ಅಂಕಣಪ್ರಚಲಿತ

ಇಂದಿನ ದಿನ ಕರ್ನಾಟಕದ ಹಳೇಬೀಡಿನಲ್ಲಿ ಹಿಂದೂಗಳ ಮಾರಣಹೋಮ ನಡೆಯುತ್ತಿದ್ದರೆ, ಆತ ಮಾತ್ರ ಗದ್ದುಗೆಯನ್ನೇರಿ ನಗುತ್ತಿದ್ದ!!

೭೦೭ ವರ್ಷಗಳ ಹಿಂದೆ, ಇದೇ ದಿನದಂದು ಇವತ್ತಿನ ಕರ್ನಾಟಕದ ಸಂಪದ್ಭರಿತ ಪ್ರದೇಶವೊಂದು ಮೊಘಲರ ದಾಳಿಗೆ ಹಿಂದೂಗಳ ರಕ್ತದಿಂದ ತೋಯ್ದಿತ್ತು!!

ಮೊಘಲರ ಆಕ್ರಮಣದ ಮುಂಚಿನ ಭಾರತವೊಂದು ಇದೆಯಲ್ಲವಾ?! ಅದರಷ್ಟು ಸಂಪದ್ಭರಿತವಾದ ರಾಷ್ಟ್ರ ಬೇರೊಂದಿರಲಿಲ್ಲ ಎನ್ನುವುದನ್ನು ಸ್ವತಃ ಇತಿಹಾಸವೇ ಒಪ್ಪುತ್ತದೆ! ದಕ್ಷಿಣ ಭಾರತದ ವಿಜಯನಗರದ ಸಾಮ್ರಾಜ್ಯ ಎಂದಾಕ್ಷಣ ತಕ್ಷಣ ನೆನಪಿಗೆ ಬರುವುದು ಮತ್ತದೇ ಇತಿಹಾಸದ ಘಮಲುಗಳು!!ಮುತ್ತು ರತ್ನವನ್ನು ಬೀದಿಯಲ್ಲಿ ಸೇರಿನಂತೆ ಮಾರುತ್ತಿದ್ದ, ಕನಕ ವಜ್ರಗಳಿಂದ ಇಡೀ ನಗರವನ್ನೇ ಅಲಂಕರಿಸಿದ್ದ ಎಂಬಂತಹ ಮತ್ತದೇ ಇತಿಹಾಸದ ಪುಟಗಳಲ್ಲಿ ಹರಡಿರುವ ವೈಭೋಗದ ಛಾಯೆಗಳನ್ನು ಓದುತ್ತಾ , ಗುನುಗುನಿಸುತ್ತಾ, ಮನನ ಮಾಡಿಕೊಂಡ ಭಾರತೀಯರಿಗೆ ಕರಾಳ ಎನ್ನಿಸುವುದು ಅದೇ ಮೊಘಲರ ಆಡಳಿತ!!

