ಪ್ರಚಲಿತರಾಜ್ಯ

ಬಿಗ್ ಬ್ರೇಕಿಂಗ್: ಗರ್ಲ್ ಫ್ರೆಂಡ್ ಜೊತೆಗೆ ಚಕ್ಕಂದವಾಡುತ್ತಿದ್ದ ಕಾಂಗ್ರೆಸ್ ಗೂಂಡಾ ಅರೆಸ್ಟ್.!! ಪೆಟ್ರೋಲ್ ಶೂರ ನಾರಾಯಣ ಸ್ವಾಮಿಗೆ ಮತ್ತೊಂದು ಶಾಕ್!!

ಕಳೆದ ಒಂದು ವಾರದಿಂದ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಗ್ರಹಚಾರ ಅದ್ಯಾವ ಮಟ್ಟದಲ್ಲಿ ಸೊರಗಿ ಹೋಗಿದೆಯೆಂದರೆ ಚುನಾವಣೆ ಹತ್ತಿರ ಬರುತ್ತಲೇ ಒಂದಲ್ಲಾ ಒಂದು ಪ್ರಕರಣಗಳು ಬಯಲಾಗುತ್ತಾ ಪಕ್ಷದ ಮಾನ ಮರ್ಯಾದೆ ಬೀದಿ ಪಾಲಾಗುತ್ತಿದೆ. ಕಳೆದ ಒಂದು ವಾರದಿಂದ ಕಾಂಗ್ರೆಸ್ ನಾಯಕರಿಂದ ಬರೋಬ್ಬರಿ 6 ಗೂಂಡಾಗಿರಿಯ ಪ್ರಕರಣಗಳು ದಾಖಲಾಗಿದ್ದು ಇದು ರಾಜ್ಯ ಮಾತ್ರವಲ್ಲದೆ ಇಡೀ ರಾಷ್ಟ್ರವನ್ನೇ ಬೆಚ್ಚಿ ಬೀಳಿಸಿದೆ.

ಆರೆಸ್ಟ್ ಆಗಿಬಿಟ್ಟ ಪೆಟ್ರೋಲ್ ಶೂರ..!

ಕೆ.ಆರ್.ಪರಂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ, ಕಾಂಗ್ರೆಸ್ ಶಾಸಕ ಬೈರತಿ ಬಸವರಾಜು ಆಪ್ತ ನಾರಾಯಣ ಸ್ವಾಮಿ ಫೆಬ್ರವರಿ 16ರಂದು ಹೊರಮಾವು ಬಿಬಿಎಂಪಿ ಕಛೇರಿಗೆ ತೆರಳಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚುವ ಪ್ರಯತ್ನವೂ ಮಾಡಿದ್ದರು. ಯಾವಾಗ ಈ ಘಟನೆ ಬಯಲಿಗೆ ಬಂದಿತ್ತೋ ಅಂದಿನಿಂದ ಕಾಂಗ್ರೆಸ್ ಪಾಳಯದಲ್ಲಿ ಭಾರೀ ಕೋಲಾಹಲವೇ ಏರ್ಪಟ್ಟಿತ್ತು. ಮತ್ರವಲ್ಲದೆ ಕಾಂಗ್ರೆಸ್ ನ ಪ್ರಾಥಮಿಕ ಸದಸ್ಯತ್ವದಿಂದಲೂ 6 ವರ್ಷಗಳ ಕಾಲ ಈ ಮಹಾನುಬಾವನನ್ನು ಅಮಾನತು ಮಾಡಲಾಗಿತ್ತು.

