ಪ್ರಚಲಿತ

ಮಹಿಳೆಯರನ್ನು ಅವಮಾನಿಸಿದ ರಾಹುಲ್ ಗಾಂಧಿ ವಿರುದ್ಧ ನೋಟೀಸ್ ಜಾರಿ! ಮತ್ತೆ ಸಂಕಷ್ಟಕ್ಕೀಡಾದ ರಾಗಾ!

ಎಲ್ಲಿ ಯಾವ ರೀತಿ ಮಾತನಾಡಬೇಕೆಂದೇ ಗೊತ್ತಿಲ್ಲದ ವ್ಯಕ್ತಿ ಒಂದು ದೇಶವನ್ನು ಆಡಳಿತ ನಡೆಸುವುದಾಗಿ ಹೋದಲ್ಲೆಲ್ಲಾ ಹೇಳಿಕೊಳ್ಳುತ್ತಿದ್ದಾರೆ. ಯಾವ ಸಂದರ್ಭದಲ್ಲಿ ಯಾವ ರೀತಿ ವರ್ತಿಸಬೇಕು, ಇನ್ನೊಬ್ಬರಿಗೆ ಯಾವ ರೀತಿ ಗೌರವ ನೀಡಬೇಕೆಂದೇ ತಿಳಿಯದ ರಾಹುಲ್ ಗಾಂಧಿ ರಾಷ್ಟ್ರೀಯ ಪಕ್ಷದ ಅಧ್ಯಕ್ಷ. ಕೇವಲ ಹೆಸರಿಗಷ್ಟೇ ಅಧ್ಯಕ್ಷ, ಆದರೆ ಅಧ್ಯಕ್ಷರಿಗೆ ಇರಬೇಕಾದ ಯಾವ ಒಂದು ಲಕ್ಷಣ ಕೂಡ ರಾಹುಲ್‌ನಲ್ಲಿ ಕಾಣಿಸುತ್ತಿಲ್ಲ. ಸಂಸತ್ತಿನಲ್ಲಿ ಯಾವ ರೀತಿ ನಡೆದುಕೊಳ್ಳಬೇಕು, ಯಾವ ರೀತಿ ಮಾತನಾಡಬೇಕೆಂದು ತಿಳಿಯದ ರಾಹುಲ್ ಮಹಿಳೆಯರಿಗೆ ಅವಮಾನ ಮಾಡಿದ್ದಾರೆ ಎಂದು ಆರೋಪಿಸಿದ ಮಹಿಳಾ ಆಯೋಗ ಇದೀಗ ರಾಹುಲ್ ವಿರುದ್ಧ ನೋಟೀಸ್ ಜಾರಿಗೊಳಿಸಿದೆ. ಪ್ರಧಾನಿ ನರೇಂದ್ರ ಮೋದಿಯವರನ್ನು ಪದೇ ಪದೇ ಏನಾದರೊಂದು ವಿಚಾರದಲ್ಲಿ ಪ್ರಶ್ನಿಸುವ ರಾಹುಲ್ ಗಾಂಧಿ ರಫೆಲ್ ಯುದ್ಧ ವಿಮಾನದ ವಿಚಾರವಾಗಿ ಮಾತನಾಡುತ್ತಾ ದೇಶದ ರಕ್ಷಣಾ ಸಚಿವರಾದ ನಿರ್ಮಲಾ ಸೀತಾರಾಮನ್ ಅವರಿಗೂ ಅವಮಾನ ಮಾಡಿದ್ದಾರೆ. ನಮ್ಮ ಪ್ರಶ್ನೆಗಳಿಗೆಠ ಉತ್ತರಿಸಲಾಗದೆ ಪ್ರಧಾನಿ ಮೋದಿ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರ ಹಿಂದೆ ಬಚ್ಚಿಟ್ಟುಕೊಳ್ಳುತ್ತಿದ್ದಾರೆ ಎಂದು ಹೇಳಿಕೊಂಡಿದ್ದರು. ಇದು ಮಹಿಳೆಯರಿಗೆ ಮಾಡಿದ ಅವಮಾನ ಎಂದು ಆರೋಪಿಸಿದ ಮಹಿಳಾ ಆಯೋಗ ಇದೀಗ ಕೋರ್ಟ್ ಮೆಟ್ಟಿಲೇರಿದೆ.!

ರಾಹುಲ್ ಟೀಕೆಗೆ ಮಹಿಳಾ ಆಯೋಗ ಗರಂ!