೮೦೦ – ೯೦೦ ಮಿಲಿಯನ್ನುಗಟ್ಟಲೇ ಇದ್ದ ಹಿಂದೂಗಳನ್ನು ಕೇವಲ ಆಳಿದಷ್ಟೇ ಸಮಯದಲ್ಲಿ, ೨೦೦ ಮಿಲಿಯನ್ನುಗಳಿಗೆ ತಂದ ದುರಂತ ಜಗತ್ತಿನ ಬೇರೆ ಯಾವ ಇತಿಹಾಸದಲ್ಲಿಯೂ ಇಲ್ಲವೇ ಇಲ್ಲ ಬಿಡಿ! ಅವರು ಕಡಿದರು, ಕಡಿಸಿಕೊಂಡರು ಎಂಬಂತೆ ತೀರಾ ಎನ್ನುವಷ್ಟು ಒಮ್ಮೊಮ್ಮೆ ಸಹಿಷ್ಣುಗಳಾಗಿದ್ದಾಗ, ಮತ್ತದೇ ವಸುಧೈವ ಕುಟುಂಬಕಮ್ ಎಂದು ಅಲೆಮಾರಿಗಳಾಗಿ ಬಂದವರಿಗೆ ನಮ್ಮವರೆಂದು ಆಶ್ರಯ ಕೊಟ್ಟಿದ್ದೇ ತಪ್ಪಾಯಿತು ಎನ್ನುವ ಹಾಗೆ ಹಿಂದೂಗಳ ನೆತ್ತಿ ಸೀಳಿ ರಕ್ತ ಕುಡಿದರಲ್ಲವೇ?! ಅವತ್ತಿನ ಸಾಕ್ಷಿಯಾಗಿ ಇವತ್ತಿನ ಹಂಪಿ ಸಾಕ್ಷಿಯಾಗಿ ನಿಂತಿದೆ! ಹಳೇಬೀಡು ಸಾಕ್ಷಿಯಾಗಿ ನಿಂತಿದೆ! ಅದೆಷ್ಟೋ, ಮಸೀದಿಗಳ ಕಂಬಗಳು, ದೇವರ ಮೂರ್ತಿಯನ್ನೇ ಚಪ್ಪಡಿ ಹಾಸನ್ನಾಗಿ ಮಾಡಿಕೊಂಡದ್ದಕ್ಕೆ ಸಾಕ್ಷಿಯಾಗಿ ಇವತ್ತಿನ ಅದೆಷ್ಟೋ ಮಸೀದಿಗಳು ನಿಂತಿರುವಾಗ ಮತ್ತದೇ ಕರ್ನಾಟಕದ ವೈಭೋಗದ ಹಳೇಬೀಡೊಂದು ದೋರಸಮುದ್ರ ನಗರವಾಗಿ ಹೊಯ್ಸಳರ ಕಾಲದಲ್ಲಿ ಬಲ್ಲಾಳರಿಂದ ಆಳಿಸಿಕೊಂಡು, ಇತಿಹಾಸ ಕಂಡ ಅತ್ಯಂತ ಕಾಮುಕ ಮತ್ತು ಕ್ರೂರ ರಾಜನೆಂಬ ಪಟ್ಟವನ್ನು ಹೆಮ್ಮೆಯಿಂದ ಕಟ್ಟಿಸಿಕೊಂಡ ಅಲ್ಲಾವುದ್ದೀನ್ ನ ದುರಾಸೆಗೆ ಬಲಿಯಾಗಿ ಖಾಲಿ ಖಾಲಿಯಾಗಿತ್ತು!! ಇವತ್ತಿನ ದಿನ, ೭೦೭ ವರುಷಗಳ ಹಿಂದೆ ನಡೆದ ಆಕ್ರಮಣ ಇಡೀ ದೋರಸಮುದ್ರವನ್ನು ರಕ್ತದ ಮಡುವಲ್ಲಿ ಮುಳುಗಿಸಿತ್ತು! ಎಲ್ಲೆಲ್ಲಿಯೂ ಚೀರಾಟ, ಆಕ್ರಂದನ ಅವತ್ತು ಕೇಳಿಸುವಾಗಲೇ ಅಲ್ಲಾವುದ್ದೀನ್ ಸಾಮ್ರಾಜ್ಯ ದೋರ ಸಮುದ್ರವನ್ನು ವ್ಯಾಪಿಸಿತ್ತು! ಆತ ಸಿಂಹಾಸನದಲ್ಲಿ
ನಗು ನಗುತ್ತಲೇ ಸಂಪತ್ತನ್ನು ಸ್ವೀಕರಿಸಿದ್ದ!!