ಪೊಲೀಸರಿಗೆ ಈ ವಿಚಾರ ಭಾರೀ ತಲೆ ನೋವಾಗಿ ಪರಿಣಮಿಸಿತ್ತು. ಒಂದು ಕಡೆ ಶಾಸಕರ ಒತ್ತಡ ಮತ್ತೊಂದು ಕಡೆ ಮಾಧ್ಯಮಗಳು ಬೆಂಬಿಡದೆ ಕಾಡುತ್ತಿದ್ದವು. ಇದನ್ನೆಲ್ಲಾ ಕಂಡಂತಹ ಈ ಕಾಂಗ್ರೆಸ್ ಗೂಂಡಾ ನಾರಾಯಣ ಸ್ವಾಮಿ ಇನ್ನೂ ಇಲ್ಲೇ ಇದ್ದರೆ ನನ್ನನ್ನು ಬಿಡೋದಿಲ್ಲ ಎಂಬ ಸತ್ಯ ಗೊತ್ತಾದ ಕೂಡಲೇ ತನ್ನ ಊರಿನಿಂದಲೇ ನಾಪತ್ತೆಯಾಗಿದ್ದ. ಪೊಲೀಸರು ಹುಡಕಾಟ ಆರಂಭಿಸಿದಾಗ ಆತ ಊರೇ ಬಿಟ್ಟಿದ್ದ.

ಪೊಲೀಸರು ಹುಡುಕಾಟವನ್ನು ತೀವ್ರಗೊಳಿಸುತ್ತಾರೆ. ಈ ಕಾಂಗ್ರೆಸ್ ಗೂಂಡಾ ನಾರಾಯಣ ಸ್ವಾಮಿ ಊರಿನಿಂದ ಹೊರರಾಜ್ಯಕ್ಕೆ ತೆರಳಿದ್ದಾನೆ ಎನ್ನುವ ಊಹಾಪೋಹವೂ ಸೃಷ್ಟಿಯಾಗಿತ್ತು. ಆದರೆ ಇಂದು ಬೆಳಿಗ್ಗೆ ಪೊಲೀಸರು ಪೆಟ್ರೋಲ್ ಶೂರ ನಾರಾಯಣ ಸ್ವಾಮಿಯನ್ನು ಅರೆಸ್ಟ್ ಮಾಡಿ ಹೆಡೆಮುರಿ ಕಟ್ಟಿದ್ದಾರೆ. ಈ ಮೂಲಕ ಕಳೆದ 7 ದಿನಗಳಿಂದ ಪೊಲೀಸರಿಗೆ ಚಳ್ಳೆ ಚಣ್ಣು ತಿನ್ನಿಸುತ್ತಿದ್ದ ನಾರಾಯಣ ಸ್ವಾಮಿ ಅಂದರ್ ಆಗಿದ್ದಾನೆ.

ಗರ್ಲ್ ಫ್ರೆಂಡ್ ಮನೆಯಲ್ಲಿ ಸಿಕ್ಕಿಬಿದ್ದಿದ್ದ ಗೂಂಡಾ..!

ಈ ಕಾಂಗ್ರೆಸ್ ನಾಯಕರು ಎಷ್ಟೊಂದು ಖತರ್ನಾಕ್ ಎಂಬುವುದಕ್ಕೆ ಇದುವೇ ಸಾಕ್ಷಿ ನೋಡಿ. ಮಾಡದ ಕೆಲಸಗಳನ್ನು ಮಾಡಿ, ಹೋಗದ ದಾರಿಗೆಲ್ಲಾ ಹೋಗುತ್ತಾರೆ. ಈ ಕಾಂಗ್ರೆಸ್ ಗೂಂಡಾನೂ ಹಾಗೇನೆ. ಹೊರಮಾವು ಬಿಬಿಎಂಪಿ ಕಛೇರಿಗೆ ಏಕಾಏಕಿ ಎಂಟ್ರಿ ಕೊಟ್ಟು, ತನ್ನ ಅಕ್ರಮ ಕೆಲಸಗಳಿಗೆ ಸಹಾಯ ಮಡಿಲ್ಲ ಎಂದು ಕಛೇರಿಗೆ ಪೆಟ್ರೋಲ್ ಸುರಿದು, ಬೆಂಕಿ ಹಚ್ಚಲು ಪ್ರಯತ್ನಿಸಿ ನಂತರ ಎಲ್ಲಿ ತನ್ನನ್ನು ಬಂಧಿಸುತ್ತಾರೋ ಎನ್ನುವ ಭಯದಿಂದ ಈ ಗೂಂಡಾ ಒಂದು ಕಡೆಯಲ್ಲಿ ಅಡಗಿ ಕುಳಿತಿದ್ದ. ಅಂದ ಹಾಗೆ ಈತ ಅಡಗಿ ಕೂತ ಸ್ಥಳವೂ ಒಂದು ಅಕ್ರಮ ಸ್ಥಳ. ಅದು ಆತನ ಗರ್ಲ್ ಫ್ರೆಂಡ್ ಇರುವ ಸ್ಥಳ.

