ಪ್ರಚಲಿತ

ಆಳ ಸಮುದ್ರದಲ್ಲಿ ಭಾರತದ ಪರಾಕ್ರಮ!! ಪರಮಾಣು ಜಲಾಂತರ್ಗಾಮಿ ನೌಕೆ ಐಎನ್ಎಸ್ ಅರಿಹಂತಿನ ಗಸ್ತನ್ನು ಯಶಸ್ವಿಯಾಗಿ ಪರಿಪೂರ್ಣಗೊಳಿಸಿ ಶತ್ರು ರಾಷ್ಟ್ರಗಳ ನಿದ್ದೆಗೆಡಿಸಿದ ಭಾರತೀಯ ನೌಕಾ ಪಡೆ

 

ಭಾರತದ ಮೊದಲ ಮತ್ತು ಅಗ್ರಗಣ್ಯ ಸ್ಥಳೀಯ ಪರಮಾಣು ಜಲಾಂತರ್ಗಾಮಿ, ಐಎನ್ಎಸ್ ಅರಿಹಂತ್ ನ ಮೊದಲ ಶತ್ರು ತಡೆಗಟ್ಟುವಿಕೆ ಗಸ್ತು ಸಂಪೂರ್ಣವಾಗಿ ಯಶಸ್ವಿಯಾಗಿದೆ. ‘Annihilator of Enemies’ ಶತ್ರುಗಳ ಸರ್ವನಾಶ ಮಾಡಲು ಸದಾ ಸನ್ನದ್ದವಾಗಿರುವ ಈ ಜಲಾಂತರ್ಗಾಮಿ ನೌಕೆ ಭಾರತದ ಪ್ರಪ್ರಥಮ ಪರಮಾಣು ನೌಕೆ. ನಾಲ್ಕೂವರೆ ವರ್ಷಗಳ ಹಿಂದೆ ನಮ್ಮ ಜಲಾಂತರ್ಗಾಮಿ ನೌಕೆಗಳು ಬೆಂಕಿಗಾಹುತಿಯಾಗುತ್ತಿದ್ದವು ಅಥವಾ ಹಾಗಾಗುವಂತೆ ಮಾಡಲಾಗುತ್ತಿತ್ತು. ಕೇವಲ ನಾಲ್ಕೂವರೆ ವರ್ಷಗಳಲ್ಲಿ ಎಷ್ಟೆಲ್ಲಾ ಬದಲಾಗಿ ಬಿಟ್ಟಿತು! ಈ ನೌಕೆಗಳ ನಿರ್ಮಾಣ ಕಾರ್ಯವನ್ನು ಮಾಡದಂತೆ ತೊಡಕಾಗಿತ್ತು ಯೂಪಿಎ ಸರಕಾರ. ಮೋದಿ ಸರಕಾರ ಬಂದ ಮೇಲೆ ಈ ಯೋಜನೆಗೆ ಮತ್ತೆ ವೇಗ ದೊರಕಿತು.

ದೇಶ ಮೊದಲೆನ್ನುವ ಒಬ್ಬ ಪ್ರಧಾನಿ ಸಿಕ್ಕಿದರೆ ಈ ದೇಶ ಯಾವ ಪರಿಯಾಗಿ ಅಭಿವೃದ್ದಿ ಹೊಂದಬಹುದು ಎನ್ನುವುದನ್ನು ಕಣ್ಣಾರೆ ನೋಡುತ್ತಿದ್ದೇವೆ. ದೇಶದ ರಕ್ಷಣೆಯ ವಿಚಾರ ಬಂದಾಗ ಮೋದಿ ಯಾರ ಜೊತೆಗೂ ರಾಜಿಯಾಗುವುದಿಲ್ಲ. ಇನ್ನೂ ಒಂದು ವಿಚಾರವೆಂದರೆ ಈ ಜಲಾಂತರ್ಗಾಮಿ ನೌಕೆ ಯೋಜನೆಗಳ ಕೆಲಸ ಕಾರ್ಯಗಳು ನೇರವಾಗಿ ಮೋದಿ ಅವರ ಸುಪರ್ದಿಯಲ್ಲಿ ನಡೆಯುತ್ತಿವೆ ಎನ್ನುವುದು ಅವರ ಪ್ರಾಮಾಣಿಕತೆ ಮತ್ತು ದೇಶ ಪ್ರೇಮಕ್ಕೆ ಹಿಡಿದ ಕೈಗನ್ನಡಿ.