ಮೂರನೇ ವೀರವಬಲ್ಲಾಳನೇ ಬಹುಷಃ ಹೊಯ್ಸಳ ಸಾಮ್ರಾಜ್ಯದ ಕೊನೆಯ ರಾಜನೆಂದು ಇತಿಹಾಸ ಹೇಳುತ್ತದೆ! ಆತನ ಆಡಳಿತದಲ್ಲಿ ದೋರಸಮುದ್ರವೆಂಬ ಇಂದಿನ ಹಳೇಬೀಡೊಂದು ಸಂಪದ್ಭರಿತವಾಗಿದ್ದೇ ಮೊಘಲ ರಾಜನಾದ ಅಲ್ಲಾವುದ್ದೀನ್ ಖಿಲ್ಜಿಯ ಕೆಂಗಣ್ಣಿಗೆ ಗುರಿಯಾಗಿ ಹೋಗಿತ್ತು!! ೭೦೭ ವರುಷಗಳ ಹಿಂದೆ, ಕ್ರಿ.ಶ ೧೩೧೧ ರಲ್ಲಿ ಇವತ್ತಿನ ದಿನವೇ, ಅಲ್ಲಾವುದ್ದೀನ್ ಖಿಲ್ಜಿಯ ಬಲಗೈ ಬಂಟನಾದ ಮಲಿಕ್ ಕಾಫುರ್ ದೋರಸಮುದ್ರಕ್ಕೆ ತನ್ನ ಸೈನಿಕರೊಡಗೂಡಿ, ಸೀದಾ ಮೂರನೇ ವೀರಬಲ್ಲಾಳನಿಗೆ ಎರಡು ಆಯ್ಕೆ ನೀಡಿದ್ದ!!

According to Khusrau, Malik Kafur offered the following terms to the Hoysalas: they could accepted Islam, or they could pay a tribute (zimmah). If they accepted neither of these choices, they would be killed. Ballala Deva chose to pay the tribute.

Ballala Deva’s messengers requested Malik Kafur to send two envoys to their king, so that the terms of the truce could be finalized without any misunderstanding. Malik Kafur obliged, and sent two Hindu messengers inside the fort. Ballala Deva told these messengers that he was ready to surrender all his belongings except his sacred thread, which was an important symbol of his Hindu identity. He also promised to pay an annual tribute in the future. Kafur agreed to these terms, and thus the siege of Dwarasamudra was lifted.

೧. ಇಸ್ಲಾಂಗೆ ಮತಾಂತರ ಅಥವಾ ಸಾವು!
೨. ಅಲ್ಲಾವುದ್ದೀನ್ ಖಿಲ್ಜಿಯ ಅಧಿಪತ್ಯ ಒಪ್ಪಿ ವಾರ್ಷಿಕ ತೆರಿಗೆಯಾದ ಜಿಮ್ಮಾಹ್ ನೀಡುವುದು!

ದಿನಕ್ಕೆ ಐದು ಹೊತ್ತು ನಮಾಜು ಮಾಡಿ, ಕೈಯ್ಯಲ್ಲಿ ಕುರಾನು ಹಿಡಿದು, ಹಿಂದೂಗಳ ರಕ್ತವೇ ತನಗೆ ಹಲಾಲ್ , ಹಿಂದೂಗಳ ಸ್ವತಂತ್ರ್ಯ ಉಸಿರೇಬ ಹರಾಮ್ ಎಂದು ಶಪಥ ಮಾಡಿದ್ದ ಅಲ್ಲಾವುದ್ದೀನ್ ನ ಪ್ರತಿನಿಧಿಯಾಗಿ ಬಂದಿದ್ದ ಮಲಿಕ್ ಕಾಫುರ್ ಮೂರನೇ ವೀರಬಲ್ಲಾಳನಿಗೆ ನೀಡಿದ ಅತೀ ಸಾಮನ್ಯವಾದುದು! ಆದರೆ, ಆಯ್ಕೆ ಕೊಡಲು ಮಲಿಕ್ ಕಾಫುರ್ ಆಸ್ಥಾನದಲ್ಲಿದ್ದಾಗಲೇ, ಮೊಘಲ್ ಸಾಮ್ರಾಜ್ಯದ ಗೂಢಾಚಾರಿಗಳು ದೋರಸಮುದ್ರದ
ಮೂಲೆ ಮೂಲೆ ಸುತ್ತಿ ದಾಳಿಗೆ ತಯಾರಿ ಮಾಡಿಕೊಂಡಿದ್ದರಷ್ಟೆ!!