ಬೇಡದ ಕೆಲವನ್ನೆಲ್ಲಾ ಮಡಿ ಈತ ತನ್ನ ರಕ್ಷಣೆಗಾಗಿ ಆರಿಸಿಕೊಂಡ ಸ್ಥಳ ಗೆಳತಿಯ ಮನೆ. ಹೆಂಡತಿ ಇದ್ದರೂ ಮತ್ತೊಬ್ಬಳನ್ನು ಇಟ್ಟುಕೊಂಡಿದ್ದ ಈ ಮಾನಗೆಟ್ಟ ಕಾಂಗ್ರೆಸ್ ಗೂಂಡ ಮತ್ತೊಬ್ಬಳ ಮನೆಯಲ್ಲಿ ಚಕ್ಕಂದವಾಡುತ್ತಾ ದಿನಗಳನ್ನು ಕಳೆಯುತ್ತಿದ್ದ. ಆದರೆ ಪೊಲೀಸರು ಬಿಡುತ್ತಾರೆಯೇ. ಕಾಂಗ್ರೆಸ್ ಒತ್ತಡದ ಹೊರತಾಗಿಯೂ ಈ ಪೆಟ್ರೋಲ್ ಗೂಂಡಾನನ್ನು ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದರು ಪೊಲೀಸು.

ಇಂದು ನ್ಯಾಯಾಧೀಶರ ಮುಂದೆ ಹಾಜರು..!

ಇಟ್ಟುಕೊಂಡವಳ ಮನೆಯಲ್ಲಿ ಸಿಕ್ಕಿಬಿದ್ದಿದ್ದ ಈ ಕಾಂಗ್ರೆಸ್ ಗೂಂಡಾನನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ. ವಿಚಾರಣೆಗೆ ಒಳಪಡಿಸಿದ ನಂತರ ಇಂದು ಮಧ್ಯಾಹ್ನದ ಹೊತ್ತಿಗೆ ನ್ಯಾಯಾಧೀಶರ ಮುಂದೆ ಹಾಜರು ಪಡಿಸಲಿದ್ದಾರೆ. ಈ ವೇಳೆ ಕಾಂಗ್ರೆಸ್ ಗೂಂಡಾ, ಕೆ.ಆರ್.ಪುರಂ ಬ್ಲಾಕ್ ಕಾಂಗ್ರೆಸ್‍ನ ಅಧ್ಯಕ್ಷ ನಾರಾಯಣ ಸ್ವಾಮಿ ಜಾಮೀನಿಗೆ ಅರ್ಜಿ ಹಾಕುವ ಸಂಭವವೂ ಇದೆ ಎನ್ನಲಾಗುತ್ತಿದೆ. ಆದರೆ ಜಾಮೀನು ಅರ್ಜಿಯನ್ನು ನ್ಯಾಯಾಧೀಶರು ಪುರಸ್ಕರಿಸುವುದು ಬಹುತೇಕ ಸಂಶಯ ಎಂದೂ ಹೇಳಲಾಗುತ್ತಿದೆ.

