ಪ್ರಚಲಿತ

ಶಬರಿಮಲೆಯ ಮೇಲೆ ನಡೆಯುತ್ತಿರುವ ಆಕ್ರಮಣ ಇದೇ ಮೊದಲೇನಲ್ಲ!! 1950 ರಲ್ಲಿಯೂ ವಿಷದ ನರಿಗಳು ಶಬರಿಮಲೆಯನ್ನು ಹೊತ್ತಿ ಉರಿಸಲು ಶತಪ್ರಯತ್ನ ನಡೆಸಿದ್ದವು?

ಧೂಳು ತಿನ್ನುತ್ತಿರುವ ಇತಿಹಾಸದ ಪುಸ್ತಕದ ಪುಟಗಳನ್ನು ಆಗಾಗಾ ಕೊಡಕುತ್ತಿರಬೇಕು. ಇಲ್ಲವಾದರೆ ಎಷ್ಟೋ ಸತ್ಯಗಳು ಇತಿಹಾಸದ ಗರ್ಭದಲ್ಲೆ ಹುದುಗಿ ಯಾತನೆ ಪಡುತ್ತಿರುತ್ತವೆ. ಶಬರಿಮಲೆಯ ಮೇಲೆ ವಿಷದ ನರಿಗಳ ಕಣ್ಣು ಈಗಿನಿಂದಲ್ಲ, ಬದಲಿಗೆ 1950 ರಿಂದಲೂ ಇತ್ತು. 1950 ರಲ್ಲಿ Shabarimala Temple Arson Case ಬಗ್ಗೆ ಹೆಚ್ಚಿನವರಿಗೆ ತಿಳಿದಿರಲಿಕ್ಕಿಲ್ಲ. ಇದು ಶಬರಿಮಲೆಯ ಮೇಲಾದ ಮೊತ್ತ ಮೊದಲ ಆಕ್ರಮಣ ಮತ್ತು ಈ ದಾಳಿಯ ಬಗ್ಗೆ ಸರಕಾರಿ ಕಡತಗಳಲ್ಲಿ ಸಾಕ್ಷಿ ಆಧಾರಗಳೂ ಇವೆ.

ಡೆಪ್ಯೂಟಿ ಇನ್ಸ್ಪೆಕ್ಟರ್ ಜನರಲ್-ಜನರಲ್ ಆಫ್ ಪೋಲೀಸ್, ಸ್ಪೆಶಲ್ ಬ್ರಾಂಚ್ ಓಲ್ಡ್, ಶ್ರೀ. ಕೆ. ಕೇಸವ ಮೆನನ್ ತಯಾರಿಸಿದ ರಿಪೋರ್ಟ್ ಪ್ರಕಾರ 16 ಜೂನ್ 1950 ರಂದು ಒಂದು FIR ದಾಖಲಾಗಿತ್ತು. ಈ FIR ನಲ್ಲಿ ದೇವಾಸ್ವಂ ಕಮಿಷನರ್ ಮತ್ತು ದೇವಾಸ್ವಂ ಬೋರ್ಡಿನ ಅಧ್ಯಕ್ಷರಾದ ಸಾಂತಿಕಾರನ್ ರವರು 14 ಜೂನ್ 1950 ರಂದು ಸನ್ನಿಧಾನಕ್ಕೆ ತೆರಳಿದಾಗ ಸ್ರೀಕೋವಿಲ್, ಮಂಟಪ, ಸ್ಟೋರ್ ರೂಮ್ ಸಂಪೂರ್ಣವಾಗಿ ಅಗ್ನಿಗಾಹುತಿಯಾಗಿತ್ತು ಮತ್ತು ಅಯ್ಯಪ್ಪ ಸ್ವಾಮಿಯ ಮೂರ್ತಿಯನ್ನು ಭಗ್ನಗೊಳಿಸಲಾಗಿತ್ತು ಎಂದು ದಾಖಲಿಸಲಾಗಿದೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ವಿಲೋನ್ ಮತ್ತು ಪಾರ್ಟಿ ದೇಗುಲದ ಸ್ಥಳ ಪರೀಕ್ಷಣೆ ಮಾಡಿ ತನಿಖೆ ನಡೆಸಿದಾಗ ಕಂಡು ಬಂದ ವಿಚಾರಗಳು