ಅದೊಂದು ಅಮಾನವೀಯತೆ ಎಂದು ಹೇಳಲು ಸಾಧ್ಯವೇ ಇಲ್ಲ! ಯಾಕೆಂದರೆ, ಮನುಷ್ಯ ಮಾತ್ರನಿಗೆ ಮಾತ್ರವೇ ಮಾನವೀಯತೆ ಅಥವಾ ಅಮಾನವೀಯತೆ ಎಂಬುದಿರಲು ಸಾಧ್ಯವಷ್ಟೇ!! ಆದರೆ, ಮೃಗಕ್ಕೆ ಏನೆಂದು ಹೇಳಲು ಸಾಧ್ಯವಿರಬಹುದು?! ಪ್ರತೀ ಮೊಘಲ ಸಾಮ್ರಾಜ್ಯದವನೂ ಸಹ ತನ್ನ ಸಾಧನೆಗಳನ್ನು ಬರೆದಿದ್ದು ಎಷ್ಟು ಹಿಂದೂಗಳ ಮಾರಣಹೋಮ ನಡೆಸಿದೆ, ಎಷ್ಟು ಜನ ಹಿಂದೂಗಳನ್ನು ಮತಾಂತರಿಸಿದೆ, ಎಷ್ಟು ದೋಚಿದೆ, ಎಷ್ಟು ಹಿಂದೂ ಸ್ತ್ರೀಯರನ್ನು ಜನಾನಾಕ್ಕೆ ಸೇರಿಸಿದೆ ಎಂಬ ಆಧಾರದ ಮೇಲೆ ಮಾತ್ರವೇ!! ಅದರಲ್ಲಿಯೂ, ಸಹ ಪ್ರತಿ ಮೊಘಲರ ಧ್ಯೇಯವಿದ್ದದ್ದು ಒಂದೇ!
ಇಸ್ಲಾಮೀಕರಣ!! ಅಂದೂ ಇಂದೂ ಮತ್ತು ಮುಂದೂ!!

ಆದರೇನು ಹೇಳಿ, ಸ್ವಾಭಿಮಾನಿ ಹಿಂದೂಗಳು ತಲೆ ಬೇಕಾದರೂ ನೀಡಬಲ್ಲರು, ಆದರೆ ಧರ್ಮ ಬಿಡಲಾರರು!! ಅದೇ ಅಲ್ಲಿಯೂ ಆಗಿದ್ದು! ಮತಾಂತರವಾಗಲು ಒಪ್ಪದ ವೀರಬಲ್ಲಾಳ ಎದುರಿಸಲೂ ಸಾಧ್ಯವಾಗದೇ, ಜಿಮ್ಮಾಹ್ ಕೊಡಲು ಒಪ್ಪಿದ!! ಮಾತಿಗೆ ತಕ್ಕ ಹಾಗೆ, ವೀರಬಲ್ಲಾಳ ವಿಧಿಸಿದಷ್ಟು ಜಿಮ್ಮಾಹ್ ನೀಡಿದ!! ತಲೆಯಾಡಿಸಿದ ಮಲಿಕ್ ಕಾಫುರ್ ತಕ್ಷಣ ಕತ್ತಿ ಹಿರಿದು ನಿಂತ!! ನೋಡ ನೋಡುತ್ತಲೇ ಆಕ್ರಂದನ! ಚೀರಾಟ!! ವೀರಬಲ್ಲಾಳನ ಸೈನಿಕರು ಹತರಾಗಿದ್ದರು!! ಹಿಂದೂಗಳನ್ನು ಕಂಡ ಕಂಡಲ್ಲಿ ಮಾರಣಹೋಮಗೈದ ಮೊಘಲರು ದೋರಸಮುದ್ರದ ಪ್ರತೀ ದೇವಸ್ಥಾನ, ದೇಗಯಲ, ಮಠ ಮಂದಿರಗಳನ್ನು ಧ್ವಂಸ ಮಾಡಿದ್ದಲ್ಲದೇ, ಕೇವಲ ಒಂದೇ ದಿನದಲ್ಲಿ ಸಂಪದ್ಬರಿತ ದೋರಸಮುದ್ರವಾಗಿದ್ದ ರಾಜ್ಯ ಹಾಳುಬೀಡಾಗಿತ್ತು!!