ಬಿಬಿಎಂಪಿ ಕಛೇರಿ ಒಂದು ಸರ್ಕಾರ ಕಛೇರಿಯಾಗಿದೆ. ಸರ್ಕಾರಿ ಆಸ್ತಿ ಪಾಸ್ತಿಯನ್ನು ನಷ್ಟ ಮಾಡಿದರೆ ಅದಕ್ಕೇ ಭಾರೀ ಬೆಲೆ ತೆರಬೇಕಾಗುತ್ತದೆ. ಈ ಕಾರಣಕ್ಕಾಗಿ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸುವ ಲಕ್ಷಣಗಳೂ ಗೋಚರಿಸುತ್ತಿದೆ. ಮಾತ್ರವಲ್ಲದೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚುವ ಪ್ರಯತ್ನವನ್ನೂ ಮಾಡಿದ್ದು, ಇದು ಕೊಲೆ ಯತ್ನ ಪ್ರಕರಣವೂ ಆಗಿರುವುದರಿಂದ ಸದ್ಯಕ್ಕೆ ಜಾಮೀನು ಸಿಗುವ ಲಕ್ಷಣಗಳೂ ಕಾಣುತ್ತಿಲ್ಲ ಎಂದು ಹೇಳಲಾಗುತ್ತಿದೆ.

ಕೆ.ಆರ್. ಪುರಂನ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆ.ಆರ್.ಪುರಂ ವಿಧಾನ ಸಭಾ ಕ್ಷೇತ್ರದ ಶಾಸಕ ಬೈರತಿ ಬಸವರಜ್ ರವರ ಆಪ್ತನಾದ ನಾರಾಯಣ ಸ್ವಾಮಿಯೇ ಇಂದಿನ ಸ್ಟೋರಿಯ ಕಾಂಗ್ರೆಸ್ ಗೂಂಡಾ… ಸತತ 3 ದಿನಗಳಿಂದ ಕಾಂಗ್ರೆಸ್‍ನ ಗೂಂಡಾಗಿರಿಯೇ ಸುದ್ಧಿಯಾಗುತ್ತಿರುವ ಕರ್ನಾಟಕದಲ್ಲಿ ಇಂದು ಈ ಗೂಂಡಾ ಕಾಂಗ್ರೆಸ್ಸಿಗನ ಪ್ರಕರಣ ಬೆಳಕಿಗೆ ಬಂದಿದ್ದು, ಕಾಂಗ್ರೆಸ್‍ನ ಪಾಪದ ಕೊಡ ತುಂಬಿದೆ ಎಂಬುವುದಕ್ಕೆ ಸ್ಪಷ್ಟ ಸಾಕ್ಷಿಯಾಗಿದೆ.

ಬಿಬಿಎಂಪಿಗೆ ಪೆಟ್ರೋಲ್ ಸುರಿದ ಕಾಂಗ್ರೆಸ್ ಗೂಂಡಾ…

ಕೆ.ಆರ್.ಪುರಂನ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ, ಮುಖ್ಯಮಂತ್ರಿ ಸಿದ್ದರಾಮಯ್ಯರ ಆಪ್ತ ನಾರಾಯಣ ಸ್ವಾಮಿಯಿಂದ ಬಿಬಿಎಂಪಿ ಕಛೇರಿಗೆ ಪೆಟ್ರೋಲ್ ದಾಳಿಯಾಗಿದೆ. ಮದವೇರಿದ ಹೋರಿಯಂತೆ ಬಿಬಿಎಂಪಿ ಕಛೇರಿಗೆ ನುಗ್ಗಿದ ಕಾಂಗ್ರೆಸ್ ಗೂಂಡಾ ನಾರಾಯಣ ಸ್ವಾಮಿ ಬಿಬಿಎಂಪಿ ಕಛೇರಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಲು ಯತ್ನಿಸಿದ್ದಾನೆ. ತನ್ನನ್ನು ಬೆಳೆಸಿದ ಕಾಂಗ್ರೆಸ್ ಪಕ್ಷದ ಗೂಂಡಾಗಿರಿಯನ್ನು ಮುಂದುವರೆಸಿದ ಈ ಗೂಂಡಾ ಈಗ ಬೆಂಗಳೂರಿನ ಶಕ್ತಿ ಕೇಂದ್ರಕ್ಕೇ ಬೆಂಕಿ ಹಚ್ಚಲು ಮುಂದಾಗುವಷ್ಟು ದರ್ಪವನ್ನು ತೋರಿದ್ದಾನೆ. ಒಂದು ಕೈನಲ್ಲಿ ಪೆಟ್ರೋಲನ್ನು ಹಿಡಿದು, ಇಡೀ ಕಛೇರಿಗೆ ಚೆಲ್ಲುತ್ತಾ, ಕಛೇರಿಯಲ್ಲಿದ್ದ ದಾಖಲೆಗಳಿಗೆ ಚೆಲ್ಲುತ್ತಾ ಬೆಂಕಿ ಹಚ್ಚುತ್ತೇನೆ ಎಂದು ದರ್ಪ ತೋರಿದ್ದಾನೆ.