1. ದೇವಸ್ಥಾನದ ಮುಖ್ಯ ದ್ವಾರದ ಮೇಲೆ ಬಲವಂತವಾಗಿ ಬಾಗಿಲೊಡೆದ ನಿಶಾನೆಗಳಿದ್ದವು. ದೇಗುಲದ ಮುಖ್ಯದ್ವಾರದ ಮೇಲೆ 15 ಕಡಿತದ ಗುರುತುಗಳಿದ್ದವು. ಈ ಗುರುತುಗಳು ದೇವಾಲಯದ ಬಾಗಿಲನ್ನು ಒಡೆಯಲು ಬಳಸಿದ ಕೊಡಲಿಯದ್ದಾಗಿತ್ತು.

2. ಯಾವ ರೀತಿಯ ಗುರುತುಗಳು ಬಾಗಿಲಿನ ಮೇಲಿದ್ದವೋ ಅದೆ ತೆರನಾದ ಗುರುತುಗಳು ಸ್ವಾಮಿಯ ಮೂರ್ತಿಯ ಮೇಲೆಯೂ ಇದ್ದವು. ಸ್ವಾಮಿಯ ವಿಗ್ರಹದ ತಲೆ ಕತ್ತರಿಸಲಾಗಿತ್ತು. ಎಡ ಅಂಗೈ ಮತ್ತು ಬೆರಳುಗಳನ್ನು ಬೇರ್ಪಡಿಸಲಾಗಿತ್ತು. ಮುಖ ಮತ್ತು ಹಣೆಯ ಮೇಲೆ ಕಡಿದ ಗುರುತುಗಳಿದ್ದವು.

3. ಅಲ್ಲೆ ಪಕ್ಕದಲ್ಲಿ ದೇಗುಲದ ದ್ವಾರವನ್ನು ಮತ್ತು ವಿಗ್ರಹವನ್ನು ತುಂಡರಿಸಲು ಉಪಯೋಗಿಸಿದ ಕೊಡಲಿ ಇತ್ತು ಮತ್ತು ಕೊಡಲಿಯ ಅಲಗಿಗೆ ಮಂದಿರದ ಹಿತ್ತಾಳೆಯ ದ್ವಾರದ ತುಣುಕುಗಳು ಅಂಟಿಕೊಂಡಿದ್ದವು.

4. ದೇಗುಲ ಬೆಂಕಿಗಾಹುತಿಯಾಗಿತ್ತು. ಒಂದು ವೇಳೆ ಈ ಬೆಂಕಿ ಆಕಸ್ಮಿಕವಾಗಿದ್ದಿದರೆ ದ್ವಾರದ ಮೇಲೆ ಮತ್ತು ಮೂರ್ತಿಯ ಮೇಲೆ ಕಡಿದ ಗುರುತು ಗಳು ಮೂಡುತ್ತಿರಲಿಲ್ಲ. ಅಂದರೆ ಕಿಡಿಗೇಡಿಗಳು ಬೇಕೆಂದೇ ದೇಗುಲವನ್ನು ನಾಶ ಮಾಡುವ ಪ್ರಯತ್ನ ಮಾಡಿದ್ದರು.

5. ಕಳ್ಳರು ಕಳ್ಳತನ ಮಾಡುವ ಉದ್ದೇಶದಿಂದ ದೇಗುಲವನ್ನು ಒಡೆಯುವ ಸಾಧ್ಯತೆಗಳು ತೀರಾ ಕಡಿಮೆ ಇತ್ತು. ಯಾಕೆಂದರೆ ದೇಗುಲದೊಳಗೆ ಅಮೂಲ್ಯ ಆಭರಣಗಳಾಗಲಿ-ಸಂಪತ್ತಾಗಲಿ ಇದ್ದಿರಲಿಲ್ಲ ಮಾತ್ರವಲ್ಲ ಕಳ್ಳತನ ನಡೆದ ಯಾವುದೆ ಕುರುಹುಗಳಿರಲಿಲ್ಲ.