ರಾಹುಲ್ ಒಂದು ಜವಾಬ್ದಾರಿಯುತ ಸ್ಥಾನದಲ್ಲಿ ಕೂತು ಈ ರೀತಿ ಬೇಕಾಬಿಟ್ಟಿ ಹೇಳಿಕೆ ನೀಡುವುದು ಸರಿಯಲ್ಲ ಎಂದಿರುವ ಮಹಿಳಾ ಆಯೋಗ, ದೇಶದ ರಕ್ಷಣಾ ಸಚಿವರಿಗೆ ಅವಮಾನಿಸಿದ್ದು ಇದು ಮಹಿಳೆಯರಿಗೆ ಮಾಡಿದ ಅವಮಾನ ಎಂದು ರಾಹುಲ್ ವಿರುದ್ಧ ನೋಟೀಸ್ ಜಾರಿಗೊಳಿಸಿದೆ. ಮೋದಿ 56 ಇಂಚಿನ ಎದೆಯ ವ್ಯಕ್ತಿ ಎಂದು ಹೇಳಿಕೊಳ್ಳುತ್ತಾರೆ, ಆದರೆ ರಫೆಲ್ ವಿಚಾರವಾಗಿ ನಾನು ಕೇಳಿದ ಪ್ರಶ್ನೆಗೆ ಉತ್ತರಿಸಲಾಗದೆ ಪ್ರಧಾನಿ ಮೋದಿ ನಿರ್ನಮಲಾ ಸೀತಾರಾಮನ್ ಅವರ ಹಿಂದಿನ ಕುರ್ಚಿಯಲ್ಲಿ ಅಡಗಿಕೊಳ್ಳುತ್ತಾರೆ ಎಂದು ಲೇವಡಿ ಮಾಡಿಕೊಂಡಿದ್ದರು. ಆದರೆ ಇದು ಮಹಿಳೆಯರಿಗೆ ಮಾಡಿದ ಅವಮಾನ , ಅಷ್ಟೇ ಅಲ್ಲದೆ ದೇಶದ ರಕ್ಷಣಾ ಸಚಿವರು ಓರ್ವ ಮಹಿಳೆ ಎಂಬುದನ್ನು ಮರೆತು ರಾಹುಲ್ ಈ ರೀತಿ ಹೇಳಿಕೆ ನೀಡಿರುವುದು ಮಹಿಳೆಯರಿಗೆ ಅವಮಾನ ಮಾಡಿದಂತಾಗಿದೆ ಎಂದು ರಾಹುಲ್ ವಿರುದ್ಧ ನೋಟೀಸ್ ನೀಡಿದೆ.

ರಾಹುಲ್ ಗಾಂಧಿ ಈ ಹಿಂದೆ ಕೂಡ ಇದೇ ರೀತಿ ಅಸಂಬದ್ಧ ಹೇಳಿಕೆ ನೀಡಿದ್ದು, ಪದೇ ಪದೇ ವಿವಾದಾತ್ಮಕ ಹೇಳಿಕೆಯ ಮೂಲಕ ಸುದ್ದಿಯಾಗುತ್ತಿದ್ದಾರೆ. ಯಾವುದೇ ಆಧಾರವಿಲ್ಲದೆ ಪ್ರಧಾನಿ ನರೇಂದ್ರ ಮೋದಿಯವರ ಮೇಲೆ ಆರೋಪ ಮಾಡುವ ರಾಹುಲ್ ಗಾಂಧಿಗೆ ಇದೀಗ ಮತ್ತೊಂದು ಸಂಕಷ್ಟ ಎದುರಾಗಿದೆ. ಯಾಕೆಂದರೆ ಸ್ವತಃ ಮಹಿಳಾ ಆಯೋಗವೇ ರಾಹುಲ್ ವಿರುದ್ಧ ಗರಂ ಆಗಿದ್ದು, ನೋಟೀಸ್ ನೀಡಿದೆ, ಮತ್ತು ಇದಕ್ಕೆ ಉತ್ತರಿಸುವಂತೆ ಹೇಳಿಕೊಂಡಿದೆ.!

ವಿದೇಶದಲ್ಲಿ ನಿಂತು ಭಾರತದ ಬಗ್ಗೆ ಕೀಳಾಗಿ ಮಾತನಾಡುವ ರಾಹುಲ್ ಇದೀಗ ದೇಶದ ಮಹಿಳೆಯರ ವಿಚಾರದಲ್ಲೂ ಕೀಳಾಗಿ ಹೇಳಿಕೆ ನೀಡಿದ್ದಾರೆ. ಸಂಸತ್ತಿನಲ್ಲಿ ಗಂಭೀರ ಚರ್ಚೆ ನಡೆಯುತ್ತಿರುವ ಸಂದರ್ಭದಲ್ಲೂ ಕೂಡ ಕಣ್ಣು ಹೊಡೆದು ಮೂರ್ಖರಂತೆ ವರ್ತಿಸಿ ದೇಶಾದ್ಯಂತ ನಗೆಪಾಟಲಿಗೆ ಒಳಗಾಗಿದ್ದ ರಾಹುಲ್ ಇದೀಗ ಮತ್ತೊಂದು ವಿಚಾರದಲ್ಲಿ ಸುದ್ದಿಯಾಗಿದ್ದಾರೆ.!

–ಅರ್ಜುನ್

Tags

Related Articles

FOR DAILY ALERTS
 
FOR DAILY ALERTS
 
Close