ಕಾರಣ ಏನು ಗೊತ್ತಾ..?

ಇದು ಫೆಬ್ರವರಿ 16ರಂದು ನಡೆದ. ಬೆಳಗ್ಗೆ 11 ಗಂಟೆಗೆ ಬಿಬಿಎಂಪಿ ಕಛೇರಿಗೆ ನುಗ್ಗಿದ ಕಾಂಗ್ರೆಸ್ ಗೂಂಡಾ ಅಲ್ಲಿದ್ದ ಸಹಾಯಕ ಕಂದಾಯ ಅಧಿಕಾರಿ ಮೇಲೆ ತನ್ನ ದರ್ಪವನ್ನು ಮೆರೆದು ಪಟ್ರೋಲ್ ಸುರಿದು ಬೆಂಕಿ ಹಚ್ಚಲು ಮುಂದಾಗಿದ್ದಾನೆ. ಕೆಲ ದಿನಗಳ ಹಿಂದೆ ತನ್ನ ಜಮೀನಿ ಬಡಾವಣೆಗೆ ಎನ್.ಆರ್.ಐ. ಜಮೀನು ಖಾತೆ ಮಾಡಿಕೊಡಬೇಕೆಂದು ಬಿಬಿಎಂಪಿಯ ಸಹಾಯಕ ಕಂದಾಯ ಅಧಿಕಾರಿಯಾದ ಚೆಂಗಲ್ ರಾಯಪ್ಪನವರ ಬಳಿ ಕೇಳಿದ್ದಾನೆ. ಆದರೆ ಖಡಕ್ ಅಧಿಕಾರಿ ಎಂದೇ ಹೆಸರಾಗಿರುವ ಚೆಂಗಲ್ ರಾಯಪ್ಪ ಕಾಂಗ್ರೆಸ್ ಗೂಂಡಾನ ಈ ಮಾತಿಗೆ ಒಲ್ಲೆ ಎನ್ನುತ್ತಾರೆ. ಆಗಲ್ಲ ಸಾರ್. ಆ ಜಮೀನಿನ ವ್ಯಾಜ್ಯ ನ್ಯಾಯಾಲಯದಲ್ಲಿದೆ. ಹೀಗಾಗಿ ಇದರ ಖಾತೆಯನ್ನು ಮಾಡಿಕೊಡಲು ಸಾಧ್ಯವಿಲ್ಲ ಎಂದಿದ್ದಾರೆ. ಅಧಿಕಾರಿಯ ಈ ಮಾತಿಗೆ ಒಪ್ಪದ ಕಾಂಗ್ರೆಸ್ ಗೂಂಡಾ ನಾರಾಯಣ ಸ್ವಾಮಿ, ಪರವಾಗಿಲ್ಲ ನೀವು ನಕಲಿ ಖಾತೆಯನ್ನು ಮಾಡಿಕೊಡಿ. ಅದು ನಿಜಮ್ಮಿಂದ ಸಾಧ್ಯವಿದೆ ಎಂದಿದ್ದಾನೆ. ಆದರೆ ಕಾಂಗ್ರೆಸ್ ಗೂಂಡಾನ ಈ ಮಾತಿಗೆ ಕೋಪಗೊಂಡ ಖಡಕ್ ಅಧಿಕಾರಿ ಚೆಂಗಲ್ ರಾಯಪ್ಪ ನಕಲಿ ಖಾತೆ ಮಾಡಿ ಕೊಡಲು ಸಾಧ್ಯವಿಲ್ಲ ಸಾರ್ ಎಂದು ಹೇಳಿದ್ದಾರೆ.