ಪ್ರಧಾನಿ ನರೇಂದ್ರ ಮೋದಿ ಅವರು ಜಲಾಂತರ್ಗಾಮಿ ನೌಕೆಯ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಮತ್ತು ಪ್ರಸ್ತುತ ಪರಿಸ್ಥಿತಿಯಲ್ಲಿ ನಂಬಲರ್ಹವಾದ ಪರಮಾಣು ನಿರೋಧಕತೆಯ ಅವಶ್ಯಕತೆಯನ್ನು ತಿಳಿಸಿದ್ದಾರೆ. ” ಇತಿಹಾಸದಲ್ಲಿ ಯಾವಾಗಲೂ ನೆನಪಿನಲ್ಲಿಟ್ಟುಕೊಳ್ಳುವ ಈ ಸಾಧನೆಗೆ ಸಂಬಂಧಿಸಿದಂತೆ, ವಿಶೇಷವಾಗಿ ಐಎನ್ಎಸ್ ಆರಿಹಂತ್ ನ ಸಿಬ್ಬಂದಿಯನ್ನು ನಾನು ಅಭಿನಂದಿಸುತ್ತೇನೆ. ” ಎಂದು ಶತ್ರು ಪಡೆಯನ್ನು ತಡೆಗಟ್ಟುವ ಗಸ್ತು ತಿರುಗಿ ಬಂದ ಸಿಬ್ಬಂದಿಗಳ ಸಾಧನೆಯನ್ನು ಅಭಿನಂದಿಸಿದರು.

ಇಂತಹ ಪ್ರಧಾನಿ ಸಿಕ್ಕಿರುವುದು ನಮ್ಮ ಪುಣ್ಯ. ಸೇನೆ ಮತ್ತು ಸೈನಿಕರನ್ನು ಹುರಿದುಂಬಿಸುವ ಅವರ ಪರಿ ಅನನ್ಯ. ರಾಷ್ಟ್ರದ ಶತ್ರುಗಳಿಗೆ ಐಎನ್ಎಸ್ ಅರಿಹಂತ್ ‘ಮುಕ್ತ ಸವಾಲು’ ಎಸೆಯುತ್ತದೆ. ರಾಷ್ಟ್ರೀಯ ಭದ್ರತೆಯನ್ನು ಬಲಪಡಿಸುವ ದೊಡ್ಡ ಹೆಜ್ಜೆ ಇದೆಂದು ಪ್ರಧಾನಿ ಹೇಳಿದರು. ಈ ದೇಶದ ನೂರಾ ಮೂವತ್ತು ಕೋಟಿ ಜನರನ್ನು ಹೊರಗಿನ ಬೆದರಿಕೆಗಳಿಂದ ರಕ್ಷಿಸುತ್ತಾ ವಿಶ್ವ ಶಾಂತಿ ಮತ್ತು ಸುರಕ್ಷತೆಗಾಗಿ ಅರಿಹಂತ್ ಕೆಲಸ ಮಾಡಲಿದೆ ಎಂದು ಹೇಳಿದರು.

ತನ್ನ “ಟಾರ್ಗೆಟ್ ಚೀನಾ” ನೀತಿಯಡಿ ಮೋದಿ ಸರಕಾರ ಕನಿಷ್ಟ ಐದು ಪರಮಾಣು ಜಲಾಂತರ್ಗಾಮಿ ನೌಕೆಗಳನ್ನು ಸಮುದ್ರದಾಳದಲ್ಲಿ ನಿಯೋಜಸಲಿದೆ. ಶೀಘ್ರವೆ ಐ.ಎನ್.ಎಸ್ ಅರ್ಘಿಟ್ ಕೂಡಾ ಅರಿಹಂತ್ ಜೊತೆ ಸೇರಲಿದೆ. ಭಾರತದ ಗುಪ್ತ ಪರಮಾಣು ಜಲಾಂತರ್ಗಾಮಿ ನೌಕಾ ಪಡೆ ‘ಪ್ರೊಜೆಕ್ಟ್ ವರ್ಷಾ’ ಯೋಜನೆಯಡಿ ಈ ನೌಕೆಗಳು ರೂಪುಗೊಳ್ಳುತ್ತಿವೆ. ನಮ್ಮ ನೌಕಾ ಪಡೆಯ ಯಶಸ್ಸಿನಿಂದ ನಿಶ್ಚಿತವಾಗಿಯೂ ಶತ್ರು ರಾಷ್ಟ್ರಗಳು ನಿದ್ದೆ ಇಲ್ಲದ ರಾತ್ರೆಗಳನ್ನು ಕಳೆಯಲಿವೆ. ವರ್ಷದ 365 ದಿನಗಳೂ ನಮ್ಮನ್ನು ರಕ್ಷಣೆ ಮಾಡುತ್ತಿರುವ ನಮ್ಮ ನೌಕಾ ಪಡೆಗೆ ಸಾಷ್ಟಾಂಗ ಪ್ರಣಾಮಗಳು

–ಶಾರ್ವರಿ

Tags

Related Articles

FOR DAILY ALERTS
 
FOR DAILY ALERTS
 
Close