6. ಕಾಡ್ಗಿಚ್ಚಿನಿಂದ ಬೆಂಕಿ ಹೊತ್ತಿಕೊಳ್ಳುವಂತಹ ಸಾಧ್ಯತೆಗಳೆ ಇರಲಿಲ್ಲ ಹಾಗೊಂದು ವೇಳೆ ಹೊತ್ತಿಕೊಂಡಿದ್ದರೂ ದೇಗುಲದ ಪ್ರಾಂಗಣ ಬೆಂಕಿ ನಿರೋಧಕ ವಸ್ತುಗಳಿಂದ ಮಾಡಲ್ಪಟ್ಟಿತ್ತು. ದ್ವಾರ ಮತ್ತು ವಿಗ್ರಹದ ಮೇಲೆ ನಡೆದ ದಾಳಿ ಇದು ಉದ್ದೇಶ ಪೂರ್ವಕ ಕೃತ್ಯವೆಂದು ಸಾರುತ್ತಿತ್ತು.

7. ಹೆಚ್ಚಿನ ತನಿಖೆ ನಡೆಸಿದಾಗ ಹಲವಾರು ಜನರ ಗುಂಪೊಂದು ದೇಗುಲದ ತುಪ್ಪವನ್ನೆ ಬಳಸಿ ಬೆಂಕಿ ಇಟ್ಟಿದ್ದವು ಮತ್ತು ಈ ಎಲ್ಲಾ ದುಷ್ಟ ಕಾರ್ಯಗಳನ್ನು ಮಾಡಲು ಕನಿಷ್ಟ ನಾಲ್ಕರಿಂದ ಐದು ಘಂಟೆಗಳ ಸಮಯವನ್ನು ತೆಗೆದುಕೊಂಡಿದ್ದವು ಎಂದು ತಿಳಿದುಬರುತ್ತದೆ.

ಈ ಕೆಲಸವನ್ನು ಹಿಂದೂಗಳೆ ಮಾಡಿದ್ದರು ಎನ್ನುವುದಕ್ಕೆ ಸಾಕ್ಷಿ ಆಧಾರಗಳಿರಲಿಲ್ಲ. ಏಕೆಂದರೆ ದೇಗುಲದ ಬೆಟ್ಟದ ಕೆಳಗೆ ಹಿಂದೂಗಳು ಹೆಚ್ಚಿನ ಸಂಖ್ಯೆಯಲ್ಲಿ ವಾಸವಾಗಿರಲಿಲ್ಲ. ಇಲ್ಲಿ ವಾಸವಾಗಿದ್ದವರು ಕ್ರಿಶ್ಚಿಯನ್ನರು ಮತ್ತು ದಿನನಿತ್ಯ ಇದೆ ಕಾಡದಾರಿಯಲ್ಲಿ ಸಾಗುವ ಅವರಿಗೆ ಇಲ್ಲಿಯ ಮಾರ್ಗಗಳು ಚಿರಪರಿತವಾಗಿತ್ತು. ಅದೂ ಅಲ್ಲದೆ ಒಬ್ಬ ಹಿಂದೂ “ಅಯ್ಯಪ್ಪ ಸ್ವಾಮಿ”ಯಂತಹ ಅತ್ಯಂತ ಶಕ್ತಿಶಾಲಿ ದೇವರ ವಿಗ್ರಹದ ತಲೆ ಕಡಿಯುವಂತಹ ದಾರ್ಷ್ಟ್ಯ ಎಂದಿಗೂ ಮಾಡಲಾರ. ಇಡಿಯ ದಕ್ಷಿಣ ಭಾರತದಲ್ಲೆ ಅಯ್ಯಪ್ಪ ಸ್ವಾಮಿಯ ಬಗ್ಗೆ ಭಯ ಭಕ್ತಿ ನಿಷ್ಠೆ ಇರುವಾಗ ಇಂತಹ ಹೀನ ಕೃತ್ಯ ಕೈಗೊಳ್ಳುವ ಧೈರ್ಯ ಹಿಂದೂಗಳಿಗಿರಲು ಸಾಧ್ಯವೆ ಇರಲಿಲ್ಲ. ಹಾಗಾಗಿ ಇದು ಹಿಂದೂವೇತರರು ನಡೆಸಿದ ಕುಕೃತ್ಯವೆಂದು ಮೇಲು ನೋಟಕ್ಕೆ ಕಂಡು ಬರುತ್ತಿತ್ತು.

