ಮತ್ತು ಇಂಗ್ಲೆಂಡ್ ಗಳಲ್ಲಿ ಶಿಕ್ಷಣ ಪಡೆದ ಇವರು ಸಾಂಡರ್ಷ್ಟನ ಬ್ರಟಿಷ್ ಸೇನೆಯಲ್ಲಿ ಎರಡನೇ ಲೆಟಿನೆಂಟ್ ಆಗಿಯೂ ಮತ್ತು ಜರ್ಮನಿ-ಬ್ರಿಟನ್ ನ “ರೋಯಲ್ ಹಸ್ಸಾರ್” ತುಕುಡಿಯಲ್ಲಿ ಟ್ರೂಪ್ ಕಮಾಂಡರ್ ಆಗಿಯೂ ಕಾರ್ಯನಿರ್ವಹಿಸಿರುತ್ತಾರೆ.

ಹಿಂದಿನ ಬಾರಿ ಭಾರತ ಭೇಟಿಯ ಸಮಯದಲ್ಲಿ ಅಬ್ದುಲ್ಲಾ ಅವರು ಭಾರತೀಯ ಸೇನೆಯ ಟ್ಯಾಂಕ್ ಯುನಿಟ್ ಆದಂತಹ “ಸ್ಕಿನ್ನರ್ ಹೌಸ್” ನಲ್ಲಿ ತಂಗಿದ್ದರು. ಅವರಿಗೆ ಭಾರತ ಮತ್ತು ಭಾರತೀಯ ಸೈನ್ಯದ ಮೇಲಿರುವ ಗೌರವದ ಬಗ್ಗೆ ಇದರಿಂದಲೇ ತಿಳಿಯಬಹುದು. ಆತಂಕವಾದದಿಂದ ತ್ರಸ್ತವಾಗಿರುವ ಭಾರತಕ್ಕೆ ಅಬ್ದುಲ್ಲಾರವರಂತಹ ಧೀಮಂತ ನಾಯಕರ ಸ್ನೇಹದ ಅಗತ್ಯವಿದೆ. ಅಬ್ದುಲ್ಲಾರವರು ಕೂಡಾ ಭಾರತದ ಬಗ್ಗೆ ಅಪಾರವಾದ ಗೌರವವನ್ನು ಹೊಂದಿರುತ್ತಾರೆ.

ಭಾರತದಲ್ಲಿ ಮಾತುಮಾತಿಗೂ “ಕುರಾನ್” ಹಾಗೂ “ಇಸ್ಲಾಂ” ನ ಮೊರೆಯಿಡುವ ಮುಸ್ಲಿಮರಿಗೆ ಗೊತ್ತಿಲ್ಲದ ವಿಷಯವೆಂದರೆ ಅವರದೇ ಮುಸ್ಲಿಂ ದೇಶವಾದಂತಹ ಜೋರ್ಡಾನಿನಲ್ಲಿ ಬುರ್ಖಾ ಅಥವಾ ಹಿಜಾಬ್ ತೊಡುವಂತಹ ಸಂಪ್ರದಾಯವಿಲ್ಲ! ಸ್ವತಃ ರಾಜನ ಪತ್ನಿ ಮತ್ತು ಮಕ್ಕಳು ಬುರ್ಖಾ ತೊಡುವುದಿಲ್ಲ. ಕಟ್ಟರವಾದೀ ಇಸ್ಲಾಂನ ಪದ್ದತಿಗಳನ್ನು ಅನುಸರಿಸುವುದಿಲ್ಲ. ಹುಟ್ಟಾ ಇಸ್ಲಾಂ ದೇಶದಲ್ಲಿ ಪ್ರಜಾಪ್ರಭುತ್ವ ಮತ್ತು ಹುಟ್ಟಾ ಪ್ರಜಾಪ್ರಭುತ್ವ ದೇಶದಲ್ಲಿ ಕಟ್ಟರವಾದ ಇದೆಂತಹ ಬೌದ್ಧಿಕ ವಿಕಲಾಂಗತನವೋ ನೀವೇ ಯೋಚಿಸಿ.

ಆತಂಕವಾದವಾನ್ನು ಹತ್ತಿಕ್ಕುವುದು ಮೋದಿಜಿಯವರ ಪ್ರಥಮ ಆದ್ಯತೆಗಳಲ್ಲೊಂದು. ದೇಶೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಆತಂಕವಾದದ ವಿರುದ್ದ ಒಗ್ಗಟ್ಟನ್ನು ಪ್ರತಿಪಾದಿಸುತ್ತಾ ಬಂದಿರುವ ಮೋದಿಜಿಯವರಿಗೆ ಅಬ್ದುಲ್ಲಾರವರು ಘನ ಮಿತ್ರನಾಗಿ ಅವರ ಎಲ್ಲಾ ಕೆಲಸಗಳಲ್ಲಿ ಶಕ್ತಿ ತುಂಬುವರೆನ್ನುವ ವಿಶ್ವಾಸವಿದೆ. ಇಂದು ವಿಶ್ವದಲ್ಲೇ ಭಾರತ ತನ್ನ ವರ್ಚಸ್ಸನ್ನು ಪ್ರತಿಷ್ಠಾಪಿಸುತ್ತಿದೆ. ಇದಕ್ಕೆಲ್ಲಾ ಕಾರಣ ಮೋದೀಜಿಯವರ ದೂರದರ್ಷಿತ್ವ.

ಕೂತರೂ ನಿಂತರೂ ದೇಶದ ಒಳಿತಿನ ಬಗ್ಗೆಯೇ ಧ್ಯಾನ ಮಾಡುವ ಒಬ್ಬ ನಾಯಕ ಸಿಕ್ಕಿರುವುದು ಭಾರತಾಂಬೆಯ ಮಕ್ಕಳಾದ ನಮ್ಮ ಪುಣ್ಯ. ಜೋರ್ಡಾನ್ ಮತ್ತು ಭಾರತ ಬಹುಕಾಲದ ಮಿತ್ರರು. ಈ ಇಬ್ಬರು ಮಿತ್ರರು ಒಗ್ಗಟ್ಟಾದರೆ ಆತಂಕವಾದಿಗಳ ನಿದ್ದೆಗೆಡುವುದಂತೂ ಖಂಡಿತ. ಅತ್ತ ಕಡೆ ಇಸ್ರೇಲ್ ನಂತಹ ದೇಶವೂ ಸಂಪೂರ್ಣವಾಗಿ ಭಾರತದ ಬೆಂಬಲಕ್ಕೆ ನಿಂತಿದೆ. ಆತಂಕವಾದ, ಕಟ್ಟರವಾದವನ್ನು ನಖಶಿಖಾಂತ ದ್ವೇಶಿಸುವ ಮೂರು ದೇಶಗಳು ಒಟ್ಟಾದರೆ “ಆತಂಕಪ್ರೇಮಿ”ಗಳ ಹೃದಯದಲ್ಲಿ ಅವಲಕ್ಕಿ ಕುಟ್ಟಿದ ಅನುಭವವಾಗುವುದು ನಿಶ್ಚಿತ. ಅಷ್ಟಕ್ಕೂ ಮೋದಿ ಬಯಸುವುದೂ ಅದೇ ತಾನೆ…

ಶನ್ನು

Tags

Related Articles

FOR DAILY ALERTS
 
FOR DAILY ALERTS
 
Close