Khalji territory at its maximum extent (dark green) and territory of the Khalji tributaries (light green)

ಮೆಟ್ಟಿದಲ್ಲಿ ರಕ್ತ!! ನೋಡಿದಲ್ಲಿ ಹತರಾಗಿ ಬಿದ್ದ ಹಿಂದೂಗಳು! ಕೇಳಿದರಲ್ಲಿ ಆಕ್ರಂದನ! ನರಳಾಟ! ಚೀರಾಟ! ಧೂಳು! ಮತ್ತು ಹಾಳು ಬಿದ್ದಿದ್ದ ನಗರ!! ಇಷ್ಟೇ!! ಶೃಂಗಾರವನ್ನೂ ಸಹಿಸಲಿಲ್ಲ ಮೊಘಲರು! ಮೊಘಲರು ಕಾಲಿಟ್ಟ ಕಡೆ ಮಣ್ಣಾಗಿ ಹೋಗುತ್ತಿತ್ತು ನಗರ! ಇದನ್ನೇ ಮೊಘಲರು ತೀರಾ ಹೆಮ್ಮೆಯೆಂಬಂತೆ ಇತಿಹಾಸದಲ್ಲಿ ಅಚ್ಚೊತ್ತಿಸಿದರು! ಅಲ್ಲಾವುದ್ದೀನ್ ಖಿಲ್ಜಿ ಹೆಣ್ಣು ಕೊಟ್ಟ ಮಾವನನ್ನೇ ಅಧಿಕಾರಕ್ಕಾಗಿ ಕೊಂದದ್ದು ಸಾಧನೆಯೆನಿಸಿತು! ಹಿಂದೂಗಳನ್ನು ಕತ್ತರಿಸಿ, ಪರಸ್ತ್ರೀಯರ ಮಾನಭಂಗ ಮಾಡಿದ್ದು ಸಾಧನೆಯಾಯಿತು! ಗರ್ಭಿಣಿ ಹೆಂಗಸರ ಗರ್ಭವನ್ನೇ ಸಜೀವವಾಗಿ ಕತ್ತರಿಸಿ ಹೊರತೆಗೆದು ಬೆಂಕಿಯಿಟ್ಟಿದ್ದು ಮಹಾಕಾವ್ಯವೆನಿಸಿತು!! ಇದು ಮೊಘಲರು ಕಾಲಿಟ್ಟಾಗಿನಿಂದ ನಡೆಯಿತಲ್ಲವೇ?! ಹಿಂದೂಗಳು ಒಪ್ಪದಿದ್ದರೂ, ಸ್ವತಃ ಇತಿಹಾಸದ ಪುಟಗಳಲಿ ಮೊಘಲರೇ ದಾಖಲಿಸಿದರು!! ಹಿಂದೂಗಳ ರಕ್ತದ ಲೆಕ್ಕವನ್ನು!! ಆದರೂ,.. .

ಇವತ್ತು ಮತ್ತದೇ ಇತಿಹಾಸದ ದಿನ! ಹಿಂದೂಗಳ ಮಾರಣಹೋಮದ ದಿನ! ಸಂಭ್ರಮಿಸುವಿರೋ, ದುಃಖಪಡುವಿರೋ! ಅಥವಾ ಎಚ್ಚೆತ್ತುಕೊಳ್ಳುವಿರೋ!! ನಿಮಗೇ ಬಿಟ್ಟಿದ್ದು!!

– Postcard team

Tags

Related Articles

FOR DAILY ALERTS
 
FOR DAILY ALERTS
 
Close