ದೇಗುಲ ಮತ್ತು ವಿಗ್ರಹವನ್ನು ಭಗ್ನಗೊಳಿಸಿದವರು

1. ಓಸೆಪ್ ಥೋಮನ್ ಅಲಿಯಾಸ್ ವಟ್ಟಕುನೆಲ್ ಕುನ್ಹುಪಪ್ಪನ್ ಮತ್ತು ಸಂಗಡಿಗರು
2. ಪೆಜಾತುಮ್ವಿಟ್ಟಿಲ್ ಚಕ್ಕೋ, ಮಲಯಾನಿಕಲ್ ಕೊಚು ಮತ್ತು ಮೂರು ಕೂಲಿಗಳು
3. ಅದಕ್ಕ ಮುಂಡಕ್ಕಲ್ ಕುನ್ಹಪ್ಪಿ ಮತ್ತು ಮಲಮಕ್ಕಲ್ ಸ್ಕರಿಯ

ಇವರೆಲ್ಲರೂ ಮಾತಾಂಬಾ ಎಸ್ಟೇಟಿನ ಬಳಿಯ ಕೊಂಬನ್ಪರದ ನಿವಾಸಿಗಳಾದ ರೋಮನ್ ಕೆಥೋಲಿಕ್ ಗಳಾಗಿದ್ದರು. ತನಿಖೆಯಲ್ಲಿ ಕಂಡು ಬಂದ ವಿಚಾರಗಳು ಇದು ಉದ್ದೇಶಪೂರ್ವಕವಾಗಿ ಮಾಡಿದಂತಹ ಕುಕೃತ್ಯಗಳು ಎಂದು ಸಾರಿ ಸಾರಿ ಹೇಳುತ್ತಿದ್ದವು. ದೇಗುಲದ ಪರಿಸರದ ಸುತ್ತ ಕ್ರಿಶ್ಚಿಯನ್ನರೆ ಹೆಚ್ಚಿನ ಸಂಖ್ಯೆಯಲ್ಲಿ ವಾಸವಾಗಿದ್ದರು. ಅಲ್ಲಿಯ ಜಾಗಗಳೆಲ್ಲವೂ ಕ್ರಿಶ್ಚಿಯನ್ನರ ಕೈಯಲ್ಲೆ ಇದ್ದವು. ಹಾಹಾಗಿ ಹಿಂಡೂಗಳು ಈ ಕುಕೃತ್ಯ ಭಾಗವಹಿಸುವ ಸಾಧ್ಯತೆಗಳು ಶೂನ್ಯವಾಗಿದ್ದವು.

ಅಯ್ಯಪ್ಪ ಸ್ವಾಮಿ ಮಾತ್ರವಲ್ಲ, ದೇಶದ ಹಲವಾರು ದೇಗುಲಗಳ ಮೇಲೆ ಜಿಹಾದಿ ಮತ್ತು ವಿಷದ ನರಿಗಳ ಕಣ್ಣು ಮೊದಲೂ ಇತ್ತು ಈಗಲೂ ಇದೆ. ಈಗ ಶಬರಿಮಲೆಯ ಮೇಲೆ ನಡೆಯುತ್ತಿರುವುದು ಬೌದ್ದಿಕ ದಾಳಿ. ಇದು 1950 ರ ದಾಳಿಯ ಮುಂದುವರಿದ ಭಾಗವಷ್ಟೆ. ಇನ್ನಾದರೂ ಜಾತ್ಯಾತೀತ- ಮಹಿಳಾ ಸಮಾನತೆಯ ಪರದೆ ಹರಿದು ಬಿಸಾಕಿ ಜಿಹಾದಿ-ನರಿಗಳ ಹುನ್ನಾರಕ್ಕೆ ತಕ್ಕ ಉತ್ತರ ನೀಡಿ.

myindiamyglory

–ಶಾರ್ವರಿ

Tags

Related Articles

FOR DAILY ALERTS
 
FOR DAILY ALERTS
 
Close