ಖಡಕ್ ಅಧಿಕಾರಿಯ ಈ ಖಡಕ್ ಮಾತಿಗೆ ಕೆಂಡಾಮಂಡಲವಾದ ಕಾಂಗ್ರೆಸ್ ಗೂಂಡಾ ನಾರಾಯಣ ಸ್ವಾಮಿ ಅವರ ಕಛೇರಿಗೆ ಪೆಟ್ರೋಲ್ ಸುರಿಸಿದ್ದಾನೆ. “ನನ್ ಹತ್ತಿರಕ್ಕೆ ಯಾರೂ ಬರಬೇಡಿ. ನಾನು ಯಾರು ಗೊತ್ತಲ್ವಾ. ನಿಮ್ಮನ್ನ ಮಾತ್ರವಲ್ಲ ನಿಮ್ಮ ದಾಖಲೆಗಳನ್ನೂ ಸುಟ್ಟು ಬಿಡುತ್ತೇನೆ” ಎಂದು ಬೆದರಿಕೆ ಹಾಕಿದ್ದಾನೆ.

ವಿದ್ವತ್ ಮೇಲೆ ಹಲ್ಲೆ ಮಾಡಿದ್ದ ಕಾಂಗ್ರೆಸ್ ಶಾಸಕ ಹ್ಯಾರಿಸ್ ಪುತ್ರ ಮಹಮ್ಮದ್ ನಲಪಾಡ್, ಕೃಷಿ ಸಚಿವ ಕೃಷ್ಣ ಬೈರೇಗೌಡರ ಬೆಂಬಲಿಗರ ಗೂಂಡಾಗಿರಿ, ಮುಖ್ಯಮಂತ್ರಿ ಸಿದ್ದರಾಮಯ್ಯರ ಪುತ್ರ ಯತೀಂದ್ರ ಹಾಗೂ ಆತನ ಬೆಂಬಲಿಗರ ಗೂಂಡಾಗಿರಿ ಸಹಿತ ಮೇಲಿಂದ ಮೇಲೆ ಹೊರಬರುತ್ತಿರುವ ಗೂಂಡಾಗಿರಿ ಪ್ರಕರಣಗಳಿಂದ ಕಾಂಗ್ರೆಸ್ ಪಕ್ಷ ನೆಲಕಚ್ಚಿ ಹೋಗಿದ್ದು, ಮತ್ತೆ ಅಧಿಕಾರದ ಆಸೆಯನ್ನು ಬಿಡಬೇಕಾದ ಪರಿಸ್ಥಿತಿಯನ್ನು ಎದುರಿಸಬೇಕಾಗುವಂತೆ ಆಗಿದೆ. ಒಟ್ಟಿನಲ್ಲಿ ಗೂಂಡಾಗಿರಿಯನ್ನೇ ತನ್ನ ಅಸ್ತ್ರವನ್ನಾಗಿ ಅನುಸರಿಸಿಕೊಂಡು ಬಂದಿರುವ ಈ ಕಾಂಗ್ರೆಸ್ ಸರ್ಕಾರ ಈ ಬಾರಿಯ ವಿಧಾನ ಸಭಾ ಚುನಾವಣೆಯಲ್ಲಿ ಸೋಲುವ ಎಲ್ಲಾ ಲಕ್ಷಣಗಳೂ ಗೋಚರಿಸುತ್ತಿದೆ ಎಂಬುವುದು ಸುಳ್ಳಲ್ಲ.

-ಸುನಿಲ್ ಪಣಪಿಲ

Tags

Related Articles

FOR DAILY ALERTS
 
FOR DAILY ALERTS